ದೀಪಿಕಾ ಪಡುಕೋಣೆ ಬ್ಯೂಟಿ ಬ್ರಾಂಡ್‌ ವಿರುದ್ಧದ ಮೊಕದ್ದಮೆ; ನಟಿಗೆ ದೆಹಲಿ ಹೈಕೋರ್ಟ್ ರಿಲೀಫ್!

ದೀಪಿಕಾ ಪಡುಕೋಣೆ ಕೇವಲ ನಟಿಯಷ್ಟೇ ಅಲ್ಲ. ಉದ್ಯಮಿ ಕೂಡ ಹೌದು. ಅವರದ್ದೇ ಆದ ಸೌಂದರ್ಯ ವರ್ಧಕಗಳ ಕಂಪನಿ ಕೂಡ ತೆರೆದಿರೋದು ಗೊತ್ತಿದೇ ಇದೆ. ಇತ್ತೀಚೆಗೆ ಲೋಟಸ್ ಹರ್ಬಲ್ ಅನ್ನುವ ಕಂಪನಿ ದೀಪಿಕಾ ಪಡುಕೋಣೆಯ ಕಂಪನಿ ತಯಾರಿಸುತ್ತಿರುವ 'ಲೋಟಸ್ ಸ್ಪ್ಲಾಶ್' ಅನ್ನುವ ಫೇಸ್ ವಾಶ್ ಉತ್ಪನ್ನದ ವಿರುದ್ಧ ಟ್ರೇಡ್ ಮಾರ್ಕ್ ಉಲ್ಲಂಘನೆ ಮೊಕದ್ದಮೆಯನ್ನು ದಾಖಲಿಸಲಾಗಿತ್ತು.

ದೆಹಲಿ ಹೈ ಕೋರ್ಟ್ ದೀಪಿಕಾ ಪಡುಕೋಣೆಯ 'ಲೋಟಸ್ ಸ್ಪ್ಲಾಶ್' ಉತ್ಪನ್ನದ ವಿರುದ್ಧ ಮಧ್ಯಂತರ ತಡೆಯಾಜ್ಞೆ ಆದೇಶವನ್ನು ನೀಡಲು ನಿರಾಕರಿಸಿದೆ. ಟ್ರೇಡ್ ಮಾರ್ಕ್ ಉಲ್ಲಂಘನೆ ಮೊಕದ್ದಮೆಯನ್ನು ದೆಹಲಿ ಹೈ ಕೋರ್ಟ್ ತಳ್ಳಿ ಹಾಕಿದೆ. ಈ ಮೂಲಕ ದೀಪಿಕಾ ಪಡುಕೋಣೆ ರಿಲೀಫ್ ಸಿಕ್ಕಂತೆ ಆಗಿದೆ.

Delhi High Court rejects to stop Deepika Padukone company from using mark Lotus Splash

ಎರಡು ಉತ್ಪನ್ನಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಪ್ರಾಡಕ್ಟ್‌ನ ಬೆಲೆಯಲ್ಲೂ ಸಾಕಷ್ಟು ಅಂತರವಿದೆ. ಎರಡೂ ಪ್ರಾಡಕ್ಟ್‌ಗಳ ಸಾಮಾನ್ಯ ಅಂಶವೆಂದರೆ 'ಲೋಟಸ್' ಎನ್ನುವ ಪದ ಅಷ್ಟೇ ಎಂದು ದೆಹಲಿಯ ಕೈಕೋರ್ಟ್‌ನ ನ್ಯಾಯಮೂರ್ತಿ ಸಿ ಹರಿ ಶಂಕರ್ ತಮ್ಮ ಆದೇಶದಲ್ಲಿ ಹೇಳಿದ್ದಾರೆ.

" ಈ ಉತ್ಪನ್ನಗಳನ್ನು ಬಳಸುವ ಗ್ರಾಹಕನಿಗೆ ಎರಡು ಉತ್ಪನ್ನಗಳಲ್ಲಿ ಇರುವ ವ್ಯತ್ಯಾಸ ಗೊತ್ತಿದೆ. ದೀಪಿಕಾ ಪಡುಕೋಣೆಯ 'ಲೋಟಸ್ ಸ್ಪ್ಲಾಶ್' ಹಾಗೂ ದೂರದಾರನ ಲೋಟಸ್ ಸಮೂಹ ಕಂಪನಿಗಳ ಉತ್ಪನ್ನದ ಬಗ್ಗೆ ಅವರಿಗೆ ಅರಿವಿರುತ್ತೆ. 'ಲೋಟಸ್ ಸ್ಪ್ಲಾಶ್' ಹೆಸರಿಟ್ಟು ದೂರುದಾರನ ಉತ್ಪನ್ನವನ್ನು ಹಿಂದಿಕ್ಕುವ ಉದ್ದೇಶ ಕಾಣುತ್ತಿಲ್ಲ" ಎಂದು ತಮ್ಮ ಆದೇಶದಲ್ಲಿ ನ್ಯಾಯಮೂರ್ತಿ ತಿಳಿಸಿದ್ದಾರೆ.

