ಶ್ರೀದೇವಿ, ಬೋನಿ ಕಪೂರ್ ಕನಸು ನನಸಾಗಲೇ ಇಲ್ಲ: 14 ವರ್ಷದ ಕನಸು ಇನ್ನೂ ಜೀವಂತ!
ನಟಿ ಶ್ರೀದೇವಿಯನ್ನು ಅತಿಲೋಕ ಸುಂದರಿ ಅಂತಲೇ ಕರೆಯಲಾಗುತ್ತಿತ್ತು. ಸುಂದರಿ ಮಾತ್ರ ಅಲ್ಲ ಅದಕ್ಕೆ ತಕ್ಕಂತೆ ಅಪ್ರತಿಮ ನಟಿ ಕೂಡ ಆಗಿದ್ದರು ಶ್ರೀದೇವಿ. ಆದರೆ ಶ್ರೀದೇವಿ ಅವರು ಅಕಾಲಿಕ ಮರಣಕ್ಕೆ ತುತ್ತಾಗಿ ಬಿಟ್ಟರು. ಅದು ಬಾಲಿವುಡ್ ಮತ್ತು ಭಾರತೀಯ ಚಿತ್ರರಂಗಕ್ಕೆ ದೊಡ್ಡ ಶಾಕ್ ಕೊಟ್ಟಿತ್ತು. ಶ್ರೀದೇವಿ ಅವರ ಅಗಲಿಕೆಯಿಂದ ಬಾಲಿವುಡ್ ಕಂಗಾಲಾಗಿತ್ತು.
ಶ್ರೀದೇವಿ ಅವರು ಇಹಲೋಕ ತ್ಯಜಿಸಿ ಅದಾಗಲೇ 4 ವರ್ಷ ಆಯಿತು. ನಾಲ್ಕು ವರ್ಷದ ಹಿಂದೆ ನಟಿ ಶ್ರೀದೇವಿ ಅವರು ಅಕಾಲಿಕ ಮರಣ ಹೊಂದಿದ್ದರು. ಶ್ರಿದೇವಿ ಪತಿ ಬೋನಿಕಪೂರ್ ಮತ್ತು ಮಕ್ಕಳು ಅವರೊಂದಿಗೆ ಹಲವು ಕನಸುಗಳನ್ನು ಕಟ್ಟಿದ್ದರು. ಆದರೆ ಅದೆಲ್ಲವನ್ನು ಅರ್ಧಕ್ಕೆ ಬಿಟ್ಟು, ಕನಸುಗಳನ್ನು ಸಾಕಾರಗೊಳಿಸದೇ ಶ್ರೀದೇವಿ ಅವರು ಇಹಲೋಕ ತ್ಯಜಿಸಿದರು.
ರಜನಿಕಾಂತ್ ಸಿನಿಮಾ ನಿರಾಕರಿಸಿದ ಬೋನಿಕಪೂರ್: 170ನೇ ಸಿನಿಮಾ ಯಾರ ಪಾಲಿಗೆ!
ಹೀಗೆ ಶ್ರೀದೇವಿ ಜೊತೆಗೆ ನಿರ್ಮಾಪಕ ಪತಿ ಬೋನಿ ಕಪೂರ್ ಹತ್ತು ಹಲವು ಕನಸು ಕಟ್ಟಿದ್ದರು, ಅದನ್ನೆಲ್ಲಾ ಬೋನಿ ಕಪೂರ್ ಅವರು ಹೇಳಿಕೊಂಡಿಲ್ಲ. ಈಗ ಅವರು ತಮ್ಮ ಒಂದು ಕನಸನ್ನು ಬಹಿರಂಗ ಪಡಿಸಿದ್ದಾರೆ. ಆದರೆ ಅದನ್ನು ಪೂರ್ತಿ ಮಾಡುವಷ್ಟರಲ್ಲೇ ಶ್ರೀದೇವಿ ಬೋನಿ ಅವರನ್ನು ಒಂಟಿ ಮಾಡಿ ಹೋಗಿದ್ದಾರೆ.

