'ಅವತಾರ' ಸಿನಿಮಾದಲ್ಲಿದ್ದಾರಾ ಗೋವಿಂದಾ? AI ಸೃಷ್ಟಿಗೆ ಕನ್ಫ್ಯೂಸ್ ಆಗಿ ಕಂಗಾಲದ ಫ್ಯಾನ್ಸ್
ಎಐ ಬಂದ್ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಯಾವುದು ನಂಬೋದು ಯಾವುದು ಬಿಡೋದು ಅನ್ನೋದೇ ಗೊತ್ತಾಗುತ್ತಿಲ್ಲ. ಯಾಕಂದ್ರೆ, ರಿಯಲ್ ಲೈಫ್‌ನಲ್ಲಿ ಇರುವಂತೆಯೇ ಎಐ ತಂತ್ರಜ್ಞಾನದಿಂದ ಸೃಷ್ಟಿ ಮಾಡಿ ಫೋಟೊಗಳು ಹಾಗೂ ಇಮೇಜ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ಕೆಲವೊಮ್ಮೆ ಇದು ನಿಜವೇ ಇರಬೇಕೇನೋ ಎಂದು ನಂಬುವಂತಹ ಪರಿಸ್ಥಿತಿ ಎದುರಾಗಿದೆ.
ಈಗ ಇಂತಹದ್ದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ. ಬಾಲಿವುಡ್ ನಟ ಗೋವಿಂದ 'ಅವತಾರ್' ಸಿನಿಮಾದ "ನಾ'ವಿ" ಅವತಾರದಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಮಾಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೇ ಸ್ಟಿಲ್‌ಗಳನ್ನಾಗಿ ಮಾಡಿಯೂ ಶೇರ್ ಮಾಡಲಾಗುತ್ತಿದೆ. ಅಷ್ಟಕ್ಕೂ ಗೋವಿಂದಾ 'ಅವತಾರ್' ಸಿನಿಮಾದಲ್ಲಿ ನಟಿಸಿದ್ದಾರಾ? ಅನ್ನೋ ಅನುಮಾನ ಮೂಡುವಂತೆ ಇದೆ.

ಜಗತ್ತಿನ ಸುಪ್ರಸಿದ್ಧ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರ 'ಅವತಾರ್: ಫೈರ್ ಅಂಡ್ ಆಶ್' ಸಿನಿಮಾ ರಿಲೀಸ್ ಆಗಿದೆ. ವಿಶ್ವದೆಲ್ಲಡೆ ಸಿನಿಮಾಗೆ ಪ್ರತ್ಯೇಕ ಫ್ಯಾನ್ಸ್ ಇದ್ದಾರೆ. ಈ ಬಾರಿ ಕೂಡ ಅವರೆಲ್ಲರೂ ಮಿಸ್ ಮಾಡದೆ ಸಿನಿಮಾ ನೋಡಿದ್ದರೂ, ಕೆಲವರಿಗೆ ಇಷ್ಟ ಆಗಿಲ್ಲ. ಈ ಮಧ್ಯೆ ದಿಢೀರನೇ 'ಅವತಾರ್' ಸಿನಿಮಾದ ನಾ'ವಿ ಪಾತ್ರಗಳಂತೆ ಗೋವಿಂದಾ ಕಾಣಿಸಿಕೊಂಡಿದ್ದು ನೆಟ್ಟಿಗರಿಗಂತೂ ಕಿಕ್ ಕೊಡುತ್ತಿದೆ.
ನಾ'ವಿಗಳಂತೆ ಗೋವಿಂದರನ್ನು ನೋಡಿ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ನಕ್ಕು ಎಂಜಾಯ್ ಮಾಡಿದ್ದಾರೆ. ಇನ್ನು ಕೆಲವರು ಟೀಕೆಗಳನ್ನು ಮಾಡುತ್ತಿದ್ದಾರೆ. ಅಷ್ಟಕ್ಕೂ ಇದು ಅಸಲಿ ಇಮೇಜ್ ಅಲ್ಲ. ಯಾರೋ ಗೋವಿಂದ ಅಭಿಮಾನಿ AI ತಂತ್ರಜ್ಞಾನವನ್ನು ಬಳಸಿ ಈ ರೀತಿ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಆ ವಿಡಿಯೋಗಳನ್ನು ಎಕ್ಸ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಅದು ಎಲ್ಲೆಡೆ ಹರಿದಾಡುವುದಕ್ಕೆ ಶುರುಮಾಡಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು 'ಅವತಾರ್' ಸಿನಿಮಾದಲ್ಲಿ ಗೋವಿಂದ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆಯೇ? ಎಂದು ಗೊಂದಲಕ್ಕೆ ಬಿದ್ದಿದ್ದರು. ಈ ವಿಡಿಯೋಗಿಂತ ಇನ್ನೂ ಅದ್ಭುತವಾಗಿ ಕಾಮೆಂಟ್‌ಗಳನ್ನು ಮಜಾ ಕೊಡುತ್ತಿವೆ. ಅದರಲ್ಲಿ ಕೆಲವರು "ಇದು ಈ ವರ್ಷದ ಅತ್ಯಂತ ಅನಿರೀಕ್ಷಿತ ಕ್ಯಾಮಿಯೋ" ಎಂದು ಕರೆದಿದ್ದಾರೆ. ಇನ್ನೊಬ್ಬರು " ಇದು ಸಿನೆಮ್ಯಾಟಿಕ್ ಯೂನಿವರ್ಸ್‌ಗಳ ಲಾರ್ಡ್" ಎಂದು ತಮಾಷೆ ಮಾಡಿದ್ದಾರೆ.

