Deepika Padukone Bikini Pic: 'ಪಠಾಣ್' ಸಿನಿಮಾಗೆ ಹೊಸ ತಲೆನೋವು: ಶಾರುಖ್ ಬಳಿಕ ದೀಪಿಕಾ ಬಿಕಿನಿ ಫೋಟೊ ಲೀಕ್

ಬಾಲಿವುಡ್‌ನ ಬಿಗ್ ಬಜೆಟ್ ಸಿನಿಮಾಗಳು ಕಟ್ಟೆಚ್ಚರದಿಂದ ಚಿತ್ರೀಕರಣಗೊಳ್ಳುತ್ತವೆ. ಸೆಟ್ಟಲ್ಲಿ ನಡೆಯೋ ಒಂದೇ ಒಂದು ಫೋಟೊಗಳು ಅನುಮತಿಯಿಲ್ಲದೆ ಹೊರಬೀಳುವುದಿಲ್ಲ. ಆದರೆ, ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ನಟಿಸುತ್ತಿರುವ ಬಿಗ್ ಬಜೆಟ್ ಸಿನಿಮಾದಲ್ಲಿ ಒಂದಲ್ಲ ಒಂದು ಫೋಟೊ ಲೀಕ್ ಆಗುತ್ತಲೇ ಇದೆ. ಇದು ಇಡೀ ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿದೆ.

'ಪಠಾಣ್' ಶಾರುಖ್ ಖಾನ್ ಮತ್ತೆ ಕಮ್‌ ಬ್ಯಾಕ್ ಮಾಡುತ್ತಿರುವ ಸಿನಿಮಾ. ಸತತ ಸೋಲುಗಳಿಂದ ಬ್ರೇಕ್ ತೆಗೆದುಕೊಂಡಿದ್ದ ಕಿಂಗ್ ಖಾನ್, ಹೊಸ ಸ್ಕ್ರೀಪ್ಟ್ ಹುಡುಕಾಟದಲ್ಲಿದ್ದರು. ಆಗ ಸಿಕ್ಕಿದ್ದೇ 'ಪಠಾಣ್'. ಬಾಲಿವುಡ್‌ನಲ್ಲಿ ಯಶಸ್ವಿ ಸಿನಿಮಾ 'ವಾರ್' ನಿರ್ದೇಶಿಸಿದ್ದ ಸಿದ್ಧಾರ್ಥ್ ಆನಂದ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹೀಗಾಗಿ ಶಾರುಖ್ ಕಮ್‌ಬ್ಯಾಕ್ ಸಿನಿಮಾ ಬಗ್ಗೆ ನೂರೆಂಟು ಕುತೂಹಲವಿದೆ.

ಶಾರುಖ್ ಖಾನ್‌ಗೆ 'ಪಠಾಣ್' ಸಿನಿಮಾ ಗೆಲ್ಲಲೇ ಬೇಕಿದೆ. ಹೀಗಾಗಿ ಎಲ್ಲರೂ ಈ ಚಿತ್ರದ ಮೇಕಿಂಗ್ ಮೇಲೆ ಗಮನ ಹರಿಸಿದ್ದಾರೆ. ಈ ಮಧ್ಯೆ ಶಾರುಖ್ ಸಿನಿಮಾದ ಶೂಟಿಂಗ್ ಸ್ಪಾಟ್‌ನ ಒಂದೊಂದೇ ಫೋಟೊಗಳು ವೈರಲ್ ಆಗುತ್ತಿವೆ. ಮೊನ್ನೆ ತಾನೇ ಶಾರುಖ್ ಖಾನ್ ಕೆಲವು ಫೋಟೊಗಳು ಲೀಕ್ ಆಗಿದ್ದವು. ಈ ಬಾರಿ ದೀಪಿಕಾ ಪಡುಕೋಣೆ ಬಿಕಿನಿ ಫೋಟೊಗಳು ಲೀಕ್ ಆಗಿ ವೈರಲ್ ಆಗಿದೆ. ಈ ಫೋಟೊಗಳು ಬೇಕಂತಲೇ ವೈರಲ್ ಆಗುತ್ತಿವೆಯೇ? ಅಥವಾ ಸಿನಿಮಾ ತಂಡದಲ್ಲಿರುವವರೇ ಫೋಟೊಗಳನ್ನುವೈರಲ್ ಮಾಡುತ್ತಿದ್ದಾರೆಯೇ? ಎಂಬ ಅನುಮಾನ ಮೂಡಿದೆ.

