"ನಾನು ಬದುಕೋ ಚಾನ್ಸ್ ಶೇ.30ರಷ್ಟು ಇತ್ತಷ್ಟೆ.. ಆಗ ನನ್ನ ಪತಿಯ ಫೇಸ್ ಬದಲಾಗಿತ್ತು"; ಪ್ರೀತ್ಸೆ ನಟಿ ಸೋನಾಲಿ ಬೇಂದ್ರೆ
90ರ ದಶಕದಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನೀಳಕಾಯ ಚೆಲುವೆ ಸೋನಾಲಿ ಬೇಂದ್ರೆ. ಮರಾಠಿ ಹಾಗೂ ಹಿಂದಿ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದರು. ಶಾರುಖ್ ಖಾನ್, ಆಮಿರ್ ಖಾನ್ ಅಂತಹ ಎತ್ತರ ಕಡಿಮೆ ಇದ್ದ ನಟರ ಜೊತೆಯೂ ನಟಿಸಿ ಸೈ ಎನಿಸಿಕೊಂಡಿದ್ದರು. ಬಾಲಿವುಡ್ ಸಿನಿಮಾಗಳಲ್ಲಿಯೇ ಹೆಚ್ಚಾಗಿ ನಟಿಸಿದ್ದರೂ, ದಕ್ಷಿಣ ಭಾರತದ ಕಡೆಗೂ ಮುಖ ಮಾಡಿದ್ದರು.
ಸೋನಾಲಿ ಬೇಂದ್ರೆ ಸಿನಿಪ್ರಿಯರ ಒಂದು ಕಾಲದ ಫೇವರಿಟ್ ನಟಿಯಾಗಿದ್ದರು. ಕೇವಲ ಬಾಲಿವುಡ್, ತೆಲುಗು, ತಮಿಳು ಸಿನಿಮಾಗಳಲ್ಲಷ್ಟೇ ಅಲ್ಲ ಕನ್ನಡದಲ್ಲೂ ನಟಿಸಿದ್ದರು. ಶಿವಣ್ಣ ಹಾಗೂ ಉಪೇಂದ್ರ ಜೊತೆಯಾಗಿ ನಟಿಸಿದ್ದ 'ಪ್ರೀತ್ಸೆ' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಕನ್ನಡದಲ್ಲಿ ಒಂದೇ ಒಂದು ಸಿನಿಮಾದಲ್ಲಿ ನಟಿಸಿದ್ದರೂ, ಕನ್ನಡಿಗರಿಗೆ ಚಿರಪರಿಚಿತ.

