ಹಳೆ ಕೇಸಲ್ಲಿ ತಗಲಾಕ್ಕೊಂಡ ನಟ ಸಲ್ಮಾನ್ ಖಾನ್
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಮೆಟ್ರೋ ಪಾಲಿಟನ್ ಕೋರ್ಟ್ ಸೋಮವಾರ (ಡಿಸೆಂಬರ್ 3) ಸಮನ್ಸ್ ಜಾರಿ ಮಾಡಿದೆ. ಪೊಲೀಸರನ್ನೂ ತರಾಟೆಗೆ ತೆಗೆದುಕೊಂಡಿರುವ ಕೋರ್ಟ್, ಸಲ್ಲು ಮೇಲೆ ನಿಮಗ್ಯಾಕೆ ಅಷ್ಟೊಂದು ಪ್ರೀತಿ ಎಂದು ಪ್ರಶ್ನಿಸಿದೆ.
ಈ ಘಟನೆ ನಡೆದು ಹತ್ತು ವರ್ಷಗಳೇ ಕಳೆದುಹೋಗಿವೆ. ಈ ಪ್ರಕರಣವನ್ನು ತನಿಖೆಯನ್ನು ಬೇಗ ಇತ್ಯರ್ಥಪಡಿಸುವಂತೆ ಪೊಲೀಸರಿಗೆ ಕೋರ್ಟ್ ಆದೇಶಿಸಿದೆ. ಡಿಸೆಂಬರ್ 27ರ ಒಳಗೆ ಕೋರ್ಟ್ ಗೆ ಹಾಜರಾಗುವಂತೆಯೂ ಸಲ್ಲುಗೆ ಕೋರ್ಟ್ ಸೂಚಿಸಿದೆ.
2002ರಲ್ಲಿ ನಡೆದ ಈ ಘನೆಯಲ್ಲಿ ಒಬ್ಬರು ಮೃತಪಟ್ಟು ನಾಲ್ಕು ಮಂದಿ ಗಾಯಗೊಂಡಿದ್ದರು. ಮುಂಬೈ ಬಾಂದ್ರಾ ಪ್ರದೇಶದ ಬೇಕರಿಯೊಂದರ ಬಳಿ ಫುಟ್ ಪಾತ್ ಮೇಲೆ ಮಲಗಿದ್ದ ಇವರ ಮೇಲೆ ಸಲ್ಲು ತಮ್ಮ ಐಶಾರಾಮಿ ಲ್ಯಾಂಡ್ ಕ್ರೂಸರ್ ಕಾರನ್ನು ಹತ್ತಿಸಿದ್ದ. ಈ ಕೇಸಿಗೆ ಸಂಬಂಧಿಸಿದಂತೆ ಸಲ್ಲು 82 ಸಲ ಗೈರು ಹಾಜರಾಗಿದ್ದಾರೆ.
ಈಗ ಮತ್ತೆ ಕೇಸ್ ರೀ ಓಪನ್ ಆಗಲಿದ್ದು ಮತ್ತೊಮ್ಮೆ ಸಲ್ಲು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕೇಸನ್ನು ಮತ್ತೆ ಕೈಗೆತ್ತಿಕೊಳ್ಳುವಂತೆ ಐಪಿಎಸ್ ಅಧಿಕಾರಿ ಹಾಗೂ ವಕೀಲ ವೈಪಿ. ಸಿಂಗ್ ಅವರ ಪಾತ್ರ ಗಮನಾರ್ಹವಾಗಿದೆ. (ಏಜೆನ್ಸೀಸ್)


Click it and Unblock the Notifications












