ವರುಣ್ ಧವನ್ ಸಿನಿಮಾದಿಂದ ಶ್ರೀಲೀಲಾ ಔಟ್? ಬಾಲಿವುಡ್ ಅಂಗಳದಲ್ಲಿ ಏನಿದು ಸುದ್ದಿ?

ಕನ್ನಡದ 'ಕಿಸ್' ಸಿನಿಮಾದ ನಾಯಕಿ ಈಗ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದರಲ್ಲೂ ತೆಲುಗು ಭಾಷೆಯ ಸಿನಿಮಾಗಳಲ್ಲಿಯೇ ಹೆಚ್ಚಾಗಿ ಬಣ್ಣ ಹಚ್ಚುತ್ತಿದ್ದಾರೆ. ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿದ ಬಳಿಕ ಟಾಲಿವುಡ್‌ಗೆ ಹಾರಿದ್ದ ನಟಿ ಪರ ಭಾಷೆಯ ಸಿನಿಮಾಗಳಲ್ಲಿ ಆಫರ್‌ಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ.

ಅದರಲ್ಲೂ ಟಾಲಿವುಡ್‌ನ ದಿಗ್ಗಜರ ಸಿನಿಮಾದಲ್ಲಿ ನಟಿಸಿದ ಬಳಿಕವಂತೂ ಶ್ರೀಲೀಲಾ ಆಫರ್‌ಗಳ ಸುರಿಮಳೆಯೇ ಬಂದಿತ್ತು. ಟಾಲಿವುಡ್ ಲೆಜೆಂಟ್ ಬಾಲಕೃಷ್ಣ, ಪವರ್‌ಸ್ಟಾರ್ ಪವನ್ ಕಲ್ಯಾಣ್, ಸೂಪರ್ ಸ್ಟಾರ್ ಮಹೇಶ್ ಬಾಬು ಅಂತಹ ನಟರ ಸಿನಿಮಾಗಳಲ್ಲಿ ಶ್ರೀಲೀಲಾ ನಟಿಸಿದ್ದರು. ಬ್ಯಾಕ್ ಟು ಬ್ಯಾಕ್ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದ ಈ ನಟಿಗೆ ಬಾಲಿವುಡ್‌ ಹಾಗೂ ತಮಿಳು ಚಿತ್ರರಂಗದಿಂದಲೂ ಆಫರ್‌ಗಳು ಬರುತ್ತಿವೆ.

Buzz is that Sreeleela left Bollywood movie with Varun Dhawan

ಕೆಲವು ದಿನಗಳ ಹಿಂದೆ ಶ್ರೀಲೀಲಾ ಬಾಲಿವುಡ್‌ ಸಿನಿಮಾಗೆ ಆಯ್ಕೆ ಆಗಿರುವ ಬಗ್ಗೆ ಸುದ್ದಿಯಾಗಿತ್ತು. ಬಾಲಿವುಡ್ ನಟ ವರುಣ್ ಧವನ್ ನಟಿಸುತ್ತಿರುವ ಸಿನಿಮಾಗೆ ಶ್ರೀಲೀಲಾ ನಾಯಕಿ ಎಂದು ಹೇಳಲಾಗಿತ್ತು. ಈ ಸಿನಿಮಾವನ್ನು ವರುಣ್ ಧವನ್ ತಂದೆ ಡೇವಿಡ್ ಧವನ್ ನಿರ್ದೇಶನ ಮಾಡುತ್ತಿದ್ದಾರೆ. ಟಿಪ್ಸ್ ಕಂಪನಿ ಮಾಲೀಕ ರಮೇಶ್ ತುರಾನಿ ನಿರ್ಮಾಣ ಮಾಡುತ್ತಿದ್ದಾರೆ. ಇದೇ ಸಿನಿಮಾದಿಂದ ಶ್ರೀಲೀಲಾ ಹೊರಬಿದ್ದಿದ್ದಾರೆ ಅನ್ನೋ ಸುದ್ದಿಯೀಗ ಓಡಾಡುತ್ತಿದೆ.

ವರುಣ್ ಧವನ್ ಸಿನಿಮಾ ಈಗಾಗಲೇ ಒಂದು ಹಂತದ ಶೂಟಿಂಗ್ ಕೂಡ ಮುಗಿಸಿದೆ ಎನ್ನಲಾಗಿದೆ. ಈ ಮಧ್ಯೆ ಶ್ರೀಲೀಲಾ ಸಿನಿಮಾದಿಂದ ಹೊರಬಿದ್ದಿದ್ದಾರೆ ಅನ್ನೋ ಸುದ್ದಿ ಬಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆದರೆ, ಈ ಸುದ್ದಿ ಹೊರಬೀಳುತ್ತಿದ್ದಂತೆ ಸಿನಿಮಾದ ನಿರ್ಮಾಪಕರು ಪ್ರತಿಕ್ರಿಯೆ ನೀಡಿದ್ದು, ತಮ್ಮ ಸಿನಿಮಾಗೆ ನಾಯಕಿಯನ್ನು ಆಯ್ಕೆಯೇ ಮಾಡಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ.

