ಲಾಕ್‌ಡೌನ್ ನಡುವೆಯೂ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ ನಟಿ: ದೂರು ದಾಖಲು

ಕೊರೊನಾ ವೈರಸ್‌ ಸೋಂಕು ಕಾರಣದಿಂದ ವಿಧಿಸಲಾಗಿರುವ ಲಾಕ್ ಡೌನ್ ನಡುವೆಯೂ ನಟಿಯೊಬ್ಬರು ಪಾರ್ಟಿ ಆಯೋಜಿಸಿದ ಆರೋಪಕ್ಕೆ ಒಳಗಾಗಿದ್ದಾರೆ. 'ಪ್ರೇಮ್ ಗೀತ್', 'ಜಮೀನ್ ಆಸ್ಮಾನ್' ಮುಂತಾದ ಬಾಲಿವುಡ್ ಸಿನಿಮಾಗಳು, 'ಛೋಟಿ ಸರ್ದಾನಿ' ಧಾರಾವಾಹಿಯಲ್ಲಿ ನಟಿಸಿರುವ ಹಿರಿಯ ನಟಿ ಅನಿತಾ ರಾಜ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಅನಿತಾ ರಾಜ್ ಮತ್ತು ಅವರ ಪತಿ ತಮ್ಮ ಸ್ನೇಹಿತರಿಗೆ ಲಾಕ್‌ಡೌನ್ ನಡುವೆಯೂ ಪಾರ್ಟಿ ನೀಡುತ್ತಿದ್ದಾರೆ ಎಂದು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪಲಿ ಹಿಲ್ ರೆಸಿಡೆನ್ಸ್‌ನಲ್ಲಿ ಜನರು ಸೇರಿಕೊಂಡು ಪಾರ್ಟಿ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿದ ನೆರೆ ಹೊರೆಯವರು, ಒಂದು ವೇಳೆ ಅಲ್ಲಿ ಸೋಂಕಿತರು ಬಂದಿದ್ದರೆ ತಮಗೂ ವೈರಸ್ ತಗುಲಬಹುದು ಎಂಬ ಭಯದಿಂದ ಪೊಲೀಸರನ್ನು ಕರೆಯುವಂತೆ ಭದ್ರತಾ ಸಿಬ್ಬಂದಿಗೆ ಸೂಚಿಸಿದ್ದರು. ಮುಂದೆ ಓದಿ...

ಭದ್ರತಾ ಸಿಬ್ಬಂದಿ ಜತೆ ಜಗಳ

ಭದ್ರತಾ ಸಿಬ್ಬಂದಿ ಜತೆ ಜಗಳ

ಭದ್ರತಾ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡುವುದನ್ನು ಗಮನಿಸಿದ ಅನಿತಾ ಮತ್ತು ಅವರ ಪತಿ ಸುನಿಲ್, ಭದ್ರತಾ ಸಿಬ್ಬಂದಿಯೊಂದಿಗೆ ಜೋರಾಗಿ ಜಗಳವಾಡಿದ್ದಾರೆ. ವಾಗ್ವಾದ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಚಿಕಿತ್ಸೆಗೆಂದು ಬಂದಿದ್ದರು

ಚಿಕಿತ್ಸೆಗೆಂದು ಬಂದಿದ್ದರು

ತಮ್ಮ ಮೇಲಿನ ಆರೋಪದ ಬಗ್ಗೆಮಾತನಾಡಿರುವ ಅನಿತಾ, ತಾವು ಯಾವುದೇ ಪಾರ್ಟಿ ಆಯೋಜನೆ ಮಾಡಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನನ್ನ ಪತಿ ಒಬ್ಬ ವೈದ್ಯ. ಅವರ ಸ್ನೇಹಿತರೊಬ್ಬರಿಗೆ ತುರ್ತು ವೈದ್ಯಕೀಯ ನೆರವು ಅಗತ್ಯವಿತ್ತು. ಹೀಗಾಗಿ ಅವರು ತಮ್ಮ ಪತ್ನಿ ಜತೆಗೆ ಮನೆಗೆ ಬಂದರು. ಮಾನವೀಯತೆಯ ನೆಲೆಯಲ್ಲಿ ನನ್ನ ಪತಿ ಅದನ್ನು ನಿರಾಕರಿಸಲು ಸಾಧ್ಯವಿರಲಿಲ್ಲ. ದೂರು ನೀಡಿದ ಬಳಿಕ ಪೊಲೀಸರು ಬಂದಿದ್ದರು. ವಾಸ್ತವವನ್ನು ಪರಿಶೀಲಿಸಿದ ಅವರು ಬಳಿಕ ಕ್ಷಮೆ ಕೇಳಿದ್ದಾರೆ ಎಂದು ಅವರು ಹೇಳಿದ್ದಾರೆ.

ಅದೇ ಕಟ್ಟಡದಲ್ಲಿ ಕೊರೊನಾ ಸೋಂಕಿತ

ಅದೇ ಕಟ್ಟಡದಲ್ಲಿ ಕೊರೊನಾ ಸೋಂಕಿತ

ಅನಿತಾ ಅವರು ವಾಸವಿರುವ ಕಟ್ಟಡದಲ್ಲಿಯೇ ವ್ಯಕ್ತಿಯೊಬ್ಬರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದಿತ್ತು. ಹೀಗಾಗಿ ಅವರ ಕಟ್ಟಡವನ್ನು ಸೀಲ್ ಡೌನ್ ಮಾಡಲಾಗಿದೆ. ಆದರೂ ಇಬ್ಬರು ಅತಿಥಿಗಳು ಅವರ ಮನೆಗೆ ಹೋಗಿರುವುದನ್ನು ಕಂಡಿರುವುದಾಗಿ ನೆರೆಹೊರೆಯವರು ಹೇಳಿದ್ದಾರೆ.

ಅನಿತಾ ವಿರುದ್ಧ ದೂರು

ಅನಿತಾ ವಿರುದ್ಧ ದೂರು

ಸೀಲ್ ಡೌನ್ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಆರೋಪದಲ್ಲಿ ಅನಿತಾ ಹಾಗೂ ಅವರ ಪತಿ ಸುನಿಲ್ ವಿರುದ್ಧ ದೂರು ದಾಖಲಿಸಲಾಗಿದೆ. ಅನಿತಾ ಮತ್ತು ಅವರ ಪತಿಯಿಂದ ತಮ್ಮ ಆರೋಗ್ಯಕ್ಕೆ ಬೆದರಿಕೆ ಎದುರಾಗಿದೆ ಎಂದು ನೆರೆಹೊರೆಯ ನಿವಾಸಿಗಳು ದೂರು ನೀಡಿದ್ದಾರೆ.

More from Filmibeat

English summary
A complaint has been registered against actress Anita Raj for allegedly hosting a party at home amid lockdown.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X