ಬಾಯ್‌ಕಾಟ್ ಮಾಲ್ಡೀವ್ಸ್: ಅಭಿಯಾನಕ್ಕೆ ಎಂಟ್ರಿ ಕೊಟ್ಟ ಅಕ್ಷಯ್, ಸಲ್ಮಾನ್ ಖಾನ್, ಸಚಿನ್

ಕಳೆದ ಕೆಲವು ವರ್ಷಗಳಿಂದ ಭಾರತ ಹಾಗೂ ಮಾಲ್ಡೀವ್ಸ್ ನಡುವಿನ ಸಂಬಂಧ ಉತ್ತಮವಾಗಿತ್ತು. ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಚೀನಾ ಬೆಂಬಲಿತ ಸರ್ಕಾರ ಅಧಿಕಾರಕ್ಕೆ ಬಂದಲ್ಲಿಂದ ಒಂದೊಂದೇ ಸಮಸ್ಯೆಗಳು ಎದುರಾಗುತ್ತಿವೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು. ಹೀಗಾಗಿ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಲಕ್ಷದ್ವೀಪದ ಕೆಲವು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದರು. ಮೋದಿಯ ಲಕ್ಷದ್ವೀಪ ಭೇಟಿಯನ್ನು ಮಾಲ್ಡೀವ್ಸ್‌ನ ಪ್ರೋಗ್ರಸಿವ್ ಪಾರ್ಟಿ ಆಫ್ ಮಾಲ್ಡೀವ್ಸ್‌ನ ಕೌನ್ಸಿಲ್ ಮೆಂಬರ್ ಜಾಹೀದ್ ರಮೀಜ್ ಅಣುಕಿಸಿದ್ದರು. ಇದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.

Boycott Maldivies Akshay Salman Khan, Sachin

ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಬಾಯ್‌ಕಾಟ್ ಮಾಲ್ಡೀವ್ಸ್ ಅಭಿಯಾನ ಟ್ರೆಂಡಿಂಗ್‌ನಲ್ಲಿದೆ. ಮಾಲ್ಡೀವ್ಸ್‌ಗೆ ಭೇಟಿ ನೀಡುವ ಬದಲು ಭಾರತದ ಪ್ರವಾಸಿ ಸ್ಥಳಗಳಿಗೆ ಪ್ರವಾಸ ಹೋಗುವಂತೆ ಸೋಶಿಯಲ್ ಮೀಡಿಯಾದಲ್ಲಿ ಕರೆ ನೀಡುತ್ತಿದ್ದಾರೆ. ಅದೇ ರೀತಿ ಬಾಲಿವುಡ್ ತಾರೆಯರು, ಕ್ರೀಡಾ ಲೋಕದ ಸೆಲೆಬ್ರೆಟಿಗಳು ಕೂಡ ಭಾರತವನ್ನು ಬೆಂಬಲಿಸುತ್ತಿದ್ದಾರೆ.

ಅಂದ್ಹಾಗೆ, ಪ್ರಧಾನಿ ಮೋದಿ ಮಾಡಿದ ಟ್ವೀಟ್‌ಗೆ (ಎಕ್ಸ್) ಮಾಲ್ಡೀವ್ಸ್‌ನ ರಾಜಕೀಯ ಮುಖಂಡ ಟಾಂಗ್ ಕೊಟ್ಟಿದ್ದರು. "ಲಕ್ಷದ್ವೀಪವನ್ನು ಪ್ರಚಾರ ಮಾಡುತ್ತಿರುವ ನಡೆ ಅದ್ಭುತವಾಗಿದೆ. ಆದರೆ, ನಮ್ಮೊಂದಿಗೆ ಸ್ಪರ್ಧೆ ಮಾಡುವ ಐಡಿಯಾ ಒಂದು ಭ್ರಮೆ. ನಾವು ಕೊಡುತ್ತಿರುವ ಸರ್ವೀಸ್ ಅನ್ನು ಅವರು ಹೇಗೆ ಕೊಡಲು ಸಾಧ್ಯ?" ಎಂದು ಜಾಹೀದ್ ರಮೀಜ್ ಹೇಳಿದ್ದರು. ಇದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಬಾಲಿವುಡ್ ತಾರೆಯರಾದ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಶ್ರದ್ಧಾ ಕಪೂರ್ ಮತ್ತು ಜಾನ್ ಅಬ್ರಾಹಂ, ಸಚಿನ್ ತೆಂಡೂಲ್ಕರ್ ಸೇರಿದಂತ ಹಲವು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಭಾರತದ ಲಕ್ಷದ್ವೀಪದ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ.

ಸಲ್ಮಾನ್ ಖಾನ್ ತಮ್ಮ ಎಕ್ಸ್ ಖಾತೆಯಲ್ಲಿ " ಸುಂದರವಾದ, ಸ್ವಚ್ಚವಾದ ಮತ್ತು ಬೆರಗುಗೊಳಿಸುವ ಲಕ್ಷದ್ವೀಪದಲ್ಲಿ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಬಾಯ್ ಮೋದಿಯನ್ನು ನೋಡುವುದಕ್ಕೆ ಆನಂದವೆನಿಸುತ್ತೆ. ಅತ್ಯದ್ಭುತ ವಿಷಯವೆಂದರೆ, ಇದು ನಮ್ಮ ಭಾರತದಲ್ಲಿ ಇದೆ." ಎಂದು ಹೇಳಿದ್ದಾರೆ.

ಹಾಗೇ ಅಕ್ಷಯ್ ಕುಮಾರ್ ಕೆಲವು ಸ್ಕ್ರೀನ್ ಶಾಟ್‌ಗಳನ್ನು ಶೇರ್ ಮಾಡಿ, " ಮಾಲ್ಡೀವ್ಸ್‌ನ ಜನಪ್ರಿಯ ವ್ಯಕ್ತಿಗಳು ದ್ವೇಷ ಹಾಗೂ ಜನಾಂಗೀಯ ಹೇಳಿಕೆಗಳನ್ನು ನೀಡುವುದನ್ನು ಗಮನಿಸಿದ್ದೇನೆ. ಅವರ ದೇಶಕ್ಕೆ ಅತೀ ಹೆಚ್ಚು ಪ್ರವಾಸಿಗರನ್ನು ಕಳುಹಿಸುವ ಭಾರತದೊಂದಿಗೆ ಇಂತಹ ಕೃತ ಎಸಗಿರುವುದನ್ನು ಕಂಡ ಆಶ್ವರ್ಯ ಆಗಿದೆ" ಎಂದು ಹೇಳಿದ್ದಾರೆ.

"ಭಾರತದ ಅದ್ಭುತ ಆತಿಥ್ಯದೊಂದಿಗೆ, ಅತಿಥಿ ದೇವೋ ಭವ ಅನ್ನೋ ಧ್ಯೇಯದೊಂದಿಗೆ ವಿಶಾಲವಾದ ಕಡಲತೀರದ ಜೀವನವನ್ನು ಅನ್ವೇಷಣೆ ಮಾಡಿ. ಲಕ್ಷದ್ವೀಪವು ಹೋಗಲೇ ಬೇಕಾದ ಸ್ಥಳ" ಎಂದು ಬಾಲಿವುಡ್ ನಟ ಜಾನ್ ಅಬ್ರಹಾಂ ಟ್ವೀಟ್ (ಎಕ್ಸ್) ಮಾಡಿದ್ದಾರೆ. ಹಾಗೇ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಕೂಡ ಭಾರತದ ದ್ವೀಪಗಳನ್ನು ಅನ್ವೇಷಣೆ ಮಾಡಿವ ಅಭಿಮಾನಕ್ಕೆ ಕೈ ಜೋಡಿಸಿದ್ದಾರೆ.

More from Filmibeat

English summary
Boycott Maldivies Row Akshay Kumar, Salman Khan, Sachin Tendulkar and others join the chorus
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X