Salman Yusuff Khan: ಏರ್‌ಪೋರ್ಟ್ ಅಧಿಕಾರಿ 'ಕನ್ನಡದಲ್ಲಿ ಮಾತಾಡಿ' ಎಂದಿದ್ದಕ್ಕೆ ಡ್ಯಾನ್ಸರ್ ಗರಂ: ಧನ್ಯಾ ಕೆಂಡಾಮಂಡಲ
'ಡ್ಯಾನ್ಸ್ ಇಂಡಿಯಾ ಡ್ಯಾನ್' ರಿಯಾಲಿಟಿ ಶೋದ ಮೊದಲ ವಿನ್ನರ್ ಸಲ್ಮಾನ್ ಯೂಸುಫ್ ಖಾನ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಾಲಿವುಡ್‌ನಲ್ಲಿ ಕೋರಿಯೋಗ್ರಾಫರ್ ಹಾಗೂ ಡ್ಯಾನ್ಸರ್ ಆಗಿ ಗುರುತಿಸಿಕೊಂಡಿರುವ ಸಲ್ಮಾನ್ ಯೂಸುಫ್ ಕೆಂಪೇಗೌಡ ವಿಮಾನ ನಿಲ್ದಾಣದ ಅಧಿಕಾರಿಯ ವಿರುದ್ಧ ಇತ್ತೀಚೆಗೆ ಕಿಡಿಕಾರಿದ್ದರು.
ಸಲ್ಮಾನ್ ಯುಸೂಫ್ ಖಾನ್ ಬೆಂಗಳೂರಿನಿಂದ ದುಬೈಗೆ ಹೊರಟಿದ್ದರು. ಈ ವೇಳೆ ಕೆಂಪೇಗೌಡ ವಿಮಾನ ನಿಲ್ದಾಣದ ಇಮಿಗ್ರೇಷನ್ ಅಧಿಕಾರಿಯೊಬ್ಬರು ಸಲ್ಮಾನ್ ಯೂಸುಫ್‌ಗೆ ಕನ್ನಡದಲ್ಲಿ ಮಾತಾಡುವಂತೆ ಹೇಳಿದ್ದಾರೆ. ಅದಕ್ಕೆ ಸಲ್ಮಾನ್ ಯೂಸುಫ್ ಖಾನ್ ಏರ್‌ಪೋರ್ಟ್‌ನಿಂದಲೇ ವಿಡಿಯೋ ಮಾಡಿ ಅಧಿಕಾರಿಯ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.

ಸಲ್ಮಾನ್ ಯೂಸುಫ್ ಖಾನ್ ವಿಡಿಯೋದಲ್ಲೇನಿದೆ?
"ನಾನು ಬೆಂಗಳೂರಿನಿಂದ ದುಬೈಗೆ ಹೊರಟಿದ್ದೆ. ಈ ವೇಳೆ ನಾನು ಇಮಿಗ್ರೇಷನ್ ಆಫೀಸರ್ ಅನ್ನು ಭೇಟಿಯಾಗಿದೆ. ಅವರು ನನ್ನ ಜೊತೆ ಕನ್ನಡದಲ್ಲಿ ಮಾತು ಆರಂಭಿಸಿದ್ದರು. ಆಗ ಅವರಿಗೆ ನಾನು ನನ್ನ ಹರಕು ಮುರುಕು ಕನ್ನಡದಲ್ಲಿ ಭಾಷೆ ಅರ್ಥ ಆಗುತ್ತೆ. ಆದರೆ, ಕನ್ನಡದಲ್ಲಿ ಮಾತನಾಡಲು ಬರುವುದಿಲ್ಲ ಎಂದೆ. ಆದರೂ ಅವರು ಕನ್ನಡದಲ್ಲಿಯೇ ಮಾತಾಡುತ್ತಿದ್ದರು. ನನ್ನ ಪಾಸ್‌ಪೋರ್ಟ್ ತೋರಿಸಿದಾಗ, ಅದನ್ನೇ ಗುರಿಯಾಗಿಟ್ಟುಕೊಂಡು ನನ್ನ ಹುಟ್ಟೂರು, ನನ್ನ ತಂದೆ ಹೆಸರನ್ನು ಇಟ್ಟುಕೊಂಡು, ನೀನು ಬೆಂಗಳೂರಿನಲ್ಲಿ ಹುಟ್ಟಿ ಕನ್ನಡ ಮಾತಾಡಲು ಬರುವುದಿಲ್ಲವೇ? ಎಂದು ಪ್ರಶ್ನೆ ಮಾಡಿದ್ದರು ಎಂದು ಸಲ್ಮಾನ್ ಯೂಸುಫ್ ಖಾನ್ ವಿಡಿಯೋದಲ್ಲಿ ಆಕ್ರೋಶ ಹೊರ ಹಾಕಿದ್ದರು.
