Cannes 2023: ಐಶ್ವರ್ಯಾ ರೈ, ಸೋನಂ ಕಪೂರ್‌ಗೆ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನ ರಾಣಿಯರು ಅಂತ ಕರೆಯೋದೇಕೆ?

'ಫೆಸ್ಟಿವಲ್ ದೆ ಕೇನ್ಸ್' ಅಥವಾ ಪ್ರತಿಷ್ಠಿತ 'ಕೇನ್ಸ್ ಫಿಲ್ಮ್‌ ಫೆಸ್ಟಿವಲ್' ಇಂದಿನಿಂದ ಅದ್ದೂರಿಯಾಗಿ ಆರಂಭಗೊಂಡಿದೆ. 76ನೇ ಆವತ್ತಿಯ ಚಲನ ಚಿತ್ರೋತ್ಸವ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಅತ್ಯಂತ ದುಬಾರಿ ಹಾಗೂ ಪ್ರತಿಷ್ಠಿತ ಚಲನ ಚಿತ್ರೋತ್ಸವ ಆಗಿದೆ.

ಮೇ 16ರಿಂದ ಆರಂಭಗೊಳ್ಳುವ ಚಲನ ಚಿತ್ರೋತ್ಸವ ಮೇ 27ರವರೆಗೂ ನಡೆಯುತ್ತೆ. ಫ್ಯಾನ್ಸ್‌ನ ಚಿಕ್ಕ ನಗರ ಕೇನ್ಸ್‌ನಲ್ಲಿ ನಡೆಯೋ ಈ ಕಾರ್ಯಕ್ರಮಕ್ಕೆ ವಿಶ್ವದ ಬೇರೆ ಬೇರೆ ಚಿತ್ರರಂಗದ ಸಿನಿಮಾ ತಾರೆಯರು ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕುತ್ತಾರೆ.

Cannes 2023: Aishwarya Rai and Sonam Kapoor said to be the Queens of the Cannes Film Festival why?

ಅದರಲ್ಲೂ ನಟಿಯರು ಗ್ಲಾಮರಸ್ ಆಗಿ ಡ್ರೆಸ್ ಮಾಡಿಕೊಂಡು ಬಂದು ಕ್ಯಾಮರಾಗಳಿಗೆ ಪೋಸ್ ಕೊಡುತ್ತಾರೆ. ಇವರಲ್ಲಿ ಬಾಲಿವುಡ್‌ ನಟಿಯರೂ ಕೂಡ ಸೇರಿಕೊಂಡಿದ್ದಾರೆ. ಅವರಲ್ಲಿ ಐಶ್ವರ್ಯಾ ರೈ ಹಾಗೂ ಸೋನಂ ಕಪೂರ್ ಇಬ್ಬರನ್ನೂ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನ ರಾಣಿಯರು ಎಂದು ಕರೆಯುತ್ತಾರೆ. ಅದ್ಯಾಕೆ ಅನ್ನೋದನ್ನು ತಿಳಿಯಲು ಮುಂದೆ ಓದಿ.

ಐಶ್ವರ್ಯಾ, ಸೋನಂ ಕೇನ್ಸ್‌ನ ಕ್ವೀನ್ಸ್

ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕೇವಲ ಸಿನಿಮಾಗಳಷ್ಟೇ ಗಮನ ಸೆಳೆಯೋದಿಲ್ಲ. ಇಲ್ಲಿಗೆ ಬರೋ ತಾರೆಯರ ಫ್ಯಾಷನ್ ಕೂಡ ಅಷ್ಟೇ ಗಮನ ಸೆಳೆಯುತ್ತೆ. ಚಿತ್ರ ವಿಚಿತ್ರವಾದ ಕ್ಯಾಸ್ಟ್ಯೂಮ್ ಧರಿಸಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಗಮನ ಸೆಳೆಯುತ್ತಾರೆ. ಇವರಲ್ಲಿ ಹಲವು ಬಾರಿಗೆ ಐಶ್ವರ್ಯಾ ರೈ ಬಚ್ಚನ್ ಹಾಗೂ ಸೋನಂ ಕಪೂರ್ ಇಬ್ಬರೂ ಹೆಚ್ಚು ಗಮನ ಸೆಳೆದಿದ್ದಾರೆ.

ಈ ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್‌ನಲ್ಲಿ ಐಶ್ವರ್ಯಾ ರೈ ಹಾಗೂ ಸೋನಂ ಕಪೂರ್ ಫ್ಯಾಷನ್ ಸೆನ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಐಶ್ವರ್ಯಾ ರೈ ಧರಿಸಿದ್ದ ಸಿಂಡ್ರೆಲ್ಲಾ ಡ್ರೆಸ್ ಹಾಗೂ ಬಟರ್‌ಫ್ಲೈ ಡ್ರೆಸ್ ಟ್ರೆಂಡ್ ಆಗಿದ್ದವು. ಹಾಗೇ ಸೋನಂ ಕಪೂರ್ ಧರಿಸಿದ್ದ ಡಿಸೈನರ್ ಸೀರೆಗಳು ಹಾಗೂ ಗೋಲ್ಡ್ ಕೇಸ್ ಡ್ರೆಸ್‌ಗಳು ಟಾಕ್‌ ಆಫ್‌ ಟೌನ್ ಆಗಿದ್ದವು.

