Celebrity Taxpayer List; ಅತೀ ಹೆಚ್ಚು ತೆರಿಗೆ ಕಟ್ಟಿದ ಸೆಲೆಬ್ರಿಟಿ ಶಾರುಖ್; ಅಚ್ಚರಿ ಹುಟ್ಟಿಸಿದ ಕಪಿಲ್ ಶರ್ಮಾ

ಕಿರುತೆರೆ ವೀಕ್ಷಕರಿಗೆ ಕಪಿಲ್ ಶರ್ಮಾ ಯಾರು ಅನ್ನೋದನ್ನು ಹೇಳಬೇಕಿಲ್ಲ. ಅದರಲ್ಲೂ ಕಾಮಿಡಿ ಶೋಗಳನ್ನು ಇಷ್ಟ ಪಡುವವರಿಗೆ ಕಪಿಲ್ ಶರ್ಮಾ ನಡೆಸಿಕೊಡುವ ಶೋ ಬಗ್ಗೆ ಪರಿಚಯ ಮಾಡಿಕೊಡಬೇಕಿಲ್ಲ. ಇತ್ತೀಚೆಗೆ ಓಟಿಟಿ ಪ್ರಿಯರಿಗಾಗಿಯೂ ಕಪಿಲ್ ಶರ್ಮಾ ಶೋ ನಡೆಸಿಕೊಡುತ್ತಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ' ಗಮನ ಸೆಳೆದಿತ್ತು. ಈಗ ಕಪಿಲ್ ಶರ್ಮಾ ಬಗ್ಗೆ ಯಾಕೆ ಚರ್ಚೆ ಅಂದರೆ, 2024ರಲ್ಲಿ ಅತೀ ಹೆಚ್ಚು ತೆರಿಗೆ ಪಾವತಿಸಿದ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಕಪಿಲ್ ಶರ್ಮಾ ಟಾಪ್‌ 10ನೇ ಸ್ಥಾನದಲ್ಲಿ ಇದ್ದಾರೆ.

ಟಿವಿ ಹಾಗೂ ಓಟಿಟಿಗೆ ಕಾಮಿಡಿ ಶೋ ನಡೆಸಿಕೊಡುವ ಕಪಿಲ್ ಶರ್ಮಾ ಬರೋಬ್ಬರು 26 ಕೋಟಿ ರೂಪಾಯಿ ಟ್ಯಾಕ್ಸ್ ಕಟ್ಟಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ತೆರಿಗೆಯಾಗಿ ಪಾವತಿಸಿರಬೇಕಾದರೆ, ಕಪಿಲ್ ಶರ್ಮಾ ಒಂದು ವರ್ಷಕ್ಕೆ ಎಷ್ಟು ಸಂಪಾದನೆ ಮಾಡಬಹುದು ಯೋಚನೆ ಮಾಡಿ. ಕಪಿಲ್ ಶರ್ಮಾ ಇಷ್ಟು ವರ್ಷ ಕಾಮಿಡಿ ಶೋನಿಂದ ಗಳಿಸಿದ್ದೆಷ್ಟು? ಅನ್ನೋದನ್ನು ಹೇಳುತ್ತೇವೆ. ಆದರೆ, ಅದಕ್ಕೂ ಮುನ್ನ ಟಾಪ್ 10 ಸೆಲೆಬ್ರಿಟಿಗಳು ಯಾರು ಅನ್ನೋದನ್ನು ನೋಡೋಣ.