ಇಷ್ಟೇ ಹೇಳಿದ್ದರೆ, ನೆಟ್ಟಿಗರು ತಣ್ಣಗಿರುತ್ತಿದ್ದರೋ ಏನೋ. ಆದರೆ, ಸಲ್ಮಾನ್ ಯುಸೂಫ್ ಖಾನ್ ಭಾಷೆ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದರು. " ಬೆಂಗಳೂರಿನಲ್ಲಿ ಹುಟ್ಟಿದ ಮಾತ್ರಕ್ಕೆ ಭಾಷೆಯೊಂದಿಗೆ ಹುಟ್ಟಬೇಕು ಎಂದೇನು ಇಲ್ಲ. ಬೆಂಗಳೂರಿನಲ್ಲಿಸ ಹುಟ್ಟಿದರೂ, ನಾನು ವಿಶ್ವವನ್ನು ಸುತ್ತಿದೆ. ನಾನು ಯಾವಾಗಲೂ ಸೌದಿ ಹುಡುಗನಾಗಿದ್ದೆ. ನಾನು ಸೌದಿಯಲ್ಲೇ ಬೆಳೆದಿದ್ದು. ಅವರು ಹೇಳಿದ್ರು, ಬೆಂಗಳೂರಿನಲ್ಲಿ ಇದ್ಕೊಂಡು ಕನ್ನಡ ಬರಲ್ಲ ಅಂದ್ರೆ, ನಿನ್ನ ಮೇಲೆ ಅನುಮಾನ ವ್ಯಕ್ತಪಡಿಸಬಹುದು ಎಂದ್ರು. ಆಗ ನಾನು ಟ್ರೈ ಮಾಡಿ ಅಂದೆ." ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಹಿಂದಿ ರಾಷ್ಟ್ರ ಭಾಷೆ ಎಂದಿದ್ದಕ್ಕೆ ಧನ್ಯಾ ರಾಮ್‌ಕುಮಾರ್ ಆಕ್ರೋಶ
ಆಕ್ರೋಶ ವ್ಯಕ್ತಪಡಿಸುವ ಭರಾಟೆಯಲ್ಲಿ ನಮ್ಮ ರಾಷ್ಟ್ರ ಭಾಷೆ ಹಿಂದಿ ಎಂದಿದ್ದಾರೆ. "ನಿಮ್ಮಂತಹ ಅನಕ್ಷರಸ್ಥರು ಇರುವವರೆಗೂ ಈ ದೇಶ ಉದ್ಧಾರ ಆಗಲ್ಲ ಎಂದೆ. ನಮ್ಮ ರಾಷ್ಟ್ರ ಭಾಷೆ ಹಿಂದಿ. ನನಗೆ ಹಿಂದಿ ಬರುತ್ತೆ ಅದು ಸಾಕಗಲ್ವ. ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಕನ್ನಡ ಬರುತ್ತಾ?" ಎಂದು ವಿಡಿಯೋದಲ್ಲಿ ಪ್ರಶ್ನೆ ಮಾಡಿದ್ದಾರೆ. ಇದು ನೆಟ್ಟಿಗರು ಕೆಣ್ಣನ್ನು ಕೆಂಪಗಾಗಿಸಿದೆ. ಅಲ್ಲದೆ ನಟಿ ಧನ್ಯಾ ರಾಮ್‌ಕುಮಾರ್ ಆಕ್ರೋಶ್ ಹೊರ ಹಾಕಿದ್ದಾರೆ.
