For Quick Alerts
  ALLOW NOTIFICATIONS  
  For Daily Alerts

  ಬೋಲ್ಡ್ ವಿಡಿಯೋಗಳ ಕಳ್ಳತನ: ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ವಿರುದ್ಧ ಪೂನಂ ಪಾಂಡೆ ದೂರು

  |

  ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಅವರಿಂದ ತಮಗೆ ಬೆದರಿಕೆ ಕರೆಗಳು ಬರುತ್ತಿವೆ ಮತ್ತು ಅವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದ ನಟಿ ಪೂನಂ ಪಾಂಡೆ, ಈಗ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

  ರಾಜ್ ಕುಂದ್ರಾ ಮತ್ತು ಅವರ ಸಹವರ್ತಿಗಳ ವಿರುದ್ಧ ಪೂನಂ ಪಾಂಡೆ ಬಾಂಬೆ ಹೈಕೋರ್ಟ್‌ನಲ್ಲಿ ದೂರು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ರಾಜ್ ಕುಂದ್ರಾ ಮತ್ತು ಅವರ ಸಹವರ್ತಿಗಳು ತಮ್ಮ ಹಾಗೂ ಅವರ ನಡುವಿನ ಒಪ್ಪಂದದ ಅವಧಿ ಮುಕ್ತಾಯವಾದ ಬಳಿಕವೂ ತಾವು ಮೊದಲು ಪಾಲ್ಗೊಂಡಿದ್ದ ವಿಡಿಯೋಗಳ ಕಂಟೆಂಟ್‌ಗಳನ್ನು ಅಕ್ರಮವಾಗಿ ಬಳಕೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

  ಪೂನಂ ಪಾಂಡೆ ಅವರ ಆರೋಪಗಳನ್ನು ತಳ್ಳಿ ಹಾಕಿರುವ ಕುಂದ್ರಾ ಮತ್ತು ಅವರ ಸಹವರ್ತಿ ಸೌರಭ್ ಕುಶ್ವಾಹ್, ಈ ಸಂಬಂಧ ತಮಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಹೇಳಿದ್ದಾರೆ.

  ಪೂನಂ ಪಾಂಡೆ ಆಪ್

  ಪೂನಂ ಪಾಂಡೆ ಆಪ್

  ಪೂನಂ ಪಾಂಡೆ ಅವರು ರಾಜ್ ಕುಂದ್ರಾ ಮತ್ತು ಅವರ ಸಹವರ್ತಿಗಳ 'ಆರ್ಮ್ಸ್‌ಪ್ರೈಮ್ ಮೀಡಿಯಾ ಎಂಬ ಕಂಪೆನಿಯೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದರು. ಈ ಕಂಪೆನಿ ಪೂನಂ ಪಾಂಡೆ ಆಪ್ ಅನ್ನು ನಿರ್ವಹಣೆ ಮಾಡುತ್ತಿತ್ತು. ಈ ಒಪ್ಪಂದಿಂದ ಬಳಿಕ ಜಗಳಗಳು ಶುರುವಾಗಿದ್ದವು.

  ವಿಡಿಯೋ ಬಳಸಿ ಹಣ ಮಾಡುತ್ತಿದ್ದಾರೆ

  ವಿಡಿಯೋ ಬಳಸಿ ಹಣ ಮಾಡುತ್ತಿದ್ದಾರೆ

  ಒಪ್ಪಂದ ಮುಕ್ತಾಯಗೊಂಡು ಎಂಟು ತಿಂಗಳಾದರೂ ತಮ್ಮ ಆಪ್‌ನಲ್ಲಿನ ಕಂಟೆಂಟ್‌ಗಳನ್ನು ಅವರು ಬಳಸಿಕೊಳ್ಳುತ್ತಿದ್ದಾರೆ ಎಂದು ಪೂನಂ ಪಾಂಡೆ ಆರೋಪಿಸಿದ್ದರು. ಈ ಕಂಟೆಂಟ್‌ಗಳನ್ನು ದುರ್ಬಳಕೆ ಮಾಡಿಕೊಂಡು ರಾಜ್ ಕುಂದ್ರ ಹಣ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಆರು ತಿಂಗಳಿನಿಂದ ತಮಗೆ ಕೆಟ್ಟ ಕರೆಗಳು ಬರುತ್ತಿವೆ ಎಂದು ದೂರಿದ್ದರು.

  ವಿಡಿಯೋ ಏಕೆ ಕದಿಯಬೇಕಿತ್ತು?

  ವಿಡಿಯೋ ಏಕೆ ಕದಿಯಬೇಕಿತ್ತು?

