'ಗೆಹರಾಯಿಯಾ' ಚಿತ್ರದ ಸೋಲನ್ನು ಸಂಭ್ರಮಿಸಿದ ಸುಶಾಂತ್ ಫ್ಯಾನ್ಸ್: ದೀಪಿಕಾ ಮೇಲ್ಯಾಕೆ ಇಷ್ಟು ಸಿಟ್ಟು?
ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ, ಅನನ್ಯಾ ಪಾಂಡೆ, ಸಿನಿಮಾ 'ಗೆಹರಾಯಿಯಾ' ಒಟಿಟಿಯಲ್ಲಿ ಪ್ರಿಮಿಯರ್ ಆಗುತ್ತಿದೆ. ಈ ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ ಚೆರ್ಚೆಗೆ ಎಡೆ ಮಾಡಿಕೊಟ್ಟಿದೆ. ಕಳೆದ ಕೆಲವು ದಿನಗಳಿಂದ ದೀಪಿಕಾ ಪಡುಕೋಣೆ ಸಹ ನಟ ಸಿದ್ಧಾಂತ್ ಚತುರ್ವೇದಿ ಜೊತೆ ಹಸಿ ಬಿಸಿ ದೃಶ್ಯಗಳಲ್ಲಿ ನಟಿಸಿದ್ದು ದೊಡ್ಡ ಮಟ್ಟಕ್ಕೆ ಚರ್ಚೆಯಾಗುತ್ತಿದೆ. ಕೆಲವು 'ಗೆಹರಾಯಿಯಾ' ಸಿನಿಮಾ ಸಮಯ ಹಾಳು ಮಾಡುತ್ತೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಹಾಗಂತ ಕೇವಲ ನೆಗೆಟಿವ್ ರಿವ್ಯೂ ಅಷ್ಟೇ ಪಾಸಿಟಿವ್ ವಿಮರ್ಶೆಗಳು ಕೂಡ ಸಿಕ್ಕಿವೆ. ಸಿನಿಮಾವನ್ನು ನೋಡಿ ಮೆಚ್ಚಿಕೊಂಡವರೂ ಇದ್ದಾರೆ. ಆದರೆ, ಈ ಮಧ್ಯೆ 'ಗೆಹರಾಯಿಯಾ' ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದನ್ನು ಕಂಡು ಸುಶಾಂತ್ ಸಿಂಗ್ ರಜಪೂತ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಟ್ವಿಟ್ಟರ್‌ನಲ್ಲಿ ದೀಪಿಕಾ ಪಡುಕೋಣೆ ಸಿನಿಮಾ ಸೋತಿದ್ದನ್ನು ಸಂಭ್ರಮಿಸಿದ್ದಾರೆ. ಅಷ್ಟಕ್ಕೂ ದೀಪಿಕಾ ಮೇಲೆ ಸುಶಾಂತ್ ಅಭಿಮಾನಿಗಳಿಗೆ ಯಾಕಿಷ್ಟು ಕೋಪ? ಟ್ವಿಟ್ಟರ್‌ನಲ್ಲಿ ಮಾಡುತ್ತಿರುವ ಕಮೆಂಟ್ ಏನು?

