ದೀಪಿಕಾ ಪಡುಕೋಣೆ ವಾಕ್ ಆಫ್ ಫೇಮ್‌ನ ವಾರ್ಷಿಕ ಶುಲ್ಕ ₹73 ಲಕ್ಷ; ಇದು ನಿಜವೇ?
ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಮದುವೆ ಬಳಿಕವೂ ಸಿಕ್ಕಾಪಟ್ಟೆ ಬ್ಯುಸಿ. ಅಲ್ಲಿನ ಸೂಪರ್‌ಸ್ಟಾರ್‌ಗಳಿಗೆ ದೀಪಿಕಾ ಒಂಥರಾ ಲಕ್ಕಿ ಲೇಡಿ ಇದ್ದಂತೆ. ಈ ನಟಿ ಇತ್ತೀಚೆಗೆ ನಟಿಸಿದ ಸಿನಿಮಾಗಳಂತೂ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ಈ ಮೂಲಕ ದಿನದಿಂದ ದಿನಕ್ಕೆ ಇವರ ಜನಪ್ರಿಯತೆ ಹೆಚ್ಚಾಗುತ್ತಾಲೇ ಇದೆ. ಈ ಗ್ಯಾಪ್‌ನಲ್ಲಿ ಡಿಂಪಲ್ ಕ್ವೀನ್ ದೀಪಿಕಾ ಅಂತರಾಷ್ಟ್ರೀಯ ಮಟ್ಟದ ಗೌರವಕ್ಕೆ ಪಾತ್ರರಾಗಿದ್ದಾರೆ.
ಹೌದು, ಹಾಲಿವುಡ್‌ನ ವಾಕ್ ಆಫ್ ಫೇಮ್ ಪಟ್ಟಿಯಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೆಸರು ದಾಖಲಾಗಿದೆ. ಈ ಗೌರವಕ್ಕೆ ಪಾತ್ರರಾಗಿರುವ ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆಯನ್ನು ದೀಪಿಕಾ ಪಡುಕೋಣೆ ಪಾಲಾಗಿದೆ. 2026ರ ಮೋಷನ್ ಪಿಕ್ಚರ್ಸ್ ವಿಭಾಗದಲ್ಲಿ ದೀಪಿಕಾ ಪಡುಕೋಣೆಯ ಹೆಸರು ಆಯ್ಕೆ ಮಾಡಲಾಗಿದೆ. ಪ್ರತಿ ವರ್ಷ ಆಯ್ಕೆ ಆಗುವ ಕೆಲವೇ ಕೆಲವು ತಾರೆಯರಲ್ಲಿ ದೀಪಿಕಾ ಪಡುಕೋಣೆ ಕೂಡ ಒಬ್ಬರಾಗಿದ್ದಾರೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ದೀಪಿಕಾ ಪಡುಕೋಣೆಗೆ ಗೌರವ ಸಿಕ್ಕಿದ್ದಕ್ಕೆ ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಆದರೆ, ಈ ಖುಷಿಯ ವಿಷಯದೊಂದಿಗೆ ಅಚ್ಚರಿಯ ಸಂಗತಿಯೊಂದು ವರದಿಯಾಗಿದೆ. ಮನಿ ಕಂಟ್ರೋಲ್ ಮಾಡಿದ ವರದಿಯ ಪ್ರಕಾರ, ದೀಪಿಕಾ ಪಡುಕೋಣೆ ಹಾಲಿವುಡ್‌ನ ವಾಕ್ ಆಫ್ ಫೇಮ್ ಅನ್ನು ನಿರ್ವಹಣೆ ಮಾಡುವುದಕ್ಕೆ ವರ್ಷಕ್ಕೆ ₹73 ಲಕ್ಷ ರೂಪಾಯಿ ಶುಲ್ಕವನ್ನು ನೀಡಬೇಕಿದೆ.
ದೀಪಿಕಾ ಪಡುಕೋಣೆ ಹಾಲಿವುಡ್ ವಾಕ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿರುವುದೇನೋ ಸರಿ. ಆದರೆ, ಬಾಲಿವುಡ್ ನಟಿ ಸ್ಪಾನ್ಸರ್‌ಶಿಫ್ ಫೀ ಎಂದು ದೊಡ್ಡ ಮೊತ್ತವನ್ನೇ ಕಟ್ಟಬೇಕಿದೆ. ಇದರ ನಿರ್ವಹಣೆ ಹಾಗೂ ಇನ್‌ಸ್ಟಾಲೇಷನ್‌ಗೆ ದುಬಾರಿ ವೆಚ್ಚ ತಗುಲುತ್ತಿದೆ. ಸದ್ಯಕ್ಕೆ ಇರುವ ವಾರ್ಷಿಕ ಶುಲ್ಕ 85 ಸಾವಿರ ಡಾಲರ್ ಎಂದು ಹೇಳಲಾಗಿದೆ. ಅಂದರೆ, ಭಾರತದ 73 ಲಕ್ಷ ರೂಪಾಯಿ ಸಮ. ಇದರಲ್ಲಿ ನಿರ್ವಹಣೆ ಹಾಗೂ ಇನ್‌ಸ್ಟಾಲೇಷನ್ ವೆಚ್ಚ ಸೇರಿಕೊಂಡಿದೆ.
ಯುಎಸ್‌ಎಯ ಲಾಸ್ ಏಂಜಲೀಸ್‌ನ ಹಾಲಿವುಡ್ ಬೌಲೆವಾರ್ಡ್‌ನಲ್ಲಿರುವ ಹಾಲಿವುಡ್‌ನ ವಾಕ್ ಆಫ್ ಫೇಮ್ ಒಂದು ಪ್ರತಿಷ್ಠಿತ ಲ್ಯಾಂಡ್‌ಮಾರ್ಕ್. ಇದರಲ್ಲಿ ಈಗಾಗಲೇ ಸುಮಾರು 2700ಕ್ಕೂ ಅಧಿಕ ಸೆಲೆಬ್ರೆಟಿಗಳು ಇದ್ದಾರೆ. ಇಲ್ಲಿನ ನೆಲದ ಮೇಲೆ ನಕ್ಷತ್ರವನ್ನು ಸೃಷ್ಟಿಸಿ, ಅದರೊಳಗೆ ತಾರೆಯರ ಹೆಸರನ್ನು ಬರೆಯಲಾಗುತ್ತೆ. 2026ನೇ ಸಾಲಿನಲ್ಲಿ ದೀಪಿಕಾ ಪಡುಕೋಣೆಯ ಹೆಸರು ಕೂಡ ಕಾಣಿಸಿಕೊಳ್ಳಲಿದೆ.
ಇನ್ನು ಈ ಗೌರವವನ್ನು ಮನರಂಜನೆ ವಿಭಾಗದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದವರಿಗೆ ನೀಡಲಾಗುತ್ತೆ. ಈ ವರ್ಷ ಜೂನ್ 20ರಂದು ಹಾಲಿವುಡ್ ಚೇಂಬರ್ ಆಫ್ ಕಾಮರ್ಸ್‌ನಲ್ಲಿ ಸಭೆಯನ್ನು ನಡೆಲಾಗಿತ್ತು. ಪ್ರತಿ ವರ್ಷ ಈ ವಾಕ್ ಆಫ್ ಫೇಮ್‌ಗೆ ಸುಮಾರು 200 ರಿಂದ 300 ನಾಮಿನೇಷನ್‌ಗಳು ಬರುತ್ತವೆ. ಅವುಗಳಲ್ಲಿ 35 ಹೆಸರುಗಳನ್ನು ಆಯ್ಕೆ ಮಾಡಲಾಗಿತ್ತು. ಆ ಹೆಸರುಗಳಲ್ಲಿ ದೀಪಿಕಾ ಪಡುಕೋಣೆ ಹೆಸರಿದ್ದು, ಭಾರತದ ಮೊದಲ ನಟಿ ಎನಿಸಿಕೊಂಡಿದ್ದಾರೆ.
ನಟಿ ದೀಪಿಕಾ ಪಡುಕೋಣೆ ಜೊತೆ ಹಾಲಿವುಡ್ ವಾಕ್ ಆಫ್ ಫೇಮ್ ಗೌರವಕ್ಕೆ ಬೇರೆ ವಿಭಾಗದಿಂದ ಆಯ್ಕೆಯಾಗಿದ್ದಾರೆ. ಹಾಲಿವುಡ್ ಚೇಂಬರ್ ಆಫ್ ಕಾಮರ್ಸ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಜನಪ್ರಿಯ ಹೆಸರುಗಳು ಇವೆ. ದೀಪಿಕಾ ಜೊತೆಗೆ ಎಮಿಲಿ ಬ್ಲಂಟ್, ಟಿಮೋಥೆ ಚಲಮೆಟ್, ಡೆಮಿ ಮೂರ್, ರಾಚೆಲ್ ಮ್ಯಾಕ್ ಆಡಮ್ಸ್, ರಾಮಿ ಮಲೆಕ್ ಮತ್ತು ಸ್ಟಾನ್ಲಿ ಟುಸಿ ಸೇರಿದಂತೆ ಇನ್ನೂ ಹಲವು ಹೆಸರಗಳನ್ನು ಪಟ್ಟಿ ಮಾಡಿ ಗೌರವ ಸೂಚಿಸಲು ಮುಂದಾಗಿದೆ. ದೀಪಿಕಾ ಪಡುಕೋಣೆ ಬಾಲಿವುಡ್‌ನಲ್ಲಿ ತನ್ನದೇ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದು, ಮದುವೆ ಮಗು ಬಳಿಕವೂ ಆಕ್ಟಿವ್ ಆಗಿದ್ದಾರೆ. ನಟನೆ ಜೊತೆಗೆ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ.


Click it and Unblock the Notifications











