ಗರ್ಭಿಣಿಯಾಗಿದ್ದೇ ಸುಳ್ಳು ಎಂದವರಿಗೆ ದೀಪಿಕಾ ಫೋಟೋಶೂಟ್: ಕಪ್ಪು-ಬಿಳುಪಿನ ಫೋಟೋಗಳು ಹೇಳಿದ್ದೇನು?

ಬಾಲಿವುಡ್‌ನ ಸ್ಟಾರ್ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಕಪೂರ್ ಪೋಷಕರಾಗುವ ಖುಷಿಯಲ್ಲಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಈ ದಂಪತಿಗೆ ಇದೇ ತಿಂಗಳು ಹೆರಿಗೆ ಡೇಟ್ ಇದೆ ಎನ್ನಲಾಗಿದೆ. ಅದಕ್ಕೂ ಮುನ್ನ ದೀಪಿಕಾ ಹಾಗೂ ರಣ್‌ವೀರ್ ಸಿಂಗ್ ಇಬ್ಬರೂ ಫೋಟೋ ಶೂಟ್ ಮಾಡಿದ್ದಾರೆ. ಅದನ್ನು ಇಬ್ಬರೂ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ದೀಪಿಕಾ ಪಡುಕೋಣೆ ಗರ್ಭಿಣಿ ಅನ್ನೋ ವಿಷಯವನ್ನು ತಿಳಿಸಿದ ದಿನದಿಂದ ಸೋಶಿಯಲ್ ಮೀಡಿಯಾದಲ್ಲಿ ಅನುಮಾನಗಳೇ ವ್ಯಕ್ತವಾಗುತ್ತಿತ್ತು. ದೀಪಿಕಾ ಪಡುಕೋಣೆ ಕಾರ್ಯಕ್ರಮಕ್ಕೆ ಬಂದಾಗಲೂ ಬೇಬಿ ಬಂಪ್ ನೋಡಿ ನೆಟ್ಟಿಗರು ಫೇಕ್ ಅಂದಿದ್ದೇ ಹೆಚ್ಚು. ತಾಯಿಯಾಗುತ್ತಿರುವ ಸಂಭ್ರಮದಲ್ಲಿರುವ ದೀಪಿಕಾ-ರಣ್‌ವೀರ್ ಸಿಂಗ್ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿರಲಿಲ್ಲ.

Deepika Padukone and Ranveer Singh s pregnancy black-and-white stunning photoshoot trending

ದೀಪಿಕಾ ಪಡುಕೋಣೆ ತನ್ನ ಬದುಕಿನ ಅತ್ಯಮೂಲ್ಯ ಕ್ಷಣಗಳನ್ನು ಎಂಜಾಯ್ ಮಾಡುತ್ತಿದ್ದರು. ಸದ್ಯ ದೀಪಿಕಾ ಪಡುಕೋಣೆಗೆ ಇದೇ ತಿಂಗಳು ಹೆರಿಗೆ ಡೇಟ್ ಇದೆ ಅಂತ ಮಾಧ್ಯಮಗಳು ವರದಿ ಮಾಡಿವೆ. ಅದಕ್ಕೂ ಮುನ್ನ ಬಾಲಿವುಡ್‌ನ ಈ ಸೆಲೆಬ್ರಿಟಿ ಜೋಡಿ ಬ್ಲ್ಯಾಕ್ ಅಂಡ್ ವೈಟ್ ಥೀಮ್‌ನಲ್ಲಿ ಫೋಟೋಶೂಟ್ ಮಾಡಿಸಿದೆ. ಈ ಫೋಟೋಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿವೆ.

ಬಾಲಿವುಡ್‌ನ ಲೇಡಿ ಸೂಪರ್‌ಸ್ಟಾರ್ ದೀಪಿಕಾ ಪಡುಕೋಣೆ ತನ್ನ ಬೇಬಿ ಬಂಪ್ ಹಿಡಿದು ಪತಿಯೊಂದಿಗೆ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ದೀಪಿಕಾ ಪಡುಕೋಣೆಯ ಈ ಮೆಟರ್ನಿಟಿ ಫೋಟೋಶೂಟ್ ಆಕೆಯ ಬದುಕಿನ ಅತ್ಯಮೂಲ್ಯ ಕ್ಷಣಗಳು. ಡಿಸೈನ್ ಡಿಸೈನ್ ಕಾಸ್ಟ್ಯೂಮ್‌ನಲ್ಲಿ ಕ್ಯಾಮರಾ ಮುಂದೆ ಫೋಸ್ ಕೊಟ್ಟಿದ್ದಾರೆ. ಜೊತೆಗೆ ಡಿಂಪಲ್ ಸ್ಮೈಲ್ ಈ ಫೋಟೋಶೂಟ್‌ಗೆ ಭೂಷಣವೆಂಬಂತೆ ಇದೆ.

ಅದರಲ್ಲೂ ಬ್ಲ್ಯಾಕ್ ಟ್ರಾನ್ಸ್‌ಪರೆಂಟ್‌ ಡ್ರೆಸ್‌ನಲ್ಲಿ ತೆಗೆಸಿಕೊಂಡಿರುವ ಫೋಟೋಗಳ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಈ ಫೋಟೋ ಮೂಲಕ ಫೇಕ್ ಅಂದವರಿಗೆ ದೀಪಿಕಾ ಪಡುಕೋಣೆ ಸರಿಯಾಗಿಯೇ ತಿರುಗೇಟು ಕೊಟ್ಟಿದ್ದಾರೆ. ಪ್ರತಿಯೊಂದು ಫೋಟೋಗಳಲ್ಲೂ ದೀಪಿಕಾ ಪಡುಕೋಣೆ ಈ ಕ್ಷಣಗಳನ್ನು ಎಷ್ಟು ಎಂಜಾಯ್ ಮಾಡುತ್ತಿದ್ದಾರೆ ಎನ್ನುವುದನ್ನು ನಗುವಿನ ಮೂಲಕವೇ ತೋರಿಸುತ್ತಿದ್ದಾರೆ.

ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಸಿಂಗ್ ಇದೇ ವರ್ಷ ಫೆಬ್ರವರಿಯಲ್ಲಿ ಪೋಷಕರಾಗುತ್ತಿರುವ ಖುಷಿ ವಿಷಯವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಇನ್‌ಸ್ಟಾಗ್ರಾಂನಲ್ಲಿ ಸೆಪ್ಟೆಂಬರ್ 2024ರಂದು ಮೊದಲ ಮಗುವಿಗೆ ಜನ್ಮ ನೀಡುತ್ತಿರುವ ವಿಷಯವನ್ನು ಹಂಚಿಕೊಂಡಿದ್ದರು. ಇದೇ ತಿಂಗಳ 28ಕ್ಕೆ ವೈದ್ಯರು ಡೇಟ್ ಕೊಟ್ಟಿದ್ದಾರೆಂದು ಈಗಾಗಲೇ ವರದಿಗಳಾಗಿವೆ.

ಈ ಫೋಟೋಶೂಟ್ ಬಾಲಿವುಡ್‌ ಮಂದಿ ಮೆಚ್ಚುಗೆ ಸೂಚಿಸಿದ್ದಾರೆ. ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ ಜೋನಸ್, ವಿಕ್ರಾಂತ್ ಮೆಸ್ಸಿ, ಆಯುಷ್ಮಾನ್ ಖುರಾನಾ, ಸೋನಂ ಕಪೂರ್ ಸೇರಿದಂತೆ ಹಲವು ಮಂದಿ ದೀಪಿಕಾ ಹಾಗೂ ರಣ್‌ವೀರ್ ಸಿಂಗ್‌ ದಂಪತಿಗೆ ಶುಭಾಶಯವನ್ನು ತಿಳಿಸಿದ್ದಾರೆ. ಇದೇ ವೇಳೆ ದೀಪಿಕಾ ಪಡುಕೋಣೆ ಹೆರಿಗೆಗಾಗಿ ಲಂಡನ್‌ಗೆ ಹೋಗುತ್ತಿದ್ದಾರೆಂಬ ಸುದ್ದಿಗಳು ಕೂಡ ಓಡಾಡುತ್ತಿದೆ. ಸದ್ಯ ಈ ಪ್ರೆಗ್ನೆನ್ಸಿ ಫೋಟೋಶೂಟ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

More from Filmibeat

English summary
Deepika Padukone and Ranveer Singh's pregnancy photoshoot
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X