ಶಾರುಖ್ 'ರಯೀಸ್' ಪ್ರಮೋಶನ್ ವೇಳೆ ವ್ಯಕ್ತಿ ಸಾವು
ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ನೆನ್ನೆ(ಸೋಮವಾರ 23) ಗುಜರಾತ್ ಗೆ ತಮ್ಮ 'ರಯೀಸ್' ಚಿತ್ರದ ಪ್ರಮೋಶನ್ ಗಾಗಿ ತೆರಳಿದ್ದ ವೇಳೆ ಶಾರುಖ್ ಅಭಿಮಾನಿ ಒಬ್ಬ ಸಾವನಪ್ಪಿದ್ದಾನೆ. ಅಲ್ಲದೇ ಹಲವರು ಗಾಯಗೊಂಡ ದುರ್ಘಟನೆ ನೆನ್ನೆ ತಡರಾತ್ರಿ ಸಂಭವಿಸಿದೆ.[ಕಿಂಗ್ ಖಾನ್ ಶಾರುಖ್ 'ರಯೀಸ್' ಟ್ರೈಲರ್ ಸೂಪರ್ ಹಿಟ್ !]

ಆಗಸ್ತ್ ಕ್ರಾಂತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಬರುತ್ತಿದ್ದ ಶಾರುಖ್ ಖಾನ್ ಅವರನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಈ ವೇಳೆ ವಡೋದರಾ ದ ಸಾಮಾಜಿಕ ಕಾರ್ಯಕರ್ತ ಮತ್ತು ಶಾರುಖ್ ಅವರ ಅಭಿಮಾನಿ ಫರಿದ್ ಖಾನ್ ಪಥಾನ್ ಎಂಬುವವರು ರೈಲ್ವೇ ಸ್ಟೇಷನ್ ನಲ್ಲಿ ಜನರ ನೂಕುನುಗ್ಗಲಿನಿಂದ ಉಸಿರು ಕಟ್ಟಿದಂತಾಗಿ ಹೃದಯಘಾತ ಸಂಭವಿಸಿದೆ. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಸಾವನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿಯಲಾಗಿದೆ.

ಜನರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ ವೇಳೆ ಕಾಲ್ತುಳಿತ ಸಂಭವಿಸಿದೆ. ಈ ಸಂದರ್ಭದಲ್ಲಿ ಇನ್ನೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.[ಶಾರುಖ್ ಖಾನ್ 'ಫ್ಯಾನ್' ಬಗ್ಗೆ ಬಾಲಿವುಡ್ ತಾರೆಯರ ಟ್ವೀಟ್]
ಸದ್ಯ ಚಿತ್ರದ ಪ್ರಮೋಶನ್ ಗಾಗಿ ಆಗಸ್ತ್ ಕ್ರಾಂತಿ ಎಕ್ಸ್ ಪ್ರೆಸ್ ರೈಲಿನಲ್ಲಿ ದೆಹಲಿಗೆ ಪ್ರಯಾಣ ಮಾಡಿ ಶಾರುಖ್ ಖಾನ್ ಅವರು ರೈಲು ನಿಲ್ದಾಣಗಳಲ್ಲಿ ತಮ್ಮ ಅಭಿಮಾನಿಗಳನ್ನು ಮಾತನಾಡಿಸುತ್ತಿದ್ದಾರೆ.

ಶಾರುಖ್ ಅವರ ಬಹುನಿರೀಕ್ಷಿತ ಚಿತ್ರ 'ರಯೀಸ್' ಜನವರಿ 25 ರಂದು ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ರಾಹುಲ್ ಢೋಲಾಕಿಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಮಾಹಿರಾ ಖಾನ್, ನಾವಾಜುದ್ದೀನ್ ಸಿದ್ಧಿಕಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.


Click it and Unblock the Notifications











