For Quick Alerts
  ALLOW NOTIFICATIONS  
  For Daily Alerts

  ಶಾರುಖ್, ಕತ್ರಿನಾ ಕೈಫ್‌ಗೆ ಕೊರೊನಾ: ಬಾಲಿವುಡ್‌ ಮಂದಿಗೆ 4ನೇ ಅಲೆ ಕಂಟಕ?

  |

  ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊರೊನಾ 4ನೇ ಅಲೆಯ ಭೀತಿ ಎದುರಾಗಿದೆ. ನಿನ್ನೆ (ಜೂನ್ 4) ಮುಂಬೈ ಒಂದರಲ್ಲಿಯೇ ಸುಮಾರು 889 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಕಳೆದ ಫೆಬ್ರವರಿ 4ರಂದು ಮುಂಬೈನಲ್ಲಿ 846 ಮಂದಿಗೆ ಸೋಂಕು ತಗುಲಿತ್ತು. ಆ ಬಳಿಕ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು. ಈ ಕಾರಣಕ್ಕೆ ಮಹಾರಾಷ್ಟ್ರ ಸರ್ಕಾರ ಮುಂಬೈ ನಗರವಾಸಿಗಳಿಗೆ ಎಚ್ಚರಿಕೆಯನ್ನು ರವಾನಿಸಿದೆ.

  ಮುಂಬೈನಲ್ಲಿ ದಿಢೀರನೇ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು, ಬಾಲಿವುಡ್ ಮಂದಿಗೆ ಆತಂಕ ತಂದೊಡ್ಡಿದೆ. ಯಾಕೆಂದರೆ, ಒಬ್ಬರ ಹಿಂದೊಬ್ಬರು ಸೆಲೆಬ್ರೆಟಿಗಳಿಗೆ ಕೊರೊನಾ ಸೋಂಕು ತಗುಲುತ್ತಿದೆ. ಕಳೆದೆರಡು ದಿನಗಳಿಂದ ಬಾಲಿವುಡ್‌ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

  ಕನ್ನಡಕ್ಕೆ ಕಾಲಿಟ್ಟ ಕಿಂಗ್ ಖಾನ್: ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಗುದ್ದಾಡಲು ಶಾರುಖ್ ರೆಡಿ! ಕನ್ನಡಕ್ಕೆ ಕಾಲಿಟ್ಟ ಕಿಂಗ್ ಖಾನ್: ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಗುದ್ದಾಡಲು ಶಾರುಖ್ ರೆಡಿ!

  ಶಾರುಖ್- ಕತ್ರಿನಾಗೆ ಕೊರೊನಾ ಪಾಸಿಟಿವ್

  ಕೊರೊನಾ ಸೋಂಕು ತಗುಲಿದ ಬಾಲಿವುಡ್ ಸೆಲೆಬ್ರೆಟಿಗಳ ಪಟ್ಟಿಯಲ್ಲಿ ಶಾರುಖ್ ಖಾನ್ ಹೆಸರು ಹೊಸದಾಗಿ ಸೇರ್ಪಡೆಯಾಗಿದೆ. ಇತ್ತೀಚೆಗಷ್ಟೇ ಶಾರುಖ್ ಸಿನಿಮಾಗಳು ಬಾಲಿವುಡ್‌ನಲ್ಲಿ ಸದ್ದು ಮಾಡುವುದಕ್ಕೆ ಶುರು ಮಾಡಿದ್ದವು. ಈ ಮಧ್ಯೆ ಕೊರೊನಾ ಸೋಂಕು ತಗುಲಿದ್ದು, ಶೂಟಿಂಗ್‌ಗೆ ಹಿನ್ನೆಡೆಯಾಗುವ ಸಾಧ್ಯತೆಯಿದೆ. ಕಿಂಗ್ ಖಾನ್ ಈಗಾಗಲೇ 'ಪಠಾಣ್' ಹಾಗೂ 'ಜವಾನ್' ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಬಳಿಕ ರಾಜ್‌ಕುಮಾರ್ ಹಿರಾನಿ ನಿರ್ದೇಶನದ 'ಡಂಕಿ' ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

