ಮತ್ತೆ ಒಟ್ಟಿಗೆ ಕಾಣಿಸಿಕೊಂಡ ಶುಭ್ಮನ್ ಗಿಲ್-ಸಾರಾ ಅಲಿ ಖಾನ್: ಪ್ರೀತಿ ರಹಸ್ಯವಾಗಿ ಚಿಗುರುತ್ತಿದೆಯೇ?
ಬಾಲಿವುಡ್‌ನಲ್ಲಿ ದಿನಕ್ಕೊಂದು ಜೋಡಿ ಪ್ರೀತಿಯಲ್ಲಿ ಬೀಳುತ್ತೆ. ದಿನಕ್ಕೊಂದು ಜೋಡಿ ಬ್ರೇಕಪ್ ಮಾಡಿಕೊಳ್ಳುತ್ತೆ. ಹೀಗಾಗಿ ಮದುವೆ ಆಗೋವರೆಗೂ ಸೀರಿಯಸ್ ಯಾವುದು? ಟೈಮ್ ಪಾಸ್‌ಗೆ ಯಾವುದು? ಅಂತ ಹುಡುಕೋದು ನಿಜಕ್ಕೂ ಕಷ್ಟ.
ಸದ್ಯ ಬಾಲಿವುಡ್‌ನಲ್ಲಿ ಹೊಸ ಜೋಡಿಯೊಂದರ ಹೆಸರು ಓಡಾಡುತ್ತಿದೆ. ಕ್ರಿಕೆಟಿಗ ಶುಭ್ಮನ್ ಗಿಲ್ ಹಾಗೂ ಸಾರಾ ಅಲಿ ಖಾನ್ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ಮ್ಯಾಟರ್ ಎಲ್ಲೆಡೆ ಹರಿದಾಡುತ್ತಿದೆ. ಇದು ಕೇವಲ ಊಹಾಪೋಹ ಅಂದವರು ಅದೆಷ್ಟೋ ಮಂದಿ. ಇಲ್ಲಾ ನಿಜ ಅಂದವರೇನು ಕಮ್ಮಿಯಿಲ್ಲ.

ಈಗ ಈ ಜೋಡಿ ಸೀರಿಯಸ್ ಆಗಿ ಡೇಟಿಂಗ್ ಮಾಡುತ್ತಿವೆ ಅನ್ನೋದಕ್ಕೆ ಒಂದು ಸಾಕ್ಷಿ ಸಿಕ್ಕಿದೆ. ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಒಂದು ಫೋಟೊವನ್ನು ನೋಡಿ, ನಿಜಕ್ಕೂ ಈ ಜೋಡಿ ಡೇಟಿಂಗ್ ಮಾಡುತ್ತಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದೆ.
ಶುಭ್ಮನ್ ಹುಟ್ಟುಹಬ್ಬಕ್ಕೆ ಜೊತೆಗಿದ್ರಾ?
ಕ್ರಿಕೆಟಿಗ ಶುಭ್ಮನ್ ಗಿಲ್ ಸದ್ಯ ಐಪಿಎಲ್ ಪಂದ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. ದೇಶಾದ್ಯಂತ ಪಂದ್ಯಗಳು ನಡೆಯುತ್ತಿರೋದ್ರಿಂದ ಐಪಿಎಲ್ ಕಡೆ ಹೆಚ್ಚು ಗಮನ ಹರಿಸಿದ್ದಾರೆ. ಇತ್ತೀಚೆಗೆ ಶುಭ್ಮನ್ ಗಿಲ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆ ವೇಳೆ ಅಹಮದಾಬಾದ್‌ನಲ್ಲಿ ಐಪಿಎಲ್ ಪಂದ್ಯ ನಡೆಯುತ್ತಿತ್ತು. ಹೀಗಾಗಿ ಶುಭ್ಮನ್‌ಗೆ ವಿಶ್ ಮಾಡೋಕೆ ಸಾರಾ ಅಲಿಖಾನ್ ಅಹಮದಾಬಾದ್‌ಗೆ ಹೋಗಿದ್ದರು ಅನ್ನೋ ಸುದ್ದಿ ಓಡಾಡುತ್ತಿದೆ.
ಆ ಪಂದ್ಯದಲ್ಲಿ ಶುಭ್ಮನ್ ಗಿಲ್ ಕೇವಲ 63 ಎಸೆತಗಳಲ್ಲಿ 126 ರನ್ ಗಳಿಸಿದ್ದರು. ಸದ್ಯ ಏರ್‌ಪೋರ್ಟ್‌ನಲ್ಲಿ ಶುಭ್ಮನ್ ಗಿಲ್ ಅನ್ನು ಸಾರಾ ಅಲಿಖಾನ್ ಭೇಟಿ ಮಾಡಿದ್ದಾರೆ ಎನ್ನಲಾದ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇಬ್ಬರೂ ಏರ್‌ಪೋರ್ಟ್‌ನಲ್ಲಿ ಅಕ್ಕಪಕ್ಕ ಕುಳಿತು ಮಾತಾಡುತ್ತಿರುವ ಫೋಟೊ ವೈರಲ್ ಆಗಿದೆ.
ಸಾರಾ- ಶುಭ್ಮನ್ ಡೇಟಿಂಗ್ ಮಾಡುತ್ತಿದ್ದಾರಾ?
ಮೊದಲು ಶುಭ್ಮನ್ ಗಿಲ್ ಹೆಸರು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಅವರೊಂದಿಗೆ ತಳುಕು ಹಾಕಿಕೊಂಡಿತ್ತು. ಆದರೆ, ಕಳೆದ ವರ್ಷ ಆಗಸ್ಟ್‌ನಲ್ಲಿ ಸಾರಾ ಅಲಿ ಖಾನ್ ಮತ್ತು ಶುಭ್ಮನ್ ಗಿಲ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ಸಾರಾ ಅಲಿಖಾನ್ ಹಾಗೂ ಶುಭ್ಮನ್ ಗಿಲ್ ಒಟ್ಟಿಗೆ ಕಂಡ ಬಳಿಕ ಮ್ಯಾಟರ್ ಬೇರೆ ಕಡೆಗೆ ತಿರುಗಿತ್ತು.
ಇತ್ತೀಚೆಗೆ ಶುಭ್ಮನ್ ಗಿಲ್ ಟಾಕ್ ಶೋ ಒಂದರಲ್ಲಿ ಕಾಣಿಸಿಕೊಂಡಿದ್ದರು. ಆ ವೇಳೆ ಬಾಲಿವುಡ್‌ನ ಫಿಟೆಸ್ಟ್ ನಟಿ ಯಾರು ಅಂತ ಪ್ರಶ್ನೆ ಮಾಡಿದ್ದರು. ಆಗ ಶುಭ್ಮನ್ ಗಿಲ್ ಹಿಂದೆ ಮುಂದೆ ನೋಡದೆ ಸಾರಾ ಅಲಿಖಾನ್ ಹೆಸರನ್ನು ತೆಗೆದುಕೊಂಡಿದ್ದರು. ಬಳಿಕ "ನೀವು ಸಾರಾ ಅಲಿ ಖಾನ್ ಜೊತೆ ಡೇಟಿಂಗ್ ಮಾಡುತ್ತಿದ್ದೀರಾ?" ಅನ್ನೋ ಪ್ರಶ್ನೆಗೆ ಶುಭ್ಮನ್ ಗಿಲ್ "ಹೌದು, ಬಹುಶಃ ಇಲ್ಲ" ಎಂದು ಉತ್ತರಿಸಿದ್ದರು.


Click it and Unblock the Notifications











