9 ವರ್ಷಗಳ ಬಳಿಕ ಬಿಕಿನಿ ತೊಟ್ಟ ದೀಪಿಕಾ ಪಡುಕೋಣೆ ಕಂಡು ಏನಂತಿದ್ದಾರೆ ಫ್ಯಾನ್ಸ್?

ದೀಪಿಕಾ ಪಡುಕೋಣೆ ಮದುವೆ ಬಳಿಕವೂ ಬಾಲಿವುಡ್‌ನಲ್ಲಿ ಫುಲ್ ಬ್ಯುಸಿಯಾಗಿರುವ ನಟಿ. ಈಕೆಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿ ನಿಂತಿವೆ. ಕೇವಲ ಒಂದು ತಿಂಗಳ ಅಂತರದಲ್ಲಿ ಎರಡು ಸಿನಿಮಾಗಳು ರಿಲೀಸ್ ಆಗಲಿವೆ. ಇದೇ ವಾರ ಪತಿ ರಣ್‌ವೀರ್ ಸಿಂಗ್ ಜೊತೆ ನಟಿಸಿದ '83' ಬಿಡುಗಡೆಗೆ ಸಜ್ಜಾಗಿದೆ. ಈ ಮಧ್ಯೆ ಮತ್ತೊಂದು ಪ್ರಯೋಗಾತ್ಮಕ ಸಿನಿಮಾ ದಿಢೀರನೇ ಸದ್ದು ಮಾಡುವುದಕ್ಕೆ ಶುರುಮಾಡಿದೆ.

'83' ಸಿನಿಮಾದ ಬಳಿಕ ದೀಪಿಕಾ ಪಡುಕೋಣೆ ಹೊಸ ಸಿನಿಮಾ 'ಗೆಹರಾಯಿಯಾ' (Gehraiyaan) ರಿಲೀಸ್ ಆಗುತ್ತಿದೆ. ಸದ್ದೇ ಇಲ್ಲದೆ ದಿಢೀರನೇ ಚಿತ್ರತಂಡ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದೆ. ಆದರೆ, ಈ ಸಿನಿಮಾ ಬಿಡುಗಡೆಗಿಂತ ದೀಪಿಕಾ ಪಡುಕೋಣೆಯ ಬಿಕಿನಿ ಅವತಾರ ಸದ್ದು ಮಾಡುವುದಕ್ಕೆ ಶುರುಮಾಡಿದೆ. ಅಲ್ಲದೆ ಯುವನಟನಿಗೆ ಮುತ್ತಿಟ್ಟ ದೃಶ್ಯ ಕೂಡ ದೀಪಿಕಾ ಫ್ಯಾನ್ಸ್‌ಗೆ ಥ್ರಿಲ್ ಕೊಡುತ್ತಿದೆ.

9 ವರ್ಷಗಳ ಬಳಿಕ ದೀಪಿಕಾ ಬಿಕಿನಿ: ಏನಂದ್ರು ಫ್ಯಾನ್ಸ್?

9 ವರ್ಷಗಳ ಬಳಿಕ ದೀಪಿಕಾ ಬಿಕಿನಿ: ಏನಂದ್ರು ಫ್ಯಾನ್ಸ್?

ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ ಬಾಲಿವುಡ್‌ನ ಸ್ಟಾರ್ ನಟಿ. ಚಿತ್ರರಂಗಕ್ಕೆ ಕಾಲಿಟ್ಟ ದಿನದಿಂದಲೂ ದೀಪಿಕಾ ಹಿಂತಿರುಗಿ ನೋಡಿದ ಉದಾಹರಣೆನೇ ಇಲ್ಲ. ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ದೀಪಿಕಾ ಕೂಡ ಗ್ಲಾಮರ್‌ ಪಾತ್ರಗಳಿಗೂ ಸೈ.. ಪ್ರಯೋಗಾತ್ಮಕ ರೋಲ್‌ಗಳಿಗೂ ಜೈ ಅಂದಿದ್ದಾರೆ. ಆದರೆ, 'ಗೆಹರಾಯಿಯಾ' (Gehraiyaan) ಸಿನಿಮಾದ ಕೆಲವು ಮೇಕಿಂಗ್ ಫೋಟೊಗಳನ್ನು ಸ್ವತ: ದೀಪಿಕಾ ಶೇರ್ ಮಾಡಿಕೊಂಡಿದ್ದರು. ಬಾಲಿವುಡ್ ಯುವನಟ ಸಿದ್ಧಾಂತ್ ಚತುರ್ವೇದಿ ಜೊತೆ ಬಿಕಿನಿಯಲ್ಲಿ ಕೂತಿದ್ದ ಪೋಟೊಗಳನ್ನು ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. 9 ವರ್ಷಗಳ ಬಳಿಕ ಮತ್ತೆ ಬಿಕಿನಿಯಲ್ಲಿ ಡಿಪ್ಪಿಯನ್ನು ನೋಡಿ ಆ ಫೋಟೊಗೆ ಕಮೆಂಟ್ ಮಾಡುತ್ತಿದ್ದಾರೆ.

