»   » ಶಾರುಖ್ ಖಾನ್ ವಿರುದ್ದ ಕೇಸ್ ದಾಖಲು

ಶಾರುಖ್ ಖಾನ್ ವಿರುದ್ದ ಕೇಸ್ ದಾಖಲು

Posted By:
Subscribe to Filmibeat Kannada
ಅರೆ ಇದೇನಪ್ಪಾ ಇದು.. ಬಾಲಿವುಡ್ ನಟ ಶಾರುಖ್ ಖಾನ್ 'ರಯೀಸ್' ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದರಲ್ಲಾ... ಸಡೆನ್ ಆಗಿ ಅವರ ವಿರುದ್ಧ ಯಾವ ಕೇಸ್ ದಾಖಲಾಗಿದೆ ಅತಿರಾ.. ಮುಂದೆ ಓದಿ ನಿಮಗೆ ತಿಳಿಯುತ್ತೇ.[ಶಾರುಖ್ 'ರಯೀಸ್' ಪ್ರಮೋಶನ್ ವೇಳೆ ವ್ಯಕ್ತಿ ಸಾವು]

ಬಾಲುವುಡ್ ನಟ ಶಾರುಖ್ ಖಾನ್ ವಿರುದ್ಧ ಗಲಭೆ ಹಾಗೂ ರೈಲ್ವೆ ಆಸ್ತಿ ಹಾನಿ ಮಾಡಿರುವ ಆರೋಪದಡಿ ಕೇಸ್ ಒಂದು ನೆನ್ನೆ ರಾತ್ರಿ(ಫೆ.14) ದಾಖಲಾಗಿದೆ. ಅದರ ಡೀಟೇಲ್ಸ್ ಇಲ್ಲಿದೆ.

ಶಾರುಖ್ ವಿರುದ್ಧ ಕೇಸ್ ಏನು?

ಶಾರುಖ್ ಖಾನ್ ಕಳೆದ ತಿಂಗಳು (ಜನವರಿ) 23 ರಂದು 'ರಯೀಸ್' ಚಿತ್ರದ ಪ್ರಮೋಶನ್ ಗಾಗಿ ಕೋಟಾ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ್ದರು. ಈ ವೇಳೆ ರೈಲ್ವೆ ನಿಲ್ದಾಣದಲ್ಲಿನ ಆಸ್ತಿಗಳಿಗೆ ಹಾನಿ ಉಂಟಾಗಿದೆ, ಎಂಬ ಆರೋಪದಡಿಯಲ್ಲಿ ಕೇಸ್ ದಾಖಲಾಗಿದೆ ಎಂದು ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪ ಏನು?

"ಶಾರುಖ್ ಖಾನ್ ಜನವರಿ 23 ರಂದು ಆಗಸ್ಟ್ ಕ್ರಾಂತಿ ಎಕ್ಸ್ ಪ್ರೆಸ್ ನಲ್ಲಿ ಕೋಟಾ ರೈಲ್ವೆ ನಿಲ್ದಾಣಕ್ಕೆ ಭೇಟಿ ಕೊಟ್ಟ ವೇಳೆ, ಬಾಗಿಲಲ್ಲಿ ನಿಂತು ತಮ್ಮ ಫ್ಯಾನ್ ಗಳತ್ತ ಕೈ ತೋರಿಸಿ ಹಾಯ್ ಮಾಡಿದ್ದರು. ಈ ವೇಳೆ ಅಪಾರ ಅಭಿಮಾನಿಗಳಿಂದ ನೂಕುನುಗ್ಗಲು ಉಂಟಾಗಿ ತಳ್ಳುವ ಗಾಡಿಯಲ್ಲಿದ್ದ ನನ್ನ ವಸ್ತುಗಳು ನಾಶವಾಗಿವೆ," ಎಂದು ವಿಕ್ರಂ ಸಿಂಗ್ ಎನ್ನುವ ವ್ಯಾಪಾರಿ ಒಬ್ಬರು ಫೆಬ್ರವರಿ 14 ರ ರಾತ್ರಿ ಶಾರುಖ್ ವಿರುದ್ಧ ಆರೋಪಿಸಿ ಅರ್ಜಿ ಸಲ್ಲಿಸಿದ್ದಾರೆ.

ರೈಲ್ವೆ ಕಾಯಿದೆ ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲು

ಶಾರುಖ್ ಮೇಲೆ ಐಪಿಸಿ ಸೆಕ್ಷನ್ 42, 120(ಬಿ), 147, 149, 160, 145, ಸೆಕ್ಷನ್ 146 (ರೈಲ್ವೆ ಕಾರ್ಮಿಕರ ಕೆಲಸಕ್ಕೆ ಅಡ್ಡಿಪಡಿಸುವುದು) ಹಾಗೂ ಸೆಕ್ಷನ್ 3 (ಸಾರ್ವಜನಿಕ ಆಸ್ತಿಗಳಿಗೆ ಹಾನಿ ಆಗುವ ರೀತಿ ವರ್ತಿಸುವುದು) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.

'ರಯೀಸ್' ಪ್ರಮೋಶನ್ ವೇಳೆ ವ್ಯಕ್ತಿ ಸಾವು

'ರಯೀಸ್' ಚಿತ್ರದ ಪ್ರಮೋಶನ್ ವೇಳೆ ವಡೋದರಾ ಸಾಮಾಜಿಕ ಕಾರ್ಯಕರ್ತ ಮತ್ತು ಶಾರುಖ್ ಅವರ ಅಭಿಮಾನಿ ಫರಿದ್ ಖಾನ್ ಪಥಾನ್ ಎಂಬುವವರು ಹೃದಯಘಾತದಿಂದ ಸಾವನ್ನಪ್ಪಿದ್ದರು. ಅಂದು ಜನರ ನೂಕುನುಗ್ಗಲು ಹೆಚ್ಚಿದ್ದರಿಂದ ಫರಿದ್ ಖಾನ್ ಅವರಿಗೆ ಉಸಿರು ಕಟ್ಟಿದಂತಾಗಿ ಹೃದಯಘಾತ ಸಂಭವಿಸಿತ್ತು.

English summary
Bollywood star Shah Rukh Khan has been booked for allegedly "rioting" and "damaging" railway property during the promotion of his film 'Raees' at Kota Railway station, a Government Railway Police official said on Tuesday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada