ಕೊರೊನಾ ವೈರಸ್ ಮೂಲ ಚೀನಾದಲ್ಲಿ ಚಿತ್ರಮಂದಿರ ಓಪನ್: ಮೊದಲ ದಿನವೇ ಭರ್ಜರಿ ಕಲೆಕ್ಷನ್
ಕೊರೊನಾ ವೈರಸ್ ಸೋಂಕಿನ ಕಾರಣದಿಂದ ಇಡೀ ಜಗತ್ತು ತತ್ತರಿಸುತ್ತಿದ್ದರೆ, ವೈರಸ್ ಹರಡಿದ ಮೂಲ ದೇಶ ಚೀನಾದಲ್ಲಿ ಜನಜೀವನ ಸಹಜ ಸ್ಥಿತಿಗೆ ಬರುತ್ತಿದೆ. ಕೊರೊನಾ ವೈರಸ್ ಸೋಂಕಿನ ಪ್ರಮಾಣ ಕಡಿಮೆ ಇರುವ ಪ್ರದೇಶಗಳಲ್ಲಿ ಚಿತ್ರಮಂದಿರಗಳನ್ನು ತೆರೆದು ಸಿನಿಮಾ ಪ್ರದರ್ಶನ ಮಾಡಲು ಅಲ್ಲಿನ ಸರ್ಕಾರ ಅನುಮತಿ ನೀಡಿದೆ.
Recommended Video
ಕಡಿಮೆ ಅಪಾಯದ ವಲಯಗಳೆಂದು ಗುರುತಿಸಿರುವ ಸ್ಥಳಗಳಲ್ಲಿ ಸೋಮವಾರದಿಂದಲೇ ಚಿತ್ರಮಂದಿರಗಳು ಪುನರಾರಂಭವಾಗಿವೆ. ಜನವರಿಯಿಂದ ಚೀನಾದಾದ್ಯಂತ ಎಲ್ಲ ಚಿತ್ರಮಂದಿರಗಳು ಸ್ಥಗಿತಗೊಂಡಿದ್ದವು. ಅಂದಹಾಗೆ, ಚಿತ್ರಮಂದಿರಗಳ ಒಳಗೆ ಶೇ 30ರಷ್ಟು ಜನರಿಗೆ ಮಾತ್ರವೇ ಅವಕಾಶ ನೀಡಲಾಗಿದೆ. ಹಾಗೆಯೇ ಚಿತ್ರಪ್ರದರ್ಶನದ ಸ್ಥಳಗಳನ್ನು ಶೇ 50ರಷ್ಟು ಇಳಿಸಲಾಗಿದೆ. ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡವರಿಗೆ ಮಾತ್ರ ಒಳಗೆ ಪ್ರವೇಶ ನೀಡಲಾಗುತ್ತಿದೆ.
ಸಿನಿಮಾ ಹಾಲ್‌ನಲ್ಲಿ ಆಹಾರ ಅಥವಾ ಪಾನೀಯಗಳ ಸೇವನೆಗೆ ಅವಕಾಶ ನೀಡಿಲ್ಲ. ಜಗತ್ತಿನ ಎರಡನೆಯ ಅತಿ ದೊಡ್ಡ ಸಿನಿಮಾ ಮಾರುಕಟ್ಟೆ ಎನಿಸಿರುವ ಚೀನಾದಲ್ಲಿ 2019ರಲ್ಲಿ 9.2 ಬಿಲಿಯನ್ ಡಾಲರ್‌ನಷ್ಟು ಸಿನಿಮಾ ವಹಿವಾಟು ನಡೆದಿತ್ತು.

ಸೋಮವಾರದಿಂದ ಚೀನಾದಲ್ಲಿ 198 ಚಿತ್ರಮಂದಿರಗಳನ್ನು ತೆರೆಯಲಾಗಿದೆ. ಮೊದಲನೆಯ ದಿನವೇ ಸುಮಾರು ನಾಲ್ಕು ಕೋಟಿ ರೂ. ಮೊತ್ತದ ಟಿಕೆಟ್ ಮಾರಾಟವಾಗಿದೆ.


Click it and Unblock the Notifications











