'ಅನಿಮಲ್', 'ಪುಷ್ಪ', 'ಕಬೀರ್' ಸಮಾಜಕ್ಕೆ ಮಾರಕ: ರಾಜ್ಯ ಸಭೆಯಲ್ಲಿ ಗುಡುಗಿದ ಕಾಂಗ್ರೆಸ್ ಎಂಪಿ
ರಣ್‌ಬೀರ್ ಕಪೂರ್, ರಶ್ಮಿಕಾ ಮಂದಣ್ಣ ಅಭಿನಯದ 'ಅನಿಮಲ್' ಸಿನಿಮಾ ವಿರುದ್ಧ ಕಾಂಗ್ರೆಸ್ ಎಂಪಿ ರಂಜೀತ್ ರಂಜನ್ ಆಕ್ರೋಶ ಹೊರ ಹಾಕಿದ್ದಾರೆ. ಈ ಸಿನಿಮಾ ಹಿಂಸೆ ಹಾಗೂ ಸ್ತ್ರೀದ್ವೇಷವನ್ನು ಪ್ರಚಾರ ಮಾಡುತ್ತಿದೆ. ಸಮಾಜಕ್ಕೆ ಮಾರಕ ಎನಿಸಿರೊ ಇಂತಹ ಸಿನಿಮಾವನ್ನು ಹೇಗೆ ಸೆನ್ಸಾರ್ ಮಾಡಿದ್ರು? ಅಂತ ಪ್ರಶ್ನೆ ಮಾಡಿದ್ದಾರೆ.
ರಾಜ್ಯ ಸಭೆಯ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ಎಂಪಿ ರಂಜೀತ್ ರಂಜನ್ ಈ ಪ್ರಶ್ನೆಯನ್ನು ಎತ್ತಿದ್ದರು. ರಂಜೀತ್ ರಂಜನ್ ಅವರ ಪುತ್ರಿ ಹಾಗೂ ಅವರ ಸ್ನೇಹಿತರು 'ಅನಿಮಲ್ ಸಿನಿಮಾ ನೀಡುವುದಕ್ಕೆ ಹೋಗಿದ್ದರು. ಆದರೆ, ಪೂರ್ತಿ ಸಿನಿಮಾವನ್ನು ನೋಡಲಾರದೆ ಅಳುತ್ತಾ ಹೊರಬಂದರು ಎಂದು ಆಕ್ರೋಶ ಹೊರಹಾಕಿದ್ದಾರೆ. ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿರುವ ಈ ಸಿನಿಮಾ ಹಿಂಸೆ ಹಾಗೂ ಸ್ತ್ರೀ ದ್ವೇಷವನ್ನು ಹೊರ ಹಾಕುತ್ತಿದೆ ಎಂದು ಹೇಳಿದ್ದಾರೆ.

