ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಅರ್ಜುನ್' ಸಿನಿಮಾ ನಾಯಕಿ ಮೀರಾ ಚೋಪ್ರಾ; ವರನ ಹಿನ್ನೆಲೆಯೇನು?

ಬಾಲಿವುಡ್‌ ನಟಿಯರು ಒಬ್ಬೊಬ್ಬರಾಗಿಯೇ ಹಸೆಮಣೆ ಏರುತ್ತಿದ್ದಾರೆ. ರಕುಲ್ ಪ್ರೀತ್ ಸಿಂಗ್ ಬಳಿಕ ಕೃತಿ ಕರಬಂಧ ಇದೇ ವಾರ ಮದುವೆ ಆಗುತ್ತಿದ್ದಾರೆ. ಅದಕ್ಕೂ ಮುನ್ನ ಮತ್ತೊಬ್ಬ ನಟಿ ಮೀರಾ ಚೋಪ್ರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು (ಮಾರ್ಚ್ 12) ಬಹುಕಾಲದ ಗೆಳೆಯ ರಕ್ಷಿತ್ ಕೇಜ್ರಿವಾಲ್ ಜೊತೆ ಸಪ್ತಪದಿ ತುಳಿದಿದ್ದಾರೆ. ಈ ನವ ಜೋಡಿಯ ಮದುವೆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ನಟಿ ಮೀರಾ ಚೋಪ್ರಾಗೂ ಕನ್ನಡ ಚಿತ್ರರಂಗಕ್ಕೂ ನಂಟಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಅರ್ಜುನ್' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಆದರೆ, ಈ ಸಿನಿಮಾ ಅಂದುಕೊಂಡಷ್ಟು ಹೆಸರು ಮಾಡಲಿಲ್ಲ. ಹೀಗಾಗಿ ಕನ್ನಡದಲ್ಲಿ ನಟಿಸುವುದಕ್ಕೆ ಆಫರ್‌ಗಳು ಬರಲಿಲ್ಲ. ಒಂದೇ ಕನ್ನಡ ಸಿನಿಮಾಗೆ ಸೀಮಿತವಾಗಿ ಬಿಟ್ಟಿತು. ಆದರೆ, ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳ ಕಡೆಗೆ ಮುಖ ಮಾಡಿದ್ದರು.

Darshan Movie Arjun actress Meera Chopra married Rakshit Kejriwal here is the details

ಮೀರಾ ಚೋಪ್ರಾ ಜನಪ್ರಿಯ ನಟಿಯರಾದ ಪ್ರಿಯಾಂಕಾ ಚೋಪ್ರಾ ಹಾಗೂ ಪರಿಣಿತಿ ಚೋಪ್ರಾ ಅವರ ಸೋದರ ಸಂಬಂಧಿಗಳು. ಮುಂಬೈ ಮೂಲದವರಾಗಿದ್ದರೂ, ದಕ್ಷಿಣ ಭಾರತದ ಸಿನಿಮಾಗಳಲ್ಲಿಯೇ ಹೆಚ್ಚಾಗಿ ನಟಿಸಿದ್ದರು. ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸುವುದಕ್ಕೆ ಶತಪ್ರಯತ್ನ ಪಟ್ಟರೂ ಅದು ಸಾಧ್ಯವಾಗಿರಲಿಲ್ಲ. ಕಳೆದ ವರ್ಷ ಮೀರಾ ಚೋಪ್ರಾ 'ಸಫೇದ್' ಅನ್ನುವ ಹಿಂದಿ ಸಿನಿಮಾದಲ್ಲಿ ನಟಿಸಿದ್ದರು. ಅದೇ ಕೊನೆಯ ಸಿನಿಮಾ.

