»   » ದೀಪಿಕಾಳ ಈ ಫೋಟೋದಲ್ಲಿ ಕಾಂಟ್ರವರ್ಸಿ ಆಗೋದು ಏನಿದೆ?

ದೀಪಿಕಾಳ ಈ ಫೋಟೋದಲ್ಲಿ ಕಾಂಟ್ರವರ್ಸಿ ಆಗೋದು ಏನಿದೆ?

Posted By:
Subscribe to Filmibeat Kannada

ದೀಪಿಕಾ ಪಡುಕೋಣೆ ಸಖತ್ ಹಾಟ್ ಎನ್ನುವುದು ಗೊತ್ತಿರುವ ವಿಚಾರ. ಮೈ ತುಂಬಾ ಬಟ್ಟೆ ಹಾಕ್ಕೊಂಡು ಗೌರಮ್ಮನ ಹಾಗೆ ಫೋಸ್ ಕೊಡುವುದಕ್ಕು ಸೈ, ಟು ಪೀಸ್ ಬಿಕಿನಿ ಹಾಕ್ಕೊಂಡು ನೋಡುಗರ ಹುಬ್ಬೇರಿಸುವುದಕ್ಕು ಸೈ ಎನ್ನುವ ನಟಿ.

ಬಾಲಿವುಡ್, ಹಾಲಿವುಡ್'ನಲ್ಲಿ ಮೋಸ್ಟ್ ಸೆಕ್ಸಿ ಅಂಡ್ ಟ್ಯಾಲೆಟೆಂಡ್ ನಟಿ ಎಂದು ಗುರುತಿಸಿಕೊಳ್ಳುತ್ತಿರುವ ನಟಿ ದೀಪಿಕಾ ಪಡುಕೋಣೆ ತನ್ನ ಹೊಸ ಪೋಟೋಗಳಿಂದ ಪಡ್ಡೆಗಳ ಕಣ್ಣುಕುಕ್ಕಿಸುತ್ತಿದ್ದಾರೆ. ಹಿಂದೆಂದೂ ಮಾಡಿಸಿದ ರೀತಿಯಲ್ಲಿ ಫೋಟೋಶೂಟ್ ಮಾಡಿಸಿ ಚಿತ್ರ ದುನಿಯಾದ ಗಮನ ಸೆಳೆದಿದ್ದಾರೆ.[ದೀಪಿಕಾ ಬಗ್ಗೆ ಕತ್ರಿನಾ ಕೈಫ್ ಹೀಗೆ ಹೇಳ್ತಾರೆ ಎಂದು ಯಾರು ನಿರೀಕ್ಷಿಸಿರಲಿಲ್ಲ..!]

ಈ ಫೋಟೋಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಾರಿ ಚರ್ಚೆಯಾಗುತ್ತಿದ್ದು, ದೀಪಿಕಾಳ ಮಾಜಿ ಪ್ರಿಯಕರ ಕೂಡ ಈ ಫೋಸ್ ಗೆ ಬೋಲ್ಡ್ ಆಗಿದ್ದಾನೆ. ಅಷ್ಟಕ್ಕೂ, ಈ ಫೋಟೋದಲ್ಲಿ ವಿವಾದ ಹುಟ್ಟುಹಾಕುವಂತಹದ್ದು ಏನಿದೆ? ಮುಂದೆ ಓದಿ....

ಡಿಪ್ಪಿಯ ಸೆಕ್ಸಿಯೆಸ್ಟ್ ಫೋಸ್

'ಮಾಕ್ಸಿಮ್ ಮ್ಯಾಗಜೀನ್'ಗಾಗಿ ದೀಪಿಕಾ ಪಡುಕೋಣೆ ಮಾಡಿಸಿರುವ ಹೊಸ ಫೋಟೋ ಶೂಟ್ ಈಗ ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ. ಅಷ್ಟೇ ಅಲ್ಲದೇ, ಚಿತ್ರ ವಲಯದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ.[ಪಿ.ವಿ ಸಿಂಧು ಆಗಲಿದ್ದಾರೆ ದೀಪಿಕಾ ಪಡುಕೋಣೆ.!]