ಯುವನಟ ಸಿದ್ದಾಂತ್‌ಗೆ ಕಿಸ್ ಕೊಟ್ಟ ದೀಪಿಕಾ

ಯುವನಟ ಸಿದ್ದಾಂತ್‌ಗೆ ಕಿಸ್ ಕೊಟ್ಟ ದೀಪಿಕಾ

ದೀಪಿಕಾ ಪಡುಕೋಣೆ 'ಗೆಹರಾಯಿಯಾ' (Gehraiyaan) ಸಿನಿಮಾದಲ್ಲಿ ಬಿಕಿನಿ ತೊಟ್ಟಿರುವುದಷ್ಟೇ ಅಲ್ಲ. ಬೋಲ್ಡ್ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನುವುದನ್ನು ಟೀಸರ್‌ ಹೇಳುತ್ತಿದೆ. 'ಗೆಹರಾಯಿಯಾ' (Gehraiyaan) ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಬಾಲಿವುಡ್‌ ಯುವನಟ ಸಿದ್ದಾಂತ್ ಚತುರ್ವೇದಿಗೆ ಕಿಸ್ ಮಾಡಿದ್ದಾರೆ. ಈ ದೃಶ್ಯದ ಬಗ್ಗೆನೂ ಬೇಜಾನ್ ಚರ್ಚೆಯಾಗುತ್ತಿದೆ. ಸಿದ್ದಾಂತ್ ಹಾಗೂ ದೀಪಿಕಾ ಕೆಮಿಸ್ಟ್ರಿಗೆ ಬಗ್ಗೆನೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಒಟಿಟಿಯಲ್ಲಿ ದೀಪಿಕಾ ಹೊಸ ಸಿನಿಮಾ

ಒಟಿಟಿಯಲ್ಲಿ ದೀಪಿಕಾ ಹೊಸ ಸಿನಿಮಾ

ಶಕುನ್ ಬತ್ರಾ ನಿರ್ದೇಶಿಸಿದ 'ಗೆಹರಾಯಿಯಾ' (Gehraiyaan) ಸಿನಿಮಾದಲ್ಲಿ ದೀಪಿಕಾ ಹಾಗೂ ಸಿದ್ದಾಂತ್ ಜೊತೆ ಅನನ್ಯ ಪಾಂಡೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಸಿರುದ್ದೀನ್ ಶಾ, ಧೈರ್ಯ ಕರ್ವ ಕೂಡ ನಟಿಸಿದ್ದಾರೆ. ಕರಣ್ ಜೋಹರ್ ನಿರ್ಮಿಸುತ್ತಿರುವ ಈ ಸಿನಿಮಾ ನಾಲ್ಕು ಮಂದಿಯ ಸಂಬಂಧಗಳನ್ನು ತೆರೆಮೇಲೆ ತರಲಿದೆ. ಯುವ ಪೀಳಿಗೆಗಳ ಆಧುನಿಕ ಸಂಬಂಧಗಳನ್ನು ಆಧರಿಸಿ, ಕಥೆ ಹೆಣೆಯಲಾಗಿದೆ. ಆದರೆ, ಈ ಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆಯಾಗುತ್ತಿಲ್ಲ. 2022 ಜನವರಿ 25ರಂದು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಲಿದೆ.

ದೀಪಿಕಾ '83' ಸಿನಿಮಾ ರಿಲೀಸ್

ದೀಪಿಕಾ '83' ಸಿನಿಮಾ ರಿಲೀಸ್

2021ರ ಬಹು ನಿರೀಕ್ಷೆಯ ಸಿನಿಮಾ '83'ಯಲ್ಲೂ ದೀಪಿಕಾ ಪಡುಕೋಣೆ ನಟಿಸದ್ದಾರೆ. ಈ ಸಿನಿಮಾದಲ್ಲಿ ಪತಿ ರಣ್‌ವೀರ್ ಸಿಂಗ್ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಪಾತ್ರದಲ್ಲಿ ನಟಿಸಿದ್ದರೆ, ದೀಪಿಕಾ ಕಪಿಲ್ ದೇವ್ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಬೀರ್ ಖಾನ್ ನಿರ್ದೇಶಿಸಿದ ಈ ಸಿನಿಮಾ ಬಾಲಿವುಡ್‌ನಲ್ಲಿ ಬೇಜಾನ್ ಸದ್ದು ಮಾಡುತ್ತಿದ್ದು, ಕನ್ನಡ ಭಾಷೆಯಲ್ಲಿಯೂ ಬಿಡುಗಡೆಯಾಗಲಿದೆ.

More from Filmibeat

English summary
Deepika Padukone kisses Siddhant Chaturvedi and she is back in the bikini after 9 years. Deepika shared the BTS from her next film Gehraiyaan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X