ವರ್ಕೌಟ್ ವಿಡಿಯೋ ಬೇಡ ಎಂದ ಫರಾಹ್ ಖಾನ್‌ಗೆ ದೀಪಿಕಾ ಪಡುಕೋಣೆ ತಿರುಗೇಟು
ಕೆಲವು ದಿನಗಳ ಹಿಂದಷ್ಟೇ ನಿರ್ದೇಶಕಿ ಫರಾಹ್ ಖಾನ್, ಬಾಲಿವುಡ್‌ನ ಸೆಲೆಬ್ರಿಟಿಗಳ ವಿರುದ್ದ ಕಿಡಿಕಾರಿದ್ದರು. ಕೊರೊನಾ ವೈರಸ್‌ನಿಂದಾಗಿ ಲಕ್ಷಾಂತರ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಮನೆಯಲ್ಲಿ ಕುಳಿತು ವರ್ಕೌಟ್ ಮಾಡುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ಫರಾಹ್ ಖಾನ್ ವಾಗ್ದಾಳಿ ನಡೆಸಿದ್ದರು.
Recommended Video
ಇದಕ್ಕೆ ನಟಿ ದೀಪಿಕಾ ಪಡುಕೋಣೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಈಗ ಜಾಗತಿಕವಾಗಿ ಬೇರೆ ಸಮಸ್ಯೆಗಳು ಇದೆ. ಅವುಗಳ ಬಗ್ಗೆ ನೀವು ಕಾಳಜಿವಹಿಸಬೇಕು. ನಿಮ್ಮ ದೇಹದ ಸೌಂದರ್ಯ ಕಾಪಾಡಿಕೊಳ್ಳುವುದು ನಿಮಗೆ ಮುಖ್ಯವಾಗಿರಬಹುದು. ಹಾಗೆಂದು ಅದರ ವಿಡಿಯೋಗಳನ್ನು ಹಾಕಿಕೊಳ್ಳಬೇಡಿ ಎಂದು ಫರಹಾ ತರಾಟೆಗೆ ತೆಗೆದುಕೊಂಡಿದ್ದರು. ಈ ವಿಡಿಯೋಗಳನ್ನು ಹಾಕುತ್ತಿರುವುದು ನಾವು ಹೇಗೆ ಕಾಣಿಸುತ್ತಿದ್ದೀರಿ ಎಂದು ತೋರಿಸುವುದಕ್ಕಲ್ಲ ಎಂದು ದೀಪಿಕಾ ಹೇಳಿದ್ದಾರೆ. ಅಂದಹಾಗೆ, ದೀಪಿಕಾ ಪಡುಕೋಣೆಯನ್ನು 'ಓಂ ಶಾಂತಿ ಓಂ' ಮೂಲಕ ಹಿಂದಿ ಚಿತ್ರರಂಗಕ್ಕೆ ಪರಿಚಯಿಸಿದ್ದು ಫರಾಹ್ ಖಾನ್. ಮುಂದೆ ಓದಿ...

ಫರಾಹ್ ಅಭಿಪ್ರಾಯಕ್ಕೆ ಅಸಮ್ಮತಿ
ಪತ್ರಕರ್ತ ರಾಜೀವ್ ಮಸಂದ್ ಅವರೊಂದಿಗೆ ಹ್ಯಾಂಗ್‌ಔಟ್ ವಿಡಿಯೋದಲ್ಲಿ ಮಾತುಕತೆ ನಡೆಸಿರುವ ದೀಪಿಕಾ, ಸಾಮಾಜಿಕ ಜಾಲತಾಣಗಳಲ್ಲಿ ವರ್ಕೌಟ್ ವಿಡಿಯೋಗಳನ್ನು ಹಾಕುವುದರ ವಿರುದ್ಧ ಫರಾಹ್ ಖಾನ್ ವ್ಯಕ್ತಪಡಿಸಿರುವ ಅಭಿಪ್ರಾಯಕ್ಕೆ ಅಸಮ್ಮತಿ ತಿಳಿಸಿದ್ದಾರೆ.

