ಪಾಕ್ ಮಾಜಿ ಪಿಎಂ ನವಾಜ್ ಷರೀಫ್ ಪಾತ್ರ ಮಾಡಿದ್ದು ನಾನೇ ಅಂದ್ರೂ ನಂಬ್ತಿಲ್ಲ..'ಧುರಂಧರ್ 2'ನ ಈ ನಟ ಯಾರು?

ರಣ್‌ವೀರ್ ಸಿಂಗ್ ಹಾಗೂ ಆದಿತ್ಯ ಧರ್ ಬಾಕ್ಸಾಫೀಸ್‌ನಲ್ಲಿ ಜಾದುವನ್ನೇ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ 'ಧುರಂಧರ್ 2' ಸಿನಿಮಾದ ಕ್ರೇಜ್ ದುಪ್ಪಟ್ಟಾಗುತ್ತಲೇ ಇದೆ. ಬಾಕ್ಸಾಫೀಸ್‌ನಲ್ಲಿ ಸಿನಿಮಾದ ಕಲೆಕ್ಷನ್ ಹೆಚ್ಚಾಗುತ್ತಲೇ ಇದೆ. ಸಿನಿಮಾ ಬಿಡುಗಡೆ ಆದಲ್ಲಿಂದ ಒಂದಲ್ಲ ಒಂದು ದಾಖಲೆಗಳನ್ನು ಮುರಿಯುತ್ತಾ ಮುಂದೆ ಸಾಗುತ್ತಲೇ ಇದೆ. ಪ್ರೇಕ್ಷಕರು ಈ ಸಿನಿಮಾ ಮೇಕಿಂಗ್, ಸ್ಟೋರಿಯನ್ನಷ್ಟೇ ಮೆಚ್ಚಿಕೊಂಡಿಲ್ಲ. ಬದಲಿಗೆ ಪಾತ್ರಗಳನ್ನು ಇಷ್ಟಪಟ್ಟಿದ್ದಾರೆ.

ಆದಿತ್ಯ ಧರ್ ಈ ಸಿನಿಮಾದಲ್ಲಿ ಬರುವ ಪ್ರತಿಯೊಂದು ಪಾತ್ರವನ್ನೂ ನಾಜೂಕಿನಿಂದ ಆಯ್ಕೆ ಮಾಡಿರೋದು ಎದ್ದು ಕಾಣುತ್ತಿದೆ. ಒಂದೊಂದು ಪಾತ್ರವೂ ಜೈ ಪಾತ್ರಕ್ಕೆ ಹೋಲಿಕೆಯಾಗುವಂತೆ ಇದೆ. ಅದು ಸಂಜಯ್ ದತ್ ಪಾತ್ರ ಆಗಿರಬಹುದು, ಆರ್.ಮಾಧವನ್ ಪಾತ್ರ ಆಗಿರಬಹುದು ಅಥವಾ ರಾಕೇಶ್ ಭೇಟಿ ಪಾತ್ರವೇ ಆಗಿರಬಹುದು. ಈ ಎಲ್ಲಾ ಪಾತ್ರಗಳಿಗೂ ರಿಯಲ್ ಕ್ಯಾರೆಕ್ಟರ್‌ಗಳಿಗೂ ತೀರಾ ಹತ್ತಿರದ ಸಾಮ್ಯತೆಯಿದೆ ಎಂದು ಪ್ರೇಕ್ಷಕರೇ ಮೆಚ್ಚಿಕೊಂಡಿದ್ದರು.

Dhurandhar 2 former Pakistan PM Nawaz Sharif role played by Mashhoor Amrohi getting appreciation

ಆದರೆ, ಸಿನಿಮಾ ರಿಲೀಸ್ ಆಗಿ ನಾಲ್ಕೈದು-ದಿನಗಳಾದ್ಮೇಲೆ ಇದೇ ಸಿನಿಮಾದ ಮತ್ತೊಂದು ಪಾತ್ರ ದಿಢೀರನೇ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಆರಂಭದಲ್ಲಿ ಇದು ಎಐ ತಂತ್ರಜ್ಞಾನವನ್ನು ಬಳಸಿ ಶೂಟ್ ಮಾಡಲಾಗಿದೆ ಎಂದು ಭಾವಿಸಿದ್ದರು. ಆದರೆ, ಈ ಪಾತ್ರವನ್ನು ಒಬ್ಬ ನಟ ಮಾಡಿದ್ದು ಅನ್ನೋದನ್ನು ನಂಬುವುದಕ್ಕೆ ಯಾರೂ ರೆಡಿಯಿಲ್ಲ. ಅಷ್ಟು ಪರ್ಫೆಕ್ಟ್ ಆಗಿ ಆ ಪಾತ್ರ ಬಂದಿದೆ. ಅದುವೇ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಷ್‌ರನ್ನೇ ಹೋಲುವ ಪಾತ್ರ. ಅಷ್ಟಕ್ಕೂ ಈ ಪಾತ್ರದಲ್ಲಿ ನಟಿಸಿದ್ದು ಯಾರು? ಈ ನಟನ ಹಿನ್ನೆಲೆಯೇನು ಗೊತ್ತೇ?