ಈಗ ಮದುವೆ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೆ ಸುದ್ದಿಯಲ್ಲಿದ್ದಾರೆ. ಮೀರಾ ಚೋಪ್ರಾ ಹಾಗೂ ಪತಿ ರಕ್ಷಿತ್ ಕೇಜ್ರಿವಾಲ್ ಇಬ್ಬರೂ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರೂ ಕುಟುಂಬದವರ ಒಪ್ಪಿಗೆ ಪಡೆದು ಇಂದು (ಮಾರ್ಚ್ 12) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಕೆಲವು ದಿನಗಳ ಹಿಂದಷ್ಟೇ ಇವರ ಮದುವೆ ಆಮಂತ್ರಣ ಪತ್ರಿಕೆ ಸುದ್ದಿ ಮಾಡಿತ್ತು. ಈಗ ಮದುವೆಯಾದ ಫೋಟೊಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Darshan Movie Arjun actress Meera Chopra married Rakshit Kejriwal here is the details

ಅಂದ ಹಾಗೆ 'ಅರ್ಜುನ್' ಸಿನಿಮಾದ ನಾಯಕಿ ಮೀರಾ ಚೋಪ್ರಾ ಪತಿ ರಕ್ಷಿತ್ ಕೇಜ್ರಿವಾಲ್ ಉದ್ಯಮಿಯಾಗಿದ್ದಾರೆ. ರಾಜಸ್ಥಾನದ ಜೈಪುರದ ಐಷಾರಾಮಿ ರೆಸಾರ್ಟ್‌ವೊಂದರಲ್ಲಿ ಮೀರಾ ಚೋಪ್ರಾ ಹಾಗೂ ರಕ್ಷಿತ್ ಮದುವೆ ನಡೆದಿದ್ದು, ಬಾಲಿವುಡ್‌ನಿಂದ ಕೆಲ ತಾರೆಯರು ಭಾಗಿಯಾಗಿದ್ದಾರೆ. ಮದುವೆ ಮುನ್ನ ಮಾರ್ಚ್ 11ರಂದು ಮೆಹೆಂದಿ ಹಾಗೂ ಸಂಗೀತ್ ಕಾರ್ಯಕ್ರಮವಿತ್ತು. ಹಾಗೇ ಬಾಲಿವುಡ್‌ನ ಆಪ್ತರಿಗಾಗಿ ಕಾಕ್‌ಟೈಲ್ ಪಾರ್ಟಿಯನ್ನು ಆಯೋಜಿಸಿದ್ದರು.

ಮೀರಾ ಚೋಪ್ರಾ ತನ್ನ ಮದುವೆ ಫೋಟೊಗಳನ್ನು ಹಂಚಿಕೊಂಡು " ಇನ್ಮುಂದೆ ಎಂದೆಂದಿಗೂ ಸಂತೋಷ, ಕಿತ್ತಾಟ, ಜಗಳ, ಕಣ್ಣೀರು ಮತ್ತು ಜೀವನದ ಅತ್ಯದ್ಭುತ ನೆನಪು. ಪ್ರತಿ ಜನ್ಮವೂ ನಿನ್ನೊಂದಿಗೆ" ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಮೀರಾ ಚೋಪ್ರಾ ತನ್ನ 40ನೇ ವಯಸ್ಸಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮೀರಾ ಚೋಪ್ರಾ 2005ರಲ್ಲಿ 'ಅನ್ಬೆ ಆರುಯಿರೇ' ತಮಿಳು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ತಮಿಳು, ತೆಲುಗು, ಕನ್ನಡ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. 2008ರಲ್ಲಿ ಕನ್ನಡದ 'ಅರ್ಜುನ್' ಚಿತ್ರದಲ್ಲಿ ನಟಿಸಿದ್ದರು. ಆದರೆ, ಇದು ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ಹಿಂದಿಯ 'ಸಫೇದ್' ಸಿನಿಮಾ ಬಳಿಕ ಮೀರಾ ಚೋಪ್ರಾ ಮತ್ಯಾವುದೇ ಚಿತ್ರದಲ್ಲೂ ನಟಿಸಲಿಲ್ಲ.

More from Filmibeat

English summary
Darshan movie actress Meera Chopra married Rakshit Kejriwal:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X