Deepika Padukone: ದೀಪಿಕಾ ಪಡುಕೋಣೆ 'ಮಧ್ಯದ ಬೆರಳು' ತೋರಿಸಿದ್ದಕ್ಕೆ ಟಾಂಗ್ ಕೊಟ್ಟ ನೆಟ್ಟಿಗರು

ದೀಪಿಕಾ ಪಡುಕೋಣೆ ಬರೀ ಸಿನಿಮಾದಲ್ಲಷ್ಟೇ ಬೋಲ್ಡ್ ಅಂದುಕೊಂಡರೆ ಅದು ತಪ್ಪು. ದೀಪಿಕಾ ತೆರೆಮೇಲೆ ಎಷ್ಟು ಬೋಲ್ಡ್ ಆಗಿ ಆಕ್ಟ್ ಮಾಡುತ್ತಾರೋ ತೆರೆಹಿಂದೆನೂ ಅಷ್ಟೇ ಬೋಲ್ಡ್. ಇದಕ್ಕೆ ಸಾಕ್ಷಿ ನಿನ್ನೆ (ಮಾರ್ಚ್ 21) ವೈರಲ್ ಆದ ಒಂದು ಫೋಟೊ. ಈ ಫೋಟೊ ಈಗ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿದೆ.

ದೀಪಿಕಾ ಪಡುಕೋಣೆ ಸದ್ಯ ಸ್ಪೇನ್‌ನಲ್ಲಿ ಇದ್ದಾರೆ. ಶಾರುಖ್ ಖಾನ್ ಕಮ್‌ ಬ್ಯಾಕ್ ಸಿನಿಮಾ 'ಪಠಾಣ್' ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಬಾಲಿವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಯಶ್ ರಾಜ್‌ ಫಿಲಂಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. 'ವಾರ್' ಸಿನಿಮಾದ ನಿರ್ದೇಶಕ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್ ವೇಳೆ ದೀಪಿಕಾ ಪದೇ ಪದೆ ಟ್ರೋಲ್ ಆಗುತ್ತಿದ್ದಾರೆ.

ದೀಪಿಕಾ ಪಡುಕೋಣೆ ಮತ್ತೊಂದು ಫೋಟೊ ಲೀಕ್ ಆಗಿದೆ. ಆದರೆ ಈ ಬಾರಿ ದೀಪಿಕಾ ಬಿಕಿನಿಯಲ್ಲಿ ಕಾಣಿಸಿಕೊಂಡಿಲ್ಲ. ಬದಲಾಗಿ, ಬೆರಳು ತೋರಿಸಿ ಟ್ರೋಲ್ ಆಗಿದ್ದಾರೆ. ಅಷ್ಟಕ್ಕೂ ನಿನ್ನೆಯಿಂದ ಸದ್ದು ಮಾಡುತ್ತಿರುವ ಈ ಫೋಟೊದಲ್ಲಿ ಅಂತಹದ್ದೇನಿದೆ? ನೆಟ್ಟಿಗರ ರಿಯಾಕ್ಷನ್ ಏನು ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಮಧ್ಯದ ಬೆರಳು ತೋರಿಸಿದ ದೀಪಿಕಾ

ಮಧ್ಯದ ಬೆರಳು ತೋರಿಸಿದ ದೀಪಿಕಾ

ದೀಪಿಕಾ ಪಡುಕೋಣೆ ಕಳೆದೊಂದು ವಾರದಿಂದ ಟ್ರೋಲ್ ಮೇಲೆ ಟ್ರೋಲ್ ಆಗುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ದೀಪಿಕಾ ಬಿಕಿನಿ ತೊಟ್ಟ ಫೋಟೊ ವೈರಲ್ ಆಗಿತ್ತು. ಈಗ ಮತ್ತೊಂದು ಫೋಟೊ ವೈರಲ್ ಆಗಿದ್ದು, ಇದರಲ್ಲಿ ಸ್ಪೇನ್ ಫೋಟೊಗ್ರಾಫರ್‌ಗಳಿಗೆ ದೀಪಿಕಾ ಪಡುಕೋಣೆ ಮಧ್ಯದ ಬೆರಳು ತೋರಿಸಿದ್ದಾರೆ. ನಿನ್ನೆ(ಮಾರ್ಚ್ 21) ಇಂದ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೊ ಬಗ್ಗೆ ಟಾಕ್ ಆಗುತ್ತಿದೆ.

ಮುನಿಸಿಕೊಂಡಿದ್ದಾರಾ ದೀಪಿಕಾ?

ಮುನಿಸಿಕೊಂಡಿದ್ದಾರಾ ದೀಪಿಕಾ?

ಕೆಲವೇ ದಿನಗಳ ಹಿಂದೆ ದೀಪಿಕಾ ಪಡುಕೋಣೆಯ ಪೋಟೊಗಳು ಲೀಕ್ ಆಗಿದ್ದವು. ಪಠಾಣ್ ಚಿತ್ರದ ಶೂಟಿಂಗ್‌ನಲ್ಲಿ ಸ್ಪೇನ್‌ನಲ್ಲಿರುವ ದೀಪಿಕಾ, ಹಳದಿ ಬಿಕಿನಿ ತೊಟ್ಟು ನಿಂತಿರುವ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಈ ಫೋಟೊಗಳು ವೈರಲ್ ಆಗಿದ್ದರಿಂದ ದೀಪಿಕಾ ಪಡುಕೋಣೆ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೆ ಪೋಟೊ ಕ್ಲಿಕ್ಕಿಸಲು ಬಂದ ಛಾಯಾಗ್ರಾಹಕರಿಗೆ ದೀಪಿಕಾ ಪಡುಕೋಣೆ ಮಧ್ಯದ ಬೆರಳು ತೋರಿಸಿ ಸಿಟ್ಟು ಹೊರ ಹಾಕಿದ್ದಾರೆ ಎನ್ನಲಾಗಿದೆ.

ನೆಟ್ಟಿಗರ ಕಮೆಂಟ್ ಏನು?

ನೆಟ್ಟಿಗರ ಕಮೆಂಟ್ ಏನು?

'ಗೆಹರಾಯಿಯಾ' ಸಿನಿಮಾ ಬಿಡುಗಡೆಯಾದಲ್ಲಿಂದ ದೀಪಿಕಾ ಪಡುಕೋಣೆ ನಿರಂತರವಾಗಿ ಟ್ರೋಲ್ ಆಗುತ್ತಿದ್ದಾರೆ. ದೀಪಿಕಾ ಪಡುಕೋಣೆ ಬೋಲ್ಡ್ ಕ್ಯಾರೆಕ್ಟರ್ ಹಲವರಿಗೆ ಇಷ್ಟ ಆಗಿಲ್ಲ. ಈ ಕಾರಣಕ್ಕೆ ಅತಿಯಾಗಿ ಟ್ರೋಲ್ ಆಗಿದ್ದರು. ಈಗ ಮಧ್ಯದ ಬೆರಳು ತೋರಿಸಿದ ಫೋಟೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. " ಇದನ್ನೇ ನಿಮ್ಮ ಸಿನಿಮಾ ಬಿಡುಗಡೆಯಾದ ಪ್ರೇಕ್ಷಕರು ಕೂಡ ಮಾಡುತ್ತಾರೆ." ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೂಬ್ಬರು " ಇದೇ ಕೆಲಸವನ್ನು ಮೇಲ್ ಆಕ್ಟರ್ ಮಾಡಿದ್ದರೆ, ಏನಾಗುತ್ತಿತ್ತು ಯೋಚನೆ ಮಾಡಿ." ಕಮೆಂಟ್ ಮಾಡಿದ್ದಾರೆ. " ಭಾರತೀಯ ಸಂಸ್ಕೃತಿಗೆ ಅವಮಾನ ಮಾಡಲಾಗಿದೆ. ಆ ಮೇಲೆ ಎಲ್ಲರೂ ಆಕೆ ಮಹಿಳೆ ಏನು ಬೇಕಾದರೂ ಮಾಡಬಹುದು ಎಂದು ಹೇಳುತ್ತಾರೆ." ಎಂದಿದ್ದಾರೆ.

ಶಾರುಖ್ ಧೂಮಪಾನ ಸೆರೆ

ಶಾರುಖ್ ಧೂಮಪಾನ ಸೆರೆ

ದೀಪಿಕಾ ಮಧ್ಯದ ಬೆರಳು ತೋರಿಸಿದ ಫೋಟೊದಲ್ಲಿ ಶಾರುಖ್ ಖಾನ್ ಕೂಡ ಸೆರೆಯಾಗಿದ್ದಾರೆ. ಈ ಫೋಟೊದಲ್ಲಿ ಕಿಂಗ್ ಖಾನ್ ಧೂಮಪಾನ ಮಾಡುತ್ತಾ ನಿಂತಿರುವುದು ಸೆರೆಯಾಗಿದೆ. ಕೆಲವು ದಿನಗಳ ಹಿಂದೆ ಶಾರುಖ್ ಖಾನ್ ಧೂಮಪಾನದ ಬಗ್ಗೆ ಮಾತಾಡಿದ್ದರು. "ನಾನು ಸಿನಿಮಾ ಹಾಗೂ ರಿಯಲ್ ಲೈಫ್‌ನಲ್ಲಿ ಧೂಮಪಾನ ಮಾಡುತ್ತಿರುವುದರ ಬಗ್ಗೆ ನನಗೆ ನಾಚಿಕೆಯಾಗಿದೆ. ಆದರೆ, ಧೂಮಪಾನವನ್ನು ನಿಲ್ಲಿಸಲು ನನಗೆ ಸಮಯ ಬೇಕಿದೆ. ಆದರೆ, ನನಗೆ ಸಮಯ ಸಿಗುತ್ತಿಲ್ಲ." ಎಂದು ಹೇಳಿದ್ದರು.

More from Filmibeat

English summary
Deepika Padukone shows the finger in spain while shooting Pathaan. Shah Rukh Khan chilling in the balcony. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X