Also Read
Dhurandhar 2:'ಧುರಂಧರ್ 2'ಗಾಗಿ ಇದೇ ಮೊದಲ ಬಾರಿಗೆ ಊರ್ವಶಿ ಥಿಯೇಟರ್‌ನಲ್ಲಿ 8 ಗಂಟೆ ಶೋ; ದಾಖಲೆ ಕಲೆಕ್ಷನ್?
Dhurandhar 2:'ಧುರಂಧರ್ 2'ಗಾಗಿ ಇದೇ ಮೊದಲ ಬಾರಿಗೆ ಊರ್ವಶಿ ಥಿಯೇಟರ್‌ನಲ್ಲಿ 8 ಗಂಟೆ ಶೋ; ದಾಖಲೆ ಕಲೆಕ್ಷನ್?

'ಧುರಂಧರ್ 2' ಸಿನಿಮಾದಲ್ಲಿ ಹೀಗೆ ಬಂದು ಹಾಗೆ ಹೋಗುವ ಪಾತ್ರಗಳಿವೆ. ಅದರಲ್ಲೊಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಷ್ ಪಾತ್ರ. ಸಿನಿಮಾ ಈ ಪಾತ್ರದ ಹೆಸರು ನವಾಬ್ ಶಫೀಕ್ (ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್‌ಗೆ ಹೋಲುವ ಪಾತ್ರ). ಈ ಪಾತ್ರದಲ್ಲಿ ನಟಿಸಿದ್ದು ನಟನೆ ಹೆಸರು ಮಶೂರ್ ಅಮ್ರೋಹಿ. ಸಿನಿಮಾ ನೋಡಿದವರಿಗೆ ಈ ಪಾತ್ರವನ್ನು ಎಐ ತಂತ್ರಜ್ಞಾನವನ್ನು ಬಳಸಿ ಶೂಟ್ ಮಾಡಲಾಗಿದೆ ಎಂದು ನಂಬಿದ್ದರು. ಯಾಕಂದ್ರೆ, ಮಶೂರ್ ಅಮ್ರೋಹಿ ನಿರ್ವಹಿಸಿದ ಪಾತ್ರ ಥೇಟ್ ನವಾಜ್ ಶರೀಪ್ ಅವರನ್ನೇ ಹೋಲುತ್ತಿತ್ತು.

ಸೋಶಿಯಲ್ ಮೀಡಿಯಾದಲ್ಲಿ ಜನ ಪ್ರಶ್ನೆ ಮಾಡುವುದಕ್ಕೆ ಶುರು ಮಾಡಿದ್ದರು. ನಿರ್ದೇಶಕ ಆದಿತ್ಯ ಧರ್ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್‌ರನ್ನು ಈ ಸಿನಿಮಾಗೆ ಹೇಗೆ ಕರೆದುಕೊಂಡು ಬಂದರು? ಅಂತ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ನವಾಜ್ ಶರೀಷ್ ಪಾತ್ರವನ್ನು ಮಾಡಿದವರು ಮಶೂರ್ ಅಮ್ರೋಹಿ ಎಂದು ಗೊತ್ತಾಗ ಕಂಪ್ಲೀಟ್ ಆಗಿ ಶಾಕ್ ಆಗಿದ್ದಾರೆ. ಈ ನಟ ಯಾರು ಎಂದು ಅಚ್ಚರಿಯನ್ನು ವ್ಯಕ್ತಪಡಿಸುತ್ತಿದ್ದಾರೆ.

