'ಆಪರೇಷನ್ ಸಿಂಧೂರ' ಮಾಹಿತಿ ನೀಡಿದ ಕರ್ನಲ್ ಸೋಫಿಯಾ ಖುರೇಷಿಯದ್ದು ಲವ್ ಮ್ಯಾರೇಜ್; ತಂಗಿಗಿದೆ ಬಾಲಿವುಡ್ ನಂಟು

ಕಳೆದ ಕೆಲವು ದಿನಗಳಿಂದ 'ಆಪರೇಷನ್ ಸಿಂಧೂರ' ಬಗ್ಗೆ ಚರ್ಚೆಯಾಗುತ್ತಿದೆ. ಈ ಆಪರೇಷನ್ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಈ ಕಾರ್ಯಾಚರಣೆ ಬಳಿಕ ಪಾಕಿಸ್ತಾನ ಭಾರತದ ಮೇಲೆ ಕ್ಷಿಪಣಿ ಹಾಗೂ ಡ್ರೋಣ್ ದಾಳಿ ಮಾಡಿತ್ತು. ಅದಕ್ಕೆ ಭಾರತ ಕೂಡ ತಕ್ಕ ಪ್ರತ್ಯತ್ತರವನ್ನು ನೀಡಿತ್ತು. ಇದೆಲ್ಲರದ ಬಗ್ಗೆ ಭಾರತೀಯ ಸೇನೆಯಿಂದ ಇಬ್ಬರು ಹೆಣ್ಣು ಮಕ್ಕಳು ಮಾಹಿತಿ ನೀಡಿದ್ದರು. ಅದರಲ್ಲಿ ಒಬ್ಬರು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಆಗಿದ್ದರೆ, ಇನ್ನೊಬ್ಬರು ಕರ್ನಲ್ ಸೋಫಿಯಾ ಖುರೇಷಿ.

ಅದರಲ್ಲೂ 'ಆಪರೇಷನ್ ಸಿಂಧೂರ' ಬಗ್ಗೆ ಮಾಹಿತಿ ನೀಡುತ್ತಿದ್ದಂತೆ ಸೋಫಿಯಾ ಖುರೇಷಿ ದೇಶಾದ್ಯಂತ ಗಮನ ಸೆಳೆದಿದ್ದಾರೆ. ಅದರಲ್ಲೂ ಬೆಳಗಾವಿಯ ಸೊಸೆ ಎಂದು ತಿಳಿಯುತ್ತಿದ್ದಂತೆ ಕನ್ನಡಿಗರು ಮತ್ತಷ್ಟು ಹೆಮ್ಮೆ ಪಟ್ಟಿದ್ದರು. ಇಲ್ಲಿಂದ ಸೋಷಿಯಾ ಖುರೇಷಿ ವೈಯಕ್ತಿಕ ಜೀವನದ ಬಗ್ಗೆ ತಿಳಿದು ಕೊಳ್ಳುವುದಕ್ಕೆ ಜನರು ಆಸಕ್ತಿ ತೋರಿಸಿದ್ದರು. ಸೋಷಿಯಾ ಖುರೇಷಿ ಕುಟುಂಬವೇ ಸೇನೆಗಾಗಿ ದುಡಿದೆ ಎಂದು ಭಾರತೀಯರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

Colonel Sophia Qureshi love marriage with Army Officer and her sisters Bollywood connection details

ಕರ್ನಲ್ ಸೋಫಿಯಾ ಖುರೇಷಿಯವರ ಪತಿ ಕೂಡ ಸೇನೆಯಲ್ಲಿ ಇದ್ದಾರೆ. ಅವರು ನಮ್ಮ ಬೆಳಗಾವಿಯವರು. ಇವರಿಬ್ಬರದ್ದೂ ಪ್ರೇಮ ವಿವಾಹ. ಇಬ್ಬರೂ ಈಗ ದೇಶ ಸೇವೆಯನ್ನು ಮಾಡುತ್ತಿದ್ದಾರೆ. ಹಾಗಿದ್ದರೆ, ಸೋಫಿಯಾ ಖುರೇಷಿಯವರ ಪತಿ ಭಾರತೀಯ ಸೇನೆಯಲ್ಲಿ ಏನು ಮಾಡಿದ್ದಾರೆ? ಲವ್ ಮ್ಯಾರೇಜ್ ಆಗಿದ್ದು ಯಾವಾಗ? ಮಕ್ಕಳು ಏನು ಮಾಡುತ್ತಿದ್ದಾರೆ? ಇವರ ಸಹೋದರಿಗೂ ಬಾಲಿವುಡ್‌ಗೂ ಏನು ನಂಟು ಅನ್ನೋದನ್ನು ತಿಳಿಯಲು ಮುಂದೆ ಓದಿ.

ಬೆಳಗಾವಿ ಸೊಸೆ ಸೋಷಿಯಾ ಖುರೇಷಿ

ಕರ್ನಲ್ ಸೋಫಿಯಾ ಖುರೇಷಿ ಅವರ ಪತಿ ಕರ್ನಲ್ ತಾಜುದ್ದೀನ್ ಬಾಗೇವಾಡಿ. ಇವರೂ ಕೂಡ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಾಜುದ್ದೀನ್ ಬಾಗೇವಾಡಿ ಬೆಳಗಾವಿಯ ಗೋಕಾಕ್ ತಾಲ್ಲೂಕಿನ ಕೊಣ್ಣೂರು ಗ್ರಾಮದವರು. ಇವರಿಬ್ಬರಿಗೂ ಸೇನೆಯಲ್ಲಿ ಸೇವೆ ಸಲ್ಲಿಸುವಾಗ ಪ್ರೇಮಾಂಕುರವಾಗಿತ್ತು. 2005ರಲ್ಲಿ ಸೋಫಿಯಾ ಹಾಗೂ ತಾಜುದ್ದೀನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ಸೋಫಿಯಾ ಜಮ್ಮುವಿನಲ್ಲಿ ಕರ್ನಲ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ಪತಿ ತಾಜುದ್ದೀನ್ ಬಾಗೇವಾಡಿ ಝಾನ್ಸಿಯಲ್ಲಿ ಕರ್ನಲ್ ಆಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಇವರಿಗೆ ಇಬ್ಬರು ಮಕ್ಕಳು