ಗೆಹರಾಯಿಯಾ ಪ್ಲಾಪ್ ಎಂದ ಫ್ಯಾನ್ಸ್
ದೀಪಿಕಾ ಪಡುಕೋಣೆ ಸಿನಿಮಾ 'ಗೆಹರಾಯಿಯಾ' ಮಿಶ್ರ ಪ್ರತಿಕ್ರಿಯೆ ಸಿಗುತ್ತಿದ್ದಂತೆ ಸುಶಾಂತ್ ಸಿಂಗ್ ರಜಪೂತ್ ಅಭಿಮಾನಿಗಳು ಅಖಾಡಕ್ಕೆ ಇಳಿಸಿದ್ದಾರೆ. ದೀಪಿಕಾ ಸಿನಿಮಾ ಪ್ಲಾಪ್ ಆಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮಿಸುತ್ತಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ರಣ್‌ವೀರ್ ಸಿಂಗ್ ಜಾಹೀರಾತೊಂದರಲ್ಲಿ ನಟಿಸಿದ್ದರು. ಈ ಜಾಹೀರಾತಿನಲ್ಲಿ ಸುಶಾಂತ್ ಸಿಂಗ್‌ರನ್ನು ಅಣುಕಿಸಿದ್ದರು. ಅಲ್ಲಿಂದ ಸುಶಾಂತ್ ಫ್ಯಾನ್ಸ್ ರಣ್‌ವೀರ್ ಹಾಗೂ ದೀಪಿಕಾ ಮೇಲೆ ಮುನಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ 'ಗೆಹರಾಯಿಯಾ' ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ ಟ್ವಿಟ್ಟರ್‌ನಲ್ಲಿ ಅವರೇ ಸಿನಿಮಾ ಸೋತಿದೆ ಎಂದು ಅನೌನ್ಸ್ ಮಾಡಿದ್ದಾರೆ.
ಟ್ರೆಂಡಿಂಗ್‌ನಲ್ಲಿದೆ ಬಾಯ್‌ಕಾಟ್ ಬಾಲಿವುಡ್
ದೀಪಿಕಾ ಪಡುಕೋಣೆ ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ ಬಾಯ್‌ಕಾಟ್ ಬಾಲಿವುಡ್ ಮತ್ತೆ ಟ್ರೆಂಡಿಂಗ್‌ನಲ್ಲಿದೆ. ಸುಶಾಂತ್ ಸಿಂಗ್ ರಜಪೂತ್ ಸಾವನ್ನಪ್ಪಿದ ಬಳಿಕ ಅವರ ಅಭಿಮಾನಿಗಳು ಬಾಯ್‌ಕಾಟ್ ಬಾಲಿವುಡ್ ಟ್ರೆಂಡ್ ಮೂಲಕ ಅಭಿಯಾನ ಆರಂಭಿಸಿದ್ದರು. ಈಗ ಮತ್ತೆ ಇದೇ ಟ್ರೆಂಡ್ ಆಗುತ್ತಿದೆ. 'ಗೆಹರಾಯಿಯಾ' ಒಟಿಟಿಯಲ್ಲಿ ತೆರೆಕಂಡರೂ ಅದನ್ನೂ ಸುಶಾಂತ್ ಫ್ಯಾನ್ ಬಿಡದೆ ಟ್ರೆಂಡ್ ಮಾಡುತ್ತಿದ್ದು, ಬಾಲಿವುಡ್ ವಿರುದ್ಧ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ದೀಪಿಕಾ ಗೆಹರಾಯಿಯಾಗೆ ಕಂಗನಾ ಟಾಂಗ್
ದೀಪಿಕಾ ನಟಿಸಿದ 'ಗೆಹರಾಯಿಯಾ' ಸಿನಿಮಾ ವಿರುದ್ಧ ಪರೋಕ್ಷವಾಗಿ ಕಂಗನಾ ರನೌತ್ ತಿರುಗಿಬಿದ್ದಿದ್ದಾರೆ. "ನಾನು ಸಹ ಹೊಸ ಜಮಾನದವಳೇ, ಆದರೆ ನಾನು ಈ ರೀತಿಯ ಪ್ರಣಯವನ್ನು ಅರ್ಥಮಾಡಿಕೊಳ್ಳುತ್ತೇನೆ. ಅರ್ಬನ್ ಸಿನಿಮಾ, ಹೊಸ ಜಮಾನದ ಸಿನಿಮಾ ಹೆಸರಲ್ಲಿ ಕಸವನ್ನು ಮಾರಾಟ ಮಾಡಬೇಡಿ. ಕೆಟ್ಟ ಸಿನಿಮಾಗಳು ಕೆಟ್ಟ ಸಿನಿಮಾಗಳೇ. ಸ್ಕಿನ್ ಶೋ ಅಥವಾ ಅಶ್ಲೀಲತೆ ಸಿನಿಮಾವನ್ನು ಉಳಿಸಲು ಸಾಧ್ಯವಿಲ್ಲ. ಇದರಲ್ಲಿ ಯಾವುದೂ ತೇಲಾಡಿಸುವ ಮಾತು ಸಂಗತಿ ಇಲ್ಲ." ಎಂದು ಕಂಗನಾ ಪರೋಕ್ಷವಾಗಿ ಡಿಚ್ಚಿ ಕೊಟ್ಟಿದ್ದಾರೆ.

83 ಬಿಡುಗಡೆ ವೇಳೆನೂ ಅಭಿಯಾನ
ಬಾಲಿವುಡ್ ನಟ ರಣ್‌ವೀರ್ ಸಿಂಗ್ ನಟನೆಯ '83' ಸಿನಿಮಾ ಬಿಡುಗಡೆಯಾದಾಗ, ಸಿನಿಮಾವನ್ನು ಸೋಲಿಸುವಂತೆ ರಣ್‌ವೀರ್ ಸಿಂಗ್ ಅಭಿಮಾನಿಗಳು ಕರೆ ನೀಡಿದ್ದರು. ಸುಶಾಂತ್ ಸಿಂಗ್ ಅಭಿಮಾನಿಗಳು ಬಯಸಿದಂತೆ '83' ಸಿನಿಮಾ ಸೋತಿತ್ತು. ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಹಲವು ಬಾಲಿವುಡ್ ಮಂದಿ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದ್ದಾರೆ. ರಿಯಾ ಚಕ್ರವರ್ತಿ, ದೀಪಿಕಾ, ಕರಣ್ ಜೋಹರ್, ರಣ್‌ವೀರ್ ಸಿಂಗ್ ಸೇರಿದಂತೆ ಹಲವು ಮಂದಿ ಸುಶಾಂತ್ ಫ್ಯಾನ್ಸ್ ಟಾರ್ಗೆಟ್ ಮಾಡುತ್ತಿದ್ದಾರೆ.


Click it and Unblock the Notifications











