ಆಮಿರ್ ಖಾನ್ ಸಿನಿಮಾದಲ್ಲಿ ಶಾರುಖ್ ಖಾನ್ ಎಂಟ್ರಿನೇ ಅದ್ಭುತ!

ಈ ವಾರ ಬಾಲಿವುಡ್‌ನಲ್ಲಿ ಎರಡು ಬಿಗ್ ಸಿನಿಮಾ ರಿಲೀಸ್ ಆಗುತ್ತಿದೆ. ಆಮಿರ್ ಖಾನ್ ನಟಿಸಿದ 'ಲಾಲ್ ಸಿಂಗ್ ಚಡ್ಡಾ'. ಅಕ್ಷಯ್ ಕುಮಾರ್ ಸಿನಿಮಾ 'ರಕ್ಷಾ ಬಂಧನ್'. ಈ ಎರಡೂ ಸಿನಿಮಾ ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಲೇಬೇಕು. ಬಾಲಿವುಡ್ ಮಂದಿ ಕೂಡ ಈ ಎರಡು ಸಿನಿಮಾಗಳ ಮೇಲೆ ಭಾರ ಹಾಕಿ ಕೂತಿದ್ದಾರೆ.

ಆಮಿರ್ ಖಾನ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೊಸ ಹೊಸ ದಾಖಲೆಗಳನ್ನು ಬರೆಯುತ್ತೆ. ಹೀಗಾಗಿ ಇಷ್ಟು ದಿನ ಕಳೆದುಕೊಂಡಿದ್ದೆಲ್ಲವನ್ನೂ ಇದೊಂದು ಸಿನಿಮಾ ತಂದುಕೊಡುತ್ತೆ ಅನ್ನೋ ಭರವಸೆಯಲ್ಲಿದ್ದಾರೆ. ಅದೇ ಇನ್ನೊಂದು ಕಡೆ ಅಕ್ಷಯ್ ಕುಮಾರ್ ಬಾಕ್ಸಾಫೀಸ್‌ ಕಿಂಗ್. ಈ ಕಾರಣಕ್ಕೆ ಎರಡೂ ಸಿನಿಮಾಗಳು ಬಾಲಿವುಡ್ ಮಂದಿಗೆ ತುಂಬಾನೇ ಮುಖ್ಯ. ಈ ಗ್ಯಾಪ್‌ನಲ್ಲಿ 'ಲಾಲ್ ಸಿಂಗ್ ಚಡ್ಡಾ' ಕೊನೆಯ ಕ್ಷಣದಲ್ಲಿ ಬೇರೆ ಕಾರಣಕ್ಕೆ ಸದ್ದು ಮಾಡೋಕೆ ಶುರು ಮಾಡಿದೆ.

'ಲಾಲ್ ಸಿಂಗ್ ಚಡ್ಡಾ' ಆಮಿರ್ ಖಾನ್ ಸಿನಿಮಾ ಆಗಿದ್ದರೂ, ಬಿಡುಗಡೆಗೆ ಇನ್ನೊಂದು ದಿನ ಬಾಕಿ ಇದೆ ಅನ್ನುವಾಗ ಸದ್ದು ಮಾಡುತ್ತಿರೋದು ಶಾರುಖ್ ಖಾನ್. ಹೌದು, ಬಾಲಿವುಡ್ ಕಿಂಗ್ ಖಾನ್ ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಎಂಟ್ರಿ ಬಗ್ಗೆನೇ ಈಗ ಟಾಕ್ ಶುರುವಾಗಿದೆ.

ಆಮಿರ್ ಸಿನಿಮಾದಲ್ಲಿ ಕಿಂಗ್ ಖಾನ್

ಆಮಿರ್ ಸಿನಿಮಾದಲ್ಲಿ ಕಿಂಗ್ ಖಾನ್

ಆಮಿರ್ ಖಾನ್ ಸಿನಿಮಾ ಬಾಲಿವುಡ್‌ ಕಿಂಗ್ ಖಾನ್ ಎಂಟ್ರಿ ಅಂದ್ಮೇಲೆ ಸಿನಿಪ್ರಿಯರು ಸುಮ್ಮನೆ ಇರೋಕೆ ಸಾಧ್ಯನೇ ಇಲ್ಲ. ಸಿನಿಮಾ ಚಿತ್ರೀಕರಣದ ವೇಳೆ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಅನ್ನೋದು ರಿವೀಲ್ ಆಗಿತ್ತು. ಮೂಲಗಳ ಪ್ರಕಾರ, ಈ ಸಿನಿಮಾದಲ್ಲಿ ಕಿಂಗ್ ಖಾನ್ ಅವರೇ ಸಿನಿಮಾ ಐಕಾನಿಕ್ ಹೆಸರು ರಾಜ್ ಮಲ್ಹೋತ್ರಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಸಿನಿಮಾ ನೋಡಿದ ಹಲವು ಮಂದಿ ಶಾರುಖ್ ಎಂಟ್ರಿ ಬಗ್ಗೆ ಮಾತಾಡುತ್ತಿದ್ದಾರೆ.

ಶಾರುಖ್ ಎಂಟ್ರಿನೇ ಅದ್ಭುತ

ಶಾರುಖ್ ಎಂಟ್ರಿನೇ ಅದ್ಭುತ

'ಲಾಲ್ ಸಿಂಗ್ ಚಡ್ಡಾ' ಬಿಡುಗಡೆಗೆ ಕಲವೇ ಕ್ಷಣಗಳು ಬಾಕಿ ಉಳಿದಿದೆ ಎನ್ನುವಾಗಲೇ ಹಲವೆಡೆ ಪ್ರೀಮಿಯ್ ಕಂಡಿದೆ. ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಈಗಾಗಲೇ ಜನರು ಸಿನಿಮಾವನ್ನು ನೋಡಿದ್ದಾರೆ. ಇವರು ಶಾರುಖ್ ಖಾನ್ ಗುಣಗಾನ ಮಾಡಿದ್ದಾರೆ. ಆಮಿರ್ ಖಾನ್ ಸಿನಿಮಾದಲ್ಲಿ ಶಾರುಖ್ ಖಾನ್ ಎಂಟ್ರಿನೇ ಅದ್ಭುತ ಅನ್ನೋ ಟಾಕ್ ಇದೆ. ಈಗಾಗಲೇ ಸಿನಿಮಾ ವೀಕ್ಷಿಸಿರುವ ಓವರ್‌ಸೀಸ್‌ ಸೆನ್ಸಾರ್‌ ಬೋರ್ಡ್‌ನ ಸದಸ್ಯ ಉಮೇರ್ ಸಂಧು ಕೂಡ ಶಾರುಖ್ ಖಾನ್ ಎಂಟ್ರಿಯನ್ನು ಹಾಡಿ ಹೊಗಳಿದ್ದಾರೆ.

'ರಾಕೆಟ್ರಿ'ಯಲ್ಲಿ ಕಿಂಗ್ ಖಾನ್ ಗೆಸ್ಟ್

'ರಾಕೆಟ್ರಿ'ಯಲ್ಲಿ ಕಿಂಗ್ ಖಾನ್ ಗೆಸ್ಟ್

ಇತ್ತೀಚೆಗಷ್ಟೇ ತೆರೆಕಂಡಿದ್ದ 'ರಾಕ್ರೆಟಿ' ಸಿನಿಮಾದಲ್ಲೂ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಈ ಸಿನಿಮಾ ಶಾರುಖ್ ಖಾನ್ ಯಾವುದೇ ಪಾತ್ರ ಮಾಡಿಲ್ಲ. ಬದಲಾಗಿದೆ ಶಾರುಖ್ ಖಾನ್ ಆಗಿಯೇ ಈ ಸಿನಿಮಾದಲ್ಲಿ ನಟಿಸಿರೋದು ವಿಶೇಷ. ಎರಡನೇ ಇನ್ನಿಂಗ್ಸ್ ಆರಂಭಕ್ಕೂ ಮುನ್ನವೇ ಶಾರುಖ್ ಖಾನ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದರ ಮೂಲಕ ಮಿಂಚುತ್ತಿದ್ದಾರೆ.

Recommended Video

Raj B Shetty and Ramya | ರಾಜ್ ಬಿ ಶೆಟ್ಟಿ ಕೊಟ್ರು ಸ್ಪಷ್ಟನೆ | Raj B Shetty new movie *Sandalwood
ಶಾರುಖ್ ಸೆಕೆಂಡ್ ಇನ್ನಿಂಗ್ಸ್

ಶಾರುಖ್ ಸೆಕೆಂಡ್ ಇನ್ನಿಂಗ್ಸ್

ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ 2018ರಿಂದ ಬರೋಬ್ಬರಿ ಮೂರು ವರ್ಷಗಳ ಕಾಲ ಯಾವುದೇ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಸತತ ಸೋಲುಗಳಿಂದ ಕಂಗಟ್ಟಿದ್ದ ಕಿಂಗ್ ಖಾನ್ ಒಳ್ಳೆ ಸ್ಕ್ರಿಪ್ಟ್‌ಗಾಗಿ ಕಾದು ಕೂತಿದ್ದರು. ಆದ್ರೀಗ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇವುಗಳಲ್ಲಿ ಮೊದಲು 'ಪಠಾಣ್' ಸಿನಿಮಾ ಬಿಡುಗಡೆಯಾಗುತ್ತಿದೆ. ಬಳಿಕ ಅಟ್ಲಿ ನಿರ್ದೇಶನದ ಸಿನಿಮಾ ಅದಾದ ಬಳಿಕ ರಾಜ್‌ಕುಮಾರ್ ಹಿರಾನಿ ಸಿನಿಮಾ ಬಿಡುಗಡೆಯಾಗುತ್ತಿದೆ.

More from Filmibeat

English summary
Critics About Shah Rukh Khan Guest Appearance In Laal Singh Chaddha, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X