'ವಾರ್ 2' ಸೋಲಿನ ಬಳಿಕ ಜೂ.ಎನ್‌ಟಿಆರ್ ಅನ್‌ಫಾಲೋ ಮಾಡಿದರೇ ಹೃತಿಕ್ ರೋಷನ್? ಏನಿದರ ಅಸಲಿಯತ್ತೇನು?

ಬಾಲಿವುಡ್‌ನ ಗ್ರೀಕ್ ಗಾಡ್ ಹೃತಿಕ್ ರೋಷನ್ ಹಾಗೂ ಗ್ಲೋಬಲ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಕಾಂಬಿನೇಷನ್‌ನಲ್ಲಿ ಬಂದ ಸಿನಿಮಾ 'ವಾರ್ 2' ಮತ್ತೆ ಚರ್ಚೆಯಲ್ಲಿದೆ. ಈ ಬಹುನಿರೀಕ್ಷಿತ ಸಿನಿಮಾ ಆಗಸ್ಟ್ 14ರಂದು ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಬಾಲಿವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡಿತ್ತು. 'ಬ್ರಹ್ಮಾಸ್ತ್ರ'ದಂತಹ ಮೆಗಾ ಹಿಟ್ ನಿರ್ದೇಶಿಸಿದ್ದ ಅಯಾನ್ ಮುಖರ್ಜಿ ಆಕ್ಷನ್ ಕಟ್ ಹೇಳಿದ್ದರು. ಬಿಡುಗಡೆಗೂ ಮುನ್ನ ಎಷ್ಟು ನಿರೀಕ್ಷೆಯನ್ನು ಹುಟ್ಟಿಸಿತ್ತೋ ಅದು ಸಿನಿಮಾದಲ್ಲಿ ಕಾಣಿಸಲೇ ಇಲ್ಲ.

ಇಬ್ಬರು ಸೂಪರ್‌ಸ್ಟಾರ್‌ಗಳು ಒಂದೇ ಸಿನಿಮಾ ಇದ್ದರೂ, 'ವಾರ್ 2' ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ ಗಳಿಕೆ ಕಂಡಿತು. ಅದ್ಧೂರಿ ದೃಶ್ಯ ವೈಭವ, ಆ್ಯಕ್ಷನ್ ಸೀಕ್ವೆನ್ಸ್ ಜೊತೆಗೆ ಹೃತಿಕ್ ರೋಷನ್ ಹಾಗೂ ಜೂ.ಎನ್‌ಟಿಆರ್ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟ ಆಗಿದ್ದರೂ ಕಥೆಯಲ್ಲಿ ಹೊಸತನವಿಲ್ಲ ಎನ್ನುವ ಟೀಕೆಗಳು ಪ್ರೇಕ್ಷಕರಿಂದ ಕೇಳಿ ಬಂದಿದ್ದವು. ಫಸ್ಟ್ ಡೇ ಫಸ್ಟ್ ಶೋದಿಂದ ಸಿಕ್ಕ ವಿಮರ್ಶೆ ಸಿನಿಮಾಗೆ ದೊಡ್ಡ ಏಟು ಕೊಟ್ಟಿತ್ತು.

Did Hrithik Roshan Unfollow Jr NTR After War 2 Failuer Here is Latest Update

ಮತ್ತೊಂದೆಡೆ, ಹೃತಿಕ್ ರೋಷನ್ ತನ್ನ ಸಹ ನಟ ಜೂನಿಯರ್ ಎನ್‌ಟಿಆರ್ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎಂಬ ಸುದ್ದಿಯೊಂದು ಓಡಾಡುತ್ತಿದೆ. ಅದಕ್ಕೆ ಪೂರಕ ಎನ್ನುವಂತೆ ಹೃತಿಕ್ ರೋಷನ್, ಜೂನಿಯರ್ ಎನ್‌ಟಿಆರ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾಗಳಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯನ್ನು ಹುಟ್ಟಾಕಿದೆ. ಅಸಲಿಗೆ ಏನಿದು ಅಸಲಿ ವಿಷಯ? ತಿಳಿಯುವುದಕ್ಕೆ ಮುಂದೆ ಓದಿ.

ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್‌ಟಿಆರ್ ನಟನೆಯ 'ವಾರ್ 2' ಹಿಂದಿ ಹಾಗೂ ತೆಲುಗು ಎರಡೂ ಭಾಷೆಯಲ್ಲಿ ಸಾಧಾರಣ ಗಳಿಕೆ ಮಾಡಿದೆ. ಇದೇ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಹೃತಿಕ್ ರೋಷನ್ ಹಾಗೂ ಜೂ.ಎನ್‌ಟಿಆರ್ ಇಬ್ಬರ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. 'ವಾರ್ 2' ಸೋಲಿನಿಂದ ಹೃತಿಕ್ ರೋಷನ್‌ಗೆ ಜೂನಿಯರ್ ಎನ್‌ಟಿಆರ್ ಜೊತೆಗಿನ ಸ್ನೇಹವಾಗಿದೆ. ಅದಕ್ಕೆ ಇನ್‌ಸ್ಟಾಗ್ರಾಂನಲ್ಲಿ ಜೂನಿಯರ್ ಎನ್‌ಟಿಆರ್ ಅನ್ನು ಅನ್‌ಫಾಲೋ ಮಾಡಿದ್ದಾರೆಂದು ಆರೋಪಿಸಿದ್ದಾರೆ.

