ದೀಪಿಕಾ ಪಡುಕೋಣೆಗೆ ಆಸ್ಕರ್ ಗೌರವ: ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಫುಲ್ ಟ್ರೆಂಡಿಂಗ್

ಬಾಲಿವುಡ್‌ನ ಸ್ಟಾರ್ ನಟಿ ದೀಪಿಕಾ ಪಡುಕೋಣೆ ವಿಶ್ವದಾದ್ಯಂತ ಫ್ಯಾನ್ಸ್ ಇದ್ದಾರೆ. ಈಕೆಯ ಸಿನಿಮಾಗಳಿಗೆ ಕೇವಲ ಬಾಲಿವುಡ್ ಅಷ್ಟೇ ಅಲ್ಲ ಹಾಲಿವುಡ್ ಮಂದಿ ಕೂಡ ಮೆಚ್ಚುಗೆ ಸೂಚಿಸಿದ್ದು ಇದೆ. ಇದಕ್ಕೆ ಮತ್ತೊಂದು ಸಾಕ್ಷಿ ಎಂದರೆ, ವಿಶ್ವದ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿ ನೀಡುವ ಆಸ್ಕರ್ (ದಿ ಅಕಾಡೆಮಿ ಪ್ರಶಸ್ತಿ) ಸಂಘಟಕರು ದೀಪಿಕಾಗೆ ಅಪರೂಪದ ಗೌರವ ನೀಡಿದ್ದಾರೆ.

ಹೌದು, ಆಸ್ಕರ್ ಪ್ರಶಸ್ತಿ ಅಧಿಕೃತ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ದೀಪಿಕಾ ಪಡುಕೋಣೆಗೆ ವಿಶೇಷ ಗೌರವ ನೀಡಿದೆ. ದೀಪಿಕಾ ಪಡುಕೋಣೆ, ರಣ್‌ವೀರ್ ಸಿಂಗ್, ಪ್ರಿಯಾಂಕಾ ಚೋಪ್ರಾ ನಟನೆಯ 'ಬಾಜಿರಾವ್ ಮಸ್ತಾನಿ' ಸಿನಿಮಾದ "ದಿವಾನಿ ಮಸ್ತಾನಿ.." ಹಾಡನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಗೌರವ ಸೂಚಿಸಿದೆ.

Deepika Padukone Deewani Mastani song from Bajirao Mastani movie gets featured on Oscars Instagram page

ಆಸ್ಕರ್ ಸಂಘಟಕರು ನೀಡಿದ ಈ ವಿಶೇಷ ಗೌರವ ಕಂಡು ದೀಪಿಕಾ ಪಡುಕೋಣೆ ಅಭಿಮಾನಿಗಳಿ ಥ್ರಿಲ್ ಆಗಿದ್ದಾರೆ. 2015ರಲ್ಲಿ ತೆರೆಕಂಡಿದ್ದ 'ಬಾಜಿರಾವ್ ಮಸ್ತಾನಿ' ಸಿನಿಮಾ ಬಾಲಿವುಡ್‌ನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳಲ್ಲಿ ಒಂದಾಗಿತ್ತು. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ ಈ ಸಿನಿಮಾದ "ದೀವಾನಿ ಮಸ್ತಾನಿ.." ಹಾಡಿನ ತುಣುಕನ್ನು ದಿ ಅಕಾಡೆಮಿ ಪ್ರಶಸ್ತಿ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಗೌರವ ಸೂಚಿಸಲಾಗಿದೆ.

ದೀಪಿಕಾ ಪಡುಕೋಣೆ ಹಾಡಿನ ತುಣುಕನ್ನು ಶೇರ್ ಮಾಡಿ " ಬಾಜಿರಾವ್ ಮಸ್ತಾನಿ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಹೆಜ್ಜೆ ಹಾಕಿದ ದೀವಾನಿ ಮಸ್ತಾನಿ ಹಾಡು (ಗಾಯಕಿ ಶ್ರೇಯಾ ಘೋಷಾಲ್) ಇದು. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ. ರಣ್‌ವೀರ್ ಸಿಂಗ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ನಟಿಸಿದ್ದಾರೆ" ಎಂದು ಪೋಸ್ಟ್ ಮಾಡಲಾಗಿದೆ.

ಆಸ್ಕರ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ದೀಪಿಕಾಗೆ ಗೌರವ ಸೂಚಿಸುತ್ತಿದ್ದಂತೆ ಪತಿ ರಣ್‌ವೀರ್ ಸಿಂಗ್ "ಮೆಸ್ಮೆರಿಕ್" ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೇ ನೆಟ್ಟಿಗರು ಕೂಡ ಕಾಮೆಂಟ್‌ಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. " ಈ ಹಾಡಿನಲ್ಲಿ ದೀಪಿಕಾ ಸೌಂದರ್ಯ ಪ್ರದರ್ಶನ ಮಾಡಿದ್ದಂತೆ ಬೇರೆ ಯಾವುದೇ ನಟಿಗೂ ತೋರಿಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ." ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

"ಕೊನೆಗೂ ಆಸ್ಕರ್ ಪ್ರಶಸ್ತಿಯ ಸಂಘಟಕರು ಬಾಲಿವುಡ್‌ ಮಂದಿಗೆ ಗುರುತಿಸುವುದಕ್ಕೆ ಆರಂಭಿಸಿದ್ದಾರೆ. " ಎಂದು ಇನ್ನೊಬ್ಬರು ಹೇಳಿಕೊಂಡಿದ್ದಾರೆ. ಅದೇ ಮತ್ತೊಬ್ಬರು " ಅತ್ಯಂತ ಸುಂದರವಾಗಿ ಶೂಟ್ ಮಾಡಿದ ಹಾಡನ್ನು ಗುರುತಿಸುವುದಕ್ಕೆ ಧನ್ಯವಾದಗಳು" ಎಂದು ಮತ್ತೊಬ್ಬರು ಹೇಳಿಕೊಂಡಿದ್ದಾರೆ.

2023ರಲ್ಲಿ ದೀಪಿಕಾ ಪಡುಕೋಣೆ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ವೇಳೆ RRR ಸಿನಿಮಾದ ನಾಟು ನಾಟು ಹಾಡಿಗೆ ಪರ್ಫಾಮೆನ್ಸ್ ಅನ್ನು ಪರಿಚಯ ಮಾಡಿಕೊಟ್ಟಿದ್ದರು. ಈ ಹಾಡಿಗೆ ಆಸ್ಕರ್ ಪ್ರಶಸ್ತಿ ಲಭ್ಯವಾಗಿತ್ತು. ದೀಪಿಕಾ ಪಡುಕೋಣೆಯ ಬಿಗ್ ಬಜೆಟ್ ಸಿನಿಮಾ 'ಕಲ್ಕಿ' ಬಿಡುಗಡೆಯಾಗಬೇಕಿದೆ. ಇದರಲ್ಲಿ ಪ್ರಭಾಸ್, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ದೀಪಿಕಾ ಹಾಗೂ ರಣ್‌ವೀರ್ ಸಿಂಗ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

More from Filmibeat

English summary
Deepika Padukone Deewani Mastani song featured on Oscars Instagram page
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X