»   » ದೀಪಿಕಾ ಬಗ್ಗೆ ಕತ್ರಿನಾ ಕೈಫ್ ಹೀಗೆ ಹೇಳ್ತಾರೆ ಎಂದು ಯಾರು ನಿರೀಕ್ಷಿಸಿರಲಿಲ್ಲ..!

ದೀಪಿಕಾ ಬಗ್ಗೆ ಕತ್ರಿನಾ ಕೈಫ್ ಹೀಗೆ ಹೇಳ್ತಾರೆ ಎಂದು ಯಾರು ನಿರೀಕ್ಷಿಸಿರಲಿಲ್ಲ..!

Posted By:
Subscribe to Filmibeat Kannada

ನಟಿ ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ಇಬ್ಬರಿಗೂ ಪರಸ್ಪರ ಹೆಚ್ಚಾಗಿ ಪರಿಚಯವಿಲ್ಲ ಅನ್ನೋ ಮ್ಯಾಟರ್ ಬಿ ಟೌನ್ ಗೆ ಮಾತ್ರವಲ್ಲದೇ ದೇಶದ ಸಿನಿ ಪ್ರಿಯರೆಲ್ಲರಿಗೂ ಗೊತ್ತಿರುವ ವಿಷಯವೇ. ಅಲ್ಲದೇ ಇಬ್ಬರೂ ನಟಿಯರು ಸಹ ಒಂದಾನೊಂದು ಸಮಯದಲ್ಲಿ ಕಪೂರ್ ಫ್ಯಾಮಿಲಿಯ ಕುಡಿಯೊಂದಿಗೆ ಡೇಟಿಂಗ್ ಮಾಡಿದವರೇ. ರಣಬೀರ್ ಕಪೂರ್, ಕತ್ರಿನಾ ಕೈಫ್ ಬಾಯ್ ಫ್ರೆಂಡ್ ಆಗುವುದಕ್ಕೂ ಮುನ್ನ ದೀಪಿಕಾ ಪಡುಕೋಣೆಗೆ ಬಾಯ್ಸ್ ಫ್ರೆಂಡ್ ಆಗಿದ್ದರೂ ಎಂಬುದನ್ನು ಈಗಲು ಹಲವರು ಹೇಳುತ್ತಾರೆ.[2 ವರ್ಷಗಳ ನಂತರ ಮತ್ತೆ ಜೊತೆಯಾಗಲಿದ್ದಾರೆ ರಣಬೀರ್, ದೀಪಿಕಾ!]

ಅಂದಹಾಗೆ ದೀಪಿಕಾ ಮತ್ತು ಕತ್ರಿನಾ ಇಬ್ಬರೂ ನಟಿಯರು ಪರಸ್ಪರ ಮಾತನಾಡುವುದನ್ನು ಬಿಟ್ಟು ಹಲವು ದಿನಗಳು ಆಗಿವೆ. ಆದರೆ ಇತ್ತೀಚೆಗೆ ಕತ್ರಿನಾ ಕೈಫ್, ತನ್ನ ಪ್ರತಿಸ್ಪರ್ಧಿ ದೀಪಿಕಾ ಬಗ್ಗೆ ನಿರೀಕ್ಷೆಗೂ ಮೀರಿದ ಮಾತುಗಳನ್ನು ಹೇಳಿದ್ದಾರೆ. ದೀಪಿಕಾ ಪಡುಕೋಣೆ ಬಗ್ಗೆ ಕೇಳಿದ ಯಾವುದೇ ಪ್ರಶ್ನೆಗಳನ್ನು ಅವಾಯ್ಡ್ ಮಾಡದೇ ಕತ್ರಿನಾ ಉತ್ತರಿಸಿದ್ದಾರೆ. ಮುಂದೆ ಓದಿ..

ದೀಪಿಕಾ ಬಗ್ಗೆ ಕತ್ರಿನಾರಲ್ಲಿ ಕೇಳಿದ ಪ್ರಶ್ನೆ

ಇತ್ತೀಚೆಗಷ್ಟೆ Pinkvilla ಕತ್ರಿನಾ ಕೈಫ್ ಅವರಲ್ಲಿ, 'ಸುಶಾಂತ್ ಸಿಂಗ್ ರಾಜ್ ಪುತ್ ಮತ್ತು ಕ್ರಿತಿ ಸನೋನ್ ಅಭಿನಯದ 'ರಾಬ್ತಾ' ಚಿತ್ರದ ಐಟೆಂ ಸಾಂಗ್ ನಲ್ಲಿ ದೀಪಿಕಾ ಪಡುಕೋಣೆ ಲುಕ್ ಹೇಗಿದೆ' ಎಂದು ಕೇಳಿದ್ದರು. ಅದಕ್ಕೆ ಕತ್ರಿನಾ...

ನಂಬಲಾಗದ ಉತ್ತರ ನೀಡಿದ್ದಾರೆ

" ಐ ಲವ್ ಇಟ್. ದೀಪಿಕಾ ಲುಕ್ ಗ್ರೇಟ್. ವಾಹ್" ಎಂದು 'ರಾಬ್ತಾ' ಚಿತ್ರದಲ್ಲಿಯ ದೀಪಿಕಾ ಲುಕ್ ಬಗ್ಗೆ ಹೊಗಳಿದ್ದಾರೆ.['ರಾಬ್ತಾ' ಚಿತ್ರಕ್ಕಾಗಿ ಹೊಸ ಅವತಾರದಲ್ಲಿ ದೀಪಿಕಾ ಪಡುಕೋಣೆ]

ಪ್ರಿಯಾಂಕ ಲುಕ್ ಬಗ್ಗೆ ಕತ್ರಿನಾಗೆ ಪ್ರಶ್ನೆ

"ಹಾಲಿವುಡ್ ನ 'ಬೇವಾಚ್' ಸಿನಿಮಾದಲ್ಲಿಯ ಪ್ರಿಯಾಂಕ ಚೋಪ್ರಾ ರವರ ಸೆಕ್ಸಿ ಲುಕ್ ಬಗ್ಗೆ ಹೇಳಿ ಎಂದು Pinkvilla ಕೇಳಿದಕ್ಕೆ ಉತ್ತರಿಸಿದ ಕತ್ರಿನಾ ಕೈಫ್, 'ಡೆಫಿನೇಟ್ಲಿ ಅದ್ಭುತವಾಗಿದೆ. ಅವರ ಲುಕ್ ಅತ್ಯಾಕರ್ಷಕವಾಗಿದೆ' ಎಂದಿದ್ದಾರೆ.

