ಎರಡನೆಯ ಅವಕಾಶ ಕೊಟ್ಟಾಗಲೂ ಮೋಸ ಮಾಡಿದ್ದ ರಣಬೀರ್: ದೀಪಿಕಾ ತೆರೆದಿಟ್ಟ ಸತ್ಯ

ತಮ್ಮ ವೈಯಕ್ತಿಕ ಮತ್ತು ಸಾಮಾಜಿಕ ವಿಚಾರ ಸೇರಿದಂತೆ ಸ್ವಲ್ಪ ಹಿಂಜರಿಕೆಯಿಲ್ಲದೆ ಮುಕ್ತವಾಗಿ ಹೇಳಿಕೊಳ್ಳುವ ಬಾಲಿವುಡ್‌ನ ಕೆಲವೇ ಕಲಾವಿದರಲ್ಲಿ ದೀಪಿಕಾ ಪಡುಕೋಣೆ ಒಬ್ಬರು. ಕೆಲವು ತಿಂಗಳ ಹಿಂದೆ ದೀಪಿಕಾ ತಾವು ಖಿನ್ನತೆಗೆ ಒಳಗಾಗಿದ್ದನ್ನು ಮತ್ತು ಅದರಿಂದ ಹೊರಗೆ ಬಂದಿದ್ದರನ್ನು ಬಹಿರಂಗಪಡಿಸಿದ್ದರು. 'ಚಪಾಕ್' ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಜೆಎನ್‌ಯುಕ್ಕೆ ತೆರಳಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಪರ ಧ್ವನಿ ಎತ್ತಿದ್ದರು.

ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ತಮ್ಮ ಹಿಂದಿನ ಸಂಬಂಧಗಳು ಹಾಗೂ ಅದರಿಂದ ಉಂಟಾದ ದ್ರೋಹದ ಬಗ್ಗೆ ಮಾತನಾಡಿದ್ದಾರೆ. ನಟ ರಣಬೀರ್ ಕಪೂರ್ ಸೇರಿದಂತೆ ದೀಪಿಕಾ ಅನೇಕ ವ್ಯಕ್ತಿಗಳ ಜತೆಗೆ ಡೇಟಿಂಗ್ ನಡೆಸಿದ್ದರು. ಬಳಿಕ ರಣವೀರ್ ಸಿಂಗ್ ಜತೆಗೆ ಪ್ರೀತಿಯಲ್ಲಿ ಬಿದ್ದು, ವಿವಾಹ ಬಂಧನಕ್ಕೂ ಒಳಪಟ್ಟರು. ಹಾಗೆಂದು ಅವರು ತಮ್ಮ ಹಿಂದಿನ ಬದುಕಿನ ಕೆಲವು ಕಹಿ ಘಟನೆಗಳನ್ನು ಮರೆತಿಲ್ಲ. ಪ್ರೀತಿ ಹಾಗೂ ಸಂಬಂಧಗಳ ವಿಚಾರದಲ್ಲಿ ತಾವು ದ್ರೋಹಕ್ಕೆ ಒಳಗಾಗಿದ್ದನ್ನು ಅವರು ಹೇಳಿಕೊಂಡಿದ್ದಾರೆ.

ಸೆಕ್ಸ್ ದೇಹಕ್ಕಷ್ಟೇ ಅಲ್ಲ, ಅದು ಭಾವನಾತ್ಮಕ

ಸೆಕ್ಸ್ ದೇಹಕ್ಕಷ್ಟೇ ಅಲ್ಲ, ಅದು ಭಾವನಾತ್ಮಕ

'ನನ್ನ ಪಾಲಿಗೆ ಲೈಂಗಿಕತೆ ಎನ್ನುವುದು ಕೇವಲ ದೇಹಕ್ಕೆ ಸಂಬಂಧಿಸಿದ್ದಲ್ಲ. ಅದರಲ್ಲಿ ಭಾವನಾತ್ಮಕತೆಯೂ ಇರುತ್ತದೆ. ನಾನು ಪ್ರೇಮ ಸಂಬಂಧದಲ್ಲಿದ್ದಾಗ ಮೋಸ ಮಾಡಿರಲಿಲ್ಲ ಅಥವಾ ದೂರಮಾಡಿರಲಿಲ್ಲ. ನಾನು ವಂಚಿಸುವುದಾದರೆ ನಾನೇಕೆ ಸಂಬಂಧದಲ್ಲಿ ಇರಬೇಕು? ಒಬ್ಬಳೇ ಇದ್ದು ಮಜಾ ಮಾಡಬಹುದು. ಆದರೆ ಎಲ್ಲರೂ ಹಾಗೆಯೇ ಯೋಚಿಸುವುದಿಲ್ಲ' ಎಂದು ದೀಪಿಕಾ ಹೇಳಿದ್ದಾರೆ.

ಮೂರ್ಖಳಾಗಿದ್ದೆ

ಮೂರ್ಖಳಾಗಿದ್ದೆ

ಯಾವುದೇ ಹೆಸರನ್ನು ಉಲ್ಲೇಖಿಸದ ದೀಪಿಕಾ, ಒಬ್ಬ ವ್ಯಕ್ತಿಗೆ ಎರಡನೆಯ ಅವಕಾಶ ನೀಡುವಷ್ಟು ತಾನು ಮೂರ್ಖಳಾಗಿದ್ದೆ. ಇದಕ್ಕಾಗಿ ಈ ಹಿಂದೆ ಘಾಸಿಗೊಂಡಿದ್ದೆ ಎಂದು ತಿಳಿಸಿದ್ದಾರೆ. ಇದು ರಣಬೀರ್ ಕಪೂರ್ ಕುರಿತಾದ ಹೇಳಿಕೆ ಎನ್ನಲಾಗಿದೆ.

