ಪ್ರಿಯಾಮಣಿ ಸೊಂಟ ಹಿಡಿದು ಪೋಸ್ ಕೊಟ್ಟ ಶ್ರೀದೇವಿ ಪತಿ; ಬೋನಿ ಕಪೂರ್ ವಿರುದ್ಧ ತಿರುಗಿಬಿದ್ದ ನೆಟ್ಟಿಗರು!
ಅತಿಲೋಕ ಸುಂದರಿ ಶ್ರೀದೇವಿ ಪತಿ ಬೋನಿ ಕಪೂರ್ ಆಗಾಗ ವಿವಾದವನ್ನು ಮೈ ಮೇಲೆ ಎಳೆದುಕೊಳ್ಳುತ್ತಲೇ ಇರುತ್ತಾರೆ. ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಈಗ ನಟಿ ಪ್ರಿಯಾಮಣಿ ವಿಚಾರಕ್ಕೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಷ್ಟಕ್ಕೂ ನಿರ್ಮಾಪಕ ಬೋನಿ ಕಪೂರ್ ಬಹುಭಾಷಾ ನಟಿ ಪ್ರಿಯಾಮಣಿ ವಿಷಯದಲ್ಲಿ ನೆಟ್ಟಿಗರ ಟೀಕೆಗೆ ಒಳಗಾಗಿದ್ದೇಕೆ?
ಇಂದು ( ಏಪ್ರಿಲ್ 10) ಬೋನಿ ಕಪೂರ್ ನಿರ್ಮಿಸಿದ 'ಮೈದಾನ್' ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಅಜಯ್ ದೇವಗನ್, ಪ್ರಿಯಾಮಣಿ ಸೇರಿದಂತೆ ಹಲವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದೇ ಸಿನಿಮಾ ಬಿಡುಗಡೆಗೂ ಮುನ್ನ ಸೆಲೆಬ್ರೆಟಿಗಳಿಗಾಗಿ ಸ್ಪೆಷಲ್ ಸ್ಕ್ರೀನಿಂಗ್ ಅನ್ನು ಆಯೋಜಿಸಿದ್ದರು. ಈ ವೇಳೆ ನಿರ್ಮಾಪಕ ಬೋನಿ ಕಪೂರ್ ಹಾಗೂ ನಟಿ ಪ್ರಿಯಾಮಣಿ ಒಟ್ಟಿಗೆ ಕ್ಯಾಮರಾಗೆ ಪೋಸ್ ಕೊಟ್ಟಿದ್ದರು.

ಈ ಫೋಟೊಗಳು ಹಾಗೂ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬೋನಿ ಕಪೂರ್ ಮೇಲೆ ಕಾಮೆಂಟ್‌ಗಳನ್ನು ಮಾಡುವುದಕ್ಕೆ ಶುರು ಮಾಡಿದ್ದಾರೆ. ಪ್ರಿಯಾಮಣಿಯ ಸೊಂಟದ ಮೇಲೆ ಕೈ ಇಟ್ಟು ಪೋಸ್ ಕೊಟ್ಟಿದ್ದಕ್ಕೆ ನೆಟ್ಟಿಗರು ಶ್ರೀದೇವಿ ಪತಿ ಬೋನಿ ಕಪೂರ್ ವಿರುದ್ಧ ತಿರುಗಿಬಿದ್ದಿದ್ದಾರೆ.
ಶ್ರೀದೇವಿ ಪತಿ ಬೋನಿ ಕಪೂರ್ ಬಾಲಿವುಡ್‌ನ ಜನಪ್ರಿಯ ನಿರ್ಮಾಪಕ. ಈ ಹಿಂದೆ ಸಾಕಷ್ಟು ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. 'ಮಿಸ್ಟರ್ ಇಂಡಿಯಾ' , 'ರೂಪ್ ಕಿ ರಾಣಿ ಚೋರೊಂಕ ರಾಜ', 'ಹಮಾರ ದಿಲ್ ಆಪ್‌ಕೆ ಪಾಸ್ ಹೇ', 'ಮಾಮ್' ಅಂತಹ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಆದರೆ, ಸಿನಿಮಾ ನಟಿಯರೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಸಾಕಷ್ಟು ಬಾರಿ ಟ್ರೋಲ್ ಆಗಿದ್ದಾರೆ. ನೆಟ್ಟಿಗರ ಕಡು ಟೀಕೆಗೆ ಗುರಿಯಾಗಿದ್ದಾರೆ. ಈ ಬಾರಿಗೆ ಕೂಡ ಪ್ರಿಯಾಮಣಿ ಜೊತೆ ಕಾಣಿಸಿಕೊಂಡು ಕೆಂಗಣ್ಣಿಗೆ ಗುರಿಯಾಗಿದ್ದಾರೆ.
'ಮೈದಾನ್' ಸಿನಿಮಾದ ಸ್ಪೆಷಲ್ ಸ್ಕ್ರೀನಿಂಗ್‌ನಲ್ಲಿ ಪ್ರಿಯಾಮಣಿ ಸೀರೆಯುಟ್ಟು ಪಕ್ಕಾ ದಕ್ಷಿಣ ಭಾರತದ ನಟಿಯಂತೆ ಕಂಗೊಳಿಸುತ್ತಿದ್ದರು. ಈ ವೇಳೆ ಇದೇ ಸಿನಿಮಾದ ನಿರ್ಮಾಪಕ ಬೋನಿ ಕಪೂರ್ ಕೂಡ ಆಗಮಿಸಿದ್ದರು. ಈ ವೇಳೆ ಪಾಪರಾಜಿಗಳಿಗೆ ಇಬ್ಬರೂ ಜೊತೆಯಾಗಿ ಪೋಸ್ ಕೊಟ್ಟಿದ್ದರು. ಈ ವೇಳೆ ನಟಿ ಪ್ರಿಯಾಮಣಿಯ ಸೊಂಟದ ಮೇಲೆ ಬೋನಿ ಕಪೂರ್ ಕೈ ಇಟ್ಟಿದ್ದರು. ಬಳಿಕ ಭುಜ ಮೇಲೆ ಕೈ ಹಾಕಿ ಪೋಸ್ ಕೊಟ್ಟಿದ್ದರು. ನಂತರ ನಟಿಯರಲ್ಲಿ ಅನುಚಿತವಾಗಿ ಹಿಡಿದುಕೊಂಡಿದ್ದಾರೆಂದು ನೆಟ್ಟಿಗರು ಟೀಕಿಸುತ್ತಿದ್ದಾರೆ.

