ಐಶ್ವರ್ಯಾ ರೈ-ಅಭಿಷೇಕ್ ವಿಚ್ಚೇದನ ವದಂತಿ: ಐಶ್ ಫಾಲೋ ಮಾಡೋದನ್ನು ನಿಲ್ಲಿಸಿದ್ರಾ ಅಮಿತಾಬ್ ಬಚ್ಚನ್?

ಬಾಲಿವುಡ್‌ನಲ್ಲಿ ಬಚ್ಚನ್ ಕುಟುಂಬವೀಗ ಒಂದಲ್ಲ ಒಂದು ವಿವಾದದಿಂದ ಸದ್ದು ಮಾಡುತ್ತಲೇ ಇರುತ್ತೆ. ಕಳೆದ ಕೆಲವು ದಿನಗಳಿಂದ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಮಿತಾಭ್ ಬಚ್ಚನ್ ವಿಚ್ಛೇದನದ ವದಂತಿ ಓಡಾಡುತ್ತಿದೆ.

ಐಶ್ವರ್ಯಾ ರೈ ಬಚ್ಚನ್ ಇತ್ತೀಚೆಗೆ ತಮ್ಮ ಅಮ್ಮನ ಮನೆಯಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರೋ ಸುದ್ದಿಯೊಂದು ಬಾಲಿವುಡ್‌ನಲ್ಲಿ ಹರಿದಾಡಿತ್ತು. ಇಲ್ಲಿಂದ ಅಭಿಷೇಕ್ ಹಾಗೂ ಐಶ್ವರ್ಯಾ ರೈ ಬಚ್ಚನ್ ಇಬ್ಬರ ವಿಚ್ಛೇದನದ ವದಂತಿಗಳು ಜೋರಾಗಿಯೇ ಹರಿದಾಡುವುದಕ್ಕೆ ಶುರು ಮಾಡಿದ್ದವು.

Buzz is that Amitabh Bachchan unfollow Aishwarya Rai Bachchan on Instagram here is details

ಈ ವದಂತಿಗಳ ಬಗ್ಗೆ ಇದೂವರೆಗೂ ಐಶ್ವರ್ಯಾ ರೈ ಬಚ್ಚನ್ ಆಗಲಿ, ಅಭಿಷೇಕ್ ಬಚ್ಚನ್ ಆಗಲಿ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋ ವಿಷಯಕ್ಕೆ ಒಂದಿಷ್ಟು ಪುರಾವೆಗಳನ್ನು ನೆಟ್ಟಿಗರೇ ಹುಡುಕಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈಗ ಐಶ್ವರ್ಯಾ ರೈ ಅನ್ನು ಅಮಿತಾಭ್ ಬಚ್ಚನ್ ಫಾಲೋ ಮಾಡುವುದನ್ನು ನಿಲ್ಲಿಸಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಅಷ್ಟಕ್ಕೂ ಏನಿದು ಸುದ್ದಿ? ತಿಳಿಯುವುದಕ್ಕೆ ಮುಂದೆ ಓದಿ..

ಐಶ್ವರ್ಯಾ ರೈ ಅನ್‌ಫಾಲೋ ಮಾಡಿದ್ರಾ ಬಿಗ್ ಬಿ?

ಅಮಿತಾಭ್ ಬಚ್ಚನ್ ಗಾಳೀ ಸುದ್ದಿಗಳಿಗೆ ಸಾಮಾನ್ಯವಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಬಿಗ್ ಬಿ, ತಮ್ಮ ಬಗ್ಗೆ ಏನೇ ಹೇಳಿಕೊಳ್ಳಬೇಕು ಅಂತಿದ್ದರೂ ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಂ ಅನ್ನು ಬಳಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಈಗೀಗ ಇನ್‌ಸ್ಟಾಗ್ರಾಂನಲ್ಲಿ ಹೆಚ್ಚು ಆಕ್ಟಿವ್ ಆಗಿದ್ದಾರೆ. ಇಲ್ಲಿ ಇವರು ಫಾಲೋ ಮಾಡುತ್ತಿರುವ ಕೆಲವೇ ಕೆಲವು ಸೆಲೆಬ್ರೆಟಿಗಳಲ್ಲಿ ಸೊಸೆ ಐಶ್ವರ್ಯಾ ರೈ ಕೂಡ ಇಬ್ಬರಾಗಿದ್ದರು. ಈಗ ಅವರನ್ನು ಅಮಿತಾಭ್ ಫಾಲೋ ಮಾಡುತ್ತಿಲ್ಲ ಎಂದು ವರದಿಯಾಗಿವೆ.