ಸೋಫಿಯಾ ಖುರೇಷಿ ಹಾಗೂ ತಾಜುದ್ದೀನ್ ಬಾಗೇವಾಡಿ ದಂಪತಿಗೆ ಇಬ್ಬರು ಮಕ್ಕಳು. ಮಗ ಸಮೀರ್ ಖುರೇಷಿಗೆ 18 ವರ್ಷ. ಮಗಳ ಹೆಸರು ಹನಿಮಾ. ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿರುವ ಪ್ರಕಾರ, ಮಕ್ಕಳಿಬ್ಬರೂ ಭಾರತೀಯ ಸೇನೆಗೆ ಸೇರಲು ತಯಾರಿ ನಡೆಸಿದ್ದಾರೆ. ದೇಶ ಸೇವೆ ಮಾಡುವ ಕನಸು ಹೊತ್ತುಕೊಂಡಿದ್ದಾರೆ. ಅದರಲ್ಲೂ ವಾಯುಸೇನೆಗೆ ಸೇರುವುದಕ್ಕೆ ಆಸಕ್ತಿ ವಹಿಸಿದ್ದಾರೆ ಎನ್ನಲಾಗಿದೆ.

ಸಹೋದರಿಗೆ ಬಾಲಿವುಡ್ ನಂಟು

ಇನ್ನು ಸೋಫಿಯಾ ಖುರೇಷಿಗೆ ಶೈನಾ ಸುನ್ಸಾರಾ ಎಂಬ ಸಹೋದರಿ ಕೂಡ ಇದ್ದಾರೆ. ಹಲವು ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಇವರು ಫ್ಯಾಷನ್ ಡಿಸೈನರ್, ಮಾಡೆಲ್ ಹಾಗೂ ಪರಿಸರವಾದಿಯಾಗಿ ಗುರುತಿಸಿಕೊಂಡಿದ್ದಾರೆ. ಇವರನ್ನು ವಡೋದರಾದ ವಂಡರ್‌ ವುಮನ್ ಎಂದೂ ಕರೆಯುತ್ತಾರೆ ಎಂದೂ ಹೇಳಲಾಗಿದೆ. ಇಷ್ಟೇ ಅಲ್ಲದೆ ಬಾಲಿವುಡ್‌ನಲ್ಲಿಯೂ ನಂಟು ಹೊಂದಿದ್ದಾರೆ. ಹಾಗಂತ ನಟಿಯಾಗಿ ಗುರುತಿಸಿಕೊಂಡಿಲ್ಲ. ಮುಂಬೈನಲ್ಲಿ ಇವರದ್ದೇ ನಿರ್ಮಾಣ ಸಂಸ್ಥೆಯಿದೆ. ಅದರ ಮೂಲಕ ಸಿನಿಮಾ ಹಾಗೂ ಜಾಹೀರಾತನ್ನು ನಿರ್ಮಾಣ ಮಾಡುತ್ತಾರೆ. ಇಬ್ಬರು ಅವಳಿ ಸಹೋದರಿಯರಾಗಿದ್ದು, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಸೋಫಿಯಾ ಖುರೇಷಿಯದ್ದು ಸೇನಾ ಕುಟುಂಬ

ಸೋಫಿಯಾ ಖುರೇಷಿ ತಂದೆ ತಾಜ್ ಮೊಹಮ್ಮದ್ ಖುರೇಷಿ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಬಿಎಸ್‌ಎಫ್‌ನಲ್ಲಿ ಸುಬೇದಾರ್ ಆಗಿದ್ದರು. ತಾಜ್ ಮೊಹಮ್ಮದ್ ಖುರೇಷಿ ಎಲೆಕ್ಟ್ರಾನಿಕ್ ಮತ್ತು ಮೆಕ್ಯಾನಿಕಲ್ ಎಂಜಿನಿಯರ್ಸ್ ಕಾರ್ಪ್ಸ್‌ನಲ್ಲಿ ಸೇವೆ ಸಲ್ಲಿಸಿದರು. ಅಲ್ಲದೆ 1971 ರ ಯುದ್ಧದಲ್ಲಿಯೂ ಭಾಗಿಯಾಗಿದ್ದರು. ಇವರ ಚಿಕ್ಕಂದಿರು ಇಸ್ಮಾಯಿಲ್ ಖುರೇಷಿ ಮತ್ತು ವಾಲಿ ಮುಹಮ್ಮದ್ ಕೂಡ ಬಿಎಸ್‌ಎಫ್‌ನಲ್ಲಿ ಸುಬೇದಾರ್‌ಗಳಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಸೋಫಿಯಾ ಖುರೇಷಿ ಪಿಎಚ್‌ಡಿ ಪದವಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ, ಸೇನೆಗೆ ಸೇರ್ಪಡೆಯಾಗಿದ್ದರು.

More from Filmibeat

English summary
Colonel Sophia Qureshi love marriage with Army Officer and her sisters Bollywood connection details;
Read more about: indian army husband
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X