ಇತ್ತೀಚೆಗೆ ಅಗಲಿದ ಧರ್ಮೇಂದ್ರ ಸಂಬಂಧಿಯಾಗಲಿರೋ ದೀಪಿಕಾ ಪಡುಕೋಣೆ? ತಂಗಿ ಮದುವೆ ಆಗ್ತಿರೋದ್ಯಾರು?
ಬಾಲಿವುಡ್‌ನ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಇಂತಹದ್ದೊಂದು ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ತಾಯ್ತನದ ಸಂಭ್ರಮವನ್ನು ಅನುಭವಿಸುತ್ತಿರುವ ದೀಪಿಕಾ ಪಡುಕೋಣೆ ಈಗ ಮನೆಯಲ್ಲಿ ನಡೆಯಲಿರುವ ಮದುವೆ ಸಮಾರಂಭದ ಬಗ್ಗೆ ಖುಷಿಯಾಗಿದ್ದಾರೆ. ಅಷ್ಟಕ್ಕೂ ಮದುವೆ ಯಾರದ್ದು ಅಂತ ನೋಡುವುದಾದರೇ, ಮತ್ಯಾರದ್ದೂ ಅಲ್ಲ. ಅದು ದೀಪಿಕಾ ಪಡುಕೋಣೆಯ ತಂಗಿಯದ್ದು.
ಹೌದು, ದೀಪಿಕಾ ಪಡುಕೋಣೆ ಸಹೋದರಿ ಅನೀಶಾ ಪಡುಕೋಣೆ ಮದುವೆಗೆ ಕುಟುಂಬ ತಯಾರಿ ಮಾಡಿಕೊಳ್ಳುತ್ತಿದೆ. ಇಂತಹದ್ದೊಂದು ಸದ್ದು ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ. ಅನೀಶಾ ಪಡುಕೋಣೆ ಮದುವೆ ಬಾಲಿವುಡ್‌ನ ಲೆಜೆಂಡ್, ಇತ್ತೀಚೆಗೆ ಅಗಲಿದ ಧರ್ಮೇಂದ್ರ ಕುಟುಂಬದ ಸದಸ್ಯರೊಂದಿಗೆ ನಡೆಯಲಿದ್ದು, ಪಡುಕೋಣೆ ಹಾಗೂ ಧರ್ಮೇಂದ್ರ ಕುಟುಂಬ ಸಂಬಂಧಿಗಳಾಗಲಿದ್ದಾರೆ ಎನ್ನಲಾಗುತ್ತಿದೆ.

ಇತ್ತೀಚೆಗೆ ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಅವರ ನಿವಾಸಕ್ಕೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಇಬ್ಬರೂ ಭೇಟಿ ನೀಡಿದ್ದರು. ಹೀಗಾಗಿ ಈ ಸಂಬಂಧ ಬಲಗೊಂಡಿದೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಈ ಬಗ್ಗೆ ಯಾರಿಂದಂಲೂ ಅಧಿಕೃತ ಹೇಳಿಕೆ ಹೊರ ಬಾರದೇ ಇದ್ದರೂ, ಅನೀಶಾ ಪಡುಕೋಣೆ ಮದುವೆ ಧರ್ಮೇಂದ್ರ ಕುಟುಂಬದ ಸದಸ್ಯರಲ್ಲಿ ಒಬ್ಬರಾಗಿರುವ ರೋಹನ್ ಆಚಾರ್ಯ ಅವರೊಂದಿಗೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ದೀಪಿಕಾ ಸಹೋದರಿ ಅನೀಶಾ ಮದುವೆಯಾಗುತ್ತಿರುವ ರೋಹನ್ ಆಚಾರ್ಯ ಯಾರು? ತಿಳಿಯುವುದಕ್ಕೆ ಮುಂದೆ ಓದಿ.
ದೀಪಿಕಾ ಪಡುಕೋಣೆ ಸಹೋದರಿ ಅನೀಶಾ ಪಡುಕೋಣೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಂದೆ ಬ್ಯಾಡ್ಮಿಂಟನ್ ಲೆಜೆಂಡ್ ಪ್ರಕಾಶ್ ಪಡುಕೋಣೆ ಹಾಗೂ ತಾಯಿ ಉಜ್ವಲಾ ಪಡುಕೋಣೆ ಅವರೊಂದಿಗೆ ವಾಸವಿದ್ದಾರೆ. ಅಕ್ಕನಂತೆ ಇವರೂ ಕೂಡ ಹೆಸರು ಮಾಡಿದ್ದಾರೆ. ಅನೀಶಾ ಪಡುಕೋಣೆ ಗಾಲ್ಫ್ ಪ್ಲೇಯರ್ ಆಗಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ದೀಪಿಕಾ ಶುರು ಮಾಡಿರುವ 'ಲಿವ್ ಲವ್ ಲಾಫ್' ಚಾರಿಟಬಲ್ ಟ್ರಸ್ಟ್ ಅನ್ನು ನೋಡಿಕೊಳ್ಳುತ್ತಿದ್ದಾರೆ.
