'ದಿ ಕೇರಳ ಸ್ಟೋರಿ'ಗೆ ಸೆನ್ಸಾರ್: 10 ದೃಶ್ಯಗಳಿಗೆ ಕತ್ತರಿ.. ಮಾಜಿ ಸಿಎಂ ಸಂದರ್ಶನ ಡಿಲೀಟ್

'ದಿ ಕೇರಳ ಸ್ಟೋರಿ' ಸಿನಿಮಾ ದೇಶಾದ್ಯಂತ ಸಂಚಲನ ಸೃಷ್ಟಿಸುತ್ತಿದೆ. ಈ ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದ್ದಂತೆ ವಿವಾದ ಸಿಲುಕಿತ್ತು. ಇನ್ನೇನು ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಇದೇ ಮೇ 5ರಂದು ದೇಶಾದ್ಯಂತ ರಿಲೀಸ್ ಆಗುತ್ತಿದೆ.

'ದಿ ಕೇರಳ ಸ್ಟೋರಿ' ಸಿನಿಮಾದ ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ವಿವಾದ ಬುಗಿಲೆದ್ದಿದೆ. ಕೇರಳದಲ್ಲಿ ಸಿನಿಮಾ ಬ್ಯಾನ್ ಮಾಡುವಂತೆ ಒತ್ತಡ ಹೆಚ್ಚಾಗುತ್ತಿದೆ. ಈ ಸಂಬಂಧ ಕಪಿಲ್ ಸಿಬಲ್ ಹಾಗೂ ನಿಜಾಮ್ ಪಾಶಾ ಕೋರ್ಟ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 'ದಿ ಕೇರಳ ಸ್ಟೋರಿ' ಸಿನಿಮಾಗೆ ತಡೆ ನೀಡಬೇಕು ಎಂದು ಅರ್ಜಿ ಕೂಡ ಸಲ್ಲಿಸಿದ್ದರು.

Censor Board Clears A certificate to The Kerala Story and removes 10 scenes

ಆದರೆ, ಸುಪ್ರೀಂ ಕೋರ್ಟ್ ನ್ಯಾಯಾಮೂರ್ತಿಗಳಾದ ಕೆಎಂ ಜೊಸೆಫ್ ಮತ್ತು ಬಿವಿ ನಾಗರತ್ನ ಈ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಹೈಕೋರ್ಟ್‌ನಲ್ಲಿ ಅರ್ಜಿಯನ್ನು ಸಲ್ಲಿಸುವಂತೆ ಆದೇಶ ಮಾಡಿದೆ. " ಈ ಸಿನಿಮಾವನ್ನು ಸೆನ್ಸಾರ್ ಮಂಡಳಿ ನೋಡಿದೆ. ಅಲ್ಲಿಂದ ಪ್ರಮಾಣಪತ್ರವೂ ಸಿಕ್ಕಿದೆ. ನೀವು ಸಿನಿಮಾ ರಿಲೀಸ್ ಬಗ್ಗೆ ಆಕ್ಷೇಪಣೆ ಮಾಡಬೇಕು ಅಂದರೆ, ಸೆನ್ಸಾರ್ ಪ್ರಕ್ರಿಯೆಯನ್ನು ಪ್ರಶ್ನೆ ಮಾಡಬೇಕು" ಎಂದು ಕೋರ್ಟ್ ಹೇಳಿದೆ. ಇನ್ನೊಂದು ಕಡೆ ಸೆನ್ಸಾರ್ ಮಂಡಳಿ 10 ಕಡೆ ಕಟ್ ಕೊಟ್ಟಿದೆ.

'ದಿ ಕೇರಳ ಸ್ಟೋರಿ' ಸಿನಿಮಾದ 10 ದೃಶ್ಯಗಳಿಗೆ ಕತ್ತರಿ

'ದಿ ಕೇರಳ ಸ್ಟೋರಿ' ಸಿನಿಮಾವನ್ನು ಸುದಿಪ್ತೋ ಸೇನ್ ನಿರ್ದೇಶನ ಮಾಡಿದ್ದಾರೆ. ಹಲವು ದಿನಗಳಿಂದ ಈ ಸಿನಿಮಾ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಈ ಬೆನ್ನಲ್ಲೇ ಸೆನ್ಸಾರ್ ಮಂಡಳಿ 'ದಿ ಕೇರಳ ಸ್ಟೋರಿ'ಗೆ ಎ ಸರ್ಫಿಕೇಟ್ ಕೊಟ್ಟಿದೆ. ಜೊತೆಗೆ 10 ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚನೆ ನೋಡಿದೆ.

ಈ ಹತ್ತು ದೃಶ್ಯಗಳಲ್ಲಿ ಕೇರಳದ ಮಾಜಿ ಸಿಎಂ ಸಂದರ್ಶನ ಕೂಡ ಸೇರಿದೆ. ಮೂಲಗಳ ಪ್ರಕಾರ, ಕೇರಳದ ಮಾಜಿ ಸಿಎಂ ವಿಎಸ್ ಅಚ್ಯುತಾನಂದನ್ ಸಂದರ್ಶನ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಈ ಮೂಲಕ ರಿಲೀಸ್‌ಗೆ ಗ್ರೀನ್ ಸಿಗ್ನಲ್ ಸಿಕ್ಕಂತಾಗಿದೆ.

Censor Board Clears A certificate to The Kerala Story and removes 10 scenes

ಯಾವ್ಯಾವ ದೃಶ್ಯಕ್ಕೆ ಕತ್ತರಿ

ಮಾಜಿ ಸಿಎಂ ಸಂದರ್ಶನದ ಜೊತೆಗೆ ಇನ್ನೂ ಹಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೆನ್ಸಾರ್ ಬೋರ್ಡ್ ಸೂಚನೆ ನೀಡಿದೆ. ಹಿಂದೂ ದೇವತೆಗಳ ಬಗೆಗಿನ ಅಸಂಬದ್ಧ ಹೇಳಿಕೆಗಳು ಹಾಗೂ ಸಂಭಾಷಣೆಯನ್ನು ತೆಗೆಯುವಂತೆ ಹೇಳಿದೆ. ಹಾಗೇ ತಿರುಚಿರುವ ಡೈಲಾಗ್‌ಗಳನ್ನು ಕೈ ಬಿಡುವಂತೆ ಸೂಚಿಸಿದೆ.

ಹಾಗೇ "ಭಾರತೀಯ ಕಮ್ಯೂನಿಸ್ಟರು ಕಪಟಿಗಳು" ಎನ್ನುವ ಡೈಲಾಗ್ ತೆಗೆಯುವಂತೆ ಹೇಳಿದೆ. ಜೊತೆಗೆ ಇಂಡಿಯನ್ ಅನ್ನೋ ಪದವನ್ನು ಡಿಲೀಟ್ ಮಾಡುವಂತೆ ಸೂಚನೆ ನೀಡಿದೆ. ಮಾಜಿ ಸಿಎಂ ಸಂದರ್ಶನದಲ್ಲಿ ಇನ್ನೆರಡು ದಶಕಗಳಲ್ಲಿ ಇದು ಮುಸ್ಲಿಂ ಪ್ರಾಬಲ್ಯದ ರಾಜ್ಯ ಆಗುತ್ತೆ ಎಂದು ಹೇಳಿದ್ದು, ಅದನ್ನು ತೆಗೆದು ಹಾಕಲಾಗಿದೆ ಎನ್ನಲಾಗಿದೆ.

'ದಿ ಕೇರಳ ಸ್ಟೋರಿ' ವಿವಾದ

ನವೆಂಬರ್ 2022ರಲ್ಲಿ 'ದಿ ಕೇರಳ ಸ್ಟೋರಿ' ಟೀಸರ್ ರಿಲೀಸ್ ಆಗಿತ್ತು. ಅದಾ ಶರ್ಮಾ ನಟಿಸಿರೋ ಈ ಸಿನಿಮಾ ಆಗಲೇ ವಿವಾದ ಸೃಷ್ಟಿಸಿತ್ತು. ಇತ್ತೀಚೆಗೆ ಟ್ರೈಲರ್ ಕೂಡ ರಿಲೀಸ್ ಆಗಿದ್ದು, ಕೇರಳಲ್ಲಿ 32 ಸಾವಿರ ಮಹಿಳೆಯರು ಕಾಣಿಯಾಗಿದ್ದು, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಸದ್ಯ ಕೇರಳ ಸರ್ಕಾರ ಹಾಗೂ ವಿರೋಧ ಪಕ್ಷದ ನಾಯಕರು ರಾಜ್ಯದಲ್ಲಿ ಈ ಸಿನಿಮಾವನ್ನು ಬ್ಯಾನ್ ಮಾಡುವಂತೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಸಿಪಿಎಂ ಹಾಗೂ ಕಾಂಗ್ರೆಸ್ ಮುಖಂಡರು ಹಿಂದಿ ಸಿನಿಮಾ ರಿಲೀಸ್ ಮಾಡಬಾರದು ಎನ್ನುತ್ತಿದ್ದಾರೆ. ವಿತರಕರು ಮಾತ್ರ ಈ ಸಿನಿಮಾವನ್ನು ಜನರ ಓಟಿಟಿಯಲ್ಲಾದರೂ ನೋಡುತ್ತಾರೆ. ಅದಕ್ಕಿಂತ ಚಿತ್ರಮಂದಿರದಲ್ಲಿ ನೋಡಲಿ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದೆ. ಹೀಗಾಗಿ ಮೇ 5ರಂದು ರಿಲೀಸ್ ಆಗುತ್ತಾ? ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ.

More from Filmibeat

English summary
Censor Board Clears 'A' certificate to The Kerala Story and removes 10 scenes. It includes Ex CM Interview, dialogues of all Hindu Gods, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X