Celebrity Taxpayers List 2024 Kapil Sharma paid Rs 26crore Shah Rukh Khan topped the list

ಬಾಲಿವುಡ್‌ನ ಸೂಪರ್‌ಸ್ಟಾರ್ ಶಾರುಖ್ ಖಾನ್ 2024ನೇ ಸಾಲಿನಲ್ಲಿ ಅತೀ ಹೆಚ್ಚು ತೆರಿಗೆ ಪಾವತಿಸಿದ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಇದ್ದಾರೆ. ಪಾರ್ಚ್ಯೂನ್ ಇಂಡಿಯಾ ವರದಿ ಪ್ರಕಾರ, ಶಾರುಖ್ ಖಾನ್ ಈ ವರ್ಷ 92 ಕೋಟಿ ರೂಪಾಯಿ ತೆರೆಗೆ ಪಾವತಿಸಿದ್ದಾರೆ. ಸತತ ಸೋಲುಗಳ ಬಳಿಕ ಸಿನಿಮಾಗೆ ಮರಳಿದ ಬಳಿಕ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದ್ದರು. 'ಪಠಾಣ್', 'ಜವಾನ್' ಬಾಕ್ಸಾಫೀಸ್‌ನಲ್ಲಿ ಸಾವಿರ ಕೋಟಿ ರೂಪಾಯಿ ಗಡಿ ದಾಟಿದರೆ, 'ಡಂಕಿ' 500 ಕೋಟಿ ರೂಪಾಯಿ ಆಸುಪಾಸಿನಲ್ಲಿ ಕಲೆಕ್ಷನ್ ಮಾಡಿತ್ತು. ಶಾರುಖ್ ಜೊತೆಗೆ ಅತೀ ಹೆಚ್ಚು ತೆರಿಗೆ ಕಟ್ಟಿದ ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ.

ಶಾರುಖ್ ಖಾನ್: ₹92 ಕೋಟಿ
ದಳಪತಿ ವಿಜಯ್: ₹80 ಕೋಟಿ
ಸಲ್ಮಾನ್ ಖಾನ್: ₹75 ಕೋಟಿ
ಅಮಿತಾಭ್ ಬಚ್ಚನ್: ₹71 ಕೋಟಿ
ವಿರಾಟ್ ಕೊಹ್ಲಿ: ₹66 ಕೋಟಿ
ಅಜಯ್ ದೇವಗನ್: ₹42 ಕೋಟಿ
ಎಂಎಸ್ ಧೋನಿ: ₹38 ಕೋಟಿ
ರಣ್‌ಬೀರ್ ಕಪೂರ್: ₹36 ಕೋಟಿ
ಹೃತಿಕ್ ರೋಷನ್, ಸಚಿನ್ ತೆಂಡೂಲ್ಕರ್: ₹28 ಕೋಟಿ
ಕಪಿಲ್ ಶರ್ಮಾ: ₹26 ಕೋಟಿ

Celebrity Taxpayers List 2024 Kapil Sharma paid Rs 26crore Shah Rukh Khan topped the list

10ನೇ ಸ್ಥಾನದಲ್ಲಿ ಕಪಿಲ್ ಶರ್ಮಾ ಇದ್ದು, ಬರೋಬ್ಬರಿ 26 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ. ಆರಂಭದ ದಿನಗಳಲ್ಲಿ ಎಸ್‌ಟಿಡಿ ಬೂತ್‌ನಲ್ಲಿ 500 ರೂಪಾಯಿಗೆ ಕೆಲಸ ಮಾಡುತ್ತಿದ್ದ ಕಪಿಲ್ ಇಂದು ಕೋಟ್ಯಾಧಿಪತಿ. ಅಷ್ಟಕ್ಕೂ ಈತನ ಲಕ್ ಖುಲಾಯಿಸಿದ್ದು ಕಪಿಲ್ ಶರ್ಮಾ ಶೋಗೆ ಬಂದ ಬಳಿಕವೇ. ಈತನ ಕಾಮಿಡಿ ಸೆನ್ಸ್‌ಗೆ ವೀಕ್ಷಕರು ಮನ ಸೋತಿದ್ದರು. ಕಪಿಲ್ ಕಟ್ಟಿದ ತಂಡ ಕೂಡ ಹಾಗೇ ಸಾಥ್ ಕೊಟ್ಟಿತ್ತು. ಕಲರ್ ಟಿವಿ ಹಾಗೂ ಸೋನಿ ಟಿವಿಯಲ್ಲಿ ನೂರಾರು ಶೋಗಳನ್ನು ನಿರೂಪಣೆ ಜನಪ್ರಿಯೆತೆ ಗಳಿಸಿದ್ದಾರೆ. ಅಲ್ಲದೆ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