ಸಮಾಜಕ್ಕೆ ಒಂದೊಳ್ಳೆ ಸಂದೇಶ ಸಾರುವ ಹಾಗೂ ಯುವಕರ ಮೇಲೆ ಉತ್ತಮ ಪರಿಣಾಮ ಬೀರುವ ಸಿನಿಮಾ ನೋಡಿಕೊಂಡು ಬೆಳೆದಿದ್ದಾಗಿ ಹೇಳಿದ್ದಾರೆ. " ಕಬೀರ್, ಪುಷ್ಪ ಮತ್ತು ಅನಿಮಲ್ ಅಂತಹ ಕೆಲವು ಸಿನಿಮಾಗಳಲ್ಲಿ ಮಹಿಳೆಗೆ ಬಹಳಷ್ಟು ಹಿಂಸೆ ಹಾಗೂ ಅಗೌರವ ತೋರಿವೆ" ಎಂದು ಹೇಳಿದ್ದಾರೆ.
ಇತ್ತೀಚೆಗೆ ಬರುತ್ತಿರುವ ಸಿನಿಮಾ ಬಗ್ಗೆ ರಂಜೀತ್ ರಂಜನ್ ಕಿಡಿಕಾರಿದ್ದಾರೆ. "ಇತ್ತೀಚೆಗೆ ಹಿಂಸೆಯನ್ನು ವೈಭವೀಕರಿಸುವ ಕೆಲವು ಸಿನಿಮಾಗಳು ಬರುತ್ತಿವೆ. ಕಬೀರ್ ಸಿನಿಮಾದಲ್ಲಿ ಮಹಿಳೆಯನ್ನು ತೋರಿಸಿರುವ ರೀತಿಯನ್ನು ನೋಡಿ. ಅನಿಮಲ್ ಸಿನಿಮಾದಲ್ಲೂ ಕೂಡ ಹಾಗೇ ಇದೆ. ಇಲ್ಲೂ ಪತ್ನಿಯನ್ನು ಹಾಗೆಯೇ ತೋರಿಸಲಾಗಿದೆ. ಇದು ಗಂಭೀರವಾಗಿ ಪರಿಗಣಿಸಬೇಕಾದ ವಿಷಯ." ಎಂದು ರಂಜೀತ್ ರಂಜನ್ ಹೇಳಿದ್ದಾರೆ.
ರಂಜೀತ್ ರಂಜನ್ ಛತ್ತಿಸ್‌ಗಢದಿಂದ ರಾಜ್ಯ ಸಭೆಯನ್ನು ಪ್ರತಿನಿಧಿಸುತ್ತಿದ್ದಾರೆ. 'ಅನಿಮಲ್' ಸಿನಿಮಾ ಕುರಿತು ಆಕ್ರೋಶ ಹೊರ ಹಾಕಿದ್ದಾರೆ. ಪ್ರಥಮ ಹಾಗೂ ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳು ಕೂಡ ಖಳನಾಯಕರನ್ನು ಇಷ್ಟ ಪಡುವುದಕ್ಕೆ ಶುರು ಮಾಡಿದ್ದಾರೆ. ಇವರು ಸಿನಿಮಾದಲ್ಲಿನ ನೆಗೆಟಿವ್ ಕ್ಯಾರೆಕ್ಟರ್‌ಗಳಲ್ಲಿ ಸಮಾಜದಲ್ಲಿ ಹಿಂಸೆಯನ್ನು ಬಿತ್ತರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

'ಅನಿಮಲ್' ಸಿನಿಮಾದ ಹಾಡನ್ನು ಇಟ್ಟುಕೊಂಡು ಟೀಕೆ ಮಾಡಿದ್ದಾರೆ. ಸಿನಿಮಾದಲ್ಲಿ 1947ರ ವಿಭಜನೆಯ ವೇಳೆ ಮುಸ್ಲಿಂರನ್ನು ರಕ್ಷಿಸಿದ ಕಮಾಂಡರ್ ಹರಿ ಸಿಂಗ್ ನಲ್ವಾ ಪಾತ್ರವನ್ನು ಇಲ್ಲಿ ಗ್ಯಾಂಗ್‌ವಾರ್ ಹಾಡಿನಲ್ಲಿ ಬಳಿಸಿಕೊಂಡಿದ್ದಾರೆ. ಈ ಮೂಲಕ ಯಾವ ರೀತಿಯ ಸಂದೇಶ ಸಾರುವುದಕ್ಕೆ ಹೊರಟಿದ್ದಾರೆಂದು ಆರೋಪ ಮಾಡಿದ್ದಾರೆ. ಸೆನ್ಸಾರ್ ಬೋರ್ಡ್ ಇಂತಹ ಸಿನಿಮಾಗೆ ಹೇಗೆ ಸರ್ಟಿಫಿಕೇಟ್ ಕೊಟ್ಟಿದೆ? ಎಂದು ಪ್ರಶ್ನೆ ಮಾಡಿದ್ದಾರೆ.


Click it and Unblock the Notifications