"ಆರೋಪ ಮಾಡುತ್ತಿರುವ ಉತ್ಪನ್ನದ ಮೇಲೆ ಲೋಟಸ್ ಸ್ಪ್ಲಾಶ್ ಅನ್ನುವ ಹೆಸರಿದ್ದರೂ, ಬಾಟಲ್‌ನ ಕೆಳಭಾಗದಲ್ಲಿ 82°E ಅನ್ನೋ ಹೆಸರು ಇದೆ. ಈ ಉತ್ಪನ್ನವನ್ನು ಬ್ಯೂಟಿ ಸಲೂನ್ ಅಥವಾ ಮಾರಾಟ ಮಾಡುವ ಕಡೆ ಪ್ರದರ್ಶನಕ್ಕೆ ಇಟ್ಟರೆ, ಬಳಕೆದಾರಿಗೆ ಗುರುತು ಸಿಗುತ್ತದೆ. ಅಲ್ಲದೆ ಈ ಉತ್ಪನ್ನದ ಮೇಲೆ ಏನೇನಿದೆ ಅನ್ನೋನ್ನು ಹಾಕಿದ್ದಾರೆ. ಹೀಗಾಗಿ ಈ ಉತ್ಪನ್ನ ವಿವಾದಕ್ಕೆ ಎಡೆ ಮಾಡಿಕೊಡುವುದಿಲ್ಲ." ಎಂಬರ್ಥದಲ್ಲಿ ನ್ಯಾಯಮೂರ್ತಿಗಳು ಹೇಳಿದ್ದಾರೆ.

Delhi High Court rejects to stop Deepika Padukone company from using mark Lotus Splash

ಲೋಟಸ್ ಹರ್ಬಲ್ ಅನ್ನುವ ಕಂಪನಿ ದೀಪಿಕಾ ಪಡುಕೋಣೆ ಒಡೆತನದ ಡಿಪಿಕೆಎ ಯುನಿವರ್ಸಲ್ ಕನ್‌ಸ್ಯೂಮರ್ ವೆಂಚರ್ಸ್ ಪ್ರೈವೆಟ್ ಲಿಮಿಟೆಡ್ ವಿರುದ್ಧ ಅದರ ಉತ್ಪನ್ನದ ಮೇಲೆ 'ಲೋಟಸ್' ಅನ್ನುವ ಪದವನ್ನು ಪರ್ಮನೆಂಟ್ ತೆಗೆದ ಹಾಕುವಂತೆ ನ್ಯಾಯಾಲಯದಲ್ಲಿ ದೂರನ್ನು ದಾಖಲಿಸಲಾಗಿತ್ತು. ಇದರಲ್ಲಿ ದೀಪಿಕಾ ಪಡುಕೋಣೆಗೆ ರಿಲೀಫ್ ಸಿಕ್ಕಂತೆ ಆಗಿದೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ದೀಪಿಕಾ ಪಡುಕೋಣೆ ನಟಿಸಿದ 'ಫೈಟರ್' ಸಿನಿಮಾ ಡಿಸೆಂಬರ್ 25 ರಂದು ವಿಶ್ವದಾದ್ಯಂತ ರಿಲೀಸ್ ಆಗಿದೆ. ಇದೇ ಮೊದಲ ಬಾರಿಗೆ ಬಾಲಿವುಡ್‌ನ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಈ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿದೆ. ಈ ಮೂಲಕ 2024ರಲ್ಲಿ ದೀಪಿಕಾಗೆ ಯಶಸ್ಸು ಸಿಕ್ಕಂತಾಗಿದೆ.

ಇದೇ ವರ್ಷ ಮತ್ತೊಂದು ಬಿಗ್ ಬಜೆಟ್ ಸಿನಿಮಾ 'ಕಲ್ಕಿ' ಕೂಡ ಬಿಡುಗಡೆಯಾಗಲಿದೆ. ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಜೊತೆ ದೀಪಿಕಾ ಪಡುಕೋಣೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಈ ಸಿನಿಮಾ ಮೇಲೂ ದೀಪಿಕಾ ಪಡುಕೋಣೆ ಅಭಿಮಾನಿಗಳು ಕಣ್ಣಿಟ್ಟಿದ್ದಾರೆ.

More from Filmibeat

English summary
Deepika Padukone company got relief from using Lotus mark from Delhi HC:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X