ಬ್ರೈನ್ ಹ್ಯಾಮೆರೇಜ್: ಬಾಲಿವುಡ್‌ನ ಯುವ ಕಾಸ್ಟಿಂಗ್ ಡೈರೆಕ್ಟರ್ ಕ್ರಿಶ್ ಕಪೂರ್ ನಿಧನ

ಬಾಲಿವುಡ್‌ನಲ್ಲಿ ಕಾಸ್ಟಿಂಗ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕ್ರಿಶ್ ಕಪೂರ್, ಬ್ರೈನ್ ಹ್ಯಾಮೆರೇಜ್‌ನಿಂದಾಗಿ ನಿಧನರಾಗಿದ್ದಾರೆ. ಅವರಿಗೆ ಕೇವಲ 28 ವರ್ಷ ವಯಸ್ಸಾಗಿತ್ತು.

Recommended Video

ತಾಯಿಯನ್ನು ಕಳೆದುಕೊಂಡ ಮಗುವಿನ ಸಹಾಯಕ್ಕೆ ನಿಂತ ಬಾಲಿವುಡ್ ಕಿಂಗ್ ಖಾನ್ | Shahrukh Khan| Bihar child

ಕ್ರಿಶ್ ಅವರು ಮೇ 31ರಂದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ತಡವಾಗಿ ಸುದ್ದಿಯಾಗಿದೆ. ಅವರು ಕೆಲವು ದಿನಗಳ ಹಿಂದೆ ಅವರು ಮನೆಯಲ್ಲಿ ಕುಸಿದು ಬಿದ್ದಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎನ್ನಲಾಗಿದೆ. ರಸ್ತೆ ಅಪಘಾತದಿಂದಾಗಿ ಅವರು ಮೃತಪಟ್ಟದ್ದಾರೆ ಎನ್ನಲಾಗಿತ್ತು. ಆದರೆ ಅದನ್ನು ಅವರ ಕುಟುಂಬ ನಿರಾಕರಿಸಿದೆ.

'ಆತನಿಗೆ ಯಾವುದೇ ಅನಾರೋಗ್ಯದ ಸಮಸ್ಯೆ ಕಂಡುಬಂದಿರಲಿಲ್ಲ. ಬಹಳ ಆರೋಗ್ಯದಿಂದ ಇದ್ದು, ಎಲ್ಲರ ಜತೆ ಆರಾಮಾಗಿ ಮಾತನಾಡುತ್ತಾ ಸಮಯ ಕಳೆಯುತ್ತಿದ್ದ. ಮೇ 31ರಂದು ಸಬರ್ಬನ್ ಮೀರಾ ರಸ್ತೆಯಲ್ಲಿರುವ ಮನೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದ. ರಕ್ತಸ್ರಾವವಾಗಲು ಆರಂಭವಾಯಿತು. ಬ್ರೈನ್ ಹ್ಯಾಮರೇಜ್‌ನಿಂದ ಆತ ಮೃತಪಟ್ಟಿದ್ದಾನೆ' ಎಂದು ಕ್ರಿಶ್ ಸೋದರ ಮಾವ ಸುನೀಲ್ ಭಲ್ಲಾ ತಿಳಿಸಿದ್ದಾರೆ.

 Casting Director Krish Kapoor Dies Due To Brain Hemorrhage

ರೆಹಾ ಚಕ್ರವರ್ತಿ ಮತ್ತು ವರುಣ್ ಮಿತ್ರಾ ನಟನೆಯ, ಮಹೇಶ್ ಭಟ್ ನಿರ್ದೇಶನದ 'ಜಲೇಬಿ' ಚಿತ್ರದಲ್ಲಿ, ಕೃತಿ ಕರಬಂಧ ಮತ್ತು ಪುಳ್ಕಿತ್ ಸಾಮ್ರಾಟ್ ನಟನೆಯ 'ವೀರ್ ಡಿ ವೆಡ್ಡಿಂಗ್' ಸೇರಿದಂತೆ ಅನೇಕ ಚಿತ್ರಗಳಲ್ಲಿ ವಿವಿಧ ಪಾತ್ರಗಳಿಗೆ ಕಲಾವಿದರನ್ನು ಒದಗಿಸುವ ಕಾಸ್ಟಿಂಗ್ ಡೈರೆಕ್ಟರ್ ಆಗಿ ಅವರು ಕೆಲಸ ಮಾಡಿದ್ದರು.

ಕ್ರಿಶ್ ಕಪೂರ್ ತಾಯಿ, ಪತ್ನಿ ಮತ್ತು ಏಳು ವರ್ಷದ ಮಗುವನ್ನು ಅಗಲಿದ್ದಾರೆ.

More from Filmibeat

English summary
Bollywood casting director Krish Kapur died at 28 due to brain hemorrhage in Mumbai on May 31.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X