ದೀಪಿಕಾ ಬಿಕಿನಿ ಫೋಟೊ ಲೀಕ್

ದೀಪಿಕಾ ಬಿಕಿನಿ ಫೋಟೊ ಲೀಕ್

ದೀಪಿಕಾ ಪಡುಕೋಣೆ ಹಾಗೂ ಶಾರುಖ್ ಖಾನ್ ಇಬ್ಬರೂ ಸದ್ಯ ಸ್ಪೇನ್‌ನಲ್ಲಿ ಇದ್ದಾರೆ. 'ಪಠಾಣ್' ಸಿನಿಮಾ ಪ್ರಮುಖ ದೃಶ್ಯಗಳನ್ನು ಸ್ಪೇನ್‌ನಲ್ಲಿ ಸೆರೆ ಹಿಡಿಯಲಾಗುತ್ತಿದೆ. ಇಲ್ಲಿ ಈ ಸಿನಿಮಾದ ಪ್ರಮುಖ ಆಕ್ಷನ್ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿದೆ. ಇದರೊಂದಿಗೆ ಹಾಟ್ ಸಾಂಗ್‌ಗಳನ್ನು ಸೆರೆಹಿಡಿಯಲಿದೆ. ಹೀಗಾಗಿ ದೀಪಿಕಾ, ಶಾರುಖ್ ಹಾಗೂ ಜಾನ್ ಅಬ್ರಹಾಂ ಈ ಮೂವರೂ ಸ್ಟಾರ್‌ಗಳೂ ಸ್ಪೇನ್‌ನಲ್ಲಿ ಬೀಡುಬಿಟ್ಟಿದ್ದಾರೆ. ಇದೇ ವೇಳೆ ದೀಪಿಕಾ ಪಡುಕೋಣೆ ಹಳದಿ ಬಿಕಿನಿಯಲ್ಲಿರುವ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಮಾಡಲಾಗಿದೆ.

ಒಂದರ ಹಿಂದೊಂದು ಫೋಟೊ ಲೀಕ್

ಒಂದರ ಹಿಂದೊಂದು ಫೋಟೊ ಲೀಕ್

ಪಠಾಣ್ ಶೂಟಿಂಗ್ ಸ್ಟಾಟ್‌ನಿಂದ ನಿರಂತರವಾಗಿ ಫೋಟೊ ಲೀಕ್ ಆಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಶಾರುಖ್ ಖಾನ್ ಶರ್ಟ್‌ ಲೆಸ್ ಫೋಟೊ ಇದೇ ಶೂಟಿಂಗ್ ಸ್ಟಾಟ್‌ನಿಂದ ವೈರಲ್ ಆಗಿತ್ತು. ಈಗ ದೀಪಿಕಾ ಪಡುಕೋಣೆಯ ಬಿಕಿನಿ ಪೋಟೊಗಳನ್ನು ಸೋರಿಕೆ ಮಾಡಿದ್ದಾರೆ. ಇದು ಸಿನಿಮಾ ತಂಡದಲ್ಲಿರುವವರದ್ದೇ ಕೆಲಸ ಇರಬಹುದು ಎಂದು ಅಂದಾಜಿಸಲಾಗಿದೆ. ದೀಪಿಕಾ ಬಿಕಿನಿ ತೊಡುವುದು ಇದೇ ಮೊದಲೇನಲ್ಲ. ಹಲವು ಸಿನಿಮಾಗಳಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಶೂಟಿಂಗ್ ಮಾಡುವ ಸ್ಥಳದಿಂದಲೇ, ಸಿನಿಮಾದ ಪ್ರಮುಖ ದೃಶ್ಯದ ಫೋಟೊಗಳು ಲೀಕ್ ಮಾಡುವುದನ್ನು ಚಿತ್ರತಂಡ ಸಹಿಸಿಕೊಳ್ಳುವುದಿಲ್ಲ. ಹೀಗಾಗಿ ಇದು ಸಿನಿಮಾ ತಂಡದಲ್ಲಿರುವ ವ್ಯಕ್ತಿಯದ್ದೇ ಕೆಲಸನಾ? ಇಲ್ಲಾ ಸಿನಿಮಾ ತಂಡನೇ ಈ ಕೆಲಸಕ್ಕೆ ಮುಂದಾಗಿದ್ಯಾ ಅನ್ನೋದು ಹೊರಬೀಳಬೇಕಿದೆ.

ದೀಪಿಕಾ ಬಗ್ಗೆ ಪತಿ ರಣ್‌ವೀರ್ ಏನಂತಾರೆ?

ದೀಪಿಕಾ ಬಗ್ಗೆ ಪತಿ ರಣ್‌ವೀರ್ ಏನಂತಾರೆ?

ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದ ರಣ್‌ವೀರ್ ಸಿಂಗ್, 'ಪಠಾಣ್' ಸಿನಿಮಾದ ಗ್ಲಾಮರ್ ಸಾಂಗ್ ಬಗ್ಗೆ ಮಾತಾಡಿದ್ದರು. ಈ ಹಾಟ್ ಸಾಂಗ್‌ ಅನ್ನು ಸ್ಪೇನ್‌ನಲ್ಲಿ ಶೂಟ್ ಮಾಡುತ್ತಿದ್ದಾರೆ. "ನನ್ನ ಪತ್ನಿ ದೀಪಿಕಾ ಊರಲ್ಲಿ ಇಲ್ಲ. ಯಶ್ ರಾಜ್ ಬ್ಯಾನರ್‌ನ ಅದ್ಧೂರಿ ಸಿನಿಮಾದ ಶೂಟಿಂಗ್‌ಗೆ ಸ್ಪೇನ್‌ಗೆ ಹೋಗಿದ್ದಾರೆ. ಕಿಂಗ್ ಶಾರುಖ್ ಖಾನ್ ಹಾಗೂ ಜಾನ್‌ ಅಬ್ರಹಾಂ ಜೊತೆ ನಟಿಸುತ್ತಿದ್ದಾರೆ. ಈ ವೇಳೆ ನನ್ನ ಪತ್ನಿ ಜಾನ್ ಅಬ್ರಾಹಂ ದೇಹದಾಡ್ಯತೆ ಬಗ್ಗೆ ಹೇಳಿದ್ದಳು." ಎಂದು ರಣ್‌ವೀರ್ ಸಿಂಗ್ ಹೇಳಿದ್ದರು.

ಮತ್ತೆ ಶಾರುಖ್-ದೀಪಿಕಾ ಜೋಡಿ

ಮತ್ತೆ ಶಾರುಖ್-ದೀಪಿಕಾ ಜೋಡಿ

ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಹಲವು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಶಾರುಖ್ ಸಿನಿಮಾ 'ಓಂ ಶಾಂತಿ ಓಂ' ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿಕೊಟ್ಟಿದ್ದ ದೀಪಿಕಾ ಇದೂವರೆಗೂ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಚೆನ್ನೈ ಎಕ್ಸ್‌ಪ್ರೆಸ್' ಹಾಗೂ 'ಹ್ಯಾಪಿ ನ್ಯೂ ಇಯರ್' ಸಿನಿಮಾಗಳು ಹಿಟ್ ಆಗಿವೆ. ಈಗ ನಾಲ್ಕನೇ ಸಿನಿಮಾ 'ಪಠಾಣ್' ಕೂಡ ಬಾಕ್ಸಾಫೀಸ್‌ನಲ್ಲಿ ಜಾದು ಮಾಡುತ್ತೆ ಅನ್ನುವ ನಿರೀಕ್ಷೆಯಲ್ಲಿಯೇ ಇದೆ. ಆದರೆ, ಶೂಟಿಂಗ್ ವೇಳೆನೇ ಒಂದಲ್ಲ ಒಂದು ಪೋಟೊಗಳು ಲೀಕ್ ಆಗುತ್ತಿರುವುದು ಚಿತ್ರತಂಡಕ್ಕೆ ದೊಡ್ಡ ತಲೆ ನೋವಾಗಿದೆ.

More from Filmibeat

English summary
Deepika Padukone Yellow Bikini viral Photos leaked from Pathaan see here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X