ಬಿಕಿನಿ ಮೈಮಾಟ

ಈ ಫೋಟೋದಲ್ಲಿ ದೀಪಿಕಾ, ಬಿಳಿ ಬಣ್ಣದ ಬಿಕಿನಿ ಡ್ರೆಸ್ ನಲ್ಲಿ ಹೈ ಹೀಲ್ಡ್ ಧರಿಸಿ ತನ್ನ ನೀಳ ಕಾಲುಗಳನ್ನು ಪ್ರದರ್ಶಿಸಿದ್ದಾಳೆ. ದೀಪಿಕಾಳ ಈ ಹಾಟ್ ಬ್ಯೂಟಿ ನೋಡಿ ಎಲ್ಲರು ದಂಗಾಗಿದ್ದಾರೆ.['ರಾಬ್ತಾ' ಚಿತ್ರಕ್ಕಾಗಿ ಹೊಸ ಅವತಾರದಲ್ಲಿ ದೀಪಿಕಾ ಪಡುಕೋಣೆ]

ರಣ್ ವೀರ್ ಸಿಂಗ್ ಫಿದಾ

ದೀಪಿಕಾ ಪಡುಕೋಣೆಯ ಈ ಲುಕ್ ಗೆ ಮಾಜಿ ಪ್ರಿಯಕರ ರಣ್ ವೀರ್ ಸಿಂಗ್ ಫಿದಾ ಆಗಿದ್ದಾರೆ. ಡಿಪ್ಪಿಯ ಈ ಸ್ಟೈಲ್ ನೋಡಿ ರಣ್ ವೀರ್ ಸಿಂಗ್ ಆಶ್ಚರ್ಯವಾಗಿದ್ದಾರಂತೆ.[ರಣವೀರ್ ಮತ್ತು ದೀಪಿಕಾ ದೂರವಾಗಲು ಬನ್ಸಾಲಿ'ಯೇ ಕಾರಣ..]

ಹಾಲಿವುಡ್ ಪ್ರಭಾವ

ಮತ್ತೆ ಕೆಲವರು ದೀಪಿಕಾ ಹಾಲಿವುಡ್ ಗೆ ಹೋಗಿ ಬಂದ ಮೇಲೆ ಮತ್ತಷ್ಟು ಬೋಲ್ಡ್ ಆಗಿದ್ದಾರೆ. ಅದಕ್ಕೆ ಈ ರೀತಿಯಾಗಿ ಫೋಟೋಶೂಟ್ ಮಾಡಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇನ್ನು ದೀಪಿಕಾಳ ಈ ಫೋಟೋವನ್ನ ಅನೇಕರು ಗೇಲಿ ಮಾಡುತ್ತಿದ್ದಾರೆ.

ಕೇನ್ಸ್ ನಲ್ಲಿ ಮೋಡಿ ಮಾಡಿದ್ದ ಡಿಪ್ಪಿ

ಇನ್ನು ಇತ್ತೀಚೆಗಷ್ಟೇ ನಡೆದ ಕೇನ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಾಲಿವುಡ್ ಬ್ಯೂಟಿ ರೆಡ್ ಕಾರ್ಪೆಟ್ ಮೇಲೆ ಮಿರಮಿರ ಅಂತ ಮಿಂಚಿ ಜಗತ್ತಿನ ಕಣ್ಣನ್ನ ತನ್ನತ್ತ ಸೆಳೆದಿದ್ದರು.

ನಂಬರ್-1 ನಟಿ

2017ರ, 100 ಹಾಟ್ ನಟಿಯರ ಪಟ್ಟಿಯಲ್ಲಿ ದೀಪಿಕಾ ಕಾಣಿಸಿಕೊಂಡಿದ್ದು, ಭಾರತದಲ್ಲಿ ನಂಬರ್ ವನ್ ಸ್ಥಾನ ಗಳಿಸಿದ್ದಾಳೆ. ಜಾಗತಿಕ ಮಟ್ಟದಲ್ಲಿ ದೀಪಿಕಾಗೆ 10ನೇ ಸ್ಥಾನ ದೊರೆತಿದ್ದು, ಪ್ರಿಯಾಂಕಾ ಚೋಪ್ರಾ 34ನೇ ಸ್ಥಾನ ಪಡೆದಿದ್ದಾಳೆ.

English summary
Bollywood Actress Deepika Padukone Slammed for Sharing a hot photo on social media.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada