Dharmendra First Love: ತನ್ನ ಶಿಕ್ಷಕರ ಪುತ್ರಿಯನ್ನೇ ಪ್ರೀತಿಸಿದ್ದ ಧರ್ಮೇಂದ್ರ; ಇಬ್ಬರೂ ಬೇರೆಯಾಗಿದ್ದು ಹೇಗೆ?

ಬಾಲಿವುಡ್‌ನ ದಿಗ್ಗಜ ಧರ್ಮೇಂದ್ರ ಇತ್ತೀಚೆಗೆ ಅಪಾರ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ. ಸುಮಾರು ಆರು ದಶಕಗಳ ಕಾಲ ಚಿತ್ರರಂಗದಲ್ಲಿ ತನ್ನದೇ ಮೈಲಿಗಲ್ಲನ್ನು ಸ್ಥಾಪಿಸಿ ಅಗಲಿದ ನಟನಿಗೆ ವಿಶ್ವದ ಮೂಲೆ ಮೂಲೆಯಿಂದ ಅಭಿಮಾನಿಗಳು ಕಂಬಿನಿ ಮಿಡಿಯುತ್ತಿದ್ದಾರೆ. ಪಂಜಾಬ್‌ನ ಚಿಕ್ಕದೊಂದು ಹಳ್ಳಿಯಿಂದ ನಟನಾಗಬೇಕು ಎಂಬ ಕನಸನ್ನು ಹೊತ್ತು ಬಂದಿದ್ದ ಧರ್ಮೇಂದ್ರ ಬಾಲಿವುಡ್‌ನಲ್ಲಿ ನೆಲೆಯನ್ನು ಕಂಡು ಕೊಂಡಿದ್ದರು.

ಚಿತ್ರರಂಗದಲ್ಲಿ ಧರ್ಮೇಂದ್ರ ಅವರ ಆರಂಭ ಹೆಜ್ಜೆ ಸಿಕ್ಕಾಪಟ್ಟೆ ಕಷ್ಟಕರವಾಗಿತ್ತು. ಆದರೂ, ಛಲ ಬಿಡದೆ ಮುನ್ನುಗ್ಗಿದ್ದ ಧರ್ಮೇಂದ್ರ ನಾಯಕನಾಗಿ ತೆರೆಮೇಲೆ ಮಿಂಚಿದ್ದರು. ಮಾಸ್ ಹೀರೋ ಆಗಿ ಬಾಲಿವುಡ್‌ನಲ್ಲಿ ಗುರುತಿಸಿಕೊಂಡರು. ಇವರ ಸಿನಿಮಾಗಳಿಗೆ ಮನಸೋತ ಅವರ ಅಭಿಮಾನಿಗಳು ಹೀ-ಮ್ಯಾನ್ ಎಂಬ ಬಿರುದನ್ನು ಕೊಟ್ಟು ಸಂಭ್ರಮಿಸಿದ್ದರು. ಇಂದಿಗೂ ಇವರು ನಟಿಸಿದ ಹಲವು ಸಿನಿಮಾಗಳು ಸಿನಿಪ್ರಿಯರ ಫೇವರಿಟ್ ಆಗಿ ಉಳಿದಿವೆ.

Dharmendra first love was his teacher daughter separated after India-Pakistan partition

ಧರ್ಮೇಂದ್ರ ಸಿನಿಮಾ ಬದುಕು ಎಷ್ಟು ರೋಚಕವಾಗಿತ್ತೋ ಅಷ್ಟೇ ರೋಚಕ ಎನಿಸೋದು ಅವರ ಲವ್ ಸ್ಟೋರಿ. ಧರ್ಮೇಂದ್ರ ಬದುಕಿದ್ದಾಗಲೇ ಅವರ ಲವ್ ಸ್ಟೋರಿಗಳು ಸಿಕ್ಕಾಪಟ್ಟೆ ಫೇಮಸ್ ಆಗಿದ್ದವು. ಅದರಲ್ಲೂ ಹೇಮಾ ಮಾಲಿನಿ ಪ್ರೀತಿಸಿ ಮದುವೆ ಆಗಿದ್ದು ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಆದರೆ, ಧರ್ಮೇಂದ್ರ ಅವರ ಮೊದಲ ಲವ್ ಸ್ಟೋರಿ ಅವರು ಅಗಲಿದ ಬಳಿಕ ಜನಪ್ರಿಯವಾಗುತ್ತಿದೆ.

ಧರ್ಮೇಂದ್ರ ಅವರ ಹೆಸರು ಬಾಲಿವುಡ್‌ನ ನಟಿಯರೊಂದಿಗೆ ತಳುಕು ಹಾಕಿಕೊಂಡಿತ್ತು. ಅದರಲ್ಲೂ ಮೀನಾ ಕುಮಾರಿ, ಹೇಮಾ ಮಾಲಿನಿ ಸೇರಿದಂತೆ ಕೆಲವು ಹೆಸರುಗಳು ಓಡಾಡಿದ್ದವು. ಅದರಲ್ಲಿ ಹೇಮಾ ಮಾಲಿನಿ ಜೊತೆಗಿನ ಲವ್ ಸ್ಟೋರಿ ಫೇಮಸ್ ಆಗಿತ್ತು. ಆದರೆ, ಇವರಿಬ್ಬರಿಗೂ ಮುನ್ನ ಧರ್ಮೇಂದ್ರ ಅವರದ್ದು ಒಂದು ಲವ್ ಸ್ಟೋರಿ ಇತ್ತು. ಅದು ಬಾಲಿವುಡ್‌ಗೆ ಬರುವುದಕ್ಕೂ ಮುನ್ನವೇ ಶುರುವಾಗಿದ್ದ ಲವ್ ಸ್ಟೋರಿ.

