ಆಸ್ಕರ್ ಶಾರ್ಟ್​ಲಿಸ್ಟ್​ನಲ್ಲಿ 'ಚೆಲ್ಲೋ ಶೋ', 'RRR':ಈ ಬಾರಿಯಾದ್ರೂ ಆಸ್ಕರ್ ದಕ್ಕುತ್ತಾ?

ಪ್ರತಿಯೊಬ್ಬ ಸಿನಿಮಾ ಮಂದಿಯ ಕನಸು ಆಸ್ಕರ್. ತಮ್ಮ ಸಿನಿಮಾ ಆಸ್ಕರ್ ಪ್ರಶಸ್ತಿಗೆ ಆಯ್ಕೆ ಆಗಲೇಬೇಕು ಅಂತ ಹರಸಾಹಸ ಮಾಡುತ್ತಾರೆ. ಆದರೆ ಎಲ್ಲರಿಗೂ ಆಸ್ಕರ್ ಪ್ರಶಸ್ತಿ ಸಿಗೋದು ಅಷ್ಟು ಸುಲಭದ ಮಾತಲ್ಲ. ಈ ಪ್ರಶಸ್ತಿಗಾಗಿ ಪ್ರತಿವರ್ಷ ಇಡೀ ವಿಶ್ವವೇ ಕಾದು ಕೂತಿರುತ್ತೆ.

ಭಾರತ ಪ್ರತಿವರ್ಷ ಆಸ್ಕರ್‌ಗೆ ಅಂತಲೇ ಸಿನಿಮಾವನ್ನು ಆಯ್ಕೆ ಮಾಡಿ ಕಳುಹಿಸುತ್ತಿತ್ತು. ಹಲವು ವರ್ಷ ಬರೀ ನಿರಾಸೆಯನ್ನೇ ಮೂಡಿಸಿತ್ತು. ಆದರೆ, ಈ ಬಾರಿ ಆಸ್ಕರ್ ಪ್ರಶಸ್ತಿಯನ್ನು ಗೆಲ್ಲುವ ಆಸೆಯನ್ನು ಮೂಡಿಸಿದೆ.

ಭಾರತದ ಸಿನಿಮಾ 'ಚೆಲ್ಲೋ ಶೋ' ಆಸ್ಕರ್ ಪ್ರಶಸ್ತಿಯನ್ನು ಗೆಲ್ಲುವ ಆಸೆಯನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಿದೆ. ಹಾಗೇ ರಾಜಮೌಳಿ ನಿರ್ದೇಶಿಸಿದ RRR ಸಿನಿಮಾದ ನಾಟು ನಾಟು ಸಾಂಗ್ ಕೂಡ ಇದೇ ಭರವಸೆಯನ್ನು ಹುಟ್ಟಾಕಿದೆ.

Chhello Show Movie RRR Naatu Naatu Song Shortlisted 2023 Oscars Nominations

ಆಸ್ಕರ್ ಪ್ರಶಸ್ತಿ​ ಸಮಿತಿಯು ಬುಧವಾರ (ಡಿಸೆಂಬರ್ 21) ರಂದು 10 ಕ್ಯಾಟಗರಿಗೆ ಸಂಬಂಧಿಸಿದ ಸಿನಿಮಾಗಳನ್ನು ಶಾರ್ಟ್​ಲಿಸ್ಟ್​ ಮಾಡಿದೆ. ಈ ಪಟ್ಟಿಯನ್ನು ಈಗಾಗಲೇ ರಿಲೀಸ್ ಮಾಡಿದ್ದು,ಇದರಲ್ಲಿ ಭಾರತದ 'ಚೆಲ್ಲೋ ಶೋ' ಹಾಗೂ 'RRR'ಸಿನಿಮಾದ "ನಾಟು ನಾಟು.." ಹಾಡು ಸ್ಥಾನ ಪಡೆದಿದೆ.