ಅಷ್ಟಕ್ಕೂ ಇದು ಹುಟ್ಟಿಕೊಂಡಿದ್ದೇಗೆ? ನಿಜಕ್ಕೂ ಜೂನಿಯರ್ ಎನ್‌ಟಿಆರ್ ಅನ್ನು ಹೃತಿಕ್ ರೋಷನ್ ಅನ್‌ಫಾಲೋ ಮಾಡಿದ್ದಾರಾ? ಅನ್ನೋದನ್ನು ನೋಡುವುದಾದರೇ, ವಿವಾದಾತ್ಮಕ ಕ್ರಿಟಿಕ್ ಕೆಆರ್‌ಕೆ ತನ್ನ ಎಕ್ಸ್ ಖಾತೆಯಲ್ಲಿ "ಬಾಲಿವುಡ್‌ನಲ್ಲಿ ಶಾಶ್ವತವಾಗಿ ಯಾರೂ ವೈರಿಗಳಲ್ಲ. ಹಾಗೇ ಸ್ನೇಹಿತರೂ ಅಲ್ಲ. ಎಲ್ಲರೂ ಸಕ್ಸಸ್ ಹಾಗೂ ಸೋಲುಗಳ ಮೇಲೆ ನಿಂತಿದೆ. 'ವಾರ್ 2' ಹೀನಾಯವಾಗುತ್ತಿದ್ದಂತೆ ಹೃತಿಕ್ ರೋಷನ್‌ಗೆ ಜೂನಿಯರ್ ಎನ್‌ಟಿಆರ್ ಸ್ನೇಹ ಬೇಡವಾಗಿದೆ. ಅದಕ್ಕೆ ಇನ್‌ಸ್ಟಾಗ್ರಾಂನಿಂದ ಅನ್‌ಫಾಲೋ ಮಾಡಿದ್ದಾರೆಂದು" ಪೋಸ್ಟ್ ಮಾಡಿದ್ದರು. ಇಲ್ಲಿಂದ ನೆಟ್ಟಿಗರು ಒಬ್ಬೊಬ್ಬರೇ ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದರು.

Did Hrithik Roshan Unfollow Jr NTR After War 2 Failuer Here is Latest Update

ಅಸಲಿಗೆ ಈ ಪೋಸ್ಟ್‌ನ ಅಸಲಿಯತ್ತೇನು ಅಂತ ನೋಡುವುದಾರೇ, ಹೃತಿಕ್ ರೋಷನ್ ಟಾಲಿವುಡ್ ನಟ ಜೂನಿಯರ್ ಎನ್‌ಟಿಆರ್‌ ಅವರನ್ನು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಿದ್ದರು ಅನ್ನುವ ಬಗ್ಗೆ ನಿಖರ ಮಾಹಿತಿ ಇಲ್ಲ. ಸದ್ಯ ಹೃತಿಕ್ ರೋಷನ್ ಅವರನ್ನು ಇನ್‌ಸ್ಟಾಗ್ರಾಂನಲ್ಲಿ 47.9 ಮಿಲಿಯನ್ ಮಂದಿ ಫಾಲೋ ಮಾಡುತ್ತಿದ್ದಾರೆ. ಆದರೆ, ಹೃತಿಕ್ 422 ಮಂದಿಯನ್ನು ಫಾಲೋ ಮಾಡುತ್ತಿದ್ದಾರೆ. ಇವರಲ್ಲಿ ಒಬ್ಬರು ಜೂ.ಎನ್‌ಟಿಆರ್ ಆಗಿದ್ದರೇ ಅನ್ನೋದು ಗೊತ್ತಿಲ್ಲ.

ಅದೇ ಜೂನಿಯರ್ ಎನ್‌ಟಿಆರ್‌ಗೆ ಇನ್‌ಸ್ಟಾಗ್ರಾಂನಲ್ಲಿ 8.1 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಇವರು ಯಾರನ್ನೂ ಫಾಲೋ ಮಾಡುತ್ತಿಲ್ಲ. ಹೀಗಾಗಿ ಇದೆಲ್ಲವೂ ಸುಮ್ಮನೆ ಹಬ್ಬಿಸಿದ ಸುದ್ದಿ ಇರಬಹುದು ಎಂದು ಹೇಳಲಾಗುತ್ತಿದೆ. 'ವಾರ್ 2' ಬಳಿಕ ಇಬ್ಬರಲ್ಲೂ ಉತ್ತಮ ಬಾಂಧವ್ಯ ಬೆಸೆದಿದೆ. ಇತ್ತೀಚೆಗೆ ಪ್ರೀ ರಿಲೀಸ್‌ ಇವೆಂಟ್‌ನಲ್ಲಿ ಇಬ್ಬರೂ ಒಬ್ಬರಿಗೊಬ್ಬರು ಹೊಗಳಿಕೊಂಡಿದ್ದರು. ಹೃತಿಕ್ ರೋಷನ್ "ತಾರಕ್ ನನಗೆ ತಮ್ಮನಿದ್ದಂತೆ, 'ವಾರ್ 2' ಸಿನಿಮಾದ ಮೂಲಕ ನನಗೆ ಉತ್ತಮ ಸಹೋದರ ಸಿಕ್ಕಿದ್ದಾನೆ" ಎಂದು ಹೇಳಿದ್ದರು. ಈ ಹೇಳಿಕೆಯನ್ನು ಜೂ.ಎನ್‌ಟಿಆರ್ ಅಭಿಮಾನಿಗಳು ನೆನಪಿಸಿಕೊಂಡು ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ.

More from Filmibeat

English summary
Did Hrithik Roshan Unfollow Jr NTR After War 2 Failuer? Here is Latest Update.
Read more about: hrithik roshan ntr controversy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X