ಪ್ರಭಾಸ್, ವಿಜಯ್ ಹಿಂದಿಕ್ಕಿ ಭಾರತದ ಜನಪ್ರಿಯ ಸೆಲೆಬ್ರೆಟಿ ಲಿಸ್ಟ್ ಸೇರಿದ ಧುರಂಧರ್ ನಟಿ; ಇದು ಹೇಗೆ ಸಾಧ್ಯ?

ಪ್ಯಾನ್ ಇಂಡಿಯಾ ಸೂಪರ್‌ ಸ್ಟಾರ್ ಪ್ರಭಾಸ್ ಹಾಗೂ ತಮಿಳು ದಿಗ್ಗಜ ದಳಪತಿ ವಿಜಯ್‌ ದೇಶಾದ್ಯಂತ ಸದ್ದು ಮಾಡುತ್ತಿದ್ದಾರೆ. ಪ್ರಭಾಸ್ ಸಿನಿಮಾ 'ರಾಜಾ ಸಾಬ್' ರಿಲೀಸ್ ಆಗುತ್ತಿದೆ. ದಳಪತಿ ವಿಜಯ್ ಸಿನಿಮಾ 'ಜನ ನಾಯಗನ್' ಎಲ್ಲ ಅಂದುಕೊಂಡಂತೆ ಆಗಿದ್ದರೆ ರಿಲೀಸ್ ಆಗಬೇಕಿತ್ತು. ಈ ತಿಂಗಳು ಇವರಿಬ್ಬರದ್ದೇ ಹವಾ ಜೋರಾಗಿತ್ತು. ಒಂದು ಕಡೆ 'ರಾಜಾ ಸಾಬ್' ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. 'ಜನ ನಾಯಗನ್' ಹಾಗೂ ಸೆನ್ಸಾರ್ ಮಂಡಳಿ ನಡುವಿನ ವಿವಾದ ಸಿಕ್ಕಾಪಟ್ಟೆ ಸುದ್ದಿಯಲ್ಲಿತ್ತು.

'ಜನ ನಾಯಗನ್' ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ. ಹೀಗಾಗಿ ಮಲೇಷ್ಯಾದಲ್ಲಿ ಅದ್ದೂರಿಯಾಗಿ ಅಡಿಯೋ ರಿಲೀಸ್ ಆಗಿತ್ತು. ಈ ಮಟ್ಟಿಗೆ ಸುದ್ದಿಯಲ್ಲಿದ್ದ ಇಬ್ಬರು ದಿಗ್ಗಜರನ್ನು ಯುವ ನಟಿಯೊಬ್ಬರು ಹಿಂದಿಕ್ಕಿದ್ದಾರೆ. ಈ ಯುವ ನಟಿ ಭಾರತೀಯ ಚಿತ್ರರಂಗದ ಹಾಟ್ ಟಾಪಿಕ್ ಆಗಿ ಸದ್ದು ಮಾಡುತ್ತಿದ್ದಾರೆ.

Dhurandhar actress Sara Arjun tops Imdb list as Popular Indian celebrities beats Prabhas Vijay

ಅಂದ್ಹಾಗೆ, ಈ ನಟಿ ಬೇರೆ ಯಾರೂ ಅಲ್ಲ ಇತ್ತೀಚೆಗೆ ಭಾರತೀಯ ಚಿತ್ರರಂಗ ಬಾಕ್ಸಾಫೀಸ್ ಅನ್ನೇ ಉಡೀಸ್ ಮಾಡಿದ 'ಧುರಂಧರ್' ಸಿನಿಮಾದ ನಾಯಕಿ ಸಾರಾ ಅರ್ಜುನ್. ಜನಪ್ರಿಯ ಸಿನಿಮಾ ಡೇಟಾಬೇಸ್ ವೆಬ್‌ಸೈಟ್ IMDb ಇತ್ತೀಚೆಗೆ ಬಿಡುಗಡೆ ಮಾಡಿದ 'ಪಾಪುಲರ್ ಇಂಡಿಯನ್ ಸೆಲೆಬ್ರಿಟೀಸ್' ಪಟ್ಟಿಯಲ್ಲಿ ಸಾರಾ ಅರ್ಜುನ್ ಮೊದಲ ಸ್ಥಾನ ಪಡೆದಿದ್ದಾರೆ. ಕಳೆದ ವಾರ ಈ ನಟಿ ಎರಡನೇ ಸ್ಥಾನದಲ್ಲಿದ್ದರು. ಈ ವಾರ ದಿಢೀರನೇ ದಿಗ್ಗಜರನ್ನೆಲ್ಲ ಹಿಂದಿಕ್ಕಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

ಯುವ ನಟಿ ಸಾರಾ ಅರ್ಜುನ್ ಟಾಪ್ ಸ್ಥಾನಕ್ಕೆ ಬರುವುದಕ್ಕೆ ಕಾರಣ ಇತ್ತೀಚೆಗೆ ರಿಲೀಸ್ ಆದ 'ಧುರಂಧರ್' ಸಿನಿಮಾ. ಈ ಸ್ಪೈ ಆಕ್ಷನ್ ಥ್ರಿಲ್ಲರ್‌ನಲ್ಲಿ ಸಾರಾ ಅರ್ಜುನ್ 'ಯಾಲಿನಾ' ಎಂಬ ಪಾತ್ರದಲ್ಲಿ ನಟಿಸಿದ್ದರು. ಇದಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. 'ಉರಿ: ಸರ್ಜಿಕಲ್ ಸ್ಟ್ರೈಕ್' ಖ್ಯಾತಿ ಆದಿತ್ಯ ಧಾರ್ ನಿರ್ದೇಶನದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆಗಳನ್ನೇ ಬರೆದಿತ್ತು.

More from Filmibeat

English summary
Dhurandhar actress Sara Arjun tops Imdb list as Popular Indian celebrities beats Prabhas, Vijay.
Read more about: prabhas vijay imdb
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X