ಶಾರುಖ್ ಖಾನ್ ಜೊತೆ ಅಫೇರ್ ಇತ್ತಾ? ಪ್ರಿಯಾಂಕಾ ಚೋಪ್ರಾ ಕೊಟ್ಟಿದ್ದ ಆ ಚಿಕ್ಕ ಸುಳಿವು ಏನು?

ಬಾಲಿವುಡ್‌ನಲ್ಲಿ ಕೆಲವೊಮ್ಮೆ ಗಾಸಿಪ್‌ಗಳು ನಿಜ ಆಗುತ್ತೆ. ರಿಯಲ್ ಅಂದುಕೊಂಡ ಸುದ್ದಿಗಳು ಸುಳ್ಳಾಗಿ ಬಿಡುತ್ತವೆ. ಈ ಅಫೇರ್ ಅನ್ನೋದು ಬಾಲಿವುಡ್ ಮಂದಿಗೆ ಹೊಸದೇನು ಅಲ್ಲ. ಕೆಲವು ಓಪನ್ ಆಗಿ ಒಪ್ಪಿಕೊಂಡಿದ್ದಾರೆ. ಮತ್ತೆ ಕೆಲವು ಸುದ್ದಿಗಳಿಗೆ ಉತ್ತರನೇ ಸಿಕ್ಕಿಲ್ಲ. ಅದು ಕೊಡುವ ಅಗತ್ಯವೂ ಇಲ್ಲ. ಆದರೆ, ಕೆಲವು ಅಫೇರ್‌ಗಳು ಅವರ ಅಭಿಮಾನಿಗಳ ನಡುವೆ ಚರ್ಚೆಗೆ ಗ್ರಾಸವಾಗಿತ್ತು.

ಶಾರುಖ್ ಖಾನ್ ಹಾಗೂ ಪ್ರಿಯಾಂಕಾ ಚೋಪ್ರಾ ಬಗ್ಗೆ ಕೆಲವು ವರ್ಷಗಳ ಹಿಂದೆ ಗಾಳಿ ಸುದ್ದಿಯೊಂದು ಹಬ್ಬಿತ್ತು. ಇಬ್ಬರ ಮದುವೆ ಏನೋ ನಡೀತಿದೆ. ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಜೊತೆ ಅಫೇರ್ ಇಟ್ಟುಕೊಂಡಿದ್ದಾರೆ ಎನ್ನಲಾಗಿತ್ತು. ಈ ಸುದ್ದಿ ಸದ್ದು ಮಾಡುತ್ತಿದ್ದಂತೆ ಮತ್ತೆ ಇಬ್ಬರು ಒಟ್ಟಿಗೆ ನಟಿಸಲೇ ಇಲ್ಲ.

Did Priyanka Chopra hinted she had an affair with Shah Rukh Khan in International media

ಈ ಜೋಡಿ ನಟಿಸಿದ ಎರಡೂ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿದ್ದವು. ಅದುವೇ 'ಡಾನ್' ಮತ್ತು 'ಡಾನ್ 2'. ಶಾರುಖ್ ನಟಿಸಿದ ಇನ್ನೆರಡು ಸಿನಿಮಾಗಳಲ್ಲಿ ಅತಿಥಿಯಾಗಿ ಎಂಟ್ರಿ ಕೊಟ್ಟಿದ್ದರು. ಅದು 'ಓಂ ಶಾಂತಿ ಓಂ' ಮತ್ತೊಂದು 'ರಾ ಒನ್'. ಇವೆರಡಲ್ಲೂ ಒಂದು ಮೆಗಾ ಹಿಟ್. ಇನ್ನೊಂದು ಸಾಧಾರಣ ಹಿಟ್. ಆಗಲೇ ಇಬ್ಬರ ನಡುವೆ ಅಫೇರ್ ಇದೆ ಅನ್ನೋ ಸುದ್ದಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು.

ಇಷ್ಟೆಲ್ಲ ಹಿಸ್ಟರಿ ಹೇಳುವುದಕ್ಕೆ ಕಾರಣವಿದೆ. ಶಾರುಖ್-ಪ್ರಿಯಾಂಕಾ ಅಫೇರ್ ಮ್ಯಾಟರ್ ಸದ್ದು ಮಾಡುತ್ತಿದ್ದಂತೆ ಇಬ್ಬರ ಫ್ಯಾನ್ಸ್ ಶಾಕ್ ಆಗಿದ್ದರು. ಈ ಸುದ್ದಿ ನಿಜವೋ ಸುಳ್ಳೋ ಅನ್ನೋ ತವಕ ಅವರಲ್ಲಿ ಇತ್ತು. ಆದರೂ, ಇಬ್ಬರೂ ಈ ಬಗ್ಗೆ ನೇರವಾಗಿ ಬಾಯಿ ಬಿಟ್ಟಿರಲಿಲ್ಲ. ಮುಂದೆ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ಕಡೆಗೆ ಪಯಣ ಬೆಳೆಸಿದ ಮೇಲೆ ಸಂದರ್ಶನವೊಂದರಲ್ಲಿ ಪರೋಕ್ಷವಾಗಿ ಸುಳಿವನ್ನು ನೀಡಿದ್ದರು.