  ಕತ್ರಿನಾ ಕೈಫ್‌ಗೂ ಕೊರೊನಾ ಸೋಂಕು ತಗುಲಿದೆ ಎಂದು ಬಾಲಿವುಡ್‌ನಲ್ಲಿ ವರದಿಯಾಗಿದೆ. ಇದೇ ಕಾರಣಕ್ಕೆ ಕತ್ರಿನಾ ಕೈಫ್, ಐಫಾ ಆವಾರ್ಡ್‌ ಕಾರ್ಯಕ್ರಮಕ್ಕೆ ಭಾಗಿಯಾಗಿಲ್ಲ ಎಂದು ಹೇಳಾಗುತ್ತಿದೆ. ಕತ್ರಿನಾ, ಶಾರುಖ್ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಹೊಸದಾಗಿ ಸೇರಿಕೊಂಡಿದ್ದಾರೆ.

  ಇನ್ಯಾರಿಗೆ ಕೊರೊನಾ ಸೋಂಕು ತಗುಲಿದೆ

  ಇತ್ತೀಚೆಗೆ ಬಾಲಿವುಡ್‌ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್‌ಗೆ ಕೊರೊನಾ ಸೋಂಕು ತಗುಲಿತ್ತು. ಗುಣಮುಖರಾದ ಬಳಿಕ ಅಕ್ಷಯ್ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಇನ್ನೊಂದು ಕಡೆ 'ಭೂಲ್ ಭುಲಯ್ಯ 2' ಸಿನಿಮಾದ ಹೀರೊ ಕಾರ್ತಿಕ್ ಆರ್ಯನ್ ಕೂಡ ಕೋವಿಡ್ ಪಾಸಿಟಿವ್. ಇತ್ತೀಚೆಗೆ ಕಾರ್ತಿಕ್ ಆರ್ಯನ್ ಇನ್‌ಸ್ಟಾಗ್ರಾಂನಲ್ಲಿ ಈ ವಿಷಯವನ್ನು ಶೇರ್ ಮಾಡಿದ್ದರು. "ಎಲ್ಲಾ ಪಾಸಿಟಿವ್ ಆಗಿ ನಡೆಯುತ್ತಿತ್ತು. ಇದು ಕೋವಿಡ್‌ಗೆ ತಡೆದುಕೊಳ್ಳಲು ಆಗಲಿಲ್ಲ." ಎಂದು ಬರೆದುಕೊಂಡಿದ್ದಾರೆ.

  COVID-19 fourth wave: Bollywood Celebrities Shah Rukh Khan, Katrina Kaif test positive

  ಅಕ್ಷಯ್ ಕುಮಾರ್, ಕಾರ್ತಿಕ್ ಆರ್ಯನ್, ಶಾರುಖ್ ಖಾನ್ ಜೊತೆ ಆದಿತ್ಯ ರಾಯ್ ಕಪೂರ್‌ಗೂ ಕೊರೊನಾ ಸೋಂಕು ತಗುಲಿದೆ. ಕರಣ್ ಜೋಹರ್ ಬರ್ತ್‌ಡೇ ಪಾರ್ಟಿಯಲ್ಲಿ ಭಾಗವಹಿಸಿದ 50ಕ್ಕೂ ಅಧಿಕ ಮಂದಿಗೆ ಕೋವಿಡ್ ತಗುಲಿದೆ ಎನ್ನಲಾಗಿದೆ. ಅಲ್ಲದೆ ಬಾಲಿವುಡ್ ತಂಡ ದುಬೈನಲ್ಲಿ ನಡೆಯುತ್ತಿರುವ ಐಫಾ ಅವಾರ್ಡ್ ಕಾರ್ಯಕ್ರಮಕ್ಕೆ ಹೋಗಿದೆ. ಈ ಕಾರಣಕ್ಕೆ ಆತಂಕ ಮತ್ತಷ್ಟು ಹೆಚ್ಚಾಗಿದೆ.

  English summary
  COVID-19 fourth wave: Bollywood Celebrities Shah Rukh Khan, Katrina Kaif test positive, Know More.
  Sunday, June 5, 2022, 18:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X