ಸುಶಾಂತ್ ಸಿಂಗ್ ರಜಪೂತ್ ಕೊನೆಯದಾಗಿ ನಟಿಸಿದ್ದು ಈ ಹಾಡಿನಲ್ಲಿ...

ಕಳೆದ ತಿಂಗಳು ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಟಿಸಿದ ಕೊನೆಯ ಚಿತ್ರ 'ದಿಲ್ ಬೇಚಾರಾ' ಡಿಸ್ನಿ ಹಾಟ್‌ಸ್ಟಾರ್ ಪ್ಲಸ್‌ನಲ್ಲಿ ಈ ತಿಂಗಳು ಬಿಡುಗಡೆಯಾಗಲು ಸಿದ್ಧತೆ ನಡೆಸಲಾಗಿದೆ. ಕೆಲವು ದಿನಗಳ ಹಿಂದೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ದಾಖಲೆ ನಿರ್ಮಿಸಿದೆ.

Recommended Video

Susheel Kumar, ದುರಂತದ ಹಿಂದಿನ ಕಾರಣವೇನು | Filmibeat Kannada

ಚಿತ್ರತಂಡ ಗುರುವಾರ 'ದಿಲ್ ಬೇಚಾರಾ'ದ ಟೈಟಲ್ ಟ್ರ್ಯಾಕ್‌ನ ಟೀಸರ್ ಬಿಡುಗಡೆ ಮಾಡಿದ್ದು, ಅದರಲ್ಲಿ 'ಮ್ಯಾನಿ'ಯಾಗಿ ಕಾಣಿಸಿಕೊಂಡಿರುವ ಸುಶಾಂತ್ ಅವರ ಕೆಲವು ತುಣುಕುಗಳನ್ನು ತೋರಿಸಿದೆ. ಈ ಸಂಪೂರ್ಣ ಹಾಡು ಶುಕ್ರವಾರ ಬಿಡುಗಡೆಯಾಗಲಿದೆ. ಟ್ರೇಲರ್‌ನಂತೆ ಈ ಹಾಡು ಕೂಡ ದಾಖಲೆ ನಿರ್ಮಿಸುವ ನಿರೀಕ್ಷೆ ಮೂಡಿಸಿದೆ. ವಿಶೇಷವೆಂದರೆ ಸುಶಾಂತ್ ಅಭಿನಯಿಸಿದ ಕೊನೆಯ ಹಾಡು ಇದು. ಈ ಹಾಡನ್ನು ಕೇವಲ ಒಂದೇ ಟೇಕ್‌ನಲ್ಲಿ ಸುಶಾಂತ್ ನಿಭಾಯಿಸಿದ್ದರು. ಮುಂದೆ ಓದಿ...

ಕಾಡುವ ಸುಶಾಂತ್ ನಗು

ಕಾಡುವ ಸುಶಾಂತ್ ನಗು

ಫರಾಹ್ ಖಾನ್ ನೃತ್ಯ ಸಂಯೋಜನೆ ಮಾಡಿರುವ ಈ ಹಾಡಿನಲ್ಲಿ ಸುಶಾಂತ್, ಬಾಸ್ಕೆಟ್ ಬಾಲ್ ಜೆರ್ಸಿಯಲ್ಲಿ ಗಮನ ಸೆಳೆದಿದ್ದಾರೆ. ಶೀರ್ಷಿಕೆ ಗೀತೆಯ ಟೀಸರ್‌ನಲ್ಲಿ ಅವರು ಹೆಜ್ಜೆ ಹಾಕುವಾಗ ಕಾಣಿಸುವ ನಗು ಅವರ ಅಭಿಮಾನಿಗಳಲ್ಲಿ ಮನಸಲ್ಲಿ ಮತ್ತೆ ನೋವನ್ನು ಸ್ಫೋಟಿಸುವಂತೆ ಮಾಡಿದೆ.