Did Priyanka Chopra hinted she had an affair with Shah Rukh Khan in International media

ಪ್ರಿಯಾಂಕಾ ಚೋಪ್ರಾ ಕಂದು ಬಣ್ಣದ ಜಾಕೆಟ್ ಒಂದನ್ನು ಧರಿಸಿ ಆ ಸಂದರ್ಶನಕ್ಕೆ ಹೋಗಿದ್ದರು. ಇದು ತನ್ನ ಮಾಜಿ ಬಾಯ್‌ಫ್ರೆಂಡ್ ಜಾಕೆಟ್ ಎಂದಿದ್ದರು. "ಈ ಜಾಕೆಟ್‌ನಲ್ಲಿ ನಾನು ನಿಜವಾಗಿಯೂ ಜೀವಿಸುತ್ತಿದ್ದೇನೆ. ಇದು ನನ್ನ ಏರ್‌ಪೋರ್ಟ್ ಜಾಕೆಟ್. ಆದರೆ, ಇದು ನನ್ನ ಎಕ್ಸ್ ಬಾಯ್‌ಫ್ರೆಂಡ್ ಜಾಕೆಟ್" ಎಂದು ಹೇಳಿದ್ದರು.

ಅದ್ಯಾವಾಗ ಪ್ರಿಯಾಂಕಾ ಚೋಪ್ರಾ ಈ ಹೇಳಿಕೆ ಕೊಟ್ಟಳೋ ಅಲ್ಲಿಂದ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುವುದಕ್ಕೆ ಶುರು ಮಾಡಿದ್ದರು. ಪ್ರಿಯಾಂಕಾ ಚೋಪ್ರಾ ಸಂದರ್ಶನಕ್ಕೆ ಬಂದಾಗ ತೊಟ್ಟಿದ್ದ ಫೋಟೊವನ್ನು ಇಟ್ಟುಕೊಂಡು, ಅದೇ ಜಾಕೆಟ್‌ ಧರಿಸಿದ್ದ ಶಾರುಖ್ ಫೋಟೊವನ್ನು ಜೊತೆಗಿಟ್ಟು ಚರ್ಚೆ ಮಾಡಿದ್ದರು. ಇಲ್ಲಿಂದ ಇಬ್ಬರೂ ಮತ್ತೆ ಮುಖಾ ಮುಖಿ ಆಗಿಲ್ಲ.

ಇದೊಂದು ಕಡೆಯಾದರೆ, ಇನ್ನೊಂದು ಕಡೆ ಶಾರುಖ್ ಪತ್ನಿ ಗೌರಿ ಖಾನ್ ಹಾಗೂ ಕರಣ್‌ ಜೋಹರ್ ಕುರಿತ ಸುದ್ದಿಯೊಂದು ಓಡಾಡಿತ್ತು. ಶಾರುಖ್ ಖಾನ್ ಹಾಗೂ ಕರಣ್ ಜೋಹರ್ ಇಬ್ಬರೂ ಸ್ನೇಹಿತರು ಅನ್ನೋದು ಗೊತ್ತೇ ಇದೆ. ಶಾರುಖ್-ಪ್ರಿಯಾಂಕಾ ಅಫೇರ್ ಸುದ್ದಿ ಸದ್ದು ಮಾಡುತ್ತಿದ್ದಂತೆ ಕರಣ್ ಹಾಗೂ ಗೌರಿ ಅಖಾಡಕ್ಕಿಳಿದಿದ್ದರು. ಪ್ರಿಯಾಂಕಾ ಚೋಪ್ರಾ ವೃತ್ತಿ ಬದುಕನ್ನು ನಾಶ ಮಾಡುವುದಕ್ಕೆ ನಿರ್ಧರಿಸಿದ್ದರು ಅಂತ ಸುದ್ದಿಗಳಾಗಿದ್ದವು. ಈ ಸುದ್ದಿಗಳಲ್ಲಿ ಎಷ್ಟು ಸುಳ್ಳಿದೆಯೋ.? ಎಷ್ಟು ನಿಜ ಇದೆಯೋ? ಅವರಿಬ್ಬರಿಗೆ ಗೊತ್ತು.

More from Filmibeat

English summary
Priyanka Chopra hinted she had an affair with Shah Rukh Khan. What was that?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X