ಹೇಗೆ ಕಾಣಿಸುತ್ತೇವೆ ಎಂಬುದಲ್ಲ...
'ಸೋಷಿಯಲ್ ಮೀಡಿಯಾದಲ್ಲಿನ ವರ್ಕೌಟ್ ವಿಡಿಯೋಗಳ ಬಗ್ಗೆ ಅನೇಕ ಜನರಿಗೆ ಸಮಸ್ಯೆಗಳಿವೆ ಎನ್ನುವುದು ಗೊತ್ತು. ಆದರೆ ಪ್ರಾಮಾಣಿಕವಾಗಿ ಹೇಳುತ್ತೇನೆ. ಎಕ್ಸರ್‌ಸೈಸ್ ವಿಡಿಯೋಗಳನ್ನು ಹಾಕುವುದು, ಅದಕ್ಕಿಂತ, ಎಕ್ಸರ್‌ಸೈಜ್ ಮಾಡುವುದು, ವಿಡಿಯೋ ಹಾಕದೆ ಇರುವುದು- ಇವೆಲ್ಲವೂ ನಿಮಗೆ ಹೇಗೆ ಫೀಲ್ ಕೊಡುತ್ತದೆ ಎಂಬುದನ್ನು ಹೇಳುತ್ತದೆಯೇ ಹೊರತು ನೀವು ಹೇಗೆ ಕಾಣಿಸುತ್ತೀರಿ ಎಂಬುದರ ಬಗ್ಗೆಯಲ್ಲ' ಎಂದು ದೀಪಿಕಾ ಹೇಳಿದ್ದಾರೆ.

ಇಬ್ಬರಿಗೂ ಕಾಲಕ್ಷೇಪಕ್ಕೆ ಸಹಾಯ
ಫರಾಹ್ ಖಾನ್ ಹೇಳಿದ ಕಾರಣಕ್ಕೆ ತಾವು ವರ್ಕೌಟ್ ಮಾಡುವುದನ್ನು ಹಾಗೂ ಅದರ ವಿಡಿಯೋಗಳನ್ನು ಅಪ್‌ಲೋಡ್ ಮಾಡುವುದನ್ನು ನಿಲ್ಲಿಸಲು ಆಗುವುದಿಲ್ಲ ಎಂದು ದೀಪಿಕಾ ಸೂಚ್ಯವಾಗಿ ತಿಳಿಸಿದ್ದಾರೆ. 'ವರ್ಕೌಟ್ ವಿಡಿಯೋಗಳನ್ನು ಮಾಡುವುದು ನನಗೆ ಹಾಗೂ ರಣವೀರ್‌ಗೆ ಸಮಯ ಕಳೆಯಲು ದಿನವಿಡೀ ಸಹಾಯ ಮಾಡುತ್ತಿದೆ' ಎಂದು ದೀಪಿಕಾ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಬೇರೆ ಚಿಂತೆಗಳಿವೆ
'ನೀವೆಲ್ಲರೂ ವಿಶೇಷ ವ್ಯಕ್ತಿಗಳು ಎಂಬುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಈಗ ಜಾಗತಿಕ ಸಂಕಷ್ಟದ ಸಂದರ್ಭದಲ್ಲಿ ನಿಮ್ಮ ಫಿಗರ್‌ಗಳನ್ನು ನೋಡಿಕೊಳ್ಳುವುದರ ಹೊರತಾಗಿ ನಿಮಗೆ ಬೇರೆ ಚಿಂತೆ ಇಲ್ಲ ಎನ್ನುವುದು ಗೊತ್ತು. ಆದರೆ ನಮ್ಮಲ್ಲಿ ಕೆಲವರಿಗೆ, ಅನೇಕರಿಗೆ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಬಹಳ ಕಳವಳಗಳಿವೆ' ಎಂದು ಫರಾಹ್ ಖಾನ್ ಕಿಡಿಕಾರಿದ್ದರು.


Click it and Unblock the Notifications










