ಡೈವೋರ್ಸ್ ಪಡೆಯಲು ಭಾರಿ ಮೊತ್ತದ ಜೀವನಾಂಶ ಕೇಳಿದರೇ ನವಾಜುದ್ದೀನ್ ಪತ್ನಿ?

ಬಾಲಿವುಡ್‌ ನಟ ನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಪತ್ನಿ ಆಲಿಯಾ ಸಿದ್ದಿಕಿ ಸಾಂಸಾರಿಕ ಜೀವನ ಅಂತ್ಯದೆಡೆಗೆ ಸಾಗುತ್ತಿದೆ. ವಿಚ್ಚೇದನಕ್ಕಾಗಿ ಈಗಾಗಲೇ ಆಲಿಯಾ ಪತಿಗೆ ನೋಟಿಸ್ ಕಳುಹಿಸಿದ್ದಾರೆ. ವೈವಾಹಿಕ ಸಂಬಂಧ ಕಡಿದುಕೊಳ್ಳುವ ಸಲುವಾಗಿ ಆಲಿಯಾ ಮೇ 7ರಂದು ಸಿದ್ದಿಕಿ ಅವರಿಗೆ ಇ-ಮೇಲ್ ಮತ್ತು ವಾಟ್ಸಾಪ್ ಮೂಲಕ ಲೀಗಲ್ ನೋಟಿಸ್ ಕಳುಹಿಸಿದ್ದರು.

ವಿಚ್ಚೇದನ ಪತ್ರದ ಜತೆಗೆ ನವಾಜುದ್ದೀನ್ ಸಿದ್ದಿಕಿ ತಮಗೆ ಪರಿಹಾರ ರೂಪದಲ್ಲಿ ನೀಡಬೇಕಾದ ಜೀವನಾಂಶದ ಬೇಡಿಕೆಯನ್ನೂ ಇರಿಸಿದ್ದಾರೆ. ಆ ಬೇಡಿಕೆಯ ಪಟ್ಟಿ ಕಂಡು ನವಾಜುದ್ದೀನ್ ಕಂಗಾಲಾಗಿದ್ದಾರೆ ಎನ್ನಲಾಗಿದೆ. ಭಾರಿ ಮೊತ್ತದ ಹಣ ಹಾಗೂ ಆಸ್ತಿಯನ್ನು ಜೀವನಾಂಶವಾಗಿ ನೀಡುವಂತೆ ಆಲಿಯ ಕೇಳಿರುವುದಾಗಿ ಸುದ್ದಿಗಳು ಹರಿದಾಡುತ್ತಿವೆ. ಮುಂದೆ ಓದಿ..

30 ಕೋಟಿ ರೂ ಜೀವನಾಂಶ?

30 ಕೋಟಿ ರೂ ಜೀವನಾಂಶ?

ವಿಚ್ಚೇದನದ ಗೊಂದಲಕ್ಕೆ ತಾರ್ಕಿಕ ಪರಿಹಾರ ಕಂಡುಕೊಳ್ಳಲು 30 ಕೋಟಿ ರೂ ಹಾಗೂ 4 ಬಿಎಚ್‌ಕೆಯ ಫ್ಲಾಟ್ ನೀಡುವಂತೆ ಆಲಿಯಾ ಕೇಳಿದ್ದಾರೆ. ಜತೆಗೆ ತಮ್ಮ ಇಬ್ಬರು ಮಕ್ಕಳನ್ನು ತಾವೇ ನೋಡಿಕೊಳ್ಳಬೇಕಿರುವುದರಿಂದ ಇಬ್ಬರ ಹೆಸರಿನಲ್ಲಿಯೂ 20 ಕೋಟಿ ರೂ. ನಿಶ್ಚಿತ ಠೇವಣಿ ಇರಿಸುವಂತೆ ಬೇಡಿಕೆ ಇರಿಸಿದ್ದಾರೆ ಎನ್ನಲಾಗಿದೆ.

ಸುಳ್ಳು ಪತ್ರದ ಸೃಷ್ಟಿ

ಸುಳ್ಳು ಪತ್ರದ ಸೃಷ್ಟಿ

ಆದರೆ ಈ ವರದಿಗಳನ್ನು ಆಲಿಯಾ ತಳ್ಳಿಹಾಕಿದ್ದಾರೆ. ನವಾಜುದ್ದೀನ್ ಅವರಿಂದ ಇಷ್ಟು ಭಾರಿ ಮೊತ್ತದ ಪರಿಹಾರ ಮತ್ತು ಫ್ಲಾಟ್ ಕೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಿಚ್ಚೇದನ ಪತ್ರದ ಕಾಪಿ ತಮ್ಮ ಬಳಿ ಇದೆ ಎಂದು ಹೇಳಿಕೊಂಡು ಮಾಧ್ಯಮಗಳಿಂದ ನನ್ನ ವಕೀಲರಿಗೆ ಕರೆಗಳು ಬರುತ್ತಿವೆ. ಅವುಗಳನ್ನು ಪರಿಶೀಲಿಸಿದ ಬಳಿಕ, ಅವು ತಿದ್ದಿದ ಸುಳ್ಳು ಪ್ರತಿಗಳೆಂಬುದು ಗೊತ್ತಾಗಿ ಎಂದು ಹೇಳಿದ್ದಾರೆ.

ರಕ್ಷಿಸುವ ಪ್ರಯತ್ನ

ರಕ್ಷಿಸುವ ಪ್ರಯತ್ನ

'ಇದರ ಹಿಂದೆ ಯಾರಿದ್ದಾರೆ? ಅವಮಾನದಿಂದ ಯಾರನ್ನೋ ಉಳಿಸುವ ಸಲುವಾಗಿ ಮಾಡುತ್ತಿರುವ ಪಿಆರ್ ಪ್ರಯತ್ನ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತಿದೆ. ಅನೇಕ ಸಂಗತಿಗಳು ಈಗ ಹೊರಬೀಳುತ್ತಿವೆ' ಎಂದು ನವಾಜುದ್ದೀನ್ ಅವರ ಮರ್ಯಾದೆ ಉಳಿಸಲು ಯಾರೋ ಈ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನಾನು ಖುದ್ದಾಗಿ ಒಪ್ಪಿಕೊಳ್ಳಬೇಕು

ನಾನು ಖುದ್ದಾಗಿ ಒಪ್ಪಿಕೊಳ್ಳಬೇಕು

'ನನ್ನ ಟ್ವಿಟ್ಟರ್ ಖಾತೆಯಲ್ಲಿ ಯಾವುದನ್ನೂ ವೈಯಕ್ತಿಕವಾಗಿ ಒಪ್ಪಿಕೊಳ್ಳದ ಅಥವಾ ಯಾವುದೇ ಹೇಳಿಕೆ ಅಥವಾ ಆರೋಪವನ್ನು ನಿರಾಕರಿಸದೆ ಇದ್ದರೆ, ಯಾವುದೇ ಮಾಧ್ಯಮದ ವಿಭಾಗವು ಮಾಡುವ ಆರೋಪ ಅಥವಾ ಹೇಳಿಕೆ ಸಮರ್ಥನೀಯವಲ್ಲ' ಎಂದು ಮತ್ತೊಂದು ಟ್ವೀಟ್‌ನಲ್ಲಿ ಅವರು ತಿಳಿಸಿದ್ದಾರೆ.

More from Filmibeat

English summary
Reports says bollywood actor Nawazudding Siddiqui's wife Aaliya siddiqui has demanded huge ammount as alimony. But Aaliya rubbishes rumours.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X