ಎಆರ್ ರೆಹಮಾನ್ ಸಂಗೀತ

ಎಆರ್ ರೆಹಮಾನ್ ಸಂಗೀತ

'ಮ್ಯಾನಿ, ಕಿಜಿಯನ್ನು ಬೆರಗಾಗಿಸುವಂತೆ ತಂದು ಮೂಡಿಸಿದ ಜೀವಂತಿಕೆಯ ನೋಟ ಇಲ್ಲಿದೆ. ಮಾಂತ್ರಿಕ ಎ.ಆರ್. ರೆಹಮಾನ್ ಅವರ ಮ್ಯಾಜಿಕ್‌ ಅನ್ನು ನಿಮ್ಮ ಮುಂದೆ ತರಲಿದ್ದೇವೆ. ದಿಲ್ ಬೇಚಾರಾದ ಟೈಟಲ್ ಟ್ರ್ಯಾಕ್ ನಾಳೆ ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ' ಎಂದು ನಿರ್ಮಾಣ ಸಂಸ್ಥೆ ತಿಳಿಸಿದೆ.

ಸಂಭಾವನೆ ಪಡೆಯದ ಫರಾಹ್

ಸಂಭಾವನೆ ಪಡೆಯದ ಫರಾಹ್

ದಿಲ್ ಬೇಚಾರಾ ಸುಶಾಂತ್ ಅವರ ಕೊನೆಯ ಸಿನಿಮಾವಾಗಿದ್ದರೆ, ಅವರು ಕೊನೆಯದಾಗಿ ನಟಿಸಿದ್ದು ಅದರ ಟೈಟಲ್ ಟ್ರ್ಯಾಕ್‌ನಲ್ಲಿ. ಇದಕ್ಕೆ ನೃತ್ಯ ಸಂಯೋಜಿಸಲು ಫರಾಹ್ ಖಾನ್ ಒಪ್ಪಿಕೊಂಡಿದ್ದರು. ಅದಕ್ಕೆ ಅವರು ಸಂಭಾವನೆ ಕೂಡ ಪಡೆದಿರಲಿಲ್ಲ ಎಂದು ನಿರ್ದೇಶಕ ಮುಕೇಶ್ ಛಾಬ್ರಾ ತಿಳಿಸಿದ್ದಾರೆ.

ಮನಸಿಗೆ ಹತ್ತಿರವಾದ ಹಾಡು

ಮನಸಿಗೆ ಹತ್ತಿರವಾದ ಹಾಡು

'ಈ ಹಾಡು ನನಗೆ ವಿಶೇಷವಾಗಿ ಬಹಳ ಹತ್ತಿರವಾಗಿದೆ. ಏಕೆಂದರೆ ನಾನು ಮೊದಲ ಬಾರಿಗೆ ಸುಶಾಂತ್‌ಗೆ ನೃತ್ಯ ಸಂಯೋಜನೆ ಮಾಡಿದ್ದೆ. ನಾವಿಬ್ಬರೂ ಬಹಳ ಸಮಯದಿಂದ ಗೆಳೆಯರಾಗಿದ್ದರೂ ಜತೆಯಾಗಿ ಕೆಲಸ ಮಾಡಿರಲಿಲ್ಲ. ನೀವು ನಿರ್ದೇಶನ ಮಾಡುವ ಮೊದಲ ಚಿತ್ರಕ್ಕೆ ನೃತ್ಯ ಸಂಯೋಜಿಸುವುದಾಗಿ ಮುಕೇಶ್ ಛಾಬ್ರಾ ಅವರಿಗೂ ಮಾತು ಕೊಟ್ಟಿದ್ದೆ. ಸುಶಾಂತ್ ಇದನ್ನು ಚೆನ್ನಾಗಿ ನಿಭಾಯಿಸುತ್ತಾರೆ ಎಂದು ಇಡೀ ಹಾಡನ್ನು ಒಂದೇ ಶಾಟ್‌ನಲ್ಲಿ ಚಿತ್ರೀಕರಿಸಲಾಗಿತ್ತು' ಎಂದು ಫರಾಹ್ ಖಾನ್ ತಿಳಿಸಿದ್ದಾರೆ.

More from Filmibeat

English summary
Makers of Dil Bechara will release the title track of the movie which was the last song ever shot by Sushant Singh Rajput.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X