Cannes 2023: Aishwarya Rai and Sonam Kapoor said to be the Queens of the Cannes Film Festival why?

ಐಶ್ವರ್ಯಾ ರೈ ಡಿಸೈನರ್ಸ್

ಐಶ್ವರ್ಯಾ ರೈ ಬಚ್ಚನ್ ಕೇನ್ಸ್ ಫಿಲ್ಮ್‌ ಫೆಸ್ಟಿವಲ್‌ನ ಫೇವರಿಟ್ ನಟಿ. ಈ ಫೆಸ್ಟಿವಲ್ ಜೊತೆ ಇವರಿಗೆ ತುಂಬ ಉತ್ತಮ ಒಡನಾಟವಿದೆ. ರೆಡ್ ಕಾರ್ಪೆಟ್ ಮೇಲೆ ಐಶ್ವರ್ಯಾ ರೈ ಹೆಜ್ಜೆ ಹಾಕಿದರೇನೆ ಒಂದು ಕಳೆ ಅನ್ನುವಷ್ಟು ಜನಪ್ರಿಯರಾಗಿದ್ದಾರೆ.

ಐಶ್ವರ್ಯಾ ರೈಗಾಗಿಯೇ ಪ್ರತಿಷ್ಠಿತ ಡಿಸೈನರ್‌ಗಳು ವಸ್ತ್ರ ವಿನ್ಯಾಸ ಮಾಡಿದ್ದಾರೆ. ಸಭ್ಯಸಾಚಿ, ಮೈಕೆಲ್ ಸಿನ್ಕೊ, ಎಲಿ ಸಾಬ್, ಗೌರವ್ ಗುಪ್ತಾ ಹಾಗೂ ರಾಬರ್ಟೊ ಕವಾಲಿ ಸೇರಿದಂತೆ ಹಲವರು ಡಿಸೈನ್ ಮಾಡಿದ್ದಾರೆ. ಹೀಗಾಗಿ ಐಶ್ವರ್ಯಾ ರೈ ಫ್ಯಾಷನ್ ಜರ್ನಿ ಎಲ್ಲರ ಗಮನ ಸೆಳೆದಿದೆ.

Cannes 2023: Aishwarya Rai and Sonam Kapoor said to be the Queens of the Cannes Film Festival why?

ಸೋನಂ ಕಪೂರ್ ಡಿಸೈನರ್

ಸೋನಂ ಕಪೂರ್ 2011ರಲ್ಲಿ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಮೊದಲ ಬಾರಿಗೆ ಭಾಗವಹಿಸಿದ್ದರು. ಇಲ್ಲಿಂದ ಸೋನಂ ಕಪೂರ್ ಫ್ಯಾಷನ್ ಸೆನ್ಸ್‌ನಲ್ಲಿ ಐಶ್ವರ್ಯಾ ರೈಗೆ ಕಾಫಿಟೇಷನ್ ಕೊಟ್ಟಿದ್ದರು. ಹೀಗಾಗಿ ಇವರಿಬ್ಬರೂ ಕೇನ್ಸ್‌ ಫ್ಯಾಷನ್ ಲೋಕದ ರಾಣಿಯರಾಗಿ ಮೆರೆದಿದ್ದಾರೆ.

ಜೀನ್ ಪಾಲ್ ಗೌಲ್ಟಿಯರ್ ಗೌನ್ 2011ರಲ್ಲಿ ಗಮನ ಸೆಳೆದಿತ್ತು. ಅಲ್ಲಿಂದ ಸೋನಂ ಕಪೂರ್ ಅವರನ್ನು ತೆಡೆಯುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಅನಾಮಿಕಾ ಖನ್ನಾ ಅವರ ಸೀರೆ ಆಗಿರಬಹುದು, ಇಲ್ಲಾ ಎಲಿ ಸಾಬ್ ಡಿಸೈನ್ ಮಾಡಿದ ಗೌನ್ ಆಗಿರಬಹುದು ಅಥವಾ ರಾಲ್ಫ್ & ಸುಸ್ಸೋ ಸೀರೆಗಳನ್ನು ಉಟ್ಟು ಗಮನ ಸೆಳೆದಿದ್ದಾರು.

More from Filmibeat

English summary
Cannes 2023: Aishwarya Rai and Sonam Kapoor said to be the Queens of the Cannes Film Festival why?, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X