ಶಾರುಖ್ 'ಜವಾನ್' ಸಿನಿಮಾಗೂ ಎಂಟ್ರಿ ಕೊಟ್ಟ ದೀಪಿಕಾ ಪಡುಕೋಣೆ: ಫೋಟೊ ಲೀಕ್!
ಸತತ ಸೋಲಿನ ಬಳಿಕ ಶಾರುಖ್ ಖಾನ್ ಮತ್ತೆ ಟ್ರ್ಯಾಕ್‌ಗೆ ಮರಳಿದ್ದಾರೆ. 'ಪಠಾಣ್' ಸಿನಿಮಾ ಮೂಲಕ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದು ಮತ್ತೆ ಕಿಂಗ್ ಅಂತಾನೇ ಸಾಬೀತು ಮಾಡಿದ್ದಾರೆ. ಈಗ ಮತ್ತೊಂದು ಸಿನಿಮಾ 'ಜವಾನ್' ಶೂಟಿಂಗ್ ಹಂತದಲ್ಲಿದೆ. ಈ ಸಿನಿಮಾ ಕೂಡ ಬಾಲಿವುಡ್‌ನಲ್ಲಿ ಸದ್ದು ಮಾಡುವುದಕ್ಕೆ ಶುರುವಾಗಿದೆ.
'ಜವಾನ್' ಸಿನಿಮಾಗಾಗಿ ಇಡೀ ಬಾಲಿವುಡ್ ಎದುರು ನೋಡುತ್ತಿದೆ. ತಮಿಳಿನ ಸ್ಟಾರ್ ನಿರ್ದೇಶಕ ಅಟ್ಲಿ ಇದೇ ಮೊದಲ ಬಾರಿಗೆ ಬಾಲಿವುಡ್ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅದರಲ್ಲೂ ಶಾರುಖ್ ಖಾನ್‌ಗೆ ಆಕ್ಷನ್ ಹೇಳುತ್ತಿರೋದು ಕುತೂಹಲ ಕೆರಳಿಸಿದೆ.

ಇನ್ನು ಲೇಡಿ ಸೂಪರ್‌ಸ್ಟಾರ್ ನಯನತಾರಾ 'ಜವಾನ್' ಸಿನಿಮಾದಲ್ಲಿ ಲೀಡ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಈ ಎಲ್ಲಾ ಕಾರಣಕ್ಕೆ ಉತ್ತರದಿಂದ ದಕ್ಷಿಣದವರೆಗೂ ಕೌತುಕ ಹೆಚ್ಚಾಗಿದೆ. ಈ ಗ್ಯಾಪ್‌ನಲ್ಲಿ ದೀಪಿಕಾ ಪಡುಕೋಣೆ ಕೂಡ ಅತಿಥಿ ಪಾತ್ರದ ಕಾಣಿಸುತ್ತಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ಸಾಲದ್ದಕ್ಕೆ ಫೋಟೊ ಕೂಡ ವೈರಲ್ ಆಗುತ್ತಿದೆ.
'ಜವಾನ್' ಸಿನಿಮಾದಲ್ಲಿ ದೀಪಿಕಾ ಪಡುಕೋಣೆ?
ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಮತ್ತೊಂದು ಸಿನಿಮಾ ಅದ್ಧೂರಿಯಾಗಿ ನಿರ್ಮಾಣ ಆಗುತ್ತಿದೆ. 'ಪಠಾಣ್' ಯಶಸ್ಸಿನ ಗುಂಗಿನಲ್ಲಿರೋ ಕಿಂಗ್ ಖಾನ್ ಮತ್ತೊಂದು ಬ್ಲಾಕ್ ಬಸ್ಟರ್ ಕೊಡುವುದಕ್ಕೆ ಸರ್ಕಸ್ ಮಾಡುತ್ತಿದ್ದಾರೆ. ಹೀಗಾಗಿ 'ಜವಾನ್'ಗೆ ಲಕ್ಕಿ ಗರ್ಲ್ ದೀಪಿಕಾ ಪಡುಕೋಣೆಯನ್ನು ಕರೆದುಕೊಂಡು ಬಂದಿದ್ದಾರೆ ಅನ್ನೋ ಮಾತಿದೆ. ಅದಕ್ಕೆ ಸಾಕ್ಷಿನೂ ಸಿಕ್ಕಿದೆ.