  ಆರ್ಮ್ಸ್‌ಪ್ರೈಮ್ ಕಂಪೆನಿಯು ನನ್ನ ಆಪ್‌ಅನ್ನು ನಿರ್ವಹಿಸುತ್ತಿತ್ತು. ಕೆಲವು ವಂಚನೆಗಳು ನಡೆಯುವುದು ನನಗೆ ಕಂಡಿದ್ದರಿಂದ ನನ್ನ ಒಪ್ಪಂದವನ್ನು ಕಡಿಮೆ ಅವಧಿಗೆ ಮಾಡಿಕೊಂಡಿದ್ದೆ. ಕೆಲವು ಸಮಯದ ಬಳಿಕ ನಾನು ನನ್ನ ಒಪ್ಪಂದವನ್ನು ಅಂತ್ಯಗೊಳಿಸಿದ್ದೆ. ಆದರೆ ಈಗ ಅವರು ಒಪ್ಪಂದವನ್ನು ಮುರಿದುಕೊಂಡಿದ್ದಾರೆ ಎಂಬ ಸುದ್ದಿಯನ್ನು ಓದಿದೆ. ಅವರೇ ಒಪ್ಪಂದವನ್ನು ಮುರಿದುಕೊಂಡಿದ್ದರೆ ಕಳೆದ ಎಂಟು ತಿಂಗಳಿನಿಂದ ನನ್ನ ವಿಡಿಯೋಗಳನ್ನೇಕೆ ಅವರು ಕದಿಯುತ್ತಿದ್ದಾರೆ?

  ಬೆದರಿಕೆ ಕರೆಗಳು ಬರುತ್ತಿವೆ

  ಬೆದರಿಕೆ ಕರೆಗಳು ಬರುತ್ತಿವೆ

  ನಾನು ರಾಜ್ ಅವರಿಗೆ ಕರೆ ಮಾಡುತ್ತಿದ್ದೇನೆ, ಮೆಸೇಜ್ ಮಾಡುತ್ತಿದ್ದೇನೆ. ಹಾಗೆಯೇ ಮೇಲ್‌ಗಳನ್ನೂ ಮಾಡಿ ನನ್ನ ವಿಡಿಯೋ ಕದಿಯುವುದನ್ನು ನಿಲ್ಲಿಸುವಂತೆ ಮನವಿ ಮಾಡುತ್ತಿದ್ದೇನೆ. ಈಗ ನನಗೆ ರಾಜ್ ಕುಂದ್ರಾ ಅವರಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಪೂನಂ ಹೇಳಿದ್ದಾರೆ.

  ಬೇಕಾದರೆ ನಾನೇ ಸಾಲ ಕೊಡುತ್ತೇನೆ

  ಬೇಕಾದರೆ ನಾನೇ ಸಾಲ ಕೊಡುತ್ತೇನೆ

  ಅವರು ನನ್ನ ವಿಡಿಯೋಗಳನ್ನು ಕದಿಯಲೆಂದೇ ಒಪ್ಪಂದ ಮುರಿದುಕೊಂಡರೇ ತಿಳಿಯಲು ಬಯಸಿದ್ದೇನೆ. ಅವರಿಗೆ ನಿಜಕ್ಕೂ ಹಣಕಾಸಿನ ಅಗತ್ಯವಿದ್ದರೆ ನಾನೇ ಬೇಕಾದರೆ ಸ್ವಲ್ಪ ಸಾಲ ಕೊಡುತ್ತೇನೆ. ಆದರೆ ಅವರು ನನ್ನ ವಿಡಿಯೋಗಳನ್ನು ಕದಿಯುವುದು ಬೇಡ ಎಂದು ವ್ಯಂಗ್ಯವಾಡಿದ್ದಾರೆ.

  ನಂಬರ್ ಕೂಡ ಹಂಚುತ್ತಿದ್ದಾರೆ

  ನಂಬರ್ ಕೂಡ ಹಂಚುತ್ತಿದ್ದಾರೆ

  ಪೂನಂ ಪಾಂಡೆ ಅವರ ಬೋಲ್ಡ್ ವಿಡಿಯೋಗಳನ್ನು ಕದ್ದು ರಾಜ್ ಕುಂದ್ರಾ ಮತ್ತು ಅವರ ತಂಡ ಬಳಸಿಕೊಳ್ಳುತ್ತಿದೆ. ಅಲ್ಲದೆ ವಿಡಿಯೋಗಳಲ್ಲಿ ಆಕೆಯ ನಂಬರ್‌ಅನ್ನೂ ಹಂಚಿಕೊಂಡು, 'ನನಗೆ ಕರೆ ಮಾಡಿ, ನಿಮಗಾಗಿ ಬೆತ್ತಲಾಗುತ್ತೇನೆ' ಎಂದೂ ಬರೆಯುತಿದ್ದಾರೆ ಎಂದು ಸಹ ಆರೋಪಿಸಲಾಗಿದೆ.

  English summary
  Actress Poonam Pandey has files a complaint against Bollywood actress Shilpa Shetty's husband Raj Kundra in Bombay High Court for stealing her contents.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X