5 ವರ್ಷಗಳ ಬಳಿಕ ಸುಶಾಂತ್ ಸಿಂಗ್ ಸಾವಿನ ಕುರಿತ ಅಂತಿಮ ವರದಿ ಸಲ್ಲಿಸಿದ ಸಿಬಿಐ; ಎರಡು ಪ್ರತ್ಯೇಕ ರಿಪೋರ್ಟ್‌ನಲ್ಲಿ ಏನಿದೆ?

ಬಾಲಿವುಡ್‌ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತು ತನಿಳೆ ನಡೆಸುತ್ತಿದ್ದ ಸಿಬಿಐ ಐದು ವರ್ಷಗಳ ಬಳಿಕ ಅಂತಿಮ ವರದಿಯನ್ನು ಸಲ್ಲಿಸಿದೆ. ಮುಂಬೈನ ತನ್ನ ನಿವಾಸದಲ್ಲಿ ಸುಶಾಂತ್ ಸಿಂಗ್ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದರು. ಆದರೆ, ಇದು ಆತ್ಯಹತ್ಯೆ ಅಲ್ಲ. ಇದೊಂದು ಕೊಲೆ ಎಂದು ಕುಟುಂಬದ ಸದಸ್ಯರು ಆರೋಪ ಮಾಡಿದ್ದರು. ದೇಶಾದ್ಯಂತ ಸುಶಾಂತ್ ಸಾವಿನ ಬಗ್ಗೆ ಆಕ್ರೋಶ ಹೊರ ಹಾಕಿದ್ದರು.

ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಈ ಘಟನೆ ನಡೆದ ಐದು ವರ್ಷಗಳ ಬಳಿಕ ಸುಶಾಂತ್ ಸಾವಿನ ಪ್ರಕರಣಕ್ಕೆ ಸಿಬಿಐ ಅಂತ್ಯ ಹಾಡಿದ್ದು ಎರಡು ಪ್ರತ್ಯೇಕ ವರದಿಗಳನ್ನು ಸಲ್ಲಿಸಿದೆ ಎಂದು ವರದಿಯಾಗಿದೆ. ಹಾಗಿದ್ದರೆ, ಈ ಎರಡು ಪ್ರತ್ಯೇಕ ವರದಿಗಳಲ್ಲಿ ಏನಿದೆ? ಅಂತ ತಿಳಿಯಲು ಮುಂದೆ ಓದಿ.

CBI has filed two closure reports in the Sushant Singh Rajput death case relief to Rhea Chakraborty

ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ತಂದೆ ಕೆಕೆ ಸಿಂಗ್ ದೂರನ್ನು ದಾಖಲಿಸಿದ್ದರು. ಈ ಪ್ರಕರಣವನ್ನು ಕ್ಲೋಸ್ ಮಾಡಲಾಗಿದೆ. ಇನ್ನೊಂದು ಮಾಜಿ ಗೆಳತಿ ರಿಯಾ ಚಕ್ರವರ್ತಿ ಸುಶಾಂತ್ ಸಿಂಗ್ ಸಹೋದರಿಯರ ವಿರುದ್ಧ ಕೇಸ್ ದಾಖಲಿಸಿದ್ದರು. ಆ ಪ್ರಕರಣಕ್ಕೂ ಅಂತ್ಯ ಹಾಡಲಾಗಿದೆ. ಹೀಗಾಗಿ ಎರಡು ಪ್ರತ್ಯೇಕ ವರದಿಗಳನ್ನು ಸಿಬಿಐ ಸಲ್ಲಿಸಿದೆ. ಈ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸುಶಾಂತ್ ಸಿಂಗ್ ತಂದೆ ದಾಖಲಿಸಿದ ಕೇಸ್‌ನ ವರದಿಯನ್ನು ಪಾಟ್ನಾದ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಹಾಗೇ ರಿಯಾ ಚಕ್ರವರ್ತಿ ದೂರಿನ ವರದಿಯನ್ನು ಮುಂಬೈ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಸುಶಾಂತ್ ಸಿಂಗ್ ರಜಪೂತ್ 2020, ಜೂನ್ 14ರಂದು ನೇಣಿಗೆ ಶರಣಾಗಿದ್ದರು. ಈ ಸುದ್ದಿ ಬಾಲಿವುಡ್ ಮಂದಿಯನ್ನು ಶೋಕಸಾಗರದಲ್ಲಿ ತೇಲಿಸಿತ್ತು. ಆರಂಭದಲ್ಲಿ ತನಿಖೆ ನಡೆಸಿದ ಮುಂಬೈ ಪೊಲೀಸರು ಇದು ಆತ್ಮಹತ್ಯೆ ಪ್ರಕರಣವೆಂದು ವರದಿ ಸಲ್ಲಿಸಿದ್ದರು. ಪೋಸ್ಟ್ ಮಾರ್ಟಮ್ ವರದಿ ಕೂಡ ಇದು ನೇಣು ಹಾಕಿದ್ದರಿಂದಲೇ ಸಾವನ್ನಪ್ಪಿದ್ದಾರೆ ಎಂದು ವರದಿ ನೀಡಿತ್ತು. ಆದರೆ, ಅವರ ಅಭಿಮಾನಿಗಳು ಹಾಗೂ ಮಾಧ್ಯಮಗಳು ಅನುಮಾನವನ್ನು ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಸುಶಾಂತ್ ಸಾವು ವಿವಾದಕ್ಕೆ ಕಾರಣವಾಗಿತ್ತು.

ಸುಶಾಂತ್ ಸಿಂಗ್ ರಜಪೂತ್ ಮಾಜಿ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ತಂದೆ ಕೆಕೆ ಸಿಂಗ್ ಪಾಟ್ನಾದಲ್ಲಿ ದೂರನ್ನು ದಾಖಲಿಸಿದ್ದರು. ಮಗನ ಸಾವಿಗೆ ಕುಮ್ಮಕ್ಕು ನೀಡಿದ್ದಾರೆಂದು ದೂರಿನಲ್ಲಿ ಹೇಳಿದ್ದರು. ಹಾಗೇ ರಿಯಾ ಚಕ್ರವರ್ತಿ ಹಾಗೂ ಅವರ ಕುಟುಂಬ ಸುಶಾಂತ್ ಬ್ಯಾಂಕ್ ಖಾತೆಯಿಂದ 15 ಕೋಟಿ ರೂಪಾಯಿಯನ್ನು ದೋಚಿದ್ದಾರೆ. ತಮ್ಮ ಮಗನಿಗೆ ವಿಷ ಉಣಿಸಿದ್ದಾರೆಂದು ಆರೋಪಿಸಿದ್ದರು. ಸುಶಾಂತ್ ತಂದೆ ಮಾಡಿದ್ದ ಈ ಆರೋಪವನ್ನು ರಿಯಾ ಚಕ್ರವರ್ತಿ ತಿರಸ್ಕರಿಸಿದ್ದರು.

CBI has filed two closure reports in the Sushant Singh Rajput death case relief to Rhea Chakraborty

ಬಿಹಾರದ ಪೊಲೀಸರಿಂದ ಸಿಬಿಐ ಕೇಸ್ ತೆಗೆದುಕೊಂಡು ತನಿಖೆಯನ್ನು ನಡೆಸಿತ್ತು. ರಿಯಾ ಚಕ್ರವರ್ತಿಯ ಹೇಳಿಕೆಗಳನ್ನು ದಾಖಲಿಸಿತ್ತು. ಇದೇ ವೇಳೆ ರಿಯಾ ಚಕ್ರವರ್ತಿ, ಸಹೋದರ ಶೌವಿಕ್ ಹಾಗೂ ಇನ್ನು ಕೆಲವರನ್ನು ಎನ್‌ಟಿಬಿ ಅಧಿಕಾರಿಗಳು ಸುಶಾಂತ್ ಸಾವಿನ ಜೊತೆ ತಳುಕ ಹಾಕಿಕೊಂಡಿದ್ದ ಡ್ರಗ್‌ ಕೇಸ್‌ನಲ್ಲಿ ಬಂಧಿಸಿದ್ದರು. ರಿಯಾ ಚಕ್ರವರ್ತಿ ಈ ಕೇಸ್‌ನಲ್ಲಿ 28 ದಿನಗಳ ಕಾಲ ಜೈಲಿನಲ್ಲಿ ಕಳೆದಿದ್ದರು. ಬಳಿಕ ಜಾಮೀನ ಮೇಲೆ ಹೊ ಬಂದಿದ್ದರು.