"ಸೊಸೆಯನ್ನು ಫಾಲೋ ಮಾಡುತ್ತಿಲ್ಲ"

ಇನ್‌ಸ್ಟಾಗ್ರಾಂನಲ್ಲಿ ಅಮಿತಾಭ್ ಬಚ್ಚನ್ ಸುಮಾರು 74 ಮಂದಿಯನ್ನು ಫಾಲೋ ಮಾಡುತ್ತಿದ್ದಾರೆ. ಇವರಲ್ಲಿ ಪುತ್ರ ಅಭಿಷೇಕ್ ಬಚ್ಚನ್, ಅಜಯ್ ದೇವಗನ್, ಆಲಿಯಾ ಭಟ್, ಅನನ್ಯಾ ಪಾಂಡೆ ಸೇರಿದಂತೆ ಹಲವರನ್ನು ಬಿಗ್ ಬಿ ಫಾಲೋ ಮಾಡುತ್ತಿದ್ದಾರೆ. ಆದರೆ, ಸೊಸೆ ಐಶ್ವರ್ಯಾ ರೈ ಬಚ್ಚನ್ ರನ್ನು ಅಮಿತಾಭ್ ಫಾಲೋ ಮಾಡುತ್ತಿಲ್ಲ. ಇದು ವಿಚ್ಛೇದನದ ವದಂತಿಗೆ ಮತ್ತಷ್ಟು ಪುಷ್ಠಿ ಕೊಟ್ಟಂತಾಗಿದೆ.

Buzz is that Amitabh Bachchan unfollow Aishwarya Rai Bachchan on Instagram here is details

ಐಶ್ವರ್ಯಾ ಫಾಲೋ ಮಾಡ್ತಿರೋದು ಒಬ್ಬರನ್ನೇ!

ಇತ್ತ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಇನ್‌ಸ್ಟಾಗ್ರಾಂನಲ್ಲಿ ಕೇವಲ ಒಬ್ಬರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ಅದು ಪತಿ ಅಭಿಷೇಕ್ ಬಚ್ಚನ್. ಐಶ್ ಕೂಡ ಬಿಗ್ ಬಿ ಅಮಿತಾಭ್ ಬಚ್ಚನ್ ಅನ್ನು ಫಾಲೋ ಮಾಡುತ್ತಿಲ್ಲ. ಅದೇ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಇಬ್ಬರೂ ಒಬ್ಬರಿಗೊಬ್ಬರು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಿದ್ದಾರೆ. ಹೀಗಾಗಿ ಐಶ್ವರ್ಯಾ ಹಾಗೂ ಬಚ್ಚನ್ ಕುಟುಂಬದ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದಾರೆ.

ಏನಿದು ವಿಚ್ಛೇದನದ ವದಂತಿ?

ಇತ್ತೀಚೆಗೆ ಐಶ್ವರ್ಯಾ ರೈ ಬಚ್ಚನ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆ ವೇಳೆ ಬಚ್ಚನ್ ಕುಟುಂಬದ ಸದಸ್ಯರು ಐಶ್‌ಗೆ ಬರ್ತ್‌ಡೇ ವಿಶ್ ಮಾಡಿರಲಿಲ್ಲ. ಇನ್ನೊಂದು ಕಡೆ ಅಭಿಷೇಕ್ ಬಚ್ಚನ್ ಕೂಡ ವೆಡ್ಡಿಂಗ್ ರಿಂಗ್ ಇಲ್ಲದೇನೆ ಕಾರ್ಯಕ್ರಮಕ್ಕೆ ಬಂದಿದ್ದರು. ಇಲ್ಲಿಂದ ಈ ಜೋಡಿಯ ವಿಚ್ಛೇದನದ ವದಂತಿಗಳಿಗೆ ರೆಕ್ಕೆ ಪುಕ್ಕ ಬಂದಿದೆ.

More from Filmibeat

English summary
Amitabh Bachchan unfollow Aishwarya Rai Bachchan on Instagram:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X