Fact Check:"ಆರ್‌ಸಿಬಿ ಗೆದ್ದಲ್ಲಿಂದ ಜಗತ್ತಿನಲ್ಲಿ ಕೆಟ್ಟದ್ದೇ ಆಗುತ್ತಿದೆ" ಎಂದರೇ ಸೋನು ನಿಗಂ?
ಇತ್ತೀಚೆಗೆ ಕನ್ನಡಿಗರನ್ನು ಕೆರಳಿ ಸೋನು ನಿಗಂ ಕೆಂಗಣ್ಣಿಗೆ ಗುರಿಯಾಗಿದ್ದರು. ಬೆಂಗಳೂರಿಗೆ ಕಾರ್ಯಕ್ರಮ ನೀಡುವುದಕ್ಕೆ ಬಂದಿದ್ದ ಸೋನು ನಿಗಂ ಕನ್ನಡಿಗರ ಕನ್ನಡ ಪ್ರೇಮವನ್ನು ಭಯೋತ್ಪಾದನೆಗೆ ಹೋಲಿಸಿದ್ದರು. ಈ ವೇಳೆ ಸೋನು ನಿಗಂ ವಿರುದ್ಧ ಕನ್ನಡಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕನ್ನಡ ಪರ ಸಂಘಟನೆಗಳು ಪ್ರತಿಭಟನೆಗೆ ಇಳಿದಿದ್ದವು. ಸೋನು ನಿಗಂ ಕನ್ನಡ ಸಿನಿಮಾದಲ್ಲಿ ಹಾಡಲೇ ಬಾರದೆಂದು ಪಟ್ಟು ಹಿಡಿದು ಕೂತಿದ್ದವು.
ಸೋನು ನಿಗಂ ಹಾಡುಗಳನ್ನು ಮನಸಾರೆ ಒಪ್ಪಿಕೊಳ್ಳುತ್ತಿದ್ದ ಕನ್ನಡಿಗರ ಪಾಲಿಗೆ ವಿಲನ್ ಆಗಿದ್ದರು. ಈ ಪ್ರಕರಣವೀಗ ಹೈ ಕೋರ್ಟ್ ಮೆಟ್ಟಿಲೇರಿದೆ. ಆದರೆ, ಒಂದು ತಿಂಗಳಿಂದ ಸೋನು ನಿಗಂ ಪೊಲೀಸರಿಗೆ ಹೇಳಿಕೆಗಳನ್ನು ಕೊಡದೆ ಸತಾಯಿಸುತ್ತಿದ್ದಾರೆ ಎನ್ನಲಾಗಿತ್ತು. ಇತ್ತ ಹೈಕೋರ್ಟ್ ಕೂಡ "ಬಲವಂತದ ಕ್ರಮ ಬೇಡ. ತನಿಖೆಗೆ ಸಹಕರಿಸಬೇಕು" ಎಂದು ಹೇಳಿತ್ತು. ಇಲ್ಲಿಂದ ಸೋನು ನಿಗಂ ಕರ್ನಾಟಕದ ಪೊಲೀಸರುನ್ನು ಸತಾಯಿಸುತ್ತಲೇ ಇದ್ದಾರೆ ಎನ್ನಲಾಗಿದೆ.

ಗಾಯಕ ಸೋನು ನಿಗಂ ಹಾಗೂ ಕನ್ನಡಿಗರ ಮಧ್ಯೆ ಬಿರುಕು ಬಿಟ್ಟಿರುವಾಗಲೇ ಮತ್ತೊಂದು ಅಪವಾದ ಅವರ ಮೇಲೆ ಬಂದಿದೆ. ಸೋನು ನಿಗಂ ಮತ್ತೊಂದು ಟ್ವೀಟ್ ಮಾಡಿದ್ದು ಈ ಬಾರಿ ಆರ್‌ಸಿಬಿ ಅಭಿಮಾನಿಗಳನ್ನು ಎದುರಾಕಿಕೊಂಡಿದೆ ಎಂದು ಕಳೆದ ಎರಡು ದಿನಗಳಿಂದ ಓಡಾಡುತ್ತಲೇ ಇದೆ. ಆರ್‌ಸಿಬಿ ಗೆದ್ದಲ್ಲಿಂದ ಜಗತ್ತಿನಲ್ಲಿ ಕೆಟ್ಟದಾಗುತ್ತಿದೆ ಎಂದು ಸೋನು ನಿಗಂ ಟ್ವೀಟ್ ಮಾಡಿದ್ದಾರಾ? ಈ ಟ್ವೀಟ್‌ನ ಹಿಂದಿನ ಅಸಲಿಯತ್ತೇನು? ತಿಳಿಯುವುದಕ್ಕೆ ಮುಂದೆ ಓದಿ.