ರೆಡ್ ಹ್ಯಾಂಡ್ ಆಗಿ ಹಿಡಿದಿದ್ದೆ

ರೆಡ್ ಹ್ಯಾಂಡ್ ಆಗಿ ಹಿಡಿದಿದ್ದೆ

'ನಾನು ಆತನಿಗೆ ಎರಡನೆಯ ಅವಕಾಶ ನೀಡುವಷ್ಟು ದಡ್ಡಳಾಗಿದ್ದೆ. ಏಕೆಂದರೆ ಆತ ಬೇಡಿಕೊಂಡ ಮತ್ತು ಅಂಗಲಾಚಿದ್ದ. ನನ್ನ ಸುತ್ತ ಇರುವ ಪ್ರತಿಯೊಬ್ಬರೂ ಆತ ದಾರಿತಪ್ಪಿದ್ದಾನೆ. ಸರಿಹೋಗಿಲ್ಲ ಎಂದು ಹೇಳಿದ್ದರೂ ನಾನು ಆತನನ್ನು ಮತ್ತೆ ಒಪ್ಪಿಕೊಂಡೆ. ನಂತರ ವಾಸ್ತವವಾಗಿ ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದೆ' ಎಂದಿದ್ದಾರೆ.

ಆ ಹಡಗು ಮುಳುಗಿ ಹೋಗಿದೆ

ಆ ಹಡಗು ಮುಳುಗಿ ಹೋಗಿದೆ

'ಇದರಿಂದ ಹೊರಗೆ ಬರಲು ನನಗೆ ಕೆಲವು ಸಮಯ ಬೇಕಾಯಿತು. ಆದರೆ ಅದನ್ನು ಮಾಡಿದ ಬಳಿಕ ನಾನು ಮತ್ತೆ ಆ ದಿನಗಳಿಗೆ ಹೋಗುವಂತೆ ಮಾಡಲು ಯಾವುದರಿಂದಲೂ ಸಾಧ್ಯವಿಲ್ಲ. ಆ ಹಡಗು ಮುಳುಗಿ ಹೋಗಿದೆ' ಎಂದು ದೀಪಿಕಾ ರಣಬೀರ್ ಕಪೂರ್ ಜತೆಗಿನ ತನ್ನ ಸಂಬಂಧದ ಕುರಿತು ನೆನಪಿಸಿಕೊಂಡಿದ್ದಾರೆ.

ತಪ್ಪು ಮಾಡುವುದೇ ಆತನ ಹವ್ಯಾಸ

ತಪ್ಪು ಮಾಡುವುದೇ ಆತನ ಹವ್ಯಾಸ

'ಆತ ಮೊದಲ ಬಾರಿಗೆ ನನಗೆ ಮೋಸ ಮಾಡಿದಾಗ, ನಮ್ಮ ಸಂಬಂಧದಲ್ಲಿ ಏನೋ ತಪ್ಪಾಗಿದೆ ಎಂದು ನಾನು ಭಾವಿಸಿದ್ದೆ. ಅಥವಾ ನನ್ನಲ್ಲೇ ತಪ್ಪು ಇದೆ ಎಂದುಕೊಂಡೆ. ಆದರೆ ನಮ್ಮ ಜತೆಗಿದ್ದವರು ಅದನ್ನೇ ಹವ್ಯಾಸವನ್ನಾಗಿ ಮಾಡಿಕೊಂಡಾಗ ಆತನಲ್ಲಿಯೇ ಸಮಸ್ಯೆಗಳು ಇವೆ ಎನ್ನುವುದು ಅರ್ಥವಾಗುತ್ತದೆ' ಎಂದಿದ್ದಾರೆ.

ಗೌರವ, ನಂಬಿಕೆ ಇಲ್ಲದಿದ್ದರೆ...

ಗೌರವ, ನಂಬಿಕೆ ಇಲ್ಲದಿದ್ದರೆ...

'ಸಂಬಂಧಗಳಲ್ಲಿ ನಾನು ತುಂಬಾ ನೀಡಿದ್ದೇನೆ. ಹಾಗೆಯೇ ಪ್ರತಿಯಾಗಿ ಏನನ್ನೂ ನಿರೀಕ್ಷಿಸುತ್ತಿರಲಿಲ್ಲ. ಆದರೆ ಸಂಬಂಧ ದ್ರೋಹ ಎನ್ನುವುದು ಸಂಬಂಧಗಳ ಒಪ್ಪಂದಗಳನ್ನು ಮುರಿದು ಹಾಕುತ್ತದೆ. ಒಮ್ಮೆ ಅದು ಬಂದರೆ ಗೌರವ ದೂರ ಹೋಗುತ್ತದೆ. ನಂಬಿಕೆ ಸತ್ತು ಹೋಗುತ್ತದೆ. ಇವುಗಳು ಸಂಬಂಧದ ಮುಖ್ಯ ಸ್ತಂಭಗಳು. ಅವಿಲ್ಲದೆ ನೀವು ಏನನ್ನೂ ಮಾಡಲು (F**ck- ದೀಪಿಕಾ ಹೇಳಿದ ಪದ) ಮಾಡಲು ಸಾಧ್ಯವಿಲ್ಲ' ಎಂದು ಖಾರವಾಗಿ ಹೇಳಿದ್ದಾರೆ.

More from Filmibeat

English summary
Deepika Padokone explained her ex boyfriend cheated on her, but she was fool to give him a second chance.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X