'ಚೆಲ್ಲೋ ಶೋ' ಸಿನಿಮಾದ ಜೊತೆ ಜೊತೆಗೆ 'RRR'ಸಿನಿಮಾದ "ನಾಟು ನಾಟು.." ಹಾಡು 'ಅತ್ಯುತ್ತಮ ಒರಿಜಿನಲ್​ ಸಾಂಗ್"​ ಸಾಂಗ್ ಕ್ಯಾಟಗರಿಯಲ್ಲಿ ಶಾರ್ಟ್​ಲಿಸ್ಟ್​ ಮಾಡಲಾಗಿದೆ. 'ಚೆಲ್ಲೋ ಶೋ' ಅಂತರಾಷ್ಟ್ರೀಯ ವಿಭಾಗದಲ್ಲಿ ಶಾರ್ಟ್‌ಲಿಸ್ಟ್ ಆದ 15 ಸಿನಿಮಾಗಳಲ್ಲಿ ಒಂದಾಗಿದೆ.

'ಚೆಲ್ಲೋ ಶೋ' ಸಿನಿಮಾವನ್ನು ಫಿಲ್ಮ್ ಫೆಡರೆಷನ್ ಆಫ್ ಇಂಡಿಯಾ ಭಾರತದ ಅಧಿಕೃತ ಎಂದು ಆಸ್ಕರ್‌ಗೆ ಕಳುಹಿಸಿಕೊಟ್ಟಿತ್ತು. ಆ ವೇಳೆ ಹಲವು ಜನರ ಟೀಕೆಗೆ ಗುರಿಯಾಗಿತ್ತು. ವಿಶ್ವದೆಲ್ಲೆಡೆ ಸದ್ದು ಮಾಡುತ್ತಿರುವ RRR ಸಿನಿಮಾವನ್ನು ಬಿಟ್ಟು 'ಚೆಲ್ಲೋ ಶೋ' ಆಯ್ಕೆ ಮಾಡಿದ್ದಕ್ಕೆ ಕಿಡಿ ಕಾರಿದ್ದರು.

Chhello Show Movie RRR Naatu Naatu Song Shortlisted 2023 Oscars Nominations

'ಚೆಲ್ಲೋ ಶೋ' ಸಿನಿಮಾದ ನಿರ್ದೇಶಕ ಪನ್ ನಿಲನ್ ಈಗಾಗಲೇ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಭವೇಶ್ ಶ್ರೀಮಲಿ, ಭವಿನ್ ರಾಬರಿ, ದಿಪೆನ್ ರಾವಲ್, ರಿಚಾ ಮೀನಾ ಸೇರಿದಂತೆ ಹಲವು ಮಂದಿ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. 'ಚೆಲ್ಲೋ ಶೋ' ಹಾಗೂ RRR ಸಿನಿಮಾ ನಾಟು ನಾಟು ಸಾಂಗ್ ಆಸ್ಕರ್ ಗೆಲ್ಲುತ್ತಾ? ಅನ್ನೋದು 2023, ಮಾರ್ಚ್ 12ರಂದು ಹಾಲಿವುಡ್‌ನ ಡಾಲ್ಬಿ ಚಿತ್ರಮಂದಿರದಲ್ಲಿ ಅನೌನ್ಸ್ ಆಗಲಿದೆ.

"ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇವೆ. ಕೋಟ್ಯಾಂತರ ಮಂದಿ 'ಚೆಲ್ಲೋ ಶೋ' ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಹಾಗೇ ನಮ್ಮ ಅಂತರಾಷ್ಟ್ರೀಯ ವಿತರಕರು ಸಿನಿಮಾಗೆ ಒಂದೊಳ್ಳೆ ಪುಶ್ ಕೊಟ್ಟಿದ್ದಾರೆ. ಇದು ಭಾರತಕ್ಕೆ ಐತಿಹಾಸಿಕ ಕ್ಷಣ. ಆಸ್ಕರ್ ಪ್ರಶಸ್ತಿಯನ್ನು ಭಾರತಕ್ಕೆ ಆದಷ್ಟು ಬೇಗ ತೆಗೆದುಕೊಂಡು ಬರುತ್ತೇವೆ ಎಂಬ ನಂಬಿಕೆ ಇದೆ." ಎಂದು ತಂಡ ಹೇಳಿಕೊಂಡಿದೆ.

More from Filmibeat

English summary
Chhello Show Movie RRR Naatu Naatu Song Shortlisted 2023 Oscars Nominations,Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X