ಇನ್ನು ಕಲರ್ಸ್ ಟಿವಿಯಿಂದ ಸೋನಿ ಟಿವಿಗಾಗಿ ಕಪಿಲ್ ಶರ್ಮಾ ಕಾಮಿಡಿ ಶೋ ಮಾಡುವುದಕ್ಕೆ ಶುರು ಮಾಡಿದ್ದರು. 'ದಿ ಕಪಿಲ್ ಶರ್ಮಾ ಶೋ' ಆರಂಭ ಆದ ಕ್ಷಣದಿಂದ ಕಪಿಲ್‌ಗೆ ಪ್ರತಿ ಎಪಿಸೋಡ್‌ಗೆ 35 ಲಕ್ಷ ರೂಪಾಯಿ ಸಂಭಾವನೆ ಸಿಗುತ್ತಿತ್ತು. ಸುಮಾರು 130 ಎಪಿಸೋಡ್‌ಗಳನ್ನು ನಡೆಸಿಕೊಟ್ಟಿದ್ದು, ಇದಕ್ಕೆ 45.50 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆಂದು ಕೋಯ್‌ಮೋಯ್ ವರದಿ ಮಾಡಿತ್ತು.

ಹಾಗೇ ಎರಡನೇ ಸೀಸನ್‌ನಲ್ಲಿ 125 ಎಪಿಸೋಡ್‌ಗಳನ್ನು ನಡೆಸಿಕೊಟ್ಟಿದ್ದರು. ಅದರಿಂದ 43.75 ಕೋಟಿ ರೂಪಾಯಿ ಬಂದಿತ್ತು. ಒಟ್ಟು ಎರಡು ಸೀನ್‌ಗಳಿಂದ ಗಳಿಸಿದ್ದು, 89.25 ಕೋಟಿ ರೂಪಾಯಿ. ಮೂರನೇ ಸೀಸನ್‌ಗೆ ಶೇ.42ರಷ್ಟು ಸಂಭಾವನೆ ಹೆಚ್ಚಾಗಿತ್ತು ಎನ್ನಲಾಗಿದೆ. ಇನ್ನು ನಾಲ್ಕನೇ ಸೀಸನ್‌ನಲ್ಲಿ 80 ಎಪಿಸೋಡ್‌ಗಳಿಗೆ 48 ಕೋಟಿ ರೂಪಾಯಿ ಪಡೆದಿದ್ದರು. 2016 ರಿಂದ 2023ರವರೆಗೆ ತನ್ನ ಕಾಮಿಡಿ ಶೋಗಳಿಂದ ಸುಮಾರು 231 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆಂದು ವರದಿಯಾಗಿದೆ.

ಇನ್ನುಇತ್ತೀಚೆಗೆ ಓಟಿಟಿಗೆ ಲಗ್ಗೆ ಇಟ್ಟಿರುವ ಕಪಿಲ್ ಶರ್ಮಾ ನೆಟ್‌ಫ್ಲಿಕ್ಸ್‌ಗಾಗಿ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ' ನಡೆಸಿಕೊಡುತ್ತಿದ್ದಾರೆ. ಮೊದಲ ಸೀಸನ್‌ಗೆ ಕಪಿಲ್ ಶರ್ಮಾ ಬರೋಬ್ಬರಿ 26 ಕೋಟಿ ರೂಪಾಯಿ ಪಡೆದಿದ್ದರು. ತನ್ನ ಸಹ ಕಲಾವಿದರ ಸಂಭಾವನೆ ಬಿಟ್ಟು ಪ್ರತೀ ಎಪಿಸೋಡ್‌ಗೆ 5 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಮನಿ ಕಂಟ್ರೋಲ್‌ನಲ್ಲಿ ವರದಿಯಾಗಿದೆ.

More from Filmibeat

English summary
Celebrity Taxpayers List: Kapil Sharma is top taxpayers from tv:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X