ಶ್ರೀದೇವಿ ಪತಿಯ ಈ ವರ್ತನೆ ನೆಟ್ಟಿಗರಿಗೆ ಯಾಕೋ ಸರಿಯಾಗಿ ಕಂಡಿಲ್ಲ. " ಈ ತೆವಳುವ ವ್ಯಕ್ತಿ ಜನಪ್ರಿಯ ಹಾಗೂ ಪವರ್‌ಫುಲ್ ನಟಿ ಪ್ರಿಯಾಮಣಿ ಜೊತೆ ಹೀಗೆ ಅಸಹ್ಯಕರವಾಗಿ ನಡೆದುಕೊಳ್ಳುವುದನ್ನು ಸಹಿಸಿಕೊಳ್ಳಬೇಕಾಗಿದೆ. ಯುವ ನಟಿಯರೊಂದಿಗೆ ಹೀಗೆಲ್ಲ ವರ್ತಿಸುತ್ತಾರೆಂದು ಊಹಿಸಲು ಸಾಧ್ಯವಾಗುತ್ತಿಲ್ಲ" ಎಂದು ನೆಟ್ಟಿಗರೊಬ್ಬರು ಕಿಡಿಕಾರಿದ್ದಾರೆ. ಇನ್ನೊಬ್ಬರು " ಇಬ್ಬರು ಯೌವ್ವನಕ್ಕೆ ಬಂದ ಹೆಣ್ಣು ಮಕ್ಕಳು ಇದ್ದಾರೆ. ಹೀಗಿದ್ದರೂ ಇಂತಹ ವರ್ತನೆಯನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ" ಎಂದು ಮತ್ತೊಬ್ಬರು ಸಿಡಿದೆದ್ದಿದ್ದಾರೆ.
ಹಾಗಂತ ನಟಿಯರೊಂದಿಗೆ ಬೋನಿ ಕಪೂರ್ ಹೀಗೆ ವರ್ತಿಸಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಬಾಲಿವುಡ್ ನಟಿ ಊರ್ವಶಿ ರೌತೇಲಾ ಅವರ ಜೊತೆನೂ ಬೋನಿ ಕಪೂರ್ ವಿವಾದಕ್ಕೆ ಸಿಕ್ಕಿಕೊಂಡಿದ್ದರು. ಆದರೆ, ನಟಿ ಊರ್ವಶಿನೇ ಇದನ್ನೆಲ್ಲ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದರು. ಹೀಗಾಗಿ ಅದು ತಣ್ಣಗಾಯಿತು, ಇನ್ನೊಂದು ಕಡೆ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಕಾರ್ಯಕ್ರಮದ ವೇಳೆ ಗಿಗಿ ಹಡಿದ್ ಅವರನ್ನೂ ಹೀಗಿದು ಹಿಡಿದುಕೊಂಡು ಪೋಸ್ ಕೊಟ್ಟಿದ್ದರು. ಅದಕ್ಕೂ ನೆಟ್ಟಿಗರ ಕಣ್ಣುಗಳು ಕೆಂಪಗಾಗಿದ್ದವು.


Click it and Unblock the Notifications