ಧರ್ಮೇಂದ್ರ ತಾನು ಓದುವಾಗಲೇ ಹಮಿದಾ ಎಂಬುವವರನ್ನು ಇಷ್ಟ ಪಟ್ಟಿದ್ದರು. ಹಾಗಂತ ಇದು ಕಾಲೇಜ್ ಲವ್ ಸ್ಟೋರಿಯೇನಲ್ಲ. ಆಗಿನ್ನೂ ಧರ್ಮೇಂದ್ರ 6ನೇ ತರಗತಿ ಓದುತ್ತಿದ್ದರು. ಪಂಜಾಬ್‌ನ ಅದೇ ಶಾಲೆಯಲ್ಲಿ ಓದುತ್ತಿದ್ದ ತನ್ನ ಶಿಕ್ಷಕರ ಪುತ್ರಿ ಇಷ್ಟ ಆಗಿದ್ದರು. ಧರ್ಮೇಂದ್ರ ಅವರಿಗಿಂತ ಹಮಿದಾ ಎರಡು ವರ್ಷ ದೊಡ್ಡವರಾಗಿದ್ದರು. ಧರ್ಮೇಂದ್ರ 6ನೇ ತರಗತಿ ಓದುತ್ತಿದ್ದರೆ, ಹಮಿದಾ ಅದೇ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದರು.

Dharmendra first love was his teacher daughter separated after India-Pakistan partition

ಹಮಿದಾ ಎರಡು ವರ್ಷ ಸೀನಿಯರ್ ಆಗಿದ್ದರಿಂದ ಧರ್ಮೇಂದ್ರ ಅವರಿಗೆ ವ್ಯಾಸಂಗದಲ್ಲಿ ಸಹಾಯ ಮಾಡುತ್ತಿದ್ದರು. ಆ ವೇಳೆ ಹಮಿದಾ ಮೇಲೆ ಧರ್ಮೇಂದ್ರ ಅವರಿಗೆ ಮನಸಾಗಿತ್ತು. ಈ ವಿಷಯವನ್ನು ಸಲ್ಮಾನ್ ಖಾನ್ ನಡೆಸಿಕೊಡುತ್ತಿದ್ದ 'ದಸ್‌ ಕಾ ಧಮ್' ಶೋನಲ್ಲಿ ಧರ್ಮೇಂದ್ರ ಹೇಳಿಕೊಂಡಿದ್ದರು. ಆದರೆ, ಆಗ ಧರ್ಮೇಂದ್ರ ಅವರ ಮುಖವನ್ನು ನೋಡುತ್ತಲೂ ಇರುತ್ತಿರಲಿಲ್ಲ. ಆದರೆ, ಇಬ್ಬರಿಗೂ ಗುಟ್ಟಾಗಿ ಪ್ರೀತಿ ಮಾಡುತ್ತಿದ್ದೆವು. ಅದು ನಮ್ಮಿಬ್ಬರಿಗೆ ಮಾತ್ರ ಗೊತ್ತಿತ್ತು ಎಂದು ಧರ್ಮೇಂದ್ರ ಹೇಳಿಕೊಂಡಿದ್ದರು.

ತನ್ನ ಮೊದಲ ಲವರ್ ಹಮಿದಾಗಾಗಿ ಧರ್ಮೇಂದ್ರ ಪ್ರೇಮ ಪತ್ರವನ್ನೂ ಬರೆದಿದ್ದರು. ಶಾಲೆಯಲ್ಲಿ ಹಮಿದಾ ಪಕ್ಕದಲ್ಲಿ ಸುಮ್ಮನೆ ಹೋಗಿ ಕೂರುತ್ತಿದ್ದರು. ಆ ವೇಳೆ ಹಮಿದಾ ಒಂದು ಮಾತನ್ನು ಹೇಳುತ್ತಿದ್ದರಂತೆ. "ಧರಂ ಬೇಜಾರು ಆಗಬೇಡ. ಪರೀಕ್ಷೆಗೆ ಇನ್ನೂ ಸಮಯವಿದೆ" ಎಂದು ಹೇಳಿ ಹೋಗುತ್ತಿದ್ದರಂತೆ. ಆಕೆ ಹೋಗುವುದನ್ನೇ ನೋಡುತ್ತಿದ್ದೆ ಎಂದು ಧರ್ಮೇಂದ್ರ ಹೇಳಿಕೊಂಡಿದ್ದರು. ಅದೇ ವೇಳೆ ಭಾರತ ವಿಭಜನೆಯಾಗಿ ಪಾಕಿಸ್ತಾನವಾಯ್ತು. ಹಮಿದಾ ಕುಟುಂಬ ಪಾಕಿಸ್ತಾನಕ್ಕೆ ಹೋದರು. ಆಮೇಲೆ ಹಮಿದಾರನ್ನು ನೋಡಲೇ ಇಲ್ಲ ಎಂದು ಧರ್ಮೇಂದ್ರ ಹೇಳಿಕೊಂಡಿದ್ದರು.

More from Filmibeat

English summary
Dharmendra first love was his teacher daughter separated after India-Pakistan partition.
Read more about: dharmendra hema malini love story
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X