ಇನ್ನೊಂದು ಕಡೆ ರಿಯಾ ಚಕ್ರವರ್ತಿ ಕೂಡ ಸುಶಾಂತ್ ಸಹೋದರಿ ಪ್ರಿಯಾಂಕಾ ಸಿಂಗ್ ಹಾಗೂ ದೆಹಲಿಯ ವೈದ್ಯರ ವಿರುದ್ಧ ಕೌಂಟರ್ ಎಫ್‌ಐಆರ್ ಅನ್ನು ದಾಖಲಿಸಿದ್ದರು. ಸುಶಾಂತ್ ಸಿಂಗ್‌ ಅವರ ಆರೋಗ್ಯ ಪರಿಸ್ಥಿತಿಯನ್ನು ಸರಿಯಾಗಿ ಅರಿಯದೆ ಔಷಧಿಗಳನ್ನು ನೀಡಲಾಗಿದೆ ಎಂದು ದೂರನ್ನು ದಾಖಲಿಸಿದ್ದರು. ಈ ಕೇಸ್‌ ಅನ್ನು ಮುಂಬೈ ಪೊಲೀಸರು ದಾಖಲಿಸಿಕೊಂಡಿದ್ದರು. ಬಳಿಕ ಈ ಕೇಸ್ ಅನ್ನೂ ಸಿಬಿಐಗೆ ಹಸ್ತಾಂತರ ಮಾಡಲಾಗಿತ್ತು.

ಈ ಎರಡು ಪ್ರತ್ಯೇಕ ಕೇಸ್ ಅನ್ನು ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು ತನಿಖೆ ನಡೆಸಿದ್ದರು. ಆದರೆ, ಈ ತನಿಖೆಯಲ್ಲಿ ಸುಶಾಂತ್ ಆತ್ಮಹತ್ಯೆಗೆ ಯಾರಾದರೂ ಪ್ರೇರೆಪಿಸಿದ್ದಾರಾ ಎನ್ನುವ ಬಗ್ಗೆ ಸಾಕ್ಷಿಗಳು ಇಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಅನುಭವಿಗಳ ಅಭಿಪ್ರಾಯ, ಕ್ರೈಂ ಸೀನ್‌ನ ವರದಿ, ಸಾಕ್ಷಿಗಳ ಹೇಳಿಕೆ, ವಿಧಿವಿಜ್ಞಾನ ವರದಿಗಳನ್ನು ಆಧರಿಸಿ ನೋಡಿದಾಗ ಈ ಕೇಸ್‌ನಲ್ಲಿ ರಿಯಾ ಚಕ್ರವರ್ತಿ ಪಾತ್ರ ಕಂಡು ಬಂದಿಲ್ಲ ಎಂದು ಸಿಬಿಐ ವರದಿ ಸಲ್ಲಿಸಿದೆ ಎನ್ನಲಾಗಿದೆ. ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದು, ಏನು ತೀರ್ಪು ಬರುತ್ತೆ ಅನ್ನೋದು ನೋಡಬೇಕಿದೆ.

More from Filmibeat

English summary
CBI has filed two closure reports in the Sushant Singh Rajput death case relief to Rhea Chakraborty
Read more about: cbi case sushant singh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X