ಬಾಕ್ಸಾಫೀಸ್‌ನಲ್ಲಿ ದೀಪಿಕಾ ಸಿನಿಮಾಗಳ ಕಲೆಕ್ಷನ್ ₹8700 ಕೋಟಿ; ಶಾರುಖ್, ಆಮಿರ್, ಸಲ್ಮಾನ್ ಲೆಕ್ಕಕ್ಕಿಲ್ಲ

ನಟಿ ದೀಪಿಕಾ ಪಡುಕೋಣೆ ಬಾಲಿವುಡ್‌ನ ಲೇಡಿ ಸೂಪರ್‌ಸ್ಟಾರ್ ಅನ್ನುವುದರಲ್ಲಿ ಅನುಮಾನವೇ ಇಲ್ಲ. ಮದುವೆ ಬಳಿಕವೂ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟಿಯೀಕೆ. ಶಾರುಖ್ ಖಾನ್, ಹೃತಿಕ್ ರೋಷನ್, ಅಕ್ಷಯ್ ಕುಮಾರ್, ರಣ್‌ಬೀರ್ ಕಪೂರ್ ಅಂತಹ ಸೂಪರ್‌ಸ್ಟಾರ್‌ಗಳ ಲಕ್ಕಿ ನಟಿಯಾಗಿದ್ದಾರೆ.

ಕಳೆದ ಒಂದೂವರೆ ದಶಕಗಳಿಂದ ಬಾಲಿವುಡ್‌ನಲ್ಲಿ ಈ ಸೂಪರ್‌ಸ್ಟಾರ್‌ಗಳು ಕೊಟ್ಟ ಮೆಗಾ ಬ್ಲಾಕ್‌ ಬಸ್ಟರ್ ಸಿನಿಮಾಗಳಲ್ಲಿ ಒಂದರಲ್ಲಾದರೂ ದೀಪಿಕಾ ಪಡುಕೋಣೆ ನಟಿಸಿದ್ದಾರೆ. 2007ರಲ್ಲಿ ಶಾರುಖ್ ಖಾನ್ ನಟಿಸಿದ 'ಓಂ ಶಾಂತಿ ಓಂ' ಸಿನಿಮಾ ಮೂಲಕ ಬಾಲಿವುಡ್ ಜರ್ನಿ ಆರಂಭ ಆಗಿತ್ತು. ಅಲ್ಲಿಂದ ದೀಪಿಕಾ ಪಡುಕೋಣೆಗೆ ಮತ್ತೆ ಹಿಂತಿರುಗಿ ನೋಡುವ ಪ್ರಸಂಗವೇ ಬರಲಿಲ್ಲ.

Deepika Padukone s Bollywood movie box office collection report from Om Shanti Om to Fighter

ಇತ್ತೀಚೆಗೆ ಇಂಟರ್‌ನೆಟ್ ಮೂವಿ ಡಾಟಾ ಬೇಸ್ (IMDb)ಇತ್ತೀಚೆಗೆ ದೊಡ್ಡ ಪಟ್ಟಿಯೊಂದನ್ನು ರಿಲೀಸ್ ಮಾಡಿದೆ. ಕಳೆದ 10 ವರ್ಷಗಳಲ್ಲಿ ಅತೀ ಹೆಚ್ಚು ವೀಕ್ಷಣೆ ಮಾಡಲ್ಪಟ್ಟ 100 ಭಾರತೀಯ ನಟರ ಪಟ್ಟಿಯನ್ನು ರಿಲೀಸ್ ಮಾಡಲಾಗಿದೆ. ಅದರಲ್ಲೂ ದೀಪಿಕಾ ಪಡುಕೋಣೆ ನಂ 1 ಸ್ಥಾನದಲ್ಲಿ ಇದ್ದಾರೆ. ಹಾಗಿದ್ದರೆ, 17 ವರ್ಷಗಳಲ್ಲಿ ದೀಪಿಕಾ ಸಕ್ಸಸ್ ರೇಟ್ ಹೇಗಿದೆ? ನಟಿಸಿದ ಒಟ್ಟು ಬಾಲಿವುಡ್ ಸಿನಿಮಾಗಳೆಷ್ಟು? ಬಾಕ್ಸಾಫೀಸ್ ಕಲೆಕ್ಷನ್ ಹೇಗಿದೆ? ತಿಳಿಯು ಮುಂದೆ ಓದಿ.

IMDb ರಿಲೀಸ್ ಮಾಡಿದ ಈ ಟಾಪ್ 100 ನಟರ ಪಟ್ಟಿಯ ಮೊದಲ 10 ಸ್ಥಾನಗಳಲ್ಲಿ ಬಾಲಿವುಡ್ ಸ್ಟಾರ್‌ಗಳ ಹೆಸರೇ ಇದೆ. 2014 ರಿಂದ 2024 ಒಟ್ಟು ಹತ್ತು ವರ್ಷಗಳ ಅವಧಿಯಲ್ಲಿ ಅತೀ ಹೆಚ್ಚು ವೀಕ್ಷಿಸಲ್ಪಟ್ಟ ಭಾರತೀಯ ಸ್ಟಾರ್‌ಗಳಲ್ಲಿ ದೀಪಿಕಾ ಪಡುಕೋಣೆ ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ಶಾರುಖ್ ಖಾನ್, ಆಮಿರ್ ಖಾನ್, ಸಲ್ಮಾನ್ ಖಾನ್‌ರನ್ನೇ ಹಿಂದಿಕ್ಕಿದ್ದಾರೆ.

Deepika Padukone s Bollywood movie box office collection report from Om Shanti Om to Fighter

ಶಾರುಖ್ ಖಾನ್ ಎರಡನೇ ಸ್ಥಾನದಲ್ಲಿದ್ದರೆ, ಐಶ್ವರ್ಯಾ ರೈಗೆ ಮೂರನೇ ಸ್ಥಾನ ಸಿಕ್ಕಿದೆ. ಆಮಿರ್ ಖಾನ್ 6, ಸಲ್ಮಾನ್ ಖಾನ್ 8, ಹೃತಿಕ್ ರೋಷನ್ 9 ಹಾಗೂ ಅಕ್ಷಯ್ ಕುಮಾರ್ 10ರಲ್ಲಿ ಸ್ಥಾನ ಪಡೆದಿದ್ದಾರೆ. ಹಾಗೇ ಈ 100ರ ಪಟ್ಟಿಯಲ್ಲಿ ಕನ್ನಡ ಏಕೈಕ ನಟ ರಾಕಿಂಗ್ ಸ್ಟಾರ್ ಯಶ್ ಸ್ಥಾನ ಪಡೆದಿದ್ದು, 89ನೇ ಸ್ಥಾನದಲ್ಲಿದ್ದಾರೆ.

ಇನ್ನು ಕಳೆದ 10 ವರ್ಷಗಳಲ್ಲಿ ಇವೆಲ್ಲರಿಗಿಂತ ನಟಿ ದೀಪಿಕಾ ಪಡುಕೋಣೆ ಸಕ್ಸಸ್ ರೇಟ್ ಹೆಚ್ಚಿದೆ. ಕನ್ನಡದಲ್ಲಿ 'ಐಶ್ವರ್ಯಾ' ಸಿನಿಮಾದಲ್ಲಿ ನಟಿಸಿದ ಬಳಿಕ ದೀಪಿಕಾ ಪಡುಕೋಣೆ ಬಾಲಿವುಡ್‌ಗೆ ಹಾರಿದ್ದರು. ಮೊದಲ ಸಿನಿಮಾ 'ಓಂ ಶಾಂತಿ ಓಂ' ಮೂಲಕವೇ ಸಕ್ಸಸ್ ಸಿಕ್ಕಿತ್ತು. 17 ವರ್ಷಗಳ ಹಿಂದೆನೇ ಈ ಸಿನಿಮಾ 150 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.

ಇನ್ನು 2013ರಿಂದ ದೀಪಿಕಾ ಸಿನಿಮಾಗಳ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವುದಕ್ಕೆ ಶುರು ಮಾಡಿವೆ. ಶಾರುಖ್ ಖಾನ್ ಜೊತೆ ನಟಿಸಿದ 'ಚೆನ್ನೈ ಎಕ್ಸ್‌ಪ್ರೆಸ್', 'ಯೇ ಜವಾನಿ ಹೇ ದಿವಾನಿ', 'ಗೋಲಿಯೊಂಕಿ ರಾಸ್‌ಲೀಲಾ', 'ಹ್ಯಾಪಿ ನ್ಯೂ ಇಯರ್', 'ಬಾಜಿರಾವ್ ಮಸ್ತಾನಿ' ಅಂತ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿಮೆಗಾ ಹಿಟ್ ಅಂತ ಅನಿಸಿಕೊಂಡಿದ್ದವು.

ಈ ಮಧ್ಯೆ ಹಾಲಿವುಡ್‌ನ 'XXX:ದಿ ರಿಟರ್ನ್ ಆಫ್ ಕ್ಸಾಂಡರ್ ಕೇಜ್' ಅನ್ನುವ ಸಿನಿಮಾದಲ್ಲಿ ನಟಿಸಿದ್ದರು. ಇದು ಬಾಕ್ಸಾಫೀಸ್‌ನಲ್ಲಿ 345 ಮಿಲಿಯನ್ ಡಾಲರ್ ಕಲೆಕ್ಷನ್ ಮಾಡಿತ್ತು. ಕಳೆದ ವರ್ಷ ಅಷ್ಟೇ ತೆರೆಕಂಡಿದ್ದ 'ಪಠಾಣ್' ಹಾಗೂ 'ಜವಾನ್' ಈ ಎರಡೂ ಸಿನಿಮಾ ಸಾವಿರ ಕೋಟಿ ದಾಟಿದ್ದವು. ಹೀಗಾಗಿ ದೀಪಿಕಾ ಪಡುಕೋಣೆ ನಟಿಸಿದ ಸಿನಿಮಾಗಳ ಒಟ್ಟು ಕಲೆಕ್ಷನ್ 8700 ಕೋಟಿ ರೂಪಾಯಿ ಎಂದು ಡಿಎನ್‌ಎ ವರದಿ ಮಾಡಿದೆ.

More from Filmibeat

English summary
Actress Deepika Padukone's Bollywood success story;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X