Dhurandhar 2 former Pakistan PM Nawaz Sharif role played by Mashhoor Amrohi getting appreciation

ಮಶೂರ್ ಅಮ್ರೋಹಿ ಬಾಲಿವುಡ್‌ನ ಹಿರಿಯ ಸಿನಿಮಾ ನಿರ್ಮಾಪಕ ಕಮಾಲ್ ಅಮ್ರೋಹಿ ಅವರ ಮೊಮ್ಮಗ. ಈ ಬಾಲಿವುಡ್‌ನ ಕೆಲವು ಜನಪ್ರಿಯ ಸಿನಿಮಾಗಳಲ್ಲಿ ಇವರು ಕೆಲಸ ಮಾಡಿದ್ದಾರೆ. ಹೃತಿಕ್ ರೋಷನ್ ನಟನೆಯ 'ವಾರ್', 'ಅಕ್ಯೂಸ್ಡ್' ಮತ್ತು 'ಫ್ರೀಡಂ ಅಟ್ ಮಿಡ್‌ನೈಟ್'‌ನಂತಹ ಪ್ರಾಜೆಕ್ಟ್‌ಗಳಲ್ಲಿ ಇವರು ಕೆಲಸ ಮಾಡಿದ್ದಾರೆ. 'ಧುರಂಧರ್ 2' ಸಿನಿಮಾದ ಈ ಪಾತ್ರ ಅವರ ವೃತ್ತಿ ಬದುಕಿನ ಬೆಸ್ಟ್ ಸಿನಿಮಾಗಳಲ್ಲಿ ಒಂದಾಗಿದೆ.

ಈ ಸಿನಿಮಾ ಕಾಸ್ಟಿಂಗ್ ವೇಳೆ ಮಶೂರ್ ಅಮ್ರೋಹಿ ಮೇಜರ್ ಇಕ್ಬಾಲ್ ಪಾತ್ರ ಮಾಡುವುದಕ್ಕೆ ಆಡಿಷನ್ ಕೊಟ್ಟಿದ್ದರು. ಆದರೆ, ಆ ಪಾತ್ರ ಅರ್ಜುನ್ ರಾಂಪಾಲ್ ಪಾಲಾಗಿದ್ದರಿಂದ ನವಾಜ್ ಷರೀಫ್‌ರಿಂದ ಪ್ರೇರಿತವಾದ ನವಾಬ್ ಶಫೀಕ್ ಪಾತ್ರಕ್ಕೆ ಇವರನ್ನು ಆಯ್ಕೆ ಮಾಡಲಾಗಿತ್ತು. ಪಾತ್ರ ಚಿಕ್ಕದಾಗಿದ್ದರೂ ಸಿನಿಮಾ ರಿಲೀಸ್ ಬಳಿಕ ಅವರ ಪಾತ್ರಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ತಮ್ಮ ಪಾತ್ರ ಸಿಗುತ್ತಿರುವ ಪ್ರಶಂಸೆಗಳ ಬಗ್ಗೆ ಒಂದು ಸಂದರ್ಶನದಲ್ಲಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ. "ಇದು ನಾನು ನಂಬಲು ಸಾಧ್ಯವಾಗದ ಅತಿ ದೊಡ್ಡ ಪ್ರಶಂಸೆ. ಆ ಪಾತ್ರದಲ್ಲಿ ನಟಿಸಿದ್ದು ನಾನೇ ಎಂದು ಹೇಳಿದರೂ ಯಾರೂ ನಂಬುತ್ತಿಲ್ಲ. ಕೆಲವರು ಈ ಪಾತ್ರವನ್ನು AI ಬಳಸಿ ಸೃಷ್ಟಿಸಿದ್ದಾರೆಂದು ಹೇಳುತ್ತಿದ್ದಾರೆ. ನನ್ನ ಪಾತ್ರಕ್ಕೆ ಇಂತಹ ಪ್ರಶಂಸೆಗಳು ಸಿಗುತ್ತವೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಇಂಟರ್ನೆಟ್‌ನಲ್ಲಿ ನನ್ನ ಪಾತ್ರದ ಬಗ್ಗೆ ಮೀಮ್‌ಗಳು ಮತ್ತು ಫೋಟೋಗಳು ವ್ಯಾಪಕವಾಗಿ ಹರಿದಾಡುತ್ತಿವೆ. ಈ ಪಾತ್ರದ ಮೇಕಪ್‌ಗಾಗಿ ಪ್ರತಿ ದಿನ 8 ಗಂಟೆಗಳ ಕಾಲ ಕೂರಬೇಕಿತ್ತು. ಹಾಗೇ ದಪ್ಪ ಕಾಣುವುದಕ್ಕೆ ವಿಶೇಷ ಬಾಡಿ ಸೂಟ್ ಧರಿಸಿದ್ದೆ" ಎಂದು ಮಶೂರ್ ಅಮ್ರೋಹಿ ಹೇಳಿದ್ದಾರೆ.

More from Filmibeat

English summary
Dhurandhar 2 former Pakistan PM Nawaz Sharif role played by Mashhoor Amrohi getting appreciation.
Read more about: Dhurandhar 2 hindi movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X