"ನೋ ಸಾರಿ.. ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ. ನೀವು ಮಾತಾಡಿದ ಟೋನ್ ತಪ್ಪಾಗಿದೆ. ಪ್ರತಿಯೊಬ್ಬ ಬೆಂಗಳೂರಿನ ಕನ್ನಡಿಗ ಏನು ಹೇಳುವುದೆಂದರೆ, ನಾವು ಹೆಮ್ಮೆ ಪಡುವ ಕನ್ನಡ ಭಾಷೆಯನ್ನು ಕಲಿಯಲು ಪ್ರಯತ್ನಿಸಿ. ಕನಿಷ್ಟ ಪಕ್ಷ ನಮ್ಮ ಭಾಷೆಯನ್ನು ಕಲಿಯಲು ಇಷ್ಟು ಪ್ರಯತ್ನ ಮಾಡಬಹುದು. ಸಾರಿ.. ನಮ್ಮ ನಗರಕ್ಕೆ ನೀವು ರಫ್ ಎಂಟ್ರಿ ಕೊಟ್ಟಿದ್ದೀರ." ಎಂದು ಧನ್ಯ ರಾಮ್‌ಕುಮಾರ್ ಆಕ್ರೋಶ ಹೊರಹಾಕಿದ್ದಾರೆ.
'ಅಪ್ಪಿ ಹಬ್ಬ ಮಾಡ್ತಾರೆ ನಿಂಗೆ' ಎಂದ ನೆಟ್ಟಿಗರು
ನಮ್ಮ ರಾಷ್ಟ್ರ ಭಾಷೆ ಹಿಂದಿ. ಅದು ಬರುತ್ತೆ ನನಗೆ ಸಾಕಲ್ವಾ? ಎನ್ನುತ್ತಿದ್ದಂತೆ ಸಲ್ಮಾನ್ ಯೂಸುಫ್ ಖಾನ್ ವಿಡಿಯೋಗೆ ಕಮೆಂಟ್‌ಗಳ ಸುರಿಮಳೆಯೇ ಬಂದು ಬಿದ್ದಿದೆ. ಇಬ್ಬರು ಕನ್ನಡದಲ್ಲಿಯೇ ಕಮೆಂಟ್ ಮಾಡಿದ್ದಾರೆ. "ಸ್ವಂತ ಲಿಪಿ ಇಲ್ಲದ, ಸ್ವಂತ ಉಚ್ಛಾರಣೆ ಪದಗಳು ಇಲ್ಲದ ಭಾಷೆ ಹಿಂದಿ. ಯಾರ್ ಯಾರಿಗೋ ಹುಟ್ಟಿದ ನಿಮ್ಮ ದರಿದ್ರ ಭಾಷೆ" ಎಂದು ಆಕ್ರೋಶ ಹೊರ ಹಾಕಿದ್ದಾರೆ. ಮತ್ತೊಬ್ಬರು "ರಾಷ್ಟ್ರ ಭಾಷೆ ಅನ್ನೋದೇ ಇಲ್ಲ. ತಮಿಳುನಾಡಿನಲ್ಲಿ ತಮಿಳು, ಆಂಧ್ರ ತೆಲಂಗಾಣದಲ್ಲಿ ತೆಲುಗು, ಕರ್ನಾಟಕದಲ್ಲಿ ಕನ್ನಡ" ಎಂದು ಕಿಡಿಕಾರಿದ್ದಾರೆ.
ಇನ್ನೊಬ್ಬರು "ಅಪ್ಪಿ ತಡಿ ಎಲ್ರೂ ಹಬ್ಬ ಜೋರಾಗೆ ಮಾಡ್ತಾರೆ ನಿಂಗೆ. ಕನ್ನಡ ಕಲಿಯೋದಕ್ಕೆ ಯೋಗ್ಯತೆ ಬೇಕು. ಆ ಯೋಗ್ಯತೆ ನಿಂಗಿಲ್ಲ ಬಿಡು. ಕನ್ನಡ ಮಾತಾಡ್ತಿರೋ ನಮ್ಮ ಆಫೀಸರ್‌ನ ಅವಿದ್ಯಾವಂತ ಅಂತ ಕರೀತಿದ್ಯಾ ನಿನ್ ಜನ್ಮಕ್ಕೆ ಬೆಂಕಿ ಹಾಕ." ಅಂತ ಕಿಡಿಕಾರಿದ್ದಾರೆ.


Click it and Unblock the Notifications