ಆದರೂ ಡಿಪ್ಪಿ, ಕತ್ರಿನಾ ಮೇಲೆ ಬೇಸರವಾಗಿರೋದೇಕೆ?

ಅಂದಹಾಗೆ ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್ ಬಗ್ಗೆ ಅಪ್ ಸೆಟ್ ಆಗಿರುವುದು, ಆಕೆಯ ಸಾಂಗ್ ಸೌಂಡ್ ಮಾಡುವುದನ್ನು ತಪ್ಪಿಸಿರುವುದಕ್ಕೆ. ದೀಪಿಕಾ ಕಣ್ಣು ಬೀಳಲು ಕಾರಣ 'ರಾಬ್ತಾ' ಚಿತ್ರದ ಸಾಂಗ್ ಬಿಡುಗಡೆ ಆದ ದಿನವೇ ಸಾಮಾಜಿಕ ಜಾಲತಾಣ ಇನ್ ಸ್ಟಗ್ರಾಂ ಗೆ ಕತ್ರಿನಾ ಪಾದಾರ್ಪಣೆ ಮಾಡಿರುವುದು.

ದೀಪಿಕಾ'ಳ ಟೀಮ್ ಸಹ ನಿರಾಸೆಗೊಂಡಿದೆ

ದೀಪಿಕಾ'ಳ 'ರಾಬ್ತಾ' ಚಿತ್ರದ ವಿಡಿಯೋ ಹಾಡು ಬಿಡುಗಡೆ ಆದ ದಿನದಂದೇ ಕತ್ರಿನಾ ಕೈಫ್ ಇನ್ ಸ್ಟಗ್ರಾಂ ಖಾತೆ ತೆರೆದರು. ಇದರಿಂದ ಅವರ ಹಾಡಿಗೆ ಹೆಚ್ಚು ಪ್ರಸಾರ ಸಿಗಲು ತೊಂದರೆ ಆಯಿತು ಎಂಬ ಕಾರಣದಿಂದ ದೀಪಿಕಾ ಟೀಮ್ ಸಹ ನಿರಾಸೆಗೊಂಡಿದೆ.

'ರಾಬ್ತಾ' ಚಿತ್ರತಂಡದ ಸ್ಪಿರಿಟ್ ಕುಂಠಿತಗೊಳ್ಳಲು ಕತ್ರಿನಾಳೆ ಕಾರಣ

ಕತ್ರಿನಾ ಸಮಾಜಿಕ ಜಾಲತಾಣ ಇನ್ ಸ್ಟಗ್ರಾಂಗೆ ಪಾದಾರ್ಪಣೆ ಮಾಡಿದ್ದು, ದೀಪಿಕಾ'ಗೆ ಮಾತ್ರವಲ್ಲದೇ 'ರಾಬ್ತಾ' ಚಿತ್ರತಂಡದ ಉತ್ಸಾಹವು ಕುಗ್ಗಲು ಕಾರಣವಾಗಿದೆ.

ಡಿಪ್ಪಿ ಬಾಯ್ ಫ್ರೆಂಡ್ ಗೆ ಖುಷಿಯೋ ಖುಷಿ

ಯಾರಿಗೆ ಖುಷಿಯಾಗಿದೆಯೋ ಇಲ್ವೋ ಗೊತ್ತಿಲ್ಲ. ಆದರೆ ಡಿಪ್ಪಿ ಬಾಯ್ ಫ್ರೆಂಡ್ ರಣವೀರ್ ಸಿಂಗ್ ಮಾತ್ರ ಕತ್ರಿನಾ ಕೈಫ್ ಇನ್ ಸ್ಟಗ್ರಾಂ'ಗೆ ಬಂದಿದ್ದಕ್ಕೆ ಹೆಚ್ಚು ಸಂತೋಷಪಟ್ಟರು. ಜೊತೆಗೆ ಅತ್ಯಂತ ಉಲ್ಲಾಸದಿಂದ ಸ್ವಾಗತವನ್ನು ಕೋರಿದರು.

ರಣವೀರ್ ಮತ್ತು ಕತ್ರಿನಾ ಗೆಳೆತನ

ರಣವೀರ್ ತುಂಬಾ ಲಕ್ಕಿ ಬಾಯ್ ಫ್ರೆಂಡ್. ಯಾಕಂದ್ರೆ ರಣವೀರ್ ಮತ್ತು ಕತ್ರಿನಾ ಇಬ್ಬರ ಗೆಳೆತನವು ಸೈಲೆಂಟಾಗಿಯೇ ಮುಂದುವರೆದರೂ ದೀಪಿಕಾ ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅದಕ್ಕೆ ಬ್ರೇಕ್ ಹಾಕಲು ಮುಂದಾಗುವುದಿಲ್ಲ.

English summary
Katrina Kaif recently praised her rival Deepika Padukone in the most unexpected way. Here is what Katrina Kaif said about Deepika Padukone.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada