ನನಗೆ ದೊರೆತ ಗ್ರೇಟೆಸ್ಟ್ ಹೀರೋ: ಅಪ್ಪನ ಕುರಿತು ದೀಪಿಕಾ ಭಾವುಕ ಮಾತು

ಭಾರತ ಕಂಡ ಅಪೂರ್ವ ಬ್ಯಾಡ್ಮಿಂಟನ್ ತಾರೆಯರಲ್ಲಿ ಒಬ್ಬರಾದ ಪ್ರಕಾಶ್ ಪಡುಕೋಣೆ ಅವರ ಜನ್ಮದಿನ ಇಂದು (ಜೂನ್ 10). ಪ್ರಕಾಶ್ ಪಡುಕೋಣೆ ಮಗಳು ಎಂದು ಆರಂಭದಲ್ಲಿ ಪರಿಚಿತರಾದ ದೀಪಿಕಾ ಪಡುಕೋಣೆ, ಈಗ ತಮ್ಮ ಹೆಸರಿನ ಮೂಲಕ ತಂದೆಯನ್ನು ಗುರುತಿಸುವಂತೆ ಬೆಳೆದಿದ್ದಾರೆ.

65ನೇ ವರ್ಷಕ್ಕೆ ಕಾಲಿರಿಸಿರುವ ತಂದೆಯ ಜನ್ಮದಿನದಂದು ದೀಪಿಕಾ ಪಡುಕೋಣೆ ಅವರಿಗೆ ಚೆಂದದ ಸಾಲುಗಳಲ್ಲಿ ಶುಭ ಹಾರೈಸಿದ್ದಾರೆ. ಅಪ್ಪನೊಂದಿಗೆ ಬಾಲ್ಯದಲ್ಲಿ ತೆಗೆಸಿಕೊಂಡ ಮುದ್ದಾದ ಫೋಟೊವನ್ನು ಕೂಡ ಹಂಚಿಕೊಂಡಿದ್ದಾರೆ.

ನಾನು ತೆರೆಯ ಆಚೆಗೆ ಇದುವರೆಗೆ ಪಡೆದಿರುವ ಗ್ರೇಟೆಸ್ಟ್ ಹೀರೋ ಎಂದು ತಂದೆಯನ್ನು ಬಣ್ಣಿಸಿದ್ದಾರೆ. ನಿಜವಾದ ಚಾಂಪಿಯನ್ ಎನ್ನುವುದು ಒಬ್ಬರ ವೃತ್ತಿಪರ ಸಾಧನೆಗಳಷ್ಟೇ ಅಲ್ಲದೆ, ಉತ್ತಮ ಮಾನವೀಯ ವ್ಯಕ್ತಿಯಾಗಿರುವುದೂ ನೈಜ ಚಾಂಪಿಯನ್‌ನ ಎಂಬುದನ್ನು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.

 Deepika Shares Throwback Picture To Wish Father Prakash Padukone On Birthday

ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಪ್ರಕಾಶ್ ಪಡುಕೋಣೆ ಮಾರ್ಚ್‌ನಲ್ಲಿ 40 ವರ್ಷ ಪೂರೈಸಿದ ಸಂಭ್ರಮವನ್ನು ದೀಪಿಕಾ ಹಂಚಿಕೊಂಡಿದ್ದರು. 'ಪಪ್ಪಾ, ಬ್ಯಾಡ್ಮಿಂಟನ್ ಮತ್ತು ಭಾರತೀಯ ಕ್ರೀಡೆಗೆ ನೀವು ನೀಡಿರುವ ಕಾಣಿಕೆಯನ್ನು ಅಳತೆ ಮಾಡಲಾಗದ್ದು. ನಿಮ್ಮ ಬದ್ಧತೆ, ಶಿಸ್ತು, ಛಲ ಮತ್ತು ವರ್ಷಗಟ್ಟಲೆ ಕಠಿಣ ಪರಿಶ್ರಮದ ಮೂಲಕ ಸ್ಫೂರ್ತಿ ತುಂಬಿದ್ದಕ್ಕೆ ಧನ್ಯವಾದಗಳು' ಎಂದು ಬರೆದುಕೊಂಡಿದ್ದರು.

More from Filmibeat

English summary
Bollywood actress Deepika Padukone shared a childhood picture with her father Prakash Padukone to wish him on birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X