ಇನ್ನು ಅನೀಶಾ ಪಡುಕೋಣೆಯನ್ನು ಕೈ ಹಿಡಿಯಲಿರುವ ರೋಹನ್ ಆಚಾರ್ಯ ದುಬೈ ಮೂಲದ ಉದ್ಯಮಿಯಾಗಿದ್ದಾರೆ. ಇವರ ತಂದೆ ಸುಮಿತ್ ಆಚಾರ್ಯ ಅವರೊಂದಿಗೆ ಟ್ರಾವೆಲ್ ಬ್ಯುಸಿನೆಸ್ ಅನ್ನು ನೋಡಿಕೊಳ್ಳುತ್ತಿದ್ದಾರೆ. ರೋಹನ್ ಅವರ ಅಜ್ಜ ಬಿಮಲ್ ರಾಯ್ ಭಾರತೀಯ ಚಿತ್ರರಂಗದ ಜನಪ್ರಿಯ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ಇವರೊಂದಿಗೆ ಅನೀಶಾ ಪಡುಕೋಣೆ ಮದುವೆ ನಡೆಯಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇನ್ನು ರೋಹನ್ ಆಚಾರ್ಯ ಅವರನ್ನು ಅನೀಶಾ ಮದುವೆ ಆಗುವುದರಿಂದ ದೀಪಿಕಾ ಪಡುಕೋಣೆ ಹಾಗೂ ಧರ್ಮೇಂದ್ರ ಕುಟುಂಬ ಹೇಗೆ ಸಂಬಂಧಿಗಳಾಗುತ್ತಾರೆ? ಈ ಪ್ರಶ್ನೆ ಸಹಜ. ರೋಹನ್ ಆಚಾರ್ಯ ಸಹೋದರಿ ದಿಶಾ ಆಚಾರ್ಯ ಬಾಲಿವುಡ್ ಲೆಜೆಂಡ್ ಧರ್ಮೇಂದ್ರ ಅವರ ಪುತ್ರ ಸನ್ನಿ ಡಿಯೋಲ್ ಹಿರಿಯ ಮಗ ಕರಣ್ ಡಿಯೋಲ್ ಅವರನ್ನು ಮದುವೆ ಆಗಿದ್ದಾರೆ. ಹೀಗಾಗಿ ಧರ್ಮೇಂದ್ರ, ಸನ್ನಿ ಡಿಯೋಲ್ ಹಾಗೂ ದೀಪಿಕಾ ಪಡುಕೋಣೆ ಸಂಬಂಧಿಗಳಾಗುತ್ತಿದ್ದಾರೆ ಎನ್ನಲಾಗಿದೆ.
ರಣ್‌ವೀರ್ ಸಿಂಗ್ ಪೋಷಕರು ಹಾಗೂ ರೋಹನ್ ಆಚಾರ್ಯ ಅವರ ಪೋಷಕರಾದ ಸುಮಿತ್ ಆಚಾರ್ಯ ನಡುವೆ ಉತ್ತಮ ಬಾಂಧವ್ಯವಿದೆ. ಅಲ್ಲದೆ ಅನೀಶಾ ಹಾಗೂ ರೋಹನ್ ಇಬ್ಬರೂ ಹಲವು ಕಾರ್ಯಕ್ರಮಗಳಲ್ಲಿ ಭೇಟಿಯಾಗಿದ್ದು, ಪರಿಚಯವಿತ್ತು. ಹೀಗಾಗಿ ಈ ಸಂಬಂಧವನ್ನು ಬೆಸೆಯುವಲ್ಲಿ ರಣ್‌ವೀರ್ ಸಿಂಗ್ ಪಾತ್ರ ದೊಡ್ಡದಿದೆ ಎಂದು ಆಪ್ತರು ಹೇಳಿದ್ದಾಗಿ ಡೆಕನ್ ಕ್ರೋನಿಕಲ್ ವರದಿ ಮಾಡಿದೆ. ಹೀಗಾಗಿ ಶೀಘ್ರದಲ್ಲಿಯೇ ಮದುವೆ ಸುದ್ದಿ ಅನೌನ್ಸ್ ಮಾಡುವ ಸಾಧ್ಯತೆಯಿದೆ.


Click it and Unblock the Notifications