ಈ ಸಿನಿಮಾ ಶ್ರೀಲೀಲಾ ಅವರ ಮೊದಲ ಬಾಲಿವುಡ್ ಸಿನಿಮಾ ಎಂದು ಹೇಳಲಾಗುತ್ತಿತ್ತು. ಒಂದು ವೇಳೆ ಈ ಸಿನಿಮಾದಲ್ಲಿ ಶ್ರೀಲೀಲಾ ನಟಿಸಿದ್ದರೆ, ಕನ್ನಡದ ಮತ್ತೊಬ್ಬ ನಟಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟಂತೆ ಆಗುತ್ತಿತ್ತು. ಆದರೆ, ಸದ್ಯ ಶ್ರೀಲೀಲಾ ಬಾಲಿವುಡ್ ಸಿನಿಮಾದಿಂದ ಹೊರಬಿದ್ದಿರುವ ಸುದ್ದಿ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸಿದೆ. ಆದರೆ, ಈ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆಯಾಗಲಿ, ಸಿನಿಮಾದಿಂದ ಹೊರಬಂದ ವಿಷಯದ ಬಗ್ಗೆಯಾಗಲಿ ಶ್ರೀಲೀಲಾ ಇದೂವರೆಗೂ ಪ್ರತಿಕ್ರಿಯೆ ನೀಡಿಲ್ಲ.

Buzz is that Sreeleela left Bollywood movie with Varun Dhawan

ಆದರೆ, ಸಿನಿಮಾದ ನಿರ್ಮಾಪಕ ರಮೇಶ್ ತುರಾನಿ ಸದ್ಯ ಹರಿದಾಡುತ್ತಿರುವುದು ಸುಳ್ಳು ಸುದ್ದಿಯೆಂದು ಹೇಳಿಕೆ ಕೊಟ್ಟಿದ್ದಾರೆ. "ನಾವು ಇದೂವರೆಗೂ ಯಾರನ್ನೂ ಈ ಪಾತ್ರಕ್ಕೆ ಅಪ್ರೋಚ್ ಮಾಡಿಲ್ಲ. ನಾವು ಇನ್ನೂ ನಾಯಕಿಯ ಪಾತ್ರಕ್ಕೆ ಆಯ್ಕೆ ಮಾಡುವುದರಲ್ಲಿ ಇದ್ದೇವೆ. ಈಗಷ್ಟೇ ಮೊದಲ ಹಂತದ ಚಿತ್ರೀಕರಣ ಮುಗಿದಿದೆ ಅಷ್ಟೇ" ಎಂದು ನಿರ್ಮಾಪಕ ರಮೇಶ್ ತುರಾನಿ ಹೇಳಿಕೆ ಕೊಟ್ಟಿದ್ದಾರೆ.

ಇದೇ ವೇಳೆ "ನಾಯಕಿಯ ಆಯ್ಕೆ ನಡೆಯುತ್ತಿದ್ದು, ಫೈನಲ್ ಆದಮೇಲೆ ಮಾಹಿತಿ ನೀಡುತ್ತೇವೆ. ಅಲ್ಲಿವರೆಗೂ ಯಾವುದೇ ಗಾಳಿ ಸುದ್ದಿಯನ್ನು ನಂಬಬೇಡಿ" ಎಂದು ನಿರ್ಮಾಪಕ ರಮೇಶ್ ತುರಾನಿ ಹೇಳಿಕೊಂಡಿದ್ದಾರೆ. ಮಹೇಶ್ ಬಾಬು ಜೊತೆ ನಟಿಸಿದ 'ಗುಂಟೂರು ಖಾರಂ' ಸಿನಿಮಾದಲ್ಲಿ ಶ್ರೀಲೀಲಾ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಆ ಬಳಿಕ ಹೊಸ ಸಿನಿಮಾ ತೆರೆಕಂಡಿಲ್ಲ. ಸದ್ಯ ಶ್ರೀಲೀಲಾ ಕೈಯಲ್ಲಿ ನಾಲ್ಕು ತೆಲುಗು ಸಿನಿಮಾಗಳು ಇವೆ ಎಂದು ಹೇಳಾಗುತ್ತಿದೆ.

More from Filmibeat

English summary
Sreeleela out of Bollywood movie Varun Dhawan:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X