ಬಾಲಿವುಡ್ ನಿರ್ಮಾಪಕ ಗೋಲ್ಡಿ ಬೇಲ್‌ರನ್ನು ವಿವಾಹವಾದ ಬಳಿಕ ಸೋನಾಲಿ ಬೇಂದ್ರೆ ಸಿನಿಮಾದಿಂದ ದೂರವೇ ಉಳಿದಿದ್ದರು. ಇತ್ತೀಚೆಗೆ 'ಬ್ರೋಕನ್ ನ್ಯೂಸ್ ಸೀಸನ್ 2' ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಮಾಧ್ಯಮಗಳಿಗೆ ನೀಡಿದ್ದ ಸಂದರ್ಶನದಲ್ಲಿ ತನಗೆ ಕ್ಯಾನ್ಸರ್ ಇದೆ ಎಂದು ಗೊತ್ತಾಗ, ತನ್ನ ಕೌಟುಂಬಿಕ ಜೀವನದ ಮೇಲೆ ಪ್ರಭಾವ ಬೀರಿತ್ತು ಎಂದು ಹೇಳಿಕೊಂಡಿದ್ದಾರೆ.
ಸಿನಿಮಾದಿಂದ ದೂರವಿದ್ದ ಸೋನಾಲಿ ಬೇಂದ್ರೆ ದಿಢೀರನೇ ಸುದ್ದಿಯಾಗಿದ್ದರು. 2018ರಲ್ಲಿ ತನಗೆ ಕ್ಯಾನ್ಸರ್ ಇದೆ ಎಂದು ಹೇಳಿಕೆ ನೀಡಿದ್ದರು. ಈ ವೇಳೆ ಮತ್ತೆ ಸೋನಾಲಿ ಬೇಂದ್ರೆ ಅಭಿಮಾನಿಗಳ ಜನಮಾನಸಕ್ಕೆ ಬಂದಿದ್ದರು. ತಾನು ಕಾನ್ಯರ್ ಅನ್ನು ಎದುರಿಸಿದ ಸಂದರ್ಭ ಹೇಗಿತ್ತು? ಅದು ತನ್ನ ಕುಟುಂಬದ ಮೇಲೆ ಯಾವ ರೀತಿಯ ಪರಿಣಾಮ ಬೀರಿತ್ತು? ಇವೆಲ್ಲದರ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಸೋನಾಲಿ ಬೇಂದ್ರೆಗೆ ಕ್ಯಾನ್ಸರ್ ಪತ್ತೆ ಆಗಿದ್ದಾಗ ಅವರು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿದ್ದರು. ಈ ವೇಳೆ ತನ್ನ ಆರೋಗ್ಯ ಸರಿಯಿಲ್ಲ ಅನ್ನೋದು ಅವರಿಗೆ ಗೊತ್ತಾಗಿ ಹೋಗಿತ್ತು. ವೈದ್ಯರ ಬಳಿಗೆ ಹೋದಾಗ ಏನೋ ಮೈನರ್ ಸಮಸ್ಯೆ ಇರಬಹುದು ಎಂದು ಅಂದುಕೊಂಡಿದ್ದರು. ಟೆಸ್ಟ್ ಎಲ್ಲ ಮಾಡಿ ಫಲಿತಾಂಶ ಬಂದಾಗ, ಸೋನಾಲಿ ಬೇಂದ್ರೆಗೆ ಆಘಾತ ಆಗಿತ್ತು.

ಸೋನಾಲಿ ಬೇಂದ್ರೆ ವೈದ್ಯಕೀಯ ತಪಾಸಣೆ ಮಾಡಿದಾಗ ಬಂದ ರಿಪೋರ್ಟ್ ನೋಡಿ ವೈದ್ಯರು ಹಾಗೂ ಆಕೆಯ ಪತಿಯ ಮುಖ ಚರ್ಚೆಯೇ ಬದಲಾಗಿ ಹೋಗಿತ್ತು. ಯಾಕಂದ್ರೆ ಸೋನಾಲಿ ಬೇಂದ್ರೆ ಕ್ಯಾನ್ಸರ್ ನಾಲ್ಕನೇ ಸ್ಟೇಜ್ ತಲುಪಿತ್ತು. ವೈದ್ಯರು ಕೇವಲ 30 ಪರ್ಸೆಂಟ್‌ನಷ್ಟು ಮಾತ್ರ ಬದುಕುವುದಕ್ಕೆ ಮಾತ್ರ ಸಾಧ್ಯ ಎಂದು ಹೇಳಿದ್ದರು. ಇದು ಸೋನಾಲಿ ಬೇಂದ್ರೆ ಪತಿ ಗೋಲ್ಡಿ ಬೇಲ್ ಆಕ್ರೋಶಕ್ಕೆ ಕಾರಣವಾಗಿತ್ತು.
ಸೋನಾಲಿ ಬೇಂದ್ರೆ ಪತಿ ಗೋಲ್ಡಿ ಬೇಲ್ ವೈದರ ಮೇಲೆ ಕೂಗಾಡಿದ್ದರಂತೆ. ಇದು ತನ್ನ ಕುಟುಂಬದ ಮೇಲೆ ತುಂಬಾನೇ ಪರಿಣಾಮ ಬೀರಿತ್ತು ಎಂದು ಹೇಳಿಕೊಂಡಿದ್ದಾರೆ. ಕೀಮೊಥೆರಪಿ ತುಂಬಾ ನೋವಿನ ಪ್ರೋಸಸ್ ಆಗಿತ್ತು. ಇಷ್ಟೇ ಅಲ್ಲದೆ ತಲೆ ಕೂದಲು ಉದುರುವುದು ದೊಡ್ಡ ಸಮಸ್ಯೆಯಾಗಿ ಕಾಡಿತ್ತು ಎಂದಿದ್ದಾರೆ.


Click it and Unblock the Notifications