ಕಳೆದ ಎರಡು ಮೂರು ದಿನಗಳಿಂದ ಗಾಯಕ ಸೋನು ನಿಗಂ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಆರ್‌ಸಿಬಿ ಗೆಲುವನ್ನು ಲೇವಡಿ ಮಾಡಿ ಪೋಸ್ಟ್ ಮಾಡಿದ್ದಾರೆಂದು ಸುದ್ದಿ ಹಬ್ಬಿದೆ. ಎಕ್ಸ್‌ನಲ್ಲಿ ಸೋನು ನಿಗಂ ಅದರಲ್ಲೂ ಬ್ಯೂಟಿ ಟಿಕ್ ಆಗಿರುವ ಅಧಿಕೃತ ಖಾತೆಯಲ್ಲಿ ಆರ್‌ಸಿಬಿ ಗೆಲುವನ್ನು ಲೇವಡಿ ಮಾಡಿರುವ ಪೋಸ್ಟ್ ಒಂದು ಬಹಳ ದಿನಗಳಿಂದ ಸದ್ದು ಮಾಡುತ್ತಿದೆ. ಅದರಲ್ಲೂ ಆರ್‌ಸಿಬಿ ಗೆದ್ದಲ್ಲಿಂದಲೇ ಜಗತ್ತಿನ ಕೆಟ್ಟದ್ದು ನಡೆಯುತ್ತಿದೆ ಎಂದಿದ್ದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಮತ್ತೆ ಸೋನು ನಿಗಂ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಅಸಲಿಗೆ ಮ್ಯಾಟರ್ ಬೇರೆನೇ ಇದೆ.
ಸೋನು ನಿಗಂ ಎಕ್ಸ್ ಖಾತೆಯಲ್ಲಿ ಆರ್‌ಸಿಬಿ ಬಗ್ಗೆ ಏನು ಹೇಳಲಾಗಿದೆ ಎಂದು ನೋಡುವುದಾರೇ, "ಯಾವಾಗ ಆರ್‌ಸಿಬಿ ಐಪಿಎಲ್ ಗೆದ್ದಿತೋ ಅಲ್ಲಿಂದ ಪ್ರಚಂಚದಲ್ಲಿ ಏನೂ ಒಳ್ಳೆಯದು ನಡೆಯುತ್ತಲೇ ಇಲ್ಲ" ಎಂದು ಪೋಸ್ಟ್ ಮಾಡಲಾಗಿದೆ. ಆದರೆ, ಇದು ಗಾಯಕ ಸೋನು ನಿಗಂ ಎಕ್ಸ್ ಖಾತೆಯಲ್ಲ. ಇದನ್ನು ಸೋನು ನಿಗಂ ಅವರೇ ಪೋಸ್ಟ್ ಮಾಡಿದ್ದಾರೆಂದು ಸಾಮಾನ್ಯ ಜನರು ತಪ್ಪು ತಿಳಿದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೆ ಸೋನು ನಿಗಂ ವಿರುದ್ಧ ಕೆಲವರು ತಿರುಗಿಬೀಳುತ್ತಿದ್ದಾರೆ.
ಅಸಲಿಗೆ ಇದು ಸೋನು ನಿಗಂ ಹೆಸರಿನ ವಕೀಲರೊಬ್ಬರ ಖಾತೆ. ಈ ಎಕ್ಸ್ ಖಾತೆಯ ಪ್ರೊಫೈಲ್ ನೋಡಿದ್ದಾ ಬಿಹಾರ ಮೂಲದ ಕ್ರಿಮಿನಲ್ ವಕೀಲರೊಬ್ಬರ ಖಾತೆ ಎಂದು ತಿಳಿದು ಬಂದಿದೆ. ಹೀಗಾಗಿ ಸೋನು ನಿಗಂ ಮತ್ತೆ ಕನ್ನಡಿಗರು ಹಾಗೂ ಆರ್‌ಸಿಬಿ ಕೆಣಕುವ ಗೋಜಿಗೆ ಹೋಗಿಲ್ಲ. ಇದು ಸೋನು ನಿಗಂ ಅವರ ಹೆಸರನದ್ದೇ ಬೇರೊಬ್ಬರ ಖಾತೆ. ಕೆಲವರು ಇದನ್ನು ಗಮನಿಸಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಬಿಹಾರ ಕ್ರಿಮಿನಲ್ ಲಾಯರ್ ಸೋನು ನಿಗಂಗೆ ಹೆಸರು ಬದಲಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಮತ್ತೆ ಕೆಲವರು ಆರ್‌ಸಿಬಿ ಅಭಿಮಾನಿಗಳು ವಕೀಲರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ಸೋನು ನಿಗಂ ಎನ್ನುವ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಗೊಂದಲಕ್ಕೆ ಸಿಲುಕಿದೆ.


Click it and Unblock the Notifications