ಅಷ್ಟಕ್ಕೂ ಈ ವಿಡಿಯೋ ಕ್ರಿಯೇಟ್ ಆಗಿದ್ದಕ್ಕೆ ಕಾರಣವಿದೆ. ಗೋವಿಂದ ಈ ಹಿಂದೆ ನೀಡಿದ ಸಂದರ್ಶನದಲ್ಲಿ ಜೇಮ್ಸ್ ಕ್ಯಾಮರೂನ್ ತಮಗೆ ಅವತಾರ್ ಸಿನಿಮಾ ಆಫರ್ ನೀಡಿದ್ದರು. ಈ ಸಿನಿಮಾ ಟೈಟಲ್‌ಗೆ ನಾನೇ ಸಲಹೆ ನೀಡಿದ್ದು, ಸಿನಿಮಾದಲ್ಲಿ ಶೂಟಿಂಗ್ ಹೆಚ್ಚು ಸಮಯ ಹಿಡಿದಿತ್ತು. ಅಲ್ಲದೆ, ದೇಹಕ್ಕೆ ಬಣ್ಣ ಬಳಿದುಕೊಳ್ಳಬೇಕು ಎಂಬ ಕಾರಣಕ್ಕೆ ತಿರಸ್ಕರಿಸಿದ್ದೆ ಎಂದು ಹೇಳಿದ್ದಾರೆನ್ನುವ ವಿಷಯ ವೈರಲ್ ಆಗಿತ್ತು. ಅದನ್ನೇ ಇಟ್ಟುಕೊಂಡು ಈ ಎಐ ವಿಡಿಯೋ ಸೃಷ್ಟಿಸಿದ್ದಾರೆ ಎನ್ನಲಾಗಿದೆ.
ಆದರೆ, ಜೇಮ್ಸ್ ಕ್ಯಾಮರೂನ್ ತಮ್ಮ ಪತಿಗೆ ಅವತಾರ್ ಸಿನಿಮಾಗಾಗಿ ಆಫರ್ ನೀಡಿದ್ದರು ಎನ್ನುವ ಬಗ್ಗೆ ಅರಿವಿಲ್ಲ ಎಂದು ಇತ್ತೀಚೆಗೆ ನೀಡಿದ ಪಾಡ್‌ಕಾಸ್ಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. ಇನ್ನೂ 'ಅವತಾರ್: ಫೈರ್ ಅಂಡ್ ಆಶ್' ಸಿನಿಮಾ ಡಿಸೆಂಬರ್ 19ಕ್ಕೆ ರಿಲೀಸ್ ಆಗಿತ್ತು. ಆದರೆ, ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೆಚ್ಚು ಸದ್ದು ಮಾಡುತ್ತಿಲ್ಲ. ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ.


Click it and Unblock the Notifications