14 ವರ್ಷದ ಹಿಂದೆ ಶ್ರೀದೇವಿ ಜೊತೆ ಬೋನಿ ಕಂಡಿದ್ದ ಕನಸು!
ನಟಿ ಶ್ರೀದೇವಿ ಬೋನಿ ಕಪೂರ್ ಎರಡನೇ ಪತ್ನಿ. ಶ್ರೀದೇವಿಯನ್ನು ಪ್ರೀತಿಸಿ ಮದುವೆ ಆಗಿದ್ದರು ಬೋನಿ ಕಪೂರ್. ಆದರೆ ಬೋನಿ ಕಪೂರ್‌ಗೆ ಕೊನೆ ತನಕ ಶ್ರೀದೇವಿ ಜೊತೆಗೆ ಬದುಕುವ ಅದೃಷ್ಟ ಇರಲಿಲ್ಲ. ಆದರೆ ಅವರು ಕಂಡಿದ್ದ ಕನಸುಗಳನ್ನು ಜೀವಂತವಾಗಿ ಇಟ್ಟಿದ್ದಾರೆ. ತಮ್ಮ ಒಂದು ಕನಸಿನ ಬಗ್ಗೆ ಬೋನಿ ಕಪೂರ್ ಹೇಳಿಕೊಂಡಿದ್ದಾರೆ. 14 ವರ್ಷದ ಹಿಂದೆ ಬೋನಿ ಕಪೂರ್ ಮತ್ತು ಶ್ರೀದೇವಿ ಇಟಲಿಯ ವೆನಿಸ್ ನಗರ ಪ್ರವಾಸ ಮಾಡುವ ಕನಸು ಕಂಡಿದ್ದರಂತೆ.
ಇಟಲಿ ಪ್ರವಾಸದ ಕನಸು ಕಂಡಿದ್ದರಂತೆ ಶ್ರೀದೇವಿ, ಬೋನಿ ಕಪೂರ್!
ನಟಿ ಶ್ರೀದೇವಿ ಮತ್ತು ಬೋನಿ ಕಪೂರ್ ಇಬ್ಬರು 2008ರಲ್ಲಿ ಒಮ್ಮೆ ಇಟಲಿಯ ವೆನಿಸ್ ನಗರಕ್ಕೆ ಭೇಟಿ ನೀಡಿದ್ದರಂತೆ. ಆದರೆ ಅಲ್ಲಿ ಹೆಚ್ಚು ಸಮಯ ಕಳೆಯಲು ಸಾಧ್ಯ ಆಗಲೇ ಇಲ್ಲವಂತೆ. ಹಾಗಾಗಿ ಮುಂದೊಂದು ದಿನ ವೆನಿಸ್‌ಗೆ ಭೇಟಿ ನೀಡಿ ಹೆಚ್ಚು ಕಾಲಕಳೆಯ ಬೇಕು ಎಂದುಕೊಂಡಿದ್ದರಂತೆ. ಆದರೆ ಅದು ಸಾಕಾರ ಆಗುವ ಮುನ್ನವೇ ಶ್ರೀದೇವಿ ಇಲ್ಲವಾಗಿದ್ದಾರೆ. ಈ ಬಗ್ಗೆ ಬೋನಿ ಕಪೂರ್ ತಮ್ಮ ಇನ್ಸ್‌ಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಅಲ್ಲಿನ ಫೋಟೊವನ್ನು ಹಂಚಿಕೊಂಡಿದ್ದಾರೆ.

ಶ್ರೀದೇವಿ ಬಗ್ಗೆ ವಿಶೇಷ ವಿಚಾರ ಹಂಚಿಕೊಂಡ ಬೋನಿ ಕಪೂರ್!
ಶ್ರೀದೇವಿ ಜೊತೆಗಿನ ಫೋಟೊ ಹಂಚಿಕೊಂಡ ನಿರ್ಮಾಪಕ ಬೋನಿ ಕಪೂರ್ ಭಾವನಾತ್ಮಕ ಸಂದೇಶ ಒಂದನ್ನು ಹಂಚಿಕೊಂಡಿದ್ದಾರೆ. "ನಾವು ಸೆಪ್ಟೆಂಬರ್ 7, 2008 ರಂದು ಮಿಲನ್‌ನಿಂದ, ವೆನಿಸ್‌ಗೆ ಹೋದೆವು. ಮತ್ತು ಆ ನಗರದಲ್ಲಿ ಕೆಲವೇ ಗಂಟೆಗಳು ಕಾಲ ಕಳೆದವು. ನಾವು ಹೆಚ್ಚು ಕಾಲ ಅಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಹಾಗಾಗಿ ವೆನಿಸ್‌ಗೆ ಮತ್ತೆ ಭೇಟಿ ನೀಡುವ ಯೋಜನೆಯನ್ನು ನಾನು ಮಾಡಿದ್ದೆವು. ಆದರೆ ಆ ಅದೃಷ್ಟ ನಮ್ಮ ಯೋಜನೆಗಳನ್ನು ನಿರಾಕರಿಸಿದೆ." ಎಂದು ಬರೆದುಕೊಂಡಿದ್ದಾರೆ.

1996ರಲ್ಲಿ ಮದುವೆ ಆದ ಶ್ರೀದೇವಿ, ಬೋನಿ ಕಪೂರ್!
ಸಿನಿಮಾಗಳ ಮೂಲಕ ಶ್ರಿದೇವಿ, ಬೋನಿ ಕಪೂರ್ ಪರಿಚಯ ಆಗಿ, ಅವರು ಪ್ರೀತಿಯಲ್ಲಿ ಬೀಳುತ್ತಾರೆ. ನಂತರ ಇಬ್ಬರು ಅಧಿಕೃತವಾಗಿ ಮದುವೆ ಆಗುತ್ತಾರೆ. ಜೂನ್ 2, 1996 ರಲ್ಲಿ ಶ್ರೀದೇವಿ ಮತ್ತು ಬೋನಿ ಕಪೂರ್ ಮದುವೆ ಆಗುತ್ತಾರೆ. ಈ ದಂಪತಿಗೆ ಜಾಹ್ನವಿ ಕಪೂರ್ ಮತ್ತು ಖುಷಿ ಕಪೂರ್ ಎನ್ನುವ ಎಬ್ಬರು ಹೆಣ್ಣು ಮಕ್ಕಳಿದ್ದಾರೆ.


Click it and Unblock the Notifications