'ಜವಾನ್' ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋ ಮಾತು ಬಾಲಿವುಡ್‌ನಲ್ಲಿ ಓಡಾಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ದೀಪಿಕಾ ಹಾಗೂ ಶಾರುಖ್ ಜೊತೆ ಇರುವ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇ ಟೈಮ್ಸ್ ಪ್ರಕಾರ, 'ಜವಾನ್' ಸಿನಿಮಾದ ಹಾಡೊಂದರಲ್ಲಿ ದೀಪಿಕಾ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಶಾರುಖ್‌ಗೆ ದೀಪಿಕಾ ಲಕ್ಕಿ ಗರ್ಲ್
ಶಾರುಖ್ ಖಾನ್ ಪಾಲಿಗೆ ದೀಪಿಕಾ ಪಡುಕೋಣೆ ನಿಜಕ್ಕೂ ಲಕ್ಕಿ ಗರ್ಲ್ ಅಂತ ಸಾಬೀತಾಗಿದೆ. 'ಓಂ ಶಾಂತಿ ಓಂ' ಸಿನಿಮಾದಿಂದ ಮೊನ್ನೆ ಮೊನ್ನೆ ತೆರೆಕಂಡ 'ಪಠಾಣ್' ಸಿನಿಮಾವರೆಗೂ ಎಲ್ಲವೂ ಬ್ಲಾಕ್ ಬಸ್ಟರ್ ಲಿಸ್ಟ್ ಸೇರಿವೆ. ಈಗ 'ಜವಾನ್' ಕೂಡ ಈ ಜೋಡಿ ಮತ್ತೊಂದು ಸಕ್ಸಸ್‌ಫುಲ್ ಸಿನಿಮಾ ಆಗಬಹುದು ಅನ್ನೋ ನಿರೀಕ್ಷೆಯಲ್ಲಿದ್ದಾರೆ.
ದೀಪಿಕಾ ಪಡುಕೋಣೆ ಬಾಲಿವುಡ್‌ಗೆ ಕಾಲಿಟ್ಟ ಮೊದಲ ಸಿನಿಮಾ 'ಓಂ ಶಾಂತಿ ಓಂ' ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಇದರ ಹಿಂದೆನೇ 'ಚೆನ್ನೈ ಎಕ್ಸ್‌ಪ್ರೆಸ್', 'ಹ್ಯಾಪಿ ನ್ಯೂ ಇಯರ್' ಹಾಗೂ 'ಪಠಾಣ್' ಕೂಡ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಈಗ 'ಜವಾನ್' ಕೂಡ ಅದೇ ಲಿಸ್ಟ್ ಸೇರುತ್ತೆ ಎನ್ನಲಾಗಿದೆ.
'ಜವಾನ್' ಬಿಡುಗಡೆ ಯಾವಾಗ?
ಬಾಲಿವುಡ್‌ನಲ್ಲಿ 'ಜವಾನ್' ಸಿನಿಮಾ ಬಗ್ಗೆ ಭಾರೀ ಹೈಪ್ ಇದೆ. ಅಟ್ಲಿ ನಿರ್ದೇಶಿಸುತ್ತಿರುವ ಈ ಸಿನಿಮಾ ಟೀಸರ್ ಈಗಾಗಲೇ ಸಿನಿಪ್ರೇಮಿಗಳಿಗೆ ಸಖತ್ ಥ್ರಿಲ್ ಕೊಟ್ಟಿದೆ. ಈಗ ಶಾರುಖ್ ಖಾನ್ ಜೊತೆ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿರೋದು ಕಿಕ್ ಕೊಟ್ಟಿದೆ.
ಶಾರುಖ್ ಖಾನ್ ಅಭಿನಯದ ಈ ಸಿನಿಮಾ ಜೂನ್ 2 ರಂದು ಅದ್ಧೂರಿಯಾಗಿ ರಿಲೀಸ್ ಆಗಿದೆ. ಶಾರುಖ್ ಖಾನ್ ಜೊತೆ ಸೌತ್ ಸೂಪರ್‌ಸ್ಟಾರ್ ನಯನತಾರಾ ನಟಿಸುತ್ತಿದ್ದಾರೆ. ಇವರೊಂದಿಗೆ ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ 'ಜವಾನ್' ಬಿಡುಗಡೆಯನ್ನೇ ಎದುರು ನೋಡುತ್ತಿದ್ದಾರೆ.